'ನಾನೇನು ಹೈಕಮಾಂಡ್ ಗುಲಾಮನೇ?' ಕೆಎನ್ ರಾಜಣ್ಣ ಹೇಳಿಕೆಯನ್ನ ಹೈಕಮಾಂಡ್ ನೋಡಿಕೊಳ್ತದೆ: ಡಿಕೆಶಿ
ದೆಹಲಿಯಲ್ಲಿ ಕುಳಿತು ಪಕ್ಷದ ನಾಯಕರು ಸಿದ್ಧಪಡಿಸಿದ ಪಟ್ಟಿಯನ್ನು ಒಪ್ಪಿಕೊಳ್ಳಲು ನಾವು ಗುಲಾಮರೇ ಎಂಬ ಸಚಿವ ಕೆಎನ್ ರಾಜಣ್ಣ ಅವರ ಹೇಳಿಕೆಯನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶುಕ್ರವಾರ ಹೇಳಿದರು.
ಬೆಂಗಳೂರು (ಜ.27): ದೆಹಲಿಯಲ್ಲಿ ಕುಳಿತು ಪಕ್ಷದ ನಾಯಕರು ಸಿದ್ಧಪಡಿಸಿದ ಪಟ್ಟಿಯನ್ನು ಒಪ್ಪಿಕೊಳ್ಳಲು ನಾವು ಗುಲಾಮರೇ ಎಂಬ ಸಚಿವ ಕೆಎನ್ ರಾಜಣ್ಣ ಅವರ ಹೇಳಿಕೆಯನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶುಕ್ರವಾರ ಹೇಳಿದರು.
ರಾಜಣ್ಣ ಅವರ ಹೇಳಿಕೆಗೆ ಲೇವಡಿ ಮಾಡುತ್ತಾ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ರಾಜಣ್ಣ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸಿಎಂ ಈ ಬಗ್ಗೆ ಮಾತನಾಡಿದ್ದಾರೆ. ಅವರು ಶಾಸಕರು ಮತ್ತು ಸಚಿವರಾಗಿರುವುದರಿಂದ ಎಐಸಿಸಿ ಗೌರವಯುತವಾಗಿ ಪರಿಶೀಲಿಸುತ್ತದೆ ಎಂದು ಹೇಳಿದರು.
ನಿಗಮ ಮಂಡಳಿ ನೇಮಕ: 'ನಾವೇನು ನಿಮ್ಮ ಗುಲಾಮರಾ?' ಹೈಕಮಾಂಡ್ ವಿರುದ್ಧ ಸಿಡಿದೆದ್ದ ರಾಜಣ್ಣ!
ನಿಗಮ-ಮಂಡಳಿ ಮತ್ತು ನಿಗಮಗಳ ಮುಖ್ಯಸ್ಥರ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ನಾಯಕರ ಸಲಹೆ ಪಡೆಯದ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಗೃಹ ಸಚಿವ ಡಾ.ಜಿ.ಪರಮೇಶ್ವರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಕೂಡ ಪಕ್ಷದ ಕೇಂದ್ರ ನಾಯಕರ ವಿರುದ್ಧ ಧ್ವನಿ ಎತ್ತಿದ್ದರು.
ಜಗದೀಶ ಶೆಟ್ಟರ್ ಬಿಜೆಪಿಗೆ ಮರುಸೇರ್ಪಡೆ ಹಿಂದೆ ಐಟಿ, ಇಡಿ ಕೈವಾಡ! ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಯಾರು ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ಸಾಮರ್ಥ್ಯ ಏನು ಎಂದು ಪಕ್ಷದ ಹೈಕಮಾಂಡ್ ನಮ್ಮನ್ನು ಕೇಳಬೇಕು ಮತ್ತು ನಂತರ ನೇಮಕಾತಿಗಳನ್ನು ಮಾಡಬೇಕು. ದೆಹಲಿಯಲ್ಲಿ ಕುಳಿತು ಪಕ್ಷದ ನಾಯಕರು ಸಿದ್ಧಪಡಿಸಿದ ಪಟ್ಟಿಯನ್ನು ಒಪ್ಪಿಕೊಳ್ಳಲು ನಾವು ಗುಲಾಮರೇ? ಅದು ಯಾವುದೇ ಜಿಲ್ಲೆಯಾಗಿರಬಹುದು. ನೇಮಕಾತಿ ಮಾಡುವ ಮೊದಲು ಆಯಾ ಜಿಲ್ಲೆಗಳ ಉಸ್ತುವಾರಿಗಳನ್ನು ಕೇಳಬೇಕು. ಅವರು ಕೇವಲ ಲಾಟರಿಯಂತೆ ನೇಮಕಾತಿಗಳನ್ನು ಮಾಡಿದರೆ ಕೇಳುವವರಾರು? ಅದನ್ನು ಒಪ್ಪಲು ಸಾಧ್ಯವಿಲ್ಲ” ಎಂದು ಹೈಕಮಾಂಡ್ ನಾಯಕರ ವಿರುದ್ಧ ಕಿಡಿಕಾರಿದ್ದರು.