Asianet Suvarna News Asianet Suvarna News

ಸಾವಿನಲ್ಲೂ ಒಂದಾದ ವೃದ್ಧ ದಂಪತಿ; ಪತಿಯ ಸಾವಿನ ಸುದ್ದಿ ತಿಳಿದು ಹೃದಯಾಘಾತದಿಂದ ಪತ್ನಿಯೂ ಸಾವು!

ತುಂಬು ಜೀವನ ನಡೆಸಿದ ವೃದ್ಧ ದಂಪತಿಗಳು ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಸಾವಂತೂರು ಗ್ರಾಮದಲ್ಲಿ ನಡೆದಿದೆ. ಹೊಳೆಯಪ್ಪ (90) ಹಾಗೂ ಗಂಗಮ್ಮ(80) ಸಾವಿನಲ್ಲೂ ಒಂದಾದ ವೃದ್ಧ ದಂಪತಿಗಳು.

An elderly couple who were united in death in mumbaru village at shivamogga rav
Author
First Published Jan 11, 2024, 6:34 PM IST

ಶಿವಮೊಗ್ಗ (ಜ.11): ತುಂಬು ಜೀವನ ನಡೆಸಿದ ವೃದ್ಧ ದಂಪತಿಗಳು ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಸಾವಂತೂರು ಗ್ರಾಮದಲ್ಲಿ ನಡೆದಿದೆ.

ಹೊಳೆಯಪ್ಪ (90) ಹಾಗೂ ಗಂಗಮ್ಮ(80) ಸಾವಿನಲ್ಲೂ ಒಂದಾದ ವೃದ್ಧ ದಂಪತಿಗಳು. ಕೃಷಿ  ಕಾರ್ಮಿಕರಾಗಿ ಜೀವನ ನಡೆಸುತ್ತಿದ್ದ ದಂಪತಿ. 90ರ ಹರೆಯದ ಹೊಳೆಯಪ್ಪ ಹಾಗೂ 84ರ ಗಂಗಮ್ಮ ಬಡತನದಲ್ಲಿದ್ದರೂ ಕೂಲಿನಾಲಿ ಮಾಡಿಕೊಂಡು ಮದುವೆಯಾದಾಗಿಂದಲೂ ಪರಸ್ಪರ ಬಿಟ್ಟಿರಲಾರದಷ್ಟು ಪ್ರೀತಿಯಿಂದ  ತುಂಬು ಸಂಸಾರ ನಡೆಸಿದ್ದ ವೃದ್ಧ ದಂಪತಿಗಳು. ಆದರೆ ಇತ್ತೀಚೆಗೆ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದ ಹೊಳೆಯಪ್ಪ. ಇಂದು ಬೆಳಗಿನ ಜಾವ 1 ಗಂಟೆ ಸಮಯಕ್ಕೆ ಮೃತಪಟ್ಟಿರುವ ಪತಿ. ಪತಿಯ ಸಾವಿನ ಸುದ್ದಿ ತಿಳಿದು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಒಂದು ಗಂಟೆಯೊಳಗೆ ಪತ್ನಿ ಗಂಗಮ್ಮ ಸಹ ಮೃತಳಾಗಿದ್ದಾಳೆ.

ಮನೆಯಿಂದ ಹೊರಹೋಗುವಂತೆ ಪತ್ನಿ ಜೊತೆ ಜಗಳ; ಲೆದರ್ ಬೆಲ್ಟ್‌ನಿಂದ ಹಲ್ಲೆ ನಡೆಸಿದ ದುರುಳ

ಮೃತ ವೃದ್ಧ ದಂಪತಿಗಳ ನಿಧನಕ್ಕೆ ಮುಂಬಾರು ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ. ಇಬ್ಬರು ಗಂಡು ಮಕ್ಕಳು, ಐವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗ ಅಗಲಿರುವ ದಂಪತಿಗಳು.

Follow Us:
Download App:
  • android
  • ios