ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರದ್ದು ಯಾವಾಗಲೂ ‘ಹಿಟ್‌ ಅಂಡ್‌ ರನ್‌ ಕೇಸ್‌’(ಗುದ್ದಿ ಓಡುವುದು). ಪೆನ್‌ ಡ್ರೈವ್‌ ತೋರಿಸಿದ್ದರಲ್ಲಾ, ಏನಾಯ್ತು? ಅದರಲ್ಲಿ ಏನಾದರೂ ಇದ್ದರೆ ತಾನೆ ಬಿಡುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಬೆಂಗಳೂರು (ಆ.5) :  ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರದ್ದು ಯಾವಾಗಲೂ ‘ಹಿಟ್‌ ಅಂಡ್‌ ರನ್‌ ಕೇಸ್‌’(ಗುದ್ದಿ ಓಡುವುದು). ಪೆನ್‌ ಡ್ರೈವ್‌ ತೋರಿಸಿದ್ದರಲ್ಲಾ, ಏನಾಯ್ತು? ಅದರಲ್ಲಿ ಏನಾದರೂ ಇದ್ದರೆ ತಾನೆ ಬಿಡುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.

‘ರಾಜ್ಯದಲ್ಲಿ ವೈಎಸ್‌ಟಿ ಟ್ಯಾಕ್ಸ್‌ ಆರಂಭವಾಗಿದೆ. ಗೃಹ ಇಲಾಖೆಯ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಗರುಡ ಮಾಲ್‌ನಲ್ಲಿ ಮುಖ್ಯಮಂತ್ರಿ, ಗೃಹ ಸಚಿವರು ಚರ್ಚಿಸುವಾಗ ವೈಎಸ್‌ಟಿಯವರು ಏಕೆ ಇದ್ದರು’ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರಲ್ಲಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಕುಮಾರಸ್ವಾಮಿ ಯಾವಾಗಲೂ ಹಿಟ್‌ ಅಂಡ್‌ ರನ್‌ ಕೇಸ್‌ನವರು. ದಾಖಲೆಗಳಿಲ್ಲದೆ ಮಾತನಾಡುತ್ತಾರೆ ಎಂದು ಟಾಂಗ್‌ ನೀಡಿದರು.

ಹಾವಾಡಿಸೋರು ಹಾವು ಬಿಡ್ತೀವಿ ಅಂತಾ ಹೆದರಿಸ್ತಾರಲ್ಲ ಹಂಗೇ ಎಚ್ಡಿಕೆ ಆರೋಪ: ರಾಜಣ್ಣ ಟಾಂಗ್

ಕುಮಾರಸ್ವಾಮಿ ಈ ಹಿಂದೆ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಪೆನ್‌ಡ್ರೈವ್‌ ತೋರಿಸಿದ್ದರು. ಅದರ ವಿಷಯ ಏನಾಯಿತು. ಸಾಬೀತು ಮಾಡಿದರೇ. ಏನಾದರೂ ಇದ್ದರೆ ತಾನೆ ತಾನೇ ಬಿಡುವುದು. ಸುಮ್ಮನೆ ಆರೋಪ ಮಾಡುತ್ತಾರೆ. ವೈಎಸ್‌ಟಿ ಟ್ಯಾಕ್ಸ್‌ ಅಂದರೆ ಏನು. ಹೀಗೆಂದರೆ ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.

ಕೇಂದ್ರದ ರಾಜಕೀಯ:

ದೆಹಲಿ ಭೇಟಿ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೊತೆ ಮಾತುಕತೆ ನಡೆಸಿಲ್ಲ. ಅದು ಉಭಯ ಕುಶಲೋಪರಿ ಭೇಟಿಯಷ್ಟೇ. ರಾಜ್ಯದ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವಂತೆ ಕೇಂದ್ರ ಆಹಾರ ಸಚಿವ ಪಿಯೂಷ್‌ ಗೋಯಲ್‌ ಅವರ ಜೊತೆ ಮಾತುಕತೆ ನಡೆಸಲಾಗಿತ್ತು. ಅಕ್ಕಿ ನೀಡಲು ಆಗುವುದಿಲ್ಲ ಎಂದು ಅವರು ಹೇಳಿದ್ದರು. ಅಕ್ಕಿ ವಿಚಾರದಲ್ಲಿ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಎಚ್‌ಡಿಕೆ ತೋರಿಸಿದ್ದ ಪೆನ್‌ಡ್ರೈವ್‌ ಎಲ್ಲಿ ಹೋಯ್ತು?: ಪ್ರಿಯಾಂಕ್‌ ಖರ್ಗೆ

ಮೈಸೂರು ದಸರಾ ಸಂದರ್ಭದಲ್ಲಿ ವೈಮಾನಿಕ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರನ್ನು ಕೋರಲಾಗಿದೆ. ಈ ಹಿಂದೆಯೂ ಏರ್‌ ಶೋಗೆ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಈಗಲೂ ಅವಕಾಶ ಕೊಡುವಂತೆ ಮನವಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.