Kolar: ಒಕ್ಕಲಿಗರ ಮೀಸಲಾತಿ ಶೇ.8ಕ್ಕೆ ಏರಿಸಲು ಹೋರಾಟ: ಚುಂಚಶ್ರೀ
ಪರಿಶಿಷ್ಟ ಜಾತಿ, ಪಂಗಡ ಮೀಸಲು ಹೆಚ್ಚಳ ಬಳಿಕ ಇದೀಗ ರಾಜ್ಯದಲ್ಲಿ ಇತರೆ ಸಮುದಾಯಗಳೂ ಮೀಸಲಾತಿ ವಿಚಾರವಾಗಿ ಗಟ್ಟಿ ಧ್ವನಿಯಲ್ಲಿ ಕೂಗೆಬ್ಬಿಸಿವೆ. ಒಕ್ಕಲಿಗರಿಗೆ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಶೇ.8ರಷ್ಟು ಹೆಚ್ಚಿಸಿ ಎಂದು ನಿರ್ಮಲಾನಂದನಾಥ ಶ್ರೀಗಳು ಇದೀಗ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೋಲಾರ (ಅ.17): ಪರಿಶಿಷ್ಟ ಜಾತಿ, ಪಂಗಡ ಮೀಸಲು ಹೆಚ್ಚಳ ಬಳಿಕ ಇದೀಗ ರಾಜ್ಯದಲ್ಲಿ ಇತರೆ ಸಮುದಾಯಗಳೂ ಮೀಸಲಾತಿ ವಿಚಾರವಾಗಿ ಗಟ್ಟಿ ಧ್ವನಿಯಲ್ಲಿ ಕೂಗೆಬ್ಬಿಸಿವೆ. ಒಕ್ಕಲಿಗರಿಗೆ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಶೇ.8ರಷ್ಟು ಹೆಚ್ಚಿಸಿ ಎಂದು ಸಮುದಾಯದ ಪ್ರಮುಖ ಸ್ವಾಮೀಜಿಗಳಾದ ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳು ಇದೀಗ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದಕ್ಕಾಗಿ ಹೋರಾಟಕ್ಕೂ ಹಿಂಜರಿಯುವುದಿಲ್ಲ ಎಂದಿದ್ದಾರೆ.
ನಗರದಲ್ಲಿ ಸೋಮವಾರ ನಡೆದ ಜಿಲ್ಲಾ ಒಕ್ಕಲಿಗರ ಸಾಂಸ್ಕೃತಿಕ ಭವನದ ಶಂಕುಸ್ಥಾಪನಾ ಸಮಾರಂಭ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಈ ಬೇಡಿಕೆ ಇಟ್ಟರು. ಪ್ರಸ್ತುತ ರಾಜ್ಯದ ಜನಸಂಖ್ಯೆಯ ಶೇ.16ರಷ್ಟಿರುವ ಒಕ್ಕಲಿಗ ಸಮುದಾಯಕ್ಕೆ ಶೇ.4ರಷ್ಟುಮೀಸಲಾತಿ ಮಾತ್ರ ಸಿಗುತ್ತಿದ್ದು, ಇದರಿಂದ ಸಮುದಾಯದ ಮುಂದಿನ ಪೀಳಿಗೆಗೆ ಅನ್ಯಾಯವಾಗುತ್ತದೆ. ಹೀಗಾಗಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಈಗಿರುವ ಮೀಸಲಾತಿಯನ್ನು ಶೇ.8ರಷ್ಟುಹೆಚ್ಚಿಸಬೇಕು. ಈ ಮೂಲಕ ಒಟ್ಟು ಶೇ.12ರಷ್ಟುಮೀಸಲಾತಿ ಸೌಲಭ್ಯ ಕಲ್ಪಿಸಿದಾಗ ಮಾತ್ರ ಒಕ್ಕಲಿಗ ಸಮುದಾಯಕ್ಕೆ ನ್ಯಾಯ ಸಿಕ್ಕಂತಾಗುವುದು ಎಂದು ಅಭಿಪ್ರಾಯಪಟ್ಟರು.
Mandya: ಪ್ರತಿಮೆಗಳು ಯುವಪೀಳಿಗೆಗೆ ಪ್ರೇರಣೆಯಾಗಲಿ: ಚುಂಚಶ್ರೀ
ಮೀಸಲಾತಿ ಏರಿಕೆ ಅನಿವಾರ್ಯ: ಶೇ.50ಕ್ಕಿಂತ ಹೆಚ್ಚು ಮೀಸಲಾತಿ ಇರಬಾರದು ಎಂದು ಸಂವಿಧಾನದಲ್ಲಿ ಹೇಳಲಾಗಿದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಮೀಸಲಾತಿ ಏರಿಕೆ ಅನಿವಾರ್ಯ. ಇದಕ್ಕಾಗಿ ನಾವು ಹೋರಾಟಕ್ಕೂ ಹಿಂಜರಿಯುವುದಿಲ್ಲ. 2050ಕ್ಕೆ ಬೆಂಗಳೂರಿನಲ್ಲಿರುವ ಜನಸಂಖ್ಯೆ 1.5 ಕೋಟಿಯಿಂದ 4.5 ಕೋಟಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಇದಕ್ಕೆ ಸಮರ್ಪಕವಾದ ದೂರದೃಷ್ಟಿಯ ಚಿಂತನೆಗಳು ಅಗತ್ಯ. ಇದಕ್ಕಾಗಿ ಅಧ್ಯಯನ ಸಮಿತಿ ರಚಿಸಬೇಕಾಗಿದೆ ಎಂದು ಹೇಳಿದರು. ನಮ್ಮ ಸಮುದಾಯದ ಜೊತೆ ರೆಡ್ಡಿಗಳು, ಬಂಟರು, ಅಂಧ್ರದ ರೆಡ್ಡಿ ಮುಂತಾದವರು ಸೇರ್ಪಡೆಯಾಗುತ್ತಾರೆ. ಇವರೆಲ್ಲರನ್ನು ನಮ್ಮ ಸಮುದಾಯ ಎಂದು ಪರಿಗಣಿಸಿದಲ್ಲಿ ಒಕ್ಕಲಿಗರ ಜನಸಂಖ್ಯೆ ಶೇ.20ರಷ್ಟಾಗಲಿದೆ ಎಂದರು.
ಪ್ರಕೃತಿ ಪೂಜೆಯಿಂದ ಬದುಕು ಸ್ವಚ್ಛ: ಮನುಷ್ಯ ಜನ್ಮ ಪಂಚಭೂತಗಳಿಂದ ನಿರ್ಮಾಣವಾಗಿದೆ. ಹಾಗಾಗಿ ನಮ್ಮ ಪೂರ್ವಜರು ಪ್ರಕೃತಿಯನ್ನು ಪೂಜಿಸುತ್ತಾ ಬಂದಿದ್ದಾರೆ. ಪ್ರಕೃತಿಯನ್ನು ಪೂಜಿಸಿದರೇ ನಮ್ಮ ಬದುಕು ಸ್ವಚ್ಛವಾಗಿರುತ್ತದೆ ಎಂದು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ತಾಲೂಕಿನ ತ್ರಿವೇಣಿಸಂಗಮದಲ್ಲಿ ನಡೆದ ಮಹಾಕುಂಭಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ರಾಜ್ಯ ಆಳುವವರು ನಾಸ್ತಿಕನಾದರೂ ಪ್ರಜೆಗಳ ಆಸ್ತಿಕತೆಯನ್ನು ಗೌರವಿಸಬೇಕು. ಸಿಎಂ ಬೊಮ್ಮಾಯಿ ಸ್ವತಃ ಆಸ್ತಿಕರು, ವೈಚಾರಿಕರು, ತತ್ವಜ್ಞಾನಿಗಳಾಗಿದ್ದಾರೆ.
ಮನುಷ್ಯನಿಗೆ ಕಷ್ಟಬರುವುದು ಸಹಜ. ಕಷ್ಟದ ಸಮಯದಲ್ಲಿ ನಿಂತಲ್ಲೇ ನಿಲ್ಲದೆ ನದಿಯ ನೀರಿನಂತೆ ಮುಂದೆ ಸಾಗಿದರೆ ಕಷ್ಟಪರಿಹಾರವಾಗಲಿದೆ. ಅತಿವೃಷ್ಟಿಯಾದರೂ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದರ ಹಿನ್ನೆಲೆ ಧಾರ್ಮಿಕತೆ, ಆಧ್ಯಾತ್ಮಿಕತೆ ಶಕ್ತಿಯಿಂದ ಭಕ್ತರು ಬಂದಿದ್ದಾರೆ ಎಂದರು. ಪೇಜಾವರ ಮಠದ ಸ್ವಾಮಿಜಿ ಶ್ರೀ ವಿಶ್ವಪ್ರಸನ್ನ ತೀರ್ಥ ಪಾದರು ಮಾತನಾಡಿ, ಪೃಕೃತಿಯನ್ನು ಮಾತೆಯಂತೆ ಪೂಜಿಸುವುದು ನಮ್ಮ ಸಂಸ್ಕೃತಿ. ಅದನ್ನು ಯಾವಾಗಲೂ ಜಾಗೃತವಾಗಿಟ್ಟುಕೊಳ್ಳಬೇಕು. ನೆಲ, ಜಲವನ್ನು ತಾಯಿಯಂತೆ ಪ್ರೀತಿಸಬೇಕು. ಶರೀರದ ಕೊಳೆ ಹೋಗುವಂತೆ ಮನದ ಕೊಳೆಯನ್ನೂ ತೊಳೆದುಕೊಳ್ಳಬೇಕು.
ಚುಂಚಶ್ರೀ ಎದುರು ಕಾಲ ಮೇಲೆ ಕಾಲು ಹಾಕಿದ ಸುರ್ಜೇವಾಲಾಗೆ ಡಿಕೆಶಿ ಪಾಠ!
ತೀರ್ಥ ಕ್ಷೇತ್ರದಲ್ಲಿ ಮಿಂದು ಹೋಗುವಾಗ ತೀರ್ಥದ ಒಂದು ಗುಣವನ್ನು ಧಾರಣೆ ಮಾಡಿಕೊಂಡಾಗ ಸಾರ್ಥಕತೆ ಆಗಲಿದೆ ಎಂದು ಹೇಳಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶಿರ್ವಚನ ನೀಡಿ, ಧರ್ಮ, ರಾಜಕಾರಣ, ಸಾರ್ವಜನಿಕರು ಸೇರಿರುವುದರಿಂದ ಸಭೆಯು ತ್ರಿವೇಣಿ ಸಂಗಮವಾಗಿದೆ. ಭಗವಂತನ ಕಡೆ ಮನಸ್ಸು ಒಲಿದಾಗ ಮಾತ್ರ ಭಕ್ತಿ ಪ್ರಾಪ್ತಿ ಆಗುತ್ತದೆ. ಪ್ರಕೃತಿಯನ್ನು ಭಗವಂತನ ಭಾವನೆಯಿಂದ ನೋಡುವುದು ಭಾರತದಲ್ಲಿ ಸಾವಿರಾರು ವರ್ಷಗಳಿಂದ ಬಂದಿದೆ ಎಂದು ಹೇಳಿದರು.