ಸಿದ್ದರಾಮೋತ್ಸವ ಕಾರ್ಯಕ್ರಮದ ಬಗ್ಗೆ ನಾಯಕರ ನಡುವಿನ ಅಸಮಾಧಾನ ಗುಟ್ಟಾಗಿ ಉಳಿದಿಲ್ಲ. ಇದೀಗ . ವ್ಯಕ್ತಿ ಪೂಜೆ ಮಾಡಬೇಡಿ, ಪಕ್ಷ ಪೂಜೆ ಮಾಡಿ ಅಂತಾ ಹೇಳುವ ಮೂಲಕ ಕೆಪಿಸಿಸಿ ನಾಯಕ ಡಿ ಕೆ ಶಿವಕುಮಾರ್ ನೇರವಾಗಿ ಟಕ್ಕರ್ ಕೊಟ್ಟಿದ್ದಾರೆ.

ವರದಿ: ಸುರೇಶ್ ಎ ಎಲ್. ಏಷ್ಯಾ ನೆಟ್ ಸುವರ್ಣ ನ್ಯೂಸ್ 

ಬೆಂಗಳೂರು (ಜು.13): ಸಿದ್ದರಾಮಯ್ಯ ಅವರಿಗೆ ಎಪ್ಪತ್ತೈದು ವರ್ಷ ತುಂಬುತ್ತಿರುವ ಹಿನ್ನಲೆ ಯಲ್ಲಿ ಸಿದ್ದರಾಮಯ್ಯ ಹಿಂಬಾಲಕರು ಮಾಡುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮ ನಾಯಕರ ನಡುವಿನ ಅಸಮಾಧಾನವನ್ನು ಜಗಜ್ಜಾಹೀರು ಮಾಡಿದೆ. ವ್ಯಕ್ತಿ ಪೂಜೆ ಮಾಡಬೇಡಿ, ಪಕ್ಷ ಪೂಜೆ ಮಾಡಿ ಅಂತಾ ಹೇಳುವ ಮೂಲಕ ಕೆಪಿಸಿಸಿ ನಾಯಕ ಡಿ ಕೆ ಶಿವಕುಮಾರ್ ನೇರವಾಗಿ ಟಕ್ಕರ್ ಕೊಟ್ಟಿದ್ದಾರೆ. ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಅನೇಕ ಜನ ಅಭಿಮಾನಿಗಳು ಕಾರ್ಯಕ್ರಮ ಮಾಡಿತ್ತೇವೆ ಅಂತಾ ಬಂದಿದ್ರು. ಆದರೆ ನನಗೆ ಅದು ಕಷ್ಟ ಇರಲಿಲ್ಲ. ಹಾಗಾಗಿಯೇ ನಾನು ಕೇದಾರನಾಥ, ಬದರಿನಾಥ ಕ್ಕೆ ಕುಟುಂಬದ ಸದಸ್ಯರ ಜೊತೆ ಹೋಗಿದ್ದೆ. ಹುಟ್ಟುಹಬ್ಬವನ್ನು ಕುಟುಂಬದ ಸದಸ್ಯರ ನಡುವೆ ಆಚರಿಸಿಕೊಂಡೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕಾರ ಮಾಡಿದ ದಿನವೇ ಅಭಿಮಾನಿಗಳಿಗೆ ಒಂದು ಮಾತು ಹೇಳಿದ್ದೇನೆ. ನನ್ನ ಪೂಜೆ ಮಾಡಬೇಡಿ, ಪಕ್ಷದ ಪೂಜೆ ಮಾಡಿ ಎಂದಿದ್ದೇನೆ. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಕಾಂಗ್ರೆಸ್ ಪಕ್ಷವನ್ನು ವಿಧಾನಸೌಧದಲ್ಲಿ ಅಧಿಕಾರಕ್ಕೆ ತರಬೇಕು ಎನ್ನುವುದು ನನ್ನ ಗುರಿ. ಎಂದಿದ್ದಾರೆ. ಈ ಮೂಲಕ ಸಿದ್ದರಾಮೋತ್ಸವ ಕಾರ್ಯಕ್ರಮದ ಮೂಲಕ ವ್ಯಕ್ತಿ ಪೂಜೆ ಮಾಡಲು ಹೊರಟಿತುವ ಕಾರ್ಯಕರ್ತರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

*ಶಿವಕುಮಾರೋತ್ಸವ ನಡೆಸುವಂತೆ ಅಭಿಮಅಭಿಮಾನಿಯೊನ್ನ ಮದ್ಯದಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮದ ರೀತಿಯಲ್ಲಿ ಶಿವಕುಮಾರೋತ್ಸವ ಕಾರ್ಯಕ್ರಮ ವನ್ನೂ ನಡೆಸುವಂತೆ ಅಭಿಮಾನಿಯೊಬ್ಬ ಬಹಿರಂಗ ಪತ್ರ ಬರೆದಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಡಿ ಕೆ ಶಿವಕುಮಾರ್ ಅವರ ಅಭಿಮಾನಿ ರಾಜು ಎಂಬಾತ ಸಿದ್ದರಾಮೋತ್ಸವ ಸಮಿತಿ ಗೆ ಪತ್ರ ಬರೆದು ಶಿವಕುಮಾರೋತ್ಸವ ಕಾರ್ಯಕ್ರಮ ನಡೆಸುವಂತೆ ಒತ್ತಾಯಿಸಿದ್ದಾರೆ.

ಸಿದ್ದುಗೆ ಹುಟ್ಟಿದ ದಿನವೇ ಗೊತ್ತಿಲ್ಲ, ಆ.3 ಜನ್ಮದಿನ ಹೇಗೆ?: ಮುನಿರತ್ನ

ಡಿ ಕೆ ಶಿವಕುಮಾರ್ ಕೂಡಾ ಚಿಕ್ಕ ವಯಸ್ಸಿನಲ್ಲೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಗಿ ಸಾಧನೆ ಮಾಡಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ಸಿದ್ದರಾಮೋತ್ಸವ ಮಾದರಿಯಲ್ಲಿ ಶಿವಕುಮಾರ್ ಅವರಿಗೂ ಉತ್ಸವ ಮಾಡಿ ಎಂದಿದ್ದಾರೆ. ಆದರೆ ಅಭಿಮಾನಿಯ ಈ ಪತ್ರ ಅವರವರ ವೈಯಕ್ತಿಕ ವಿಚಾರ ಎಂದಿರುವ ಡಿ ಕೆ ಶಿವಕುಮಾರ್, ಈ ರೀತಿಯ ವ್ಯಕ್ತಿ ಪೂಜೆ ನನಗೆ ಇಷ್ಟವಿಲ್ಲ. ಕಾಂಗ್ರೆಸ್ ಪಕ್ಷದ ಪೂಜೆ ಮಾಡೋಣ ಎಂದಿದ್ದಾರೆ. ಅಲ್ಲದೇ ಸಿದ್ದರಾಮೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ಗೂ ಗೈರು ಹಾಜರಾಗುವ ಮೂಲಕ ಅಸಮಾಧಾನ ಹೊರಗೆಡವಿದ್ದಾರೆ. ಇಂದು ಕೆಪಿಸಿಸಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆ ಇರುವುದರಿಂದ ಅಲ್ಲಿಗೆ ಹೋಗ್ತಾ ಇದ್ದೀನಿ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಜನ್ಮ ದಿನದ ಪೂರ್ವಭಾವಿ ಸಭೆಗೆ ಹೋಗಲ್ಲ ಎಂದು ಪರೋಕ್ಷವಾಗಿ ಹೇಳಿದ್ರು.

ಇದು ಸಿದ್ದರಾಮೋತ್ಸವ ಅಲ್ಲ ಅಮೃತ ಮಹೋತ್ಸವ: ಸ್ಪಷ್ಟಪಡಿಸಿದ ಸಿದ್ದರಾಮಯ್ಯ

ಅರ್ ಅಶೋಕ್ ಹೇಳಿಕೆಗೆ ಡಿಕೆಶಿ ಎದುರೇಟು
ಈ ಚುನಾವಣೆ ಬಳಿಕ ಕಾಂಗ್ರೆಸ್, ಜೆಡಿಎಸ್ ಇರಲ್ಲ, ಮುಂದಿನ ಹತ್ತು ವರ್ಷಗಳ ಕಾಲ ಬಿಜೆಪಿ ಅಧಿಕಾರ ನಡೆಸಲಿದೆ ಎಂಬ ಆರ್ ಅಶೋಕ್ ಹೇಳಿಕೆಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಹತ್ತು ವರ್ಷಗಳ ಕಾಲ ಸಾಕಾ.. ಇನ್ನೂ ಹೆಚ್ಚು ಬೇಡವೇ.? ಹತ್ತು ವರ್ಷಗಳ ನಂತರವಾದ್ರೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತಾ ಅವರು ಒಪ್ಪಿಕೊಂಡಿದ್ದಾರಲ್ಲಾ ಸಾಕು ಬಿಡಿ ಅಂತಾ ವ್ಯಂಗವಾಡಿದ್ದಾರೆ.