Asianet Suvarna News Asianet Suvarna News

Mangaluru crimes: ಪ್ರೀತಿಸುವುದಾಗಿ ನಂಬಿಸಿ ಕೇರಳ ಮೂಲದ ಯುವಕರಿಂದ ಅಪ್ರಾಪ್ತೆಯ ಅತ್ಯಾಚಾರ

ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ ಗ್ಯಾಂಪ್‌ ರೇಪ್‌ ನಡೆಸಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Minors raped by youths from Kerala, believing loved in vitla at dakshina kannada rav
Author
First Published Jul 30, 2023, 11:14 AM IST

ಬಂಟ್ವಾಳ (ಜು30): ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ ಗ್ಯಾಂಪ್‌ ರೇಪ್‌ ನಡೆಸಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೆರುವಾಯಿ ಗ್ರಾಮದ 16 ವರ್ಷ ಪ್ರಾಯದ ಬಾಲಕಿಗೆ ಕೇರಳ ಭಾಗದ ಕೆಲವು ಯುವಕರಿಂದ ಹಲವು ಸಮಯದಿಂದ ನಿರಂತರ ಲೈಂಗಿಕ ದೌರ್ಜನ್ಯ(Sexual harassment) ನಡೆದಿದೆ ಎಂದು ಹೇಳಲಾಗಿದೆ. ಶನಿವಾರ ವಿಟ್ಲ ಠಾಣೆ(Vitla police station)ಗೆ ಆಗಮಿಸಿದ ಪರಿಶಿಷ್ಟಪಂಗಡದ ಬಾಲಕಿಯ ಪೋಷಕರು ಘಟನೆಯ ಬಗ್ಗೆ ಕೇರಳ ಮೂಲದ ಕೆಲವು ಯುವಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ವಿಟ್ಲ ಠಾಣೆಯಲ್ಲಿ ಪೊಕ್ಸೋ ಪ್ರಕರಣ(Pocso case) ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ಕೋಲ್ಡ್ ಡ್ರಿಂಕ್‌ನಲ್ಲಿ ಅಮಲು ಔಷದಿ ಹಾಕಿ ಅಪ್ರಾಪ್ತೆ ಮೇಲೆ ರೇಪ್, ಆರೋಪಿ ಸಲ್ಮಾನ್ ಅರೆಸ್ಟ್!

ಸಿಸಿಬಿ ಕಾರ್ಯಾಚರಣೆ: ಅಕ್ರಮ ಪಿಸ್ತೂಲ್‌ ಹೊಂದಿದ ಇಬ್ಬರ ಸೆರೆ

ಮಂಗಳೂರು :  ಅಕ್ರಮವಾಗಿ ಪಿಸ್ತೂಲ್‌ ನ್ನು ವಶದಲ್ಲಿರಿಸಿಕೊಂಡಿದ್ದ ಆರೋಪಿಗಳಿಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು(Mangaluru CCB Police) ಬಂಧಿಸಿದ್ದಾರೆ.

ಉಳ್ಳಾಲ ತಾಲೂಕಿನ ಬಾಳೇಪುಣಿಯ ಅಬ್ಬಾಸ್‌ ಯಾನೆ ಬೆಡಿ ಅಬ್ಬಾಸ್‌ (61) ಹಾಗೂ ಮಂಜೇಶ್ವರದ ಪ್ರಸ್ತುತ ಕುತ್ತಾರ್ನಲ್ಲಿ ವಾಸವಿರುವ ಯಶವಂತ್‌ ಕುಮಾರ್‌ (45) ಬಂಧಿತರು.

ಮಂಗಳೂರು ತಾಲೂಕು ಬಜಪೆ ಗ್ರಾಮದ ಒಡ್ಡಿದಕಲ ಎಂಬಲ್ಲಿ ಇಬ್ಬರು ವ್ಯಕ್ತಿಗಳು ಬೈಕ್‌ ವೊಂದರಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮಾರಕಾಯುಧವಾದ ಪಿಸ್ತೂಲ್‌ ಇರಿಸಿಕೊಂಡು ತಿರುಗಾಡುತ್ತಿದ್ದರೆಂದು ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದಾರೆ.

ಬಂಧಿತರಿಂದ ಪಿಸ್ತೂಲ…-1, ಮೊಬೈಲ್‌ ಫೋನುಗಳು-2, ಹಾಗೂ ಹೀರೋ ಹೊಂಡಾ ಫ್ಯಾಶನ್‌ ಪ್ಲಸ್‌ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 1,45,000 ರು. ಅಂದಾಜಿಸಲಾಗಿದೆ. ಈ ಬಗ್ಗೆ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಮಾದಕ ವಸ್ತು ಮಾರಾಟ: ಆರೋಪಿ ಸೆರೆ

ಮಂಗಳೂರು: ಮುಡಿಪು ಕಂಬಳ ಪದವು ಪರಿಸರದಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಉಳ್ಳಾಲ ಬೋಳಿಯಾರ್‌ ನಲಿಕೆದ ಗುಡ್ಡೆ ಮನೆಯ ಮಹಮ್ಮದ್‌ ಆರೀಫ್‌(28)ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಈತ ಎಂಡಿಎಂಎ ಡ್ರಗ್‌್ಸನ್ನು ಕಾರಿನಲ್ಲಿಟ್ಟು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗ ಕಾರ್ಯಾಚರಣೆ ನಡೆಸಲಾಗಿದೆ. ಆತನಿಂದ 1.25 ಲ.ರು. ಮೌಲ್ಯದ ಒಟ್ಟು 25 ಗ್ರಾಂ ಎಂಡಿಎಂಎ, ಕಾರು, ಮೊಬೈಲ್‌ ಪೋನ್‌, ಡಿಜಿಟಲ್‌ ತೂಕಮಾಪನ ಸೇರಿದಂತೆ ಒಟ್ಟು ಅಂದಾಜು 6,35,500 ರು. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನ ವಿರುದ್ಧ ಈ ಹಿಂದೆ ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಜಾನುವಾರು ಕಳ್ಳತನ ಪ್ರಕರಣ ದಾಖಲಾಗಿತ್ತು.

ಮಂಗಳೂರು: ಪಿಸ್ತೂಲ್‌, ಡ್ರಗ್ಸ್‌ ಸಹಿತ 3 ಪೆಡ್ಲರ್‌ಗಳ ಬಂಧನ

ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಪೊಲೀಸ್‌ ನಿರೀಕ್ಷಕ ಶ್ಯಾಮ್‌ ಸುಂದರ್‌, ಪಿಎಸ್‌ಐಗಳಾದ ರಾಜೇಂದ್ರ, ಸುದೀಪ್‌, ಶರಣಪ್ಪ ಭಂಡಾರಿ, ನರೇಂದ್ರ ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು. ಈ ಮಾದಕ ವಸ್ತು ಮಾರಾಟ ಜಾಲದಲ್ಲಿ ಇನ್ನೂ ಹಲವಾರು ಆರೋಪಿಗಳು ಭಾಗಿಯಾಗಿದ್ದು ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್‌ ಕಮಿಷನರ್‌ ಕುಲದೀಪ್‌ ಕುಮಾರ್‌ ಜೈನ್‌(Kuldeep kumar jain IPS) ತಿಳಿಸಿದ್ದಾರೆ.

Follow Us:
Download App:
  • android
  • ios