ಇದು ಸಿದ್ದರಾಮೋತ್ಸವ ಅಲ್ಲ ಅಮೃತ ಮಹೋತ್ಸವ: ಸ್ಪಷ್ಟಪಡಿಸಿದ ಸಿದ್ದರಾಮಯ್ಯ

* ಅವಾಗ ವಿರೋಧ ಪಕ್ಷದಲ್ಲಿ ಬೊಮ್ಮಯಿ ಏನ್ ಕಡ್ಲೆ ಪುರಿ ತಿಂತಿದ್ರಾ? 
* ದೊಡ್ಡವರ ಕೈವಾಡವಿಲ್ಲದೇ ಇಷ್ಟು ದೊಡ್ಡ ಹಗರಣ ನಡೆಯೋಕೆ ಸಾಧ್ಯವಿಲ್ಲ 
* ಈ ಬಾರಿ 130 ಸೀಟು ಗೆಲ್ಲುತ್ತೇವೆ 150 ನಮ್ಮ ಟಾರ್ಗಟ್ ಎಂದ ಸಿದ್ದರಾಮಯ್ಯ
* ಇದು ಸಿದ್ದರಾಮೋತ್ಸವ ಅಲ್ಲ ಅಮೃತ ಮಹೋತ್ಸವ
* ದಾವಣಗೆರೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ

Siddaramaiah Talks about Siddaramotsav In Davanagere rbj

ದಾವಣಗೆರೆ (ಜುಲೈ 12 ) ಸಿದ್ದರಾಮಯ್ಯನವರ 75ನೇ ಅಮೃತಮಹೋತ್ಸವಕ್ಕೆ ಭರ್ಜರಿ ತಯಾರಿ ನಡೆಯುತ್ತಿರುವಾಗಲೇ ಸಿದ್ದರಾಮಯ್ಯ ಅವರು ದಾವಣಗೆರೆ ನಗರಕ್ಕೆ ಭೇಟಿ ನೀಡಿದರು. ಇದರಿಂದ ಕಾಂಗ್ರೆಸ್ ಮುಖಂಡರಲ್ಲಿ ಸಂಚಲನ ಮೂಡಿಸಿದೆ. 

ಈ ಸಂದರ್ಭದಲ್ಲಿ ಶಾಮನೂರು ಶಿವಶಂಕರಪ್ಪನವರ ಮನೆಗೆ ಭೇಟಿ ನೀಡಿ ನಂತರ ಮಾತನಾಡಿದ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಅವಧಿಯಲ್ಲಿ ಪಿಎಸ್ಐ ಹಗರಣ ನಡೆದಿತ್ತು ಎಂದು ಬಿಜೆಪಿಯವರು ಹೇಳ್ತಾರೆ, ಅವಾಗ ವಿರೋಧ ಪಕ್ಷದಲ್ಲಿದ್ದ ಬಸವರಾಜ್ ಬೊಮ್ಮಯಿ ಏನ್ ಕಡ್ಲೆ ಪುರಿ ತಿನಂತಿದ್ದರಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯ ಮಾಡಿದರು.  ಐಪಿಎಸ್ ಅಧಿಕಾರಿ ಅಮೃತ್ ಪಾಲ್ , ಐಎಎಸ್ ಅಧಿಕಾರಿ ಶಾಂತ್ ಕುಮಾರ್  ಅರೆಸ್ಟ್ ಆಗಿದು, ತಪ್ಪು ಯಾರ್ ಮಾಡಿದ್ರು ಅದು ತಪ್ಪೇ ಅದು ಕಾಂಗ್ರೆಸ್ ಇರಲಿ ಬಿಜೆಪಿ ಇರಲಿ, ಸರ್ಕಾರದ ಕುಮ್ಮಕ್ಕು ಇಲ್ಲದೆ ಪಿಎಸ್ಐ ಹಗರಣ  ನಡಿಯೋಕೆ ಸಾಧ್ಯನೇ ಇಲ್ಲ, ಪಿಎಸ್ಐ ಹಗರಣದಲ್ಲಿ ಅರಗ ಜ್ಞಾನೇಂದ್ರ ಇದಾರೆ, ಅರಗ ಜ್ಞಾನೇಂದ್ರ ಗೃಹ ಮಂತ್ರಿ ಆಗುವ ಮುನ್ನ ಅದರ ಹಿಂದಿನ ಗೃಹ ಮಂತ್ರಿಗಳಾಗಿದ್ದಾ  ಬಸವರಾಜ್ ಬೊಮ್ಮಯಿ ಕೂಡ ಈ ಹಗರಣದಲ್ಲಿ ಇದ್ದು, ಅವರ ಅವಧಿಯಲ್ಲೇ ನೇಮಖಾತಿ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ದಾವಣಗೆರೆಯಲ್ಲಿ ಸಿದ್ದರಾಮೋತ್ಸವ, ಸ್ಥಳ ವೀಕ್ಷಣೆ ಮಾಡಿದ ಕಾಂಗ್ರೆಸ್

ಇದು ಸಿದ್ದರಾಮೋತ್ಸವ ಅಲ್ಲ ಅಮೃತ ಮಹೋತ್ಸವ 
ನನಗೆ 75 ವರ್ಷ ತುಂಬುವುದರಿಂದ ಇದೊಂದು ಮೈಲುಗಲ್ಲು, ಇದರಿಂದ ಸ್ನೇಹಿತರು ಅತ್ಮೀಯರು ಸೇರಿ ಅಮೃತೋತ್ಸವ ಮಾಡುತ್ತಿದ್ದರಿಂದ ಇದು ಸಿದ್ದರಾಮೋತ್ಸವ ಅಲ್ಲ ಹೀಗೆ ಕರೆದವರು ಮಾಧ್ಯಮದವರು, ಆರ್ ಎಸ್ ಎಸ್ ನವರು.  ನಾನು ಹುಟ್ಟುಹಬ್ಬ ಮಾಡಿಕೊಳ್ಳುವುದಿಲ್ಲ, ಅತ್ಮೀಯರು ಸ್ನೇಹಿತರು ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. 

ಈ ಸಮಿತಿಯಲ್ಲಿ ಕೆ ಎನ್ ರಾಜಣ್ಣ ಅಧ್ಯಕ್ಷರಾಗಿದ್ದು, ಬೈರತಿ ಬಸವರಾಜ್ ಖಜಾಂಚಿ ಅಂದ್ರು ನಂತರ ಬೈರತಿ ಬಸವರಾಜ್ ಅಲ್ಲ ಬೈರತಿ ಸುರೇಶ್  ಖಜಾಂಚಿ ಇದಾರೆ  ಎಂದು ಕನಪ್ಯೂಸ್ ನ್ನು  ಸಿದ್ದರಾಮಯ್ಯ ಸರಿಮಾಡಿಕೊಂಡರು. ಶಾಮನೂರು ಶಿವಶಂಕರಪ್ಪ ಬಸವರಾಜ್ ರಾಯರೆಡ್ಡಿ ಎಲ್ಲರೂ ಇದ್ದಾರೆ. ಒಬ್ಬ ರಾಜಕಾರಣಿಗೆ 75ನೇ ವರ್ಷ ಮಹತ್ವದ ಮೈಲುಗಲ್ಲು, ಅದನ್ನು ನಮ್ಮ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಇದು ಯಾವುದೇ ಶಕ್ತಿ ಪ್ರದರ್ಶನವಲ್ಲ  ಚುನಾವಣೆಗೆ ಇನ್ನು 8 ತಿಂಗಳು ಬಾಕಿ ಇದೆ ಸಮಜಾಯಿಸಿ ನೀಡಿದರು.

130 ಸೀಟ್ ಗೆದ್ದೇ ಗೆಲ್ಲುತ್ತೇವೆ
ಚುನಾವಣೆ 8 ತಿಂಗಳು ಬಾಕಿ ಇದೆ. ಮುಂದಿನ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು 130 ಸೀಟ್ ಗೆದ್ದು ಅಧಿಕಾರಕ್ಕೆ ಬರುತ್ತೆ.150 ಸೀಟ್ ಎಂದುಕೊಂಡಿದ್ದೇವೆ, 130 ಸೀಟ್ ಗೆದ್ದೇ ಗೆಲ್ಲುತ್ತೇವೆ, ಯಾರು ಮುಖ್ಯಮಂತ್ರಿ  ಮಾಡೋದು ಅಮೇಲೆ, ಸಿಎಂ ಮಾಡೋದು ಗೆದ್ದ ಶಾಸಕರಿಗೆ ಹೈಕಮಾಂಡ್ ಗೆ ಬಿಟ್ಟದ್ದು, ಇನ್ನು ಕಾಂಗ್ರೆಸ್ ನಿಂದ ಬಿಜೆಪಿಗೆ ಯಾರು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ರು. ಈಗಲೇ ನಾವು ಚುನಾವಣೆಗೆ ರೆಡಿ ಇದ್ದೇವೆ ಎಂದರು.

ಆರ್ ಎಸ್ ಎಸ್ ಅಳ ಮತ್ತು ಅಗಲ ಪುಸ್ತಕ
ದೇವನೂರು ಮಹಾದೇವ ಬೇರೆ ಪಾರ್ಟಿಯಲ್ಲಿದ್ದಾರೆ ಅದರೆ ನನ್ನ ಗುಡ್ ಪ್ರೇಂಡ್ ಅಷ್ಟೇ, ಅವರೊಬ್ಬ ಸಾಹಿತಿ ತಮ್ಮ ಪುಸ್ತಕ ಬರೆದಿದ್ದಾರೆ, ನಾನೇಕೆ ಅವರಿಗೆ ಹೇಳಿ ಆರ್ ಎಸ್ ಎಸ್ ಪುಸ್ತಕ ಬರೆಸಲಿ ಎಂದು ಸ್ಪಷ್ಟ ಪಡಿಸಿದ್ರು. ಸಿದ್ದರಾಮಯ್ಯ ಉರುಸ್ ಮಾಡಿಕೊಳ್ಳಲಿ ಎಂದು ಯತ್ನಾಳ್ ಹೇಳಿಕೆ ಪ್ರತಿಕ್ರಿಯಿಸಿದ ಅವರು ಬಿಜೆಪಿಯವರು ವ್ಯಂಗ್ಯವಾಗಿ ಮಾತನಾಡುತ್ತಾರೆ,ಅದಕ್ಕೆ ಉತ್ತರ ಕೊಡೋಕೆ ನಾನು ಹೊಗೋದಿಲ್ಲ, ಬಿಜೆಪಿಯವರಿಗೆ ಈಗಾಗಲೇ ಭಯ ಶುರುವಾಗಿದೆ ಎಂದು ಟಾಂಗ್ ನೀಡಿದರು. 

ವಿಧಾಸಭೆ ಚುನಾವಣೆಗೆ ಸ್ಪರ್ಧಿಸಲು ಬಾದಾಮಿ, ಕೋಲಾರ, ವರುಣ, ಮೈಸೂರಿನಲ್ಲಿ ಸ್ಪರ್ಧೇ ಮಾಡಿ ಎಂದು ಹೇಳುತ್ತಿದ್ದಾರೆ, ಬಾದಾಮಿಯವರು ಇಲ್ಲಿಂದಲೇ ಸ್ಪರ್ಧಿಸಿ ಎನ್ನುತ್ತಿದ್ದಾರೆ, ನಾನು ಈಗ ಬಾದಾಮಿ ಎಂಎಲ್ಎ ಈಗಲೇ ಏನ್ ಹೇಳೋದಿಲ್ಲ. ಚುನಾವಣೆ ಬರಲಿ ಆಗಾ ನಿರ್ಧಾರ ಮಾಡೋಣ ಎಂದು ತಿಳಿಸಿದರು.‌

ಈಶ್ವರಪ್ಪಗೆ ಟಾಂಗ್ ಕೊಟ್ಟ ಸಿದ್ದು
ಸಿದ್ದರಾಮಯ್ಯ ಅಮೃತ ಮಹೋತ್ಸವ ಮಾಡಿದ್ರೆ ಕಾಂಗ್ರೆಸ್ ಪಕ್ಷ ಎರಡು ಬಾಗ ಆಗುತ್ತೆ ಎಂದು  ಕೆಎಸ್ ಈಶ್ವರಪ್ಪನವರ ಹೇಳಿಕೆ ಪ್ರತಿಕ್ರಿಯಿಸಿ ಅದು ಅವನ ಭ್ರಮೆ, ಮಂತ್ರಿ ಸ್ಥಾನ  ಕಳೆದುಕೊಂಡಿದ್ದಾರೆ, ಇದರಿಂದ ಮೆಂಟಲ್ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ, ಆಗ ಮಾಡಿದ್ದು ಕುರುಬರ ಸಮಾವೇಶ, ಈಗ ಮಾಡ್ತಾ ಇರೋದು ಅಮೃತ ಮಹೋತ್ಸವ, ಇವತ್ತೇ ಚುನಾವಣೆಯಾದರೆ ನಾವು ಚುನಾವಣೆ ಸ್ಪರ್ಧಿಸಲು ಸಿದ್ಧ ಎಂದು ಸವಾಲು ಹಾಕಿದರು.

TP, ZP ಚುನಾವಣೆ ಬಗ್ಗೆ ಸಿದ್ದು ಮಾತು
ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ನಡೆಸಲು ಡಿ ಲಿಮಿಟೇಷನ್  ಇಲ್ಲ, ಕಮಿಷನ್ ಡಾಟಾ ಇಲ್ಲ ಅವರು ಏನ್ ಮಾಡ್ತಾರೆ ಗೊತ್ತಿಲ್ಲ,  ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಹಿಂದೂಳಿದವರಿಗೆ ಮೀಸಲಾತಿ ನೀಡದಿದ್ರೆ ಅನ್ಯಾಯವಾಗುತ್ತದೆ. ಇನ್ನು ಚಾಮರಾಜಪೇಟೆ ಈದ್ಗಾ ಮೈಯದಾನ ವಿವಾದ ಹಿನ್ನಲೆಯಲ್ಲಿ ಚಾಮರಾಜಪೇಟೆ ಬಂದ್ ಮಾಡಲಾಗಿದೆ.  ಅದು ಲೀಗರ್ ಮ್ಯಾಟರ್ ಆಗಿರುವ ವಿಚಾರ ನಾನು ಏನು ಹೇಳೊಲ್ಲ, ನನಗೆ ಅದರ ಬಗ್ಗೆ ಗೊತ್ತಿಲ್ಲ ನೋ ಕಾಮೆಂಟ್ ಎಂದರು.

Latest Videos
Follow Us:
Download App:
  • android
  • ios