ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಅವರದೇ ಆದ ಅನುಭವ ಇದೆ. ಅವರಿಗೆ ಖುಷಿ ಆಗುವುದನ್ನೆಲ್ಲಾ ಮಾತನಾಡಲಿ. ಅಣ್ಣ ಮಾತನಾಡುವುದನ್ನು ತಮ್ಮ ಕೇಳುತ್ತಾ ಇರುತ್ತಾನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದರು.

ಬೆಂಗಳೂರು (ಆ.5) :  ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಅವರದೇ ಆದ ಅನುಭವ ಇದೆ. ಅವರಿಗೆ ಖುಷಿ ಆಗುವುದನ್ನೆಲ್ಲಾ ಮಾತನಾಡಲಿ. ಅಣ್ಣ ಮಾತನಾಡುವುದನ್ನು ತಮ್ಮ ಕೇಳುತ್ತಾ ಇರುತ್ತಾನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದರು.

ಬಿಡಿಎ ಅಧಿಕಾರಿಗಳಿಂದ 250 ಕೋಟಿ ರು. ವಸೂಲು ಮಾಡಲು ಶಿವಕುಮಾರ್‌ ಹೇಳಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರಲ್ಲಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರಿಗೆ ಅವರದೇ ಆದ ಅನುಭವವಿದೆ. ಅವರಿಗೆ ಏನು ಖುಷಿಯೋ ಅದನ್ನೆಲ್ಲಾ ಮಾತನಾಡಲಿ. ಇದರಿಂದ ಸಮಾಧಾನ ಆಗುವುದಾದರೆ ಬೇಡ ಎಂದು ಹೇಳುವುದಿಲ್ಲ. ಪಾಪ, ವಿದೇಶದಲ್ಲಿ ವಿಶ್ರಾಂತಿ ಪಡೆದುಕೊಂಡು ಬಂದಿದ್ದಾರೆ. ಅಣ್ಣ ಮಾತನಾಡುವುದನ್ನು ತಮ್ಮ ಕೇಳುತ್ತಾ ಇರುತ್ತಾನೆ ಎಂದು ತಿರುಗೇಟು ನೀಡಿದರು.

ಎಚ್‌ಡಿಕೆ ತೋರಿಸಿದ ಪೆನ್‌ಡ್ರೈವ್‌ ಏನಾಯ್ತು: ಅದ್ರಲ್ಲಿ ಏನಾದ್ರೂ ಇದ್ರೆ ತಾನೇ ಬಿಡೋದು: ಸಿಎಂ ತಿರುಗೇಟು

ಶಿವಕುಮಾರ್‌ ಮಾಟ-ಮಂತ್ರ ಮಾಡಿ ಚುನಾವಣೆಯಲ್ಲಿ ಜಯಗಳಿಸಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಕುಮಾರಸ್ವಾಮಿ ಆಶೀರ್ವಾದ, ಮಾರ್ಗದರ್ಶನ ನಮಗೆ ಬಹಳ ಮುಖ್ಯವಾಗಿದೆ. ಮಾಯವೋ, ಮಾಟವೋ, ಜ್ಯೋತಿಷ್ಯವೋ, ಧರ್ಮವೋ, ಕರ್ಮವೋ, ಶ್ರಮವೋ, ಎಲ್ಲಿ ಮನಸ್ಸು ಇದೆಯೋ ಅಲ್ಲಿ ಮಾರ್ಗವಿದೆ. ವಾಮ ಮಾರ್ಗದಿಂದ ನಾವು ಜಯಗಳಿಸಿಲ್ಲ. ಇದರ ಹಿಂದೆ ಮೂರು ವರ್ಷದ ಶ್ರಮವಿದೆ. ಕಾರ್ಯಕರ್ತರನ್ನು ನಾನು ಮಲಗಲು ಬಿಟ್ಟಿಲ್ಲ ಎಂದು ಪ್ರತಿಕ್ರಿಯಿಸಿದರು.

ಕುಮಾರಸ್ವಾಮಿ ಹೊಸ ಬಾಂಬ್‌: 15 ಪರ್ಸೆಂಟ್‌ ಕಮೀಷನ್‌ ಆಧಾರದಲ್ಲಿ ಬಿಬಿಎಂಪಿ 710 ಕೋಟಿ ರೂ. ಹಣ ಬಿಡುಗಡೆ

ರಾಜರಾಜೇಶ್ವರಿ ನಗರ ಠಾಣೆ ಪೊಲೀಸರ ವರ್ಗಾವಣೆಗೆ ಸಂಬಂಧಿಸಿದಂತೆ ನಾನು ಯಾವುದೇ ಶಿಫಾರಸು ಪತ್ರ ನೀಡಿಲ್ಲ. ಸಂಸದ ಡಿ.ಕೆ.ಸುರೇಶ್‌ ನೀಡಿದ್ದರೆ ಅವರ ಬಳಿಯೇ ಪ್ರತಿಕ್ರಿಯೆ ಪಡೆಯಿರಿ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.