Asianet Suvarna News Asianet Suvarna News

ನಿಗಮ ಮಂಡಳಿ ನೇಮಕ: 'ನಾವೇನು ನಿಮ್ಮ ಗುಲಾಮರಾ?' ಹೈಕಮಾಂಡ್ ವಿರುದ್ಧ ಸಿಡಿದೆದ್ದ ರಾಜಣ್ಣ!

ನಿಗಮ, ಮಂಡಳಿ ನೇಮಕ ವಿಚಾರದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಸಚಿವ ರಾಜಣ್ಣ ಅವರು ತೀವ್ರವಾಗಿ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನು ಹೈ ಕಮಾಂಡ್ ಗುಲಾಮರಾ? ಈ ರೀತಿ ಸವಾರಿ ಮಾಡುವುದನ್ನು ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

Corporation Board appointment issue minister Rajanna outraged against Congress highcommand rav
Author
First Published Jan 26, 2024, 5:56 PM IST

ತುಮಕೂರು (ಜ.26): ನಿಗಮ, ಮಂಡಳಿ ನೇಮಕ ವಿಚಾರದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಸಚಿವ ರಾಜಣ್ಣ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನು ಹೈ ಕಮಾಂಡ್ ಗುಲಾಮರಾ? ಈ ರೀತಿ ಸವಾರಿ ಮಾಡುವುದನ್ನು ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ನಮ್ಮ ಜತೆ ಮಾತುಕತೆ ನಡೆಸಿ, ವಿಶ್ವಾಸಕ್ಕೆ ತೆಗೆದುಕೊಂಡು ನಿಗಮ, ಮಂಡಳಿಗೆ ನೇಮಕ ಮಾಡಬೇಕಾ? ಇಲ್ಲ, ದೆಹಲಿಯಲ್ಲಿ ಕುಳಿತು ಪಟ್ಟಿ ಮಾಡಿ ಲಾಟರಿ ಟಿಕೆಟ್ ಹಂಚಿದಂತೆ ಹಂಚಿದರೆ ಹೇಗೆ? ನಮ್ಮನ್ನು ಒಂದು ಮಾತು ಕೇಳಬೇಕಲ್ಲ?’ ಎಂದು ತರಾಟೆಗೆ ತೆಗೆದುಕೊಂಡರು.

ಹೋಗೋದಾದ್ರೆ ಮೊದಲೇ ಕಾಂಗ್ರೆಸ್‌ಗೆ ಬರಬಾರದಿತ್ತು: ಜಗದೀಶ್ ಶೆಟ್ಟರ್ ವಿರುದ್ಧ ರಾಯರೆಡ್ಡಿ ಕಿಡಿ!

‘ಸ್ಥಳೀಯವಾಗಿ ಯಾವ ಕಾರ್ಯಕರ್ತರು, ಮುಖಂಡರು ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿರುತ್ತದೆ. ನಾವು ಕೊಟ್ಟ ಹೆಸರುಗಳನ್ನು ಸೇರಿಸಬೇಕು. ಅದು ಬಿಟ್ಟು, ದೆಹಲಿಯಲ್ಲಿ ಕುಳಿತು ತಮಗೆ ಬೇಕಾದವರ ಹೆಸರುಗಳನ್ನು ಸೇರಿಸುವುದನ್ನು ಸಹಿಸುವುದಿಲ್ಲ. ಹಿಂದೆ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಿಗೆ ಜವಾಬ್ದಾರಿ ಕೊಟ್ಟು, ಸಲಹೆ ನೀಡುತ್ತಿದ್ದರು. ಈಗ ಅವರೇ ಪಟ್ಟಿ ಸಿದ್ಧಪಡಿಸಿ ಕಳುಹಿಸಿದ್ದಾರೆ. ಇದು ಹೊಸ ಹೈಕಮಾಂಡ್‌ನ, ಹೊಸ ವರಸೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಸರು ಹೇಳದೆ ಗುಡುಗಿದರು. 

ಜಗದೀಶ ಶೆಟ್ಟರ್ ಬಿಜೆಪಿಗೆ ಮರುಸೇರ್ಪಡೆ ಹಿಂದೆ ಐಟಿ, ಇಡಿ ಕೈವಾಡ! ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

‘ಈ ವಿಚಾರದಲ್ಲಿ ಹೈ ಕಮಾಂಡ್‌ನ ಯಾವ ನಾಯಕರ ಹೆಸರನ್ನೂ ಹೇಳಲು ಬಯಸುವುದಿಲ್ಲ. ಆದರೆ ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲೂ ಇದೇ ರೀತಿ ನಡೆದುಕೊಂಡರೆ ಅವರೇ ಇಲ್ಲಿಗೆ ಬಂದು ಗೆಲ್ಲಿಸಬೇಕಾಗುತ್ತದೆ. ನಮ್ಮನ್ನು ಏನೂ ಕೇಳುವಂತಿಲ್ಲ. ಎಲ್ಲಾ ಅವರೇ ಮಾಡುವುದಾದರೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಿ’ ಎಂದು ಸವಾಲು ಹಾಕಿದರು.

Follow Us:
Download App:
  • android
  • ios