ಬೆಂಗಳೂರು :  ಹಿಂದೊಮ್ಮೆ ಜನಾರ್ದನರೆಡ್ಡಿ ನಮ್ಮ ಶಾಸಕರಿಗೆ ಕರೆ ಮಾಡಿ ಬಿಜೆಪಿಗೆ ಆಹ್ವಾನ ಕೊಟ್ಟಿದ್ದಾಗ ನಾನು ಮಾತನಾಡಿ ನನ್ನನ್ನೇ ಮುಖ್ಯಮಂತ್ರಿ ಮಾಡಿ ಎಂದು ಹೇಳಿದ್ದೆ ಎಂದು ಇದೇ ವೇಳೆ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

ಮೊದಲು, ತಮಗೇ ಜನಾರ್ದನರೆಡ್ಡಿ ಕರೆ ಮಾಡಿದ್ದರು ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು. 

ಆಡಿಯೋ ನನ್ನದೇ ಎಂದ ಬಿಎಸ್‌ವೈಗೆ ಸಿದ್ದರಾಮಯ್ಯ ಟಾಂಗ್!

ನಂತರ ತಿದ್ದಿಕೊಂಡು, ನಮ್ಮ ಶಾಸಕರಿಗೆ ಜನಾರ್ದನ ರೆಡ್ಡಿ ಕರೆ ಮಾಡಿದ್ದರು. ಆಗ ನಾನು ಶಾಸಕರ ಫೋನ್‌ನಲ್ಲಿ ಮಾತನಾಡಿ ಸುಮ್ಮನೆ ಯಾಕಪ್ಪ ನಮ್ಮ ಶಾಸಕರಿಗೆ ತೊಂದರೆ ಕೊಡುತ್ತೀರಿ? ಹೊಸದಾಗಿ ಗೆದ್ದಿದ್ದಾರೆ, ಅವರನ್ನು ಯಾಕೆ ಹಾಳು ಮಾಡ್ತಿದೀರ, ಅದರ ಬದಲು ನನ್ನನ್ನೇ ಮುಖ್ಯಮಂತ್ರಿ ಮಾಡಿ ಅಂತ ಕೇಳಿದ್ದೆ ಎಂದು ಹೇಳಿದರು. ಯಾವಾಗ ಕರೆ ಮಾಡಿದ್ದರು, ಆ ಬಗ್ಗೆ ಆಡಿಯೋ ಏನಾದರೂ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸದೇ ನಗುತ್ತಾ ತೆರಳಿದರು.

ಸಿಎಂ ವಿರುದ್ಧ ಬಿಜೆಪಿ ಹೊಸ ಬಾಂಬ್!