ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ರವಿಶಂಕರ್ ಗುರೂಜಿ, ಪಹಲ್ಗಾಂ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಕಾಶ್ಮೀರಿಗರನ್ನು ನಿಂದನೆಗೆ ಗುರಿಮಾಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ
ಬೆಂಗಳೂರು (ಏ.30) ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ರವಿಶಂಕರ್ ಗುರೂಜಿ, ಪಹಲ್ಗಾಂ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಕಾಶ್ಮೀರಿಗರನ್ನು ನಿಂದನೆಗೆ ಗುರಿಮಾಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಅಹಿಂಸೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ.
'ಅಹಿಂಸೆ ದೌರ್ಬಲ್ಯವಲ್ಲ, ಅದು ಮನಸ್ಸಿನ ಸ್ಥಿತಿ. ದೇಶ ರಕ್ಷಣೆಗಾಗಿ ಅಥವಾ ಯಾರನ್ನಾದರೂ ಅಪಾಯದಿಂದ ಕಾಪಾಡಲು ನಡೆಸುವ ಹೋರಾಟ ಹಿಂಸೆಯಾಗುವುದಿಲ್ಲ. ನಿಜವಾದ ಶತ್ರುಗಳು ಧರ್ಮಾಂಧತೆ ಮತ್ತು ಮೂಲಭೂತವಾದ. ಇವುಗಳನ್ನು ಬುಡಸಮೇತ ನಿರ್ಮೂಲನೆ ಮಾಡಬೇಕು' ಎಂದು ರವಿಶಂಕರ್ ಗುರೂಜಿ ಹೇಳಿದ್ದಾರೆ.
ಇದನ್ನೂ ಓದಿ: ಪಹಲ್ಗಾಂ ಉಗ್ರ ದಾಳಿ: ಮಗುವಿನ ಹಠದಿಂದ ಪಾರಾದ ಕುಟುಂಬ! ಅಂದು ಆಗಿದ್ದೇನು?
ಪಹಲ್ಗಾಂ ದಾಳಿಯ ಕಾರಣದಿಂದ ಕಾಶ್ಮೀರಿಗರನ್ನು ಗುರಿಯಾಗಿಸಿ ನಿಂದಿಸುವುದು ಸರಿಯಲ್ಲ ಎಂದ ಗುರೂಜಿ ಅವರು, 'ಈ ಮೂಲಕ ಎಲ್ಲರಿಗೂ ಮನವಿ ಮಾಡುತ್ತೇನೆ, ಕಾಶ್ಮೀರಿಗರನ್ನು ನಿಂದನೆಗೆ ಒಳಪಡಿಸಬೇಡಿ'ಎಂದು ಕೋರಿದ್ದಾರೆ. ಈ ಮನವಿಯ ಮೂಲಕ ರವಿಶಂಕರ್ ಗುರೂಜಿ ಸಾಮಾಜಿಕ ಸಾಮರಸ್ಯ ಮತ್ತು ಶಾಂತಿಯ ಸಂದೇಶವನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.


