Asianet Suvarna News Asianet Suvarna News

ಬೆಳಗಾವಿಯಲ್ಲಿ ಶ್ರೀರಾಮಚಂದ್ರನ ಉಚಿತ ಟ್ಯಾಟೂ ಅಭಿಯಾನ; ಮುಗಿಬಿದ್ದ ರಾಮಭಕ್ತರು!

ಅಯೋಧ್ಯೆಯಲ್ಲಿ ಜ.22 ರಂದು ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕುಂದಾನಗರಿ ಬೆಳಗಾವಿಯಲ್ಲಿ ಶ್ರೀರಾಮಚಂದ್ರನ ಟ್ಯಾಟೂ ಅಭಿಯಾನ ಶುರುವಾಗಿದೆ. ಶ್ರೀರಾಮನ ಭಕ್ತರು ಟ್ಯಾಟೂ ಹಾಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ.

Ayodhya RamMandir Inauguration Sri Ramachandras Free Tattoo Campaign at Belagavi rav
Author
First Published Jan 18, 2024, 11:44 PM IST

ಬೆಳಗಾವಿ (ಜ.18)ಕ :  ಅಯೋಧ್ಯೆಯಲ್ಲಿ ಜ.22 ರಂದು ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕುಂದಾನಗರಿ ಬೆಳಗಾವಿಯಲ್ಲಿ ಶ್ರೀರಾಮಚಂದ್ರನ ಟ್ಯಾಟೂ ಅಭಿಯಾನ ಶುರುವಾಗಿದೆ. ಶ್ರೀರಾಮನ ಭಕ್ತರು ಟ್ಯಾಟೂ ಹಾಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ.

ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಉಚಿತವಾಗಿ ಶ್ರೀರಾಮಚಂದ್ರನ ಟ್ಯಾಟೂ ಅಭಿಯಾನ ಆರಂಭಿಸಲಾಗಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಮೂರು ಕಡೆಗಳಲ್ಲಿ ಟ್ಯಾಟೂ ಕೇಂದ್ರಗಳನ್ನು ತೆರೆಯಲಾಗಿದೆ. ಯುವಕರು, ಯುವತಿಯರು ಆದಿಯಾಗಿ ಎಲ್ಲರೂ ತಮ್ಮ ಕೈಗಳ ಮೇಲೆ ಶ್ರೀರಾಮನ ಭಾವಚಿತ್ರವನ್ನು ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ. ಬಿಪಿ, ಶುಗರ್‌ ಸೇರಿದಂತೆ ಚರ್ಮವ್ಯಾದಿಗಳಿಂದ ಬಳಲುತ್ತಿರುವವರನ್ನು ಹೊರತುಪಡಿಸಿದವರಿಗೆ ಕನ್ನಡ, ಹಿಂದಿ, ಮರಾಠಿ ಬರಹದೊಂದಿಗೆ ರಾಮನ ಟ್ಯಾಟೂ ಹಾಕಲಾಗುತ್ತಿದೆ.

 

ಟ್ಯಾಟೂ ಪ್ರಿಯರೇ ಎಚ್ಚರ, ಸೆಪ್ಸಿಸ್‌ನಿಂದ 32 ವರ್ಷದ ಇಬ್ಬರು ಮಕ್ಕಳ ತಂದೆ ನಿಧನ!

ಶ್ರೀರಾಮಚಂದ್ರನ ಮಂದಿರದಲ್ಲಿ ರಾಮಲಲ್ಲ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಶ್ರೀರಾಮನ ಟ್ಯಾಟೂ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. 10 ಸಾವಿರ ಜನರಿಗೆ ಟ್ಯಾಟೂ ಹಾಕಲು ಗುರಿ ಹೊಂದಲಾಗಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.

ಶ್ರೀರಾಮನ ಟ್ಯಾಟೂ ಅಭಿಯಾನಕ್ಕೆ ನಿರೀಕ್ಷೆಗೂ ಮೀರಿ ಜನರಿಂದ ಪ್ರತಿಕ್ರಿಯೆವ್ಯಕ್ತವಾಗಿದೆ. ಟ್ಯಾಟೂ ಕೇಂದ್ರಗಳಿಗೆ ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಜ.22ರವರೆಗೆ ಹಮ್ಮಿಕೊಂಡಿರುವ ಈ ಅಭಿಯಾನವನ್ನು ಜ.23ರವರೆಗೆ ವಿಸ್ತರಿಸಲಾಗುವುದು. 20 ಸಾವಿರ ಜನರು ಶ್ರೀರಾಮನ ಟ್ಯೂಟು ಹಾಕಲಾಗುವುದು ಎಂದು ಹೇಳಿದರು.

ವಿನಯ್ ಬಲಗೈಯಲ್ಲಿ ಇರುವುದು ಕುಂಭಮೇಳದ ಟ್ಯಾಟೂ; ಶಿವ, ನಂದಿ, ಅಘೋರಿ ನೋಡಿದ್ರಾ?

Follow Us:
Download App:
  • android
  • ios