ಧಾರವಾಡದ ದೇವರ ಹುಬ್ಬಳ್ಳಿಯಲ್ಲಿ ಪತಿಯ ಸಾವಿನ ಸುದ್ದಿ ಕೇಳಿ ಪತ್ನಿಗೂ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಈಶ್ವರಪ್ಪ ಮತ್ತು ಪಾರ್ವತೆವ್ವಾ ಎಂಬ ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿದ್ದು, ಊರಿಗೆಲ್ಲಾ ದುಃಖ ತಂದಿದೆ.

ಧಾರವಾಡ (ಫೆ.17): ಪತಿಯ ಸಾವಿನ ಸುದ್ದಿ ತಿಳಿದು ತೀವ್ರ ಆಘಾತದಿಂದ ಪತ್ನಿಗೂ ಹೃದಯಾಘಾತವಾಗಿ ಸಾವಿನಲ್ಲಿ ಒಂದಾದ ಘಟನೆ ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿಯಲ್ಲಿ ನಡೆದಿದೆ.

ಪತಿ ಈಶ್ವರಪ್ಪಾ(79), ಪಾರ್ವತೆವ್ವಾ(74) ಮೃತ ವೃದ್ಧದಂಪತಿ. ಇಬ್ಬರು ಪರಸ್ಪರ ತುಂಬಾ ಪ್ರೀತಿಯಿಂದಿದ್ದರು, ತುಂಬು ಜೀವನ ನಡೆಸಿದ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಇಬ್ಬರೂ ಕುಳಿತು ಊಟ ಮಾಡಿದ್ದರು. ಆದರೆ ಏಕಾಏಕಿ ಪತಿ ಈಶ್ವರಪ್ಪಾಗೆ ಹೃದಯಾಘಾತವಾಗಿ ಮೃತಪಟ್ಟಿದ್ದರು. ಪತಿ ಸಾವಿನ ಸುದ್ದಿ ತಿಳಿದ ಪಾರ್ವತೆವ್ವ ಆಘಾತಕ್ಕೊಳಗಾಗಿ ಮೃತಪಟ್ಟರು

ಬದುಕಿದ್ದಾಗಲೂ ಒಬ್ಬರನ್ನೊಬ್ಬರು ಬಿಟ್ಟು ಕ್ಷಣದ ಜೀವಗಳು ಸಾವಿನಲ್ಲೂ ಒಂದಾಗಿದ್ದಾರೆ. ವೃದ್ಧ ದಂಪತಿಗಳನ್ನು ನೆನೆದು ಇಡೀ ಗ್ರಾಮವೇ ಕಂಬನಿ ಮಿಡಿಯಿತು. ನಾಲ್ಕು ಜನ ಮಕ್ಕಳ, 12 ಜನ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಇದನ್ನೂ ಓದಿ: ಸಾವಿನಲ್ಲೂ ಒಂದಾದ ವೃದ್ಧ ದಂಪತಿ; ಪತಿಯ ಸಾವಿನ ಸುದ್ದಿ ತಿಳಿದು ಹೃದಯಾಘಾತದಿಂದ ಪತ್ನಿಯೂ ಸಾವು!

ರಸ್ತೆ ಅಪಘಾತದಲ್ಲಿ ಪೊಲೀಸ್ ಪೇದೆ ಸಾವು:

ಕೆರೂರ: ಸಮೀಪದ ಯಂಕಂಚಿ ಗ್ರಾಮದ ಹತ್ತಿರ ಬೈಕ್‌ ನಿಯಂತ್ರಣ ತಪ್ಪಿ ಪೊಲೀಸ್‌ ಪೇದೆ ಸಾವಿಗೀಡಾದ ಘಟನೆ ಕೆರೂರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಬಾದಾಮಿಯಲ್ಲಿ ಪೊಲೀಸ್‌ ಪೇದೆಯಾಗಿ ಸೆವೆ ಸಲ್ಲಿಸುತ್ತಿದ್ದ ಸಿದ್ದಪ್ಪ ಲಕ್ಷ್ಮಪ್ಪ ಚಲುವಣ್ಣವರ (37) ಮೃತರು. ಕರ್ತವ್ಯ ಮುಗಿಸಿಕೊಂಡು ಬೈಕ್‌ ಮೇಲೆ ಸ್ವಗ್ರಾಮ ಬಂದಕೇರಿಗೆ ಹೊರಟಿದ್ದಾಗ ರಾತ್ರಿ 9 ಗಂಟೆ ಸುಮಾರಿಗೆ ಯಂಕಂಚಿ ಗ್ರಾಮದ ಹತ್ತಿರ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಬೈಕ್‌ ನಿಯಂತ್ರಣ ತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದು, ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಕೆಚ್ಚುವರಿ ಅಧೀಕ್ಷಕ ಮಹಾಂತೇಶ್ವರ ಜಿದ್ದಿ, ಡಿಎಸ್‌ಪಿ ವಿಶ್ವನಾಥರಾವ್‌ ಕುಲಕರ್ಣಿ, ಸಿಪಿಐ ಕರಿಯಪ್ಪ ಬನ್ನೆ, ಪಿಎಸ್‌ಐ ಬಿ.ಎಂ. ರಭಕವಿ ಭೇಟಿ ನೀಡಿ ಪರಿಶೀಲಿಸಿದರು. ಮೃತನ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ಬಂದಕೇರಿ ಗ್ರಾಮದಲ್ಲಿ ನಡೆಯಿತು. ಕೆರೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.