ಕುಮಾರಸ್ವಾಮಿ ಹೊಸ ಬಾಂಬ್‌: 15 ಪರ್ಸೆಂಟ್‌ ಕಮೀಷನ್‌ ಆಧಾರದಲ್ಲಿ ಬಿಬಿಎಂಪಿ 710 ಕೋಟಿ ರೂ. ಹಣ ಬಿಡುಗಡೆ

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಮೀಷನ್‌ ದರವನ್ನು ನಿಗದಿ ಮಾಡಿ ಬಿಬಿಎಂಪಿಯಿಂದ 710 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ.

HD Kumaraswamy allegation BBMP released Rs 710 crore money on basis of 15 percent commission sat

ಬೆಂಗಳೂರು (ಆ.05): ಬಿಬಿಎಂಪಿಯಲ್ಲಿ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಹಣವನ್ನು ಬಿಡುಗಡೆ ಮಾಡದಂತೆ ಕಾಂಗ್ರೆಸ್‌ ಸಂಸದರೊಬ್ಬರು ತಡೆಯೊಡ್ಡಿದ್ದರು. ಈಗ ಕಮೀಷನ್‌ ದರವನ್ನು ನಿಗದಿ ಮಾಡಿ 710 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಕಾರ್ಪೋರೇಷನ್ (ಬಿಬಿಎಂಪಿ) ಕಚೇರಿಯಲ್ಲಿ ಏನು ನಡೀತು? 710 ಕೋಟಿ ರೂ. ಬಿಡುಗಡೆ ಆಗಿರಬೇಕಲ್ಲ. ಅದಕ್ಕೆ ‌ 26 ಅಂಶಗಳ ಮೇಲೆ ತನಿಖೆ ಮಾಡ್ತಾರಂತೆ. ಅಣ್ಣ ಹೇಳ್ತಾರೆ, ತಮ್ಮ ಕೇಳ್ಬೇಕು ಅಂತಾ ಅದೇನೋ ಡಿಕೆ ಶಿವಕುಮಾರ್ ಹೇಳಿದ್ದಾರಲ್ಲ. ಈ ಜನ್ಮದಲ್ಲೂ ಅಂತೂ, ಅಂತಹ ತಮ್ಮ ನನಗೆ ಬೇಡ. ಮುಂದಿನ ಜನ್ಮದಲ್ಲೂ ಅವರು ನನಗೂ ತಮ್ಮ ಆಗೋದೂ ಬೇಡ ಎಂದು ಕಾಂಗ್ರೆಸ್‌ ಸರ್ಕಾರಕ್ಕೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧ ತಿರುಗೇಟು ನೀಡಿದ್ದಾರೆ. 

ಈ ಜನ್ಮದಲ್ಲಿ ಕುಮಾರಸ್ವಾಮಿ, ಬೊಮ್ಮಾಯಿ ಇಬ್ಬರೇ ಸತ್ಯ ಹರಿಶ್ಚಂದ್ರರು: ವಿಶ್ವನಾಥ್ ವ್ಯಂಗ್ಯ

ನಾವು ಅಧಿಕಾರಕ್ಕೆ ಬರ್ತೀವಿ ಹಣ ಬಿಡುಗಡೆ ಮಾಡ್ಬೇಡಿ: ಈ ಹಿಂದೆ ಚುನಾವಣೆಗೂ ಮುನ್ನವೇ ಮೇ ತಿಂಗಳಲ್ಲಿ ಬಿಬಿಎಂಪಿ ಕಾಮಗಾರಿ ಮಾಡಿದ್ದ ಗುತ್ತಿಗೆದಾರರಿಗೆ 710 ಕೋಟಿ ಬಿಡುಗಡೆ ಮಾಡಲಾಯಿತು. ಆದರೆ, ಹಣ ಬಿಡುಗಡೆ ಮಾಡದಂತೆ ಕಾಂಗ್ರೆಸ್‌ನ ಪ್ರಮುಖ ಸಂಸದರೊಬ್ಬರು ಬಿಬಿಎಂಪಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ನಮ್ಮ ಸರ್ಕಾರ ಬರ್ತಾ ಇದೆ, ಒಂದು ರೂಪಾಯಿ ಬಿಡುಗಡೆ ಆಗಬಾರದು ಅಂತ ಎಚ್ಚರಿಕೆ ಕೊಟ್ಟಿದ್ದರು. ಇದಕ್ಕೆ ತಲೆಬಾಗಿದ ಬಿಬಿಎಂಪಿ ಅಧಿಕಾರಿಗಳು ಆ ದುಡ್ಡನ್ನು ಹಂಗೇ ಅಕೌಂಟ್‌ನಲ್ಲಿ ಇಟ್ಟರು. 

ಶೇ.15 ಪರ್ಸೆಂಟ್‌ ಕಮಿಷನ್‌ ಆಧರಿಸಿ ಹಣ ಬಿಡುಗಡೆ: ಇನ್ನು ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಬಿಎಂಪಿಯಲ್ಲಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವ ಕುರಿತು ಹಲವಾರು ಮೀಟಿಂಗ್ ಆದವು. ಶೇ.5 ಪರ್ಸೆಂಟ್ ನಿಂದ ಶೇ.10 ಪರ್ಸೆಂಟ್ ಆಗಿದೆ. ಈ ಕುರಿತು ನಿನ್ನೆ ಒಬ್ಬ ಅಧಿಕಾರಿಯನ್ನು ಮನೆಗೆ ಕಳುಹಿಸಲಾಗಿದೆ. ಈಗ ಶೇ.10ರಿಂದ ಶೇ.15 ಪರ್ಸೆಂಟ್‌ ಕೊಟ್ಟರೆ ಮಾತ್ರ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡ್ತೀವಿ ಅಂತ ಹೇಳಿದ್ದಾರೆ. ಬ್ರ್ಯಾಂಡ್‌ ಬೆಂಗಳೂರು ಮಾಡಲು ಹೊರಟಿದ್ದಾರಲ್ಲ, ಅವರ ಮನೆಯಲ್ಲಿ ಸಿಸಿ ಟಿವಿ ಇದೆಯಾ..? ಎಂದು ಟೀಕೆ ಮಾಡಿದರು.

"ಅಣ್ಣ ಮಾತಾಡೋದನ್ನ ತಮ್ಮ ಕೇಳ್ತಾನೆ.." ಎಚ್‌ಡಿಕೆಗೆ ಟಕ್ಕರ್‌ ಕೊಟ್ಟ ಡಿ.ಕೆ.ಶಿವಕುಮಾರ್‌

250 ಕೋಟಿ ರೂ. ಬಾಂಬ್‌ ಸಿಡಿಸಿದ್ದ ಕುಮಾರಸ್ವಾಮಿ: ಹೊರಗಿನ ಪ್ರಪಂಚಕ್ಕೆ ಕಾಣದ ನಿಗೂಢ ರಹಸ್ಯ ಕಾಂಗ್ರೆಸ್ ಸರ್ಕಾರದ(congress government) ಒಡಲಲ್ಲಿ ಅಡಗಿ ಕೂತಿದ್ಯಂತೆ ಆ ಸ್ಫೋಟಕ ಸಿಕ್ರೇಟ್‌. ಫಾರಿನ್ ಟೂರ್ ಮುಗಿಸಿ ಬಂದ ಕುಮಾರಣ್ಣ 250 ಕೋಟಿಯ ಬಾಂಬ್ ಸಿಡಿಸಿದ್ದಾರೆ. ಕಳೆದ 15 ದಿನಗಳಿಂದ ಯುರೋಪ್ ಪ್ರವಾಸದಲ್ಲಿ (Europe tour) ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ( H.D. Kumaraswamy) ಫಾರಿನ್ ಟೂರ್ ಮುಗಿಸಿ ವಾಪಸ್ ಬಂದಿದ್ದಾರೆ. ಬಂದವರೇ ಕೈ ಸರ್ಕಾರದ ವಿರುದ್ಧ ಕ್ಷಿಪಣಿ ಉಡಾಯಿಸಿ ಬಿಟ್ಟಿದ್ದಾರೆ. ಫಾರಿನ್‌ನಿಂದ ನೇರವಾಗಿ ಬೆಂಗಳೂರಿನ (Bengaluru) ಕೆಂಪೇಗೌಡ ಇಂಟರ್ 'ನ್ಯಾಷನಲ್ ಏರ್'ಪೋರ್ಟ್'ನಲ್ಲಿ ಲ್ಯಾಂಡ್ ಆದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಿಡಿಸಿರೋ ಬಾಂಬ್ ಇದು. ಇದು ಅಂತಿಂಥಾ ಬಾಂಬ್ ಅಲ್ಲ. ದೆಹಲಿಗೆ ಕಳುಹಿಸೋದಕ್ಕೆ 250 ಕೋಟಿ ರೂಪಾಯಿಗಳನ್ನು ಕಲೆಕ್ಟ್ ಮಾಡ್ಬೇಕು ಅಂತ ಬಿಡಿಎ ಅಧಿಕಾರಿಗಳಿಗೆ ಆರ್ಡರ್ ಆಗಿದ್ಯಂತೆ. ಹೀಗಂತ ಸಿದ್ದು ಸರ್ಕಾರದ ಮೇಲೆ ಮಾಜಿ ಸಿಎಂ ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ.

Latest Videos
Follow Us:
Download App:
  • android
  • ios