Wildlife: ಸುಣ್ಣದ ಡಬ್ಬಿ ನುಂಗಿ ನರಳಾಡಿದ ನಾಗರಹಾವಿಗೆ ಡಾಕ್ಟರ್ ಯಶಸ್ವಿ ಶಸ್ತ್ರ ಚಿಕಿತ್ಸೆ!

ಜಿಲ್ಲೆಯ ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಅಲಂಪುರಿ ಸಾಲು ಮರದ ತಿಮ್ಮಕ್ಕ ಉದ್ಯಾನವನದ ಸಮೀಪದ ಮನೆಯೊಂದರ ಬಳಿ ಗಾಯಗೊಂಡು ಪತ್ತೆಯಾಗಿದ್ದ ನಾಗರ ಹಾವೊಂದನ್ನು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗುಣಮುಖಗೊಳಿಸಿ ಜೂ. 19ರಂದು ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ. 

Doctor Yashasvi treated and saved the injured cobra at mangaluru dakshina kannada rav


ದಕ್ಷಿಣ ಕನ್ನಡ (ಜ.23) : ಜಿಲ್ಲೆಯ ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಅಲಂಪುರಿ ಸಾಲು ಮರದ ತಿಮ್ಮಕ್ಕ ಉದ್ಯಾನವನದ ಸಮೀಪದ ಮನೆಯೊಂದರ ಬಳಿ ಗಾಯಗೊಂಡು ಪತ್ತೆಯಾಗಿದ್ದ ನಾಗರ ಹಾವೊಂದನ್ನು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗುಣಮುಖಗೊಳಿಸಿ ಜೂ. 19ರಂದು ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ. 

ಅಲಂಪುರಿ ನಿವಾಸಿ ವಸಂತಿ ಅವರ ಮನೆ ಬಳಿಯ ಬಿಲವೊಂದರಲ್ಲಿ ಜೂ. 6ರಂದು ನಾಗರಹಾವೊಂದು ಪತ್ತೆಯಾಗಿದ್ದು, ಹೊರಗೆ ಬರಲು ಸಾಧ್ಯವಾಗದೆ ಒದ್ದಾಡುತ್ತಿತ್ತು. ಅವರು ಉರಗ ಪ್ರೇಮಿ ಸ್ನೇಕ್ ಕಿರಣ್(Snake kiran) ಗೆ ತಿಳಿಸಿದ್ದರು. ಬಳಿಕ ಅವರು ಹಾವನ್ನು ಬಿಲದಿಂದ ಹೊರಗೆ ತೆಗೆದಿದ್ದರು. ಆದರೆ ಅದರ ಹೊಟ್ಟೆ ಹಾಗೂ ಕುತ್ತಿಗೆಗೆ ಗಾಯವಾಗಿತ್ತು. 

ಸಾವು ಗೆದ್ದು ಬಂದ ಶಿರಸಿಯ ಉರಗ ರಕ್ಷಕ ಸೈಯ್ಯದ್ ಇದೀಗ ಮತ್ತೆ ಹಾವು ರಕ್ಷಣೆಗೆ ಅಣಿ

ಕಿರಣ್ ಅವರು ಅದನ್ನು ಮಂಗಳೂರಿಗೆ ಕೊಂಡು ಹೋಗಿ ಪಶುವೈದ್ಯ ಡಾ.ಯಶಸ್ವಿ ಅವರ ಬಳಿ ತೋರಿಸಿದರು. ಪರೀಕ್ಷಿಸಿದ ವೈದ್ಯರು ಪ್ರಾರಂಭದಲ್ಲಿ ಹರಿದ ಚರ್ಮಕ್ಕೆ ಹೊಲಿಗೆ ಹಾಕಿದ್ದು, ಆದರೂ ಅದರ ಹೊಟ್ಟೆಯಲ್ಲಿ ಏನೋ ಇದೆ ಎಂದು ಸಂಶಯಗೊಂಡು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಗ ಹೊಟ್ಟೆಯೊಳಗೆ ಸುಣ್ಣ ತುಂಬುವ ಪ್ಲಾಸ್ಟಿಕ್ ಪತ್ತೆಯಾಗಿದ್ದು, ಅದನ್ನು ಯಶಸ್ವಿಯಾಗಿ ಹೊರಗೆ ತೆಗೆಯಲಾಗಿದೆ. 

ಡಾ.ಯಶಸ್ವಿ(Dr Yashasvi)ಯವರು ಹಾವನ್ನು ಸುಮಾರು 15 ದಿನಗಳ ಕಾಲ ಅಬ್ಸರ್ವೇಶಬ್ ನಲ್ಲಿಟ್ಟು ಬಳಿಕ ಸ್ನೇಕ್ ಕಿರಣ್ ಅವರು 3 ದಿನ ಮನೆಯಲ್ಲಿಟ್ಟು ಪ್ರಸ್ತುತ ಅದನ್ನು ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಹಾಗೂ ರಕ್ಷಕ ಮನೋಜ್ ಅವರ ನೆರವಿನಿಂದ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.

 

Cobra Hidden Inside Kitchen : ಶಿವಮೊಗ್ಗ, ಸಂಕ್ರಾಂತಿಗೆ ಬಂದ ನಾಗರ ಮಿಕ್ಸಿಯಲ್ಲಿ ಕುಳಿತಿದ್ದ!

Latest Videos
Follow Us:
Download App:
  • android
  • ios