ದತ್ತ ಪೀಠ, ಬಾಬಾ ಬುಡನ್ ದರ್ಗಾ ವಿವಾದ: ಗೃಹ ಸಚಿವರ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ
ದತ್ತ ಪೀಠ ಹಾಗೂ ಬಾಬಾ ಬುಡನ್ ದರ್ಗಾ ವಿವಾದದ ಸಂಬಂಧ ಗೃಹ ಸಚಿವ ಡಾ.ಜಿ ಪರಮೇಶ್ವರ್ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ ಮಾಡಲು ಇಂದು ನಡೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.
ಬೆಂಗಳೂರು (ಜ.19): ದತ್ತ ಪೀಠ ಹಾಗೂ ಬಾಬಾ ಬುಡನ್ ದರ್ಗಾ ವಿವಾದದ ಸಂಬಂಧ ಗೃಹ ಸಚಿವ ಡಾ.ಜಿ ಪರಮೇಶ್ವರ್ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ ಮಾಡಲು ಇಂದು ನಡೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.
ಉಪಸಮಿತಿ ವಿವಾದಿತ ಪ್ರಕರಣವನ್ನು ಪರಿಶೀಲಿಸಿ ಸಮಗ್ರ ರೀತಿಯಲ್ಲಿ ತನ್ನ ಶಿಫಾರಸನ್ನು ನೀಡುವುದರಿಂದ, ಪ್ರಕರಣದ ಸಂಬಂಧ ರಾಜ್ಯ ಸರ್ಕಾರದ ನಿಲುವನ್ನು ವ್ಯಕ್ತಪಡಿಸಲು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಲಿಖಿತ ಆಕ್ಷೇಪಣೆ ಮತ್ತು ಹೇಳಿಕೆಯನ್ನು ಸಲ್ಲಿಸಲು ಸಹಾಯ ಮಾಡುತ್ತದೆ. ಸೈಯದ್ ಘೌಸ್ ಮೊಹಿಯುದ್ದೀನ್ ಶಾ ಖಾದ್ರಿ ಈ ವಿವಾದದ ಬಗ್ಗೆ ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ.
ಖಾದ್ರಿ ಗುರು ದತ್ತಾತ್ರೇಯ ಪೀಠದ ದೇವಸ್ಥಾನ ಸಂವರ್ಧನ ಸಮಿತಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ಶ್ರೀರಾಮಚಂದ್ರನ ಉಚಿತ ಟ್ಯಾಟೂ ಅಭಿಯಾನ; ಮುಗಿಬಿದ್ದ ರಾಮಭಕ್ತರು!
ಸಮಿತಿಯಲ್ಲಿ ಸಚಿವ ಎಚ್‌ಕೆ ಪಾಟೀಲ್, ಕರ್ನಾಟಕ ಹಿಂದೂ ಧಾರ್ಮಿಕ ದತ್ತಿ ಸಚಿವ ರಾಮಲಿಂಗಾರೆಡ್ಡಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆಜೆ ಜಾರ್ಜ್ ಇದ್ದಾರೆ.
ಸಚಿವ ಸಂಪುಟದ ತೀರ್ಮಾನಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ, ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಫೆ.12-23 ವರೆಗೆ ವಿಧಾನಮಂಡಲ ಅಧಿವೇಶನ ನಡೆಯಲಿದೆ ಎಂದು ತಿಳಿಸಿದ್ದಾರೆ. ಸಿದ್ದರಾಮಯ್ಯ ಫೆ.16 ರಂದು ತಮ್ಮ 15ನೇ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ಹೆಚ್ ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.
ಕ್ಯಾಬಿನೆಟ್ ಮೀಟಿಂಗ್ ಮುಖ್ಯಾಂಶ: ಒಳ ಮೀಸಲಾತಿ, ಚನ್ನಮ್ಮನ ಕಿತ್ತೂರು, ಬಸವಣ್ಣನೇ ಸಾಂಸ್ಕೃತಿಕ ನಾಯಕ!