ಆಚಾರ್ ಆಂಡ್ ಕೊ ಸಿನಿಮಾ ನೆವದಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಒಂದಿಷ್ಟು ಕಡೆ ಇಂಟರ್‌ವ್ಯೂ ಕೊಟ್ಟಿದ್ದಾರೆ. ಅದರಲ್ಲಿ ಬಹಳ ಇಂಟರೆಸ್ಟಿಂಗ್ ಅನಿಸೋ ವಿಚಾರ ಅಂದರೆ ಅಪ್ಪು ಅವರಿಗಿದ್ದ ಒಂದು ಕನಸು. ಅದು ಮತ್ತೇನಲ್ಲ, ಕೆಫೆ ತೆರೆಯೋ ಕನಸು. ಯೆಸ್‌ ಅಪ್ಪು ಅವರಿಗೆ ತಾನೊಂದು ಕೆಫೆ ತೆರೆಯಬೇಕು ಅನ್ನೋ ಕನಸಿತ್ತು ಅನ್ನೋ ಸತ್ಯವನ್ನು ಅಶ್ವಿನಿ  ಬಾಯ್ಬಿಟ್ಟಿದ್ದಾರೆ.

ಪುನೀತ್ ರಾಜ್‌ಕುಮಾರ್ ಮತ್ತೆ ಸುದ್ದಿಯಲ್ಲಿದ್ದಾರೆ. ಕಾರಣ ಅವರ ಪಿಆರ್‌ಕೆ ಬ್ಯಾನರ್‌ನಡಿ ನಿರ್ಮಾಣವಾಗ್ತಿರೋ ಆಚಾರ್‌ ಆಂಡ್ ಕೋ ಸಿನಿಮಾ ನಾಳೆ ರಿಲೀಸ್ ಆಗ್ತಿದೆ. ಇಲ್ಲಿಯವರೆಗೆ ಟಿವಿ, ಕ್ಯಾಮರ ಮುಂದೆ ಸೈಲೆಂಟಾಗಿ ಇರುತ್ತಿದ್ದ ಅಶ್ವಿನಿ ಪುನೀತ್‌ ಇದೀಗ ಚಿಪ್ಪಿನಿಂದ ಹೊರಬಂದಿದ್ದಾರೆ. ಸಿನಿಮಾ ನೆವದಲ್ಲಿ ಒಂದಿಷ್ಟು ಅಪ್ಪು ನೆನಪು ಮಾಡಿಕೊಳ್ಳುತ್ತಿದ್ದಾರೆ. ಮಹಾನ್ ತಿಂಡಿ ಪ್ರಿಯ ಅಪ್ಪು ಈ ಸಿನಿಮಾ ಒಪ್ಪಿಕೊಳ್ಳೋದಕ್ಕೆ ಅವರ ತಿಂಡಿ ಪ್ರೀತಿಯೂ ಒಂದು ಕಾರಣ ಆಗಿರಬಹುದಾ ಅನ್ನೋ ಪ್ರಶ್ನೆ ಅವರ ಅಭಿಮಾನಿಗಳದ್ದು. ಏಕೆಂದರೆ ಈ ಸಿನಿಮಾದಲ್ಲಿ ಆಚಾರ್ ಎಂಬ ಅರವತ್ತರ ದಶಕದ ಸೀನಿಯರ್ ಸಿವಿಲ್ ಇಂಜಿನಿಯರ್‌ ಕುಟುಂಬದ ಕಥೆ ಇದೆ. ಆ ಕಾಲದ ಅವಿಭಕ್ತ ಕುಟುಂಬ, ಆಗಿನ ಬದುಕು, ಜೀವನಶೈಲಿಯ ಬಗ್ಗೆ ಹೇಳುತ್ತಲೇ ರುಚಿಕಟ್ಟಾದ ಬಾಯಲ್ಲಿ ನೀರೂರಿಸುವ ಉಪ್ಪಿನ ಕಾಯಿ ಬಗ್ಗೆಯೂ ಸಿನಿಮಾ ಬೆಳಕು ಚೆಲ್ಲುತ್ತೆ. ಹೀಗಾಗಿ ಅಪ್ಪು ಈ ಕಾರಣಕ್ಕೆ ಸಿನಿಮಾ ಒಪ್ಪಿಕೊಂಡಿರಬಹುದಾ ಅನ್ನೋ ಅನುಮಾನ ಅಂತೂ ಇದ್ದೇ ಇರುತ್ತೆ.

ಇನ್ನೊಂದು ಸಂಗತಿ ಅಂದರೆ ಅಪ್ಪು ಗತಿಸಿದ ಬಳಿಕ ಮಾತೇ ಮರೆತುಹೋದವರಂತಿದ್ದ ಅಶ್ವಿನಿ ಈ ಸಿನಿಮಾ ನೆವದಲ್ಲಿ ಒಂದಿಷ್ಟು ಮಾತಾಡಿದ್ದು. ಆದರೆ ಅವರ ಮಾತು ಕೊನೆಗೆ ಬಂದು ನಿಲ್ಲುತ್ತಿದ್ದದ್ದು ಅಪ್ಪು ವಿಚಾರದಲ್ಲೇ. ಪುನೀತ್‌ ಅವರನ್ನು ಇಡೀ ಕರುನಾಡೇ ಮಿಸ್‌ ಮಾಡಿಕೊಳ್ಳುತ್ತಿರುವಾಗ ಅವರ ಸಂಗಾತಿ ಅದೆಷ್ಟು ಗಾಢವಾಗಿ ಪತಿಯ ಬಗ್ಗೆ ನೆನಪಿಸಿಕೊಳ್ಳಬಹುದು ಅಲ್ವಾ. ಇರಲಿ, ಆಚಾರ್ ಆಂಡ್ ಕೊ ಸಿನಿಮಾ ನೆವದಲ್ಲಿ ಅಶ್ವಿನಿ ಒಂದಿಷ್ಟು ಕಡೆ ಇಂಟರ್‌ವ್ಯೂ ಕೊಟ್ಟಿದ್ದಾರೆ. ಅದರಲ್ಲಿ ಬಹಳ ಇಂಟರೆಸ್ಟಿಂಗ್ ಅನಿಸೋ ವಿಚಾರ ಅಂದರೆ ಅಪ್ಪು ಅವರಿಗಿದ್ದ ಒಂದು ಕನಸು. ಅದು ಮತ್ತೇನಲ್ಲ, ಕೆಫೆ ತೆರೆಯೋ ಕನಸು. ಯೆಸ್‌ ಅಪ್ಪು ಅವರಿಗೆ ತಾನೊಂದು ಕೆಫೆ ತೆರೆಯಬೇಕು ಅನ್ನೋ ಕನಸಿತ್ತು ಅನ್ನೋ ಸತ್ಯವನ್ನು ಅಶ್ವಿನಿ ಸಂದರ್ಶನದಲ್ಲಿ ಬಾಯ್ಬಿಟ್ಟಿದ್ದಾರೆ. ಹಾಗೆ ನೋಡಿದರೆ ಆಹಾರ ಕ್ಷೇತ್ರದಲ್ಲಿ ಆಸಕ್ತಿ ಇರುವ ಸುದೀಪ್ ಅವರೂ ಅನೇಕ ಕಡೆ ರೆಸ್ಟೊರೆಂಟ್ ತೆರೆದಿದ್ದಾರೆ. ಆದರೆ ಸುದೀಪ್‌ ತಿನ್ನೋದಕ್ಕಿಂತ ಮಾಡಿ ಬಡಿಸೋದರಲ್ಲೇ ಹೆಚ್ಚು ಆಸಕ್ತಿ ತೋರುತ್ತಿದ್ದರು. ಅಪ್ಪು ಅವರಿಗೆ ತಿನ್ನೋದರಲ್ಲಿ ಭಲೇ ಪ್ರೀತಿ.

ರಮ್ಯಾ ಇಲ್ಲ ಅನ್ನೋ ಬೇಜಾರಿದೆ, ಅವ್ರು ರಾಜಕೀಯದಲ್ಲಿ ಬೆಳೆಯಲಿ: ನಿರ್ದೇಶಕ ನಾಗಶೇಖರ್

ಒಮ್ಮೆ ಸಿನಿಮಾ ಚಿತ್ರೀಕರಣಕ್ಕಾಗಿ ಅಮೆರಿಕಾಗೆ ಹೋಗಿದ್ದಾಗ ಕೆಫೆಯಲ್ಲಿ ಕೊಟ್ಟ ಕಾಫಿ ಪುನೀತ್‌ಗೆ ಬಹಳ ಇಷ್ಟವಾಗಿತ್ತಂತೆ. ಆಗ ಹೀಗೊಂದು ಕೆಫೆ ತೆರೆದು ನಮ್ಮ ಜನಕ್ಕೆ ಅದ್ಭುತ ಟೇಸ್ಟ್‌ನ ಕಾಫಿ ಕೊಡಬೇಕು ಅಂತಿದ್ರಂತೆ ಅಪ್ಪು. ಇನ್ನು ಬನ್, ಬನ್ ಮಸ್ಕಾ, ಬನ್ ಜಾಮ್, ಖಾರಾ ಬನ್ ಅಂದರೆ ಬಹಳ ಇಷ್ಟಪಡುತ್ತಿದ್ದರು. ಇದನ್ನು ಇಷ್ಟಪಟ್ಟು ತಿನ್ನುವಾಗಲೂ ಒಂದಲ್ಲ ಒಂದು ದಿನ ಕೆಫೆ ಆರಂಭಿಸುವುದಾಗಿ ಹೇಳುತ್ತಿದ್ದರಂತೆ. ಆದರೆ ಅದು ಈಡೇರಲೇ ಇಲ್ಲ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಭಾವುಕವಾಗಿ ಸ್ಮರಿಸಿಕೊಳ್ಳುತ್ತಾರೆ. ತಿಂಡಿ ಪ್ರಿಯರು, ಮಾನವೀಯತೆಯ ಖನಿಯಂತಿದ್ದ ಅಪ್ಪು(Puneeth Rajkumar) ನಮ್ಮ ಜೊತೆಗಿದ್ದರೆ ಇಷ್ಟೊತ್ತಿಗೆ ನಾವು ಅಪ್ಪು ಕೆಫೆಯ ಕಾಫಿ ಸವಿಯಬಹುದಾಗಿತ್ತು ಅನ್ನುತ್ತಾರೆ ಅಪ್ಪು ಫ್ಯಾನ್ಸ್(Fans). ಈ ಕೆಫೆಯ ಮೂಲಕ ಒಂದಿಷ್ಟು ಜನರಿಗೆ ಉದ್ಯೋಗವೂ ಸಿಗುತ್ತಿತ್ತು.

ಇರಲಿ, ಇದೇ ಶುಕ್ರವಾರ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ನಿರ್ಮಾಣದ ಆಚಾರ್‌ ಆಂಡ್ ಕೋ ರಿಲೀಸ್‌ ಆಗ್ತಿದೆ. ಸಿಂಧೂ ಎಂಬ ಯುವತಿ ಈ ಸಿನಿಮಾ ನಿರ್ದೇಶನ(Direction) ಮಾಡಿ ಲವಲವಿಕೆಯಿಂದ ನಟಿಸಿದ್ದಾರೆ. ಹೊಸ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ತರಬೇಕು, ಹೊಸ ಪ್ರತಿಭೆಗಳ ಕ್ರಿಯೇಟಿವಿಗೆ ಅವಕಾಶ ನೀಡಬೇಕು ಎಂಬ ಅಪ್ಪು ಕನಸು ಇದೀಗ ಅವರ ಪತ್ನಿ ಅಶ್ವಿನಿ ಮೂಲಕ ಮುಂದುವರಿಯುತ್ತಿದೆ. ಈ ಸಿನಿಮಾದಲ್ಲಂತೂ ಇನ್ನೂ ಚಿಕ್ಕ ವಯಸ್ಸಿನ ಹುಡುಗಿಯೊಬ್ಬಳ ಕ್ರಿಯಾಶೀಲತೆಗೆ ಅಪ್ಪು ಮತ್ತು ಅಶ್ವಿನಿ ಬೆಳಕಿನ ಹಾದಿ ತೋರಿಸಿದ್ದಾರೆ.

ಪವಿತ್ರಾ ಲೋಕೇಶ್‌ 'ಮತ್ತೆ ಮದುವೆ' ನೋಡಿಲ್ಲ: ಸಹೋದರ ಆದಿ ಲೋಕೇಶ್ ಮನದಾಳ