Bengaluru crime: ಒಂದೇ ತಿಂಗಳಲ್ಲಿ ₹18 ಕೋಟಿಯ ಡ್ರಗ್ಸ್ ಜಪ್ತಿ, 378 ಪ್ರಕರಣ ದಾಖಲು!

ರಾಜಧಾನಿಯಲ್ಲಿ ಮಾದಕವಸ್ತುಗಳ ಮಾರಾಟ ದಂಧೆ ಹಾಗೂ ಸೇವನೆಗೆ ಬ್ರೇಕ್‌ ಹಾಕಲು ವಿಶೇಷ ಕಾರ್ಯಾಚರಣೆ ಕೈಗೊಂಡಿರುವ ನಗರ ಪೊಲೀಸರು, ಜುಲೈನಲ್ಲಿ 378 ಪ್ರಕರಣ ದಾಖಲಿಸಿ ಬರೋಬ್ಬರಿ .18 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ.

Drugs worth 18 crore seized in a single month,378 cases registered by bengaluru police rav

ಬೆಂಗಳೂರು (ಆ.1) :  ರಾಜಧಾನಿಯಲ್ಲಿ ಮಾದಕವಸ್ತುಗಳ ಮಾರಾಟ ದಂಧೆ ಹಾಗೂ ಸೇವನೆಗೆ ಬ್ರೇಕ್‌ ಹಾಕಲು ವಿಶೇಷ ಕಾರ್ಯಾಚರಣೆ ಕೈಗೊಂಡಿರುವ ನಗರ ಪೊಲೀಸರು, ಜುಲೈನಲ್ಲಿ 378 ಪ್ರಕರಣ ದಾಖಲಿಸಿ ಬರೋಬ್ಬರಿ .18 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ.

ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌, ನಗರ ಪೊಲೀಸ್‌ ವ್ಯಾಪ್ತಿಯ 8 ವಿಭಾಗಗಳ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕವಸ್ತುಗಳ ಮಾರಾಟ ಹಾಗೂ ಸೇವನೆ ಮಾಡುವವರ ವಿರುದ್ಧ 378 ಪ್ರಕರಣ ದಾಖಲಿಸಲಾಗಿದೆ. 47 ಅಂತರ್‌ರಾಜ್ಯ ಡ್ರಗ್‌್ಸ ಪೆಡ್ಲರ್‌ಗಳು, 13 ವಿದೇಶಿ ಡ್ರಗ್‌್ಸ ಪೆಡ್ಲರ್‌ಗಳು ಸೇರಿದಂತೆ ಒಟ್ಟು 474 ಮಂದಿ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

Mangaluru crimes: ಪ್ರೀತಿಸುವುದಾಗಿ ನಂಬಿಸಿ ಕೇರಳ ಮೂಲದ ಯುವಕರಿಂದ ಅಪ್ರಾಪ್ತೆಯ ಅತ್ಯಾಚಾರ

ಈ 378 ಪ್ರಕರಣಗಳ ಪೈಕಿ ಡ್ರಗ್‌್ಸ ಪೆಡ್ಲರ್‌ಗಳ ಮೇಲೆ 72 ಪ್ರಕರಣ, ಡ್ರಗ್‌್ಸ ಸೇವನೆ ಮಾಡುವವರ ವಿರುದ್ಧ 306 ಪ್ರಕರಣ ದಾಖಲಿಸಲಾಗಿದೆ. ಅಂತೆಯೇ ನಗರದಲ್ಲಿ ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆಸಿದ್ದ 11 ಮಂದಿ ವಿದೇಶಿಗರನ್ನು ಗಡಿಪಾರು ಮಾಡಲಾಗಿದೆ. ಈ 378 ಪ್ರಕರಣಗಳಲ್ಲಿ .18 ಕೋಟಿ ಮೌಲ್ಯದ 1,785 ಕೆ.ಜಿ. ಮಾದಕವಸ್ತು ಜಪ್ತಿ ಮಾಡಲಾಗಿದೆ. ಈ ಪೈಕಿ 1,723 ಕೇಜಿ ಗಾಂಜಾ, 40 ಗ್ರಾಂ ಹ್ಯಾಶಿಷ್‌ ಆಯಿಲ್‌, 467 ಗ್ರಾಂ ಚರಸ್‌, 570 ಗ್ರಾಂ ಕೊಕೇನ್‌, 3 ಕೆ.ಜಿ. ಎಂಡಿಎಂಎ ಸೇರಿದಂತೆ ವಿವಿಧ ಮಾದರಿ ಡ್ರಗ್‌್ಸ ಒಳಗೊಂಡಿದೆ ಎಂದು ವಿವರಿಸಿದರು.

ಕಾಪ್ಟಕಾಯ್ದೆಯಡಿ 24 ಕೇಸ್‌ ದಾಖಲು

ನಗರ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳ ಬಳಿ ಮಾದಕ ದ್ರವ್ಯ ಮಾರಾಟ ಮಾಡುತ್ತಿರುವ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಜುಲೈ ತಿಂಗಳಲ್ಲಿ 21 ಡ್ರಗ್‌್ಸ ಮಾರಾಟ ಮತ್ತು 32 ವ್ಯಸನಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶಾಲಾ, ಕಾಲೇಜುಗಳ 100 ಮೀಟರ್‌ ಒಳಗೆ ತಂಬಾಕು ಮಾರಾಟ ಮಾಡುತ್ತಿದ್ದವರ ವಿರುದ್ಧ ಕಾಪ್ಟಕಾಯ್ದೆಯಡಿ 24 ಪ್ರಕರಣ ದಾಖಲಿಸಲಾಗಿದೆ. 3,588 ಲಘು ಪ್ರಕರಣ ದಾಖಲಿಸಿ .5.99 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಬಿ.ದಯಾನಂದ್‌ ಹೇಳಿದರು.

ಬೆಂಗಳೂರು: ವಿದೇಶಿ ಪೆಡ್ಲರ್‌ ಬಳಿ 2 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ..!

118 ಶಾಲೆ-ಕಾಲೇಜಲ್ಲಿ ಜಾಗೃತಿ

ನಗರ ಪೊಲೀಸರು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಮಾದಕ ವಸ್ತು ಮಾರಾಟ, ಸಾಗಾಟ ಹಾಗೂ ಸೇವನೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಜುಲೈನಲ್ಲಿ ನಗರದ 118 ಶಾಲಾ-ಕಾಲೇಜುಗಳಿಗೆ ಪೊಲೀಸರು ಭೇಟಿ ನೀಡಿ ಮಾದಕವಸ್ತುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ್ದಾರೆ. ಮಾದಕವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮ ಬಗ್ಗೆ ಅರಿವು ಮೂಡಿಸಲಾಗಿದೆ. ಪೊಲೀಸರ ಈ ಕಾರ್ಯಕ್ಕೆ ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು, ಶಿಕ್ಷಕರು ಮತ್ತು ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದಾರೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ತಿಳಿಸಿದರು.

Latest Videos
Follow Us:
Download App:
  • android
  • ios