ದತ್ತ ಜಯಂತಿ: ದತ್ತಮಾಲಾಧಾರಿ ಸಿ ಟಿ ರವಿಯಿಂದ ಮನೆ ಮನೆಗೆ ತೆರಳಿ ಭಿಕ್ಷಾಟನೆ
ದತ್ತ ಜಯಂತಿ ಅಂಗವಾಗಿ ಮಾಜಿ ಶಾಸಕ ಸಿ.ಟಿ.ರವಿ, ದೊಡ್ಡಬಳ್ಳಾಪುರದ ಶಾಸಕ ಧೀರಜ್ ಮುನಿರಾಜು ಮತ್ತಿತರರು ಇಂದು ಚಿಕ್ಕಮಗಳೂರು ನಗರದಲ್ಲಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿ ಪಡಿ ಸಂಗ್ರಹಿಸಿದರು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಡಿ.25): ದತ್ತ ಜಯಂತಿ ಹಿನ್ನೆಲೆ ವಿಧಾನಸಭೆ ವಿರೋಧ ಪಕ್ಷಗಳ ನಾಯಕ ಆರ್.ಅಶೋಕ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಇತರೆ ಶಾಸಕರು, ಬಿಜೆಪಿ ಮುಖಂಡರ ಜೊತೆ ಇಂದು ಚಿಕ್ಕಮಗಳೂರಿನ ದತ್ತಪೀಠಕ್ಕೆ ತೆರಳಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಶಾಸಕರುಗಳಾದ ವಿ.ಸುನೀಲ್ ಕುಮಾರ್, ಹುಲ್ಲಳ್ಳಿ ಸುರೇಶ್, ಮಾಜಿ ಶಾಸಕರುಗಳಾದ ಸಿ.ಟಿ.ರವಿ, ಡಿ.ಎನ್.ಜೀವರಾಜ್, ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಸೇರಿದಂತೆ ಇತರರು ಅವರೊಂದಿಗಿದ್ದರು. ದತ್ತಪೀಠದ ಅರ್ಚಕರುಗಳಾದ ಶ್ರೀಧರ ಭಟ್ ಮತ್ತು ಶಿವರಾಂ ಭಟ್ ಅವರು ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಟ್ಟರು.
ಮನೆ ಮನೆಗೆ ತೆರಳಿ ಭಿಕ್ಷಾಟನೆ :
ದತ್ತ ಜಯಂತಿ(Datta jayanti chikkamagaluru) ಅಂಗವಾಗಿ ಮಾಜಿ ಶಾಸಕ ಸಿ.ಟಿ.ರವಿ, ದೊಡ್ಡಬಳ್ಳಾಪುರದ ಶಾಸಕ ಧೀರಜ್ ಮುನಿರಾಜು ಮತ್ತಿತರರು ಇಂದು ಚಿಕ್ಕಮಗಳೂರು ನಗರದಲ್ಲಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿ ಪಡಿ ಸಂಗ್ರಹಿಸಿದರು. ನಾರಾಯಣ ಪರುರ ಬಡಾವಣೆಯ ಮನೆಗಳಿಗೆ ಭಿಕ್ಷೆಗೆ ತೆರಳಿದ ಮಾಲಾಧಾರಿಗಳ ಪಾದ ತೊಳೆದ ನಿವಾಸಿಗಳು ಅಕ್ಕಿ, ಬೆಲ್ಲ, ಬೇಳೆ ಇನ್ನಿತರೆ ಪದಾರ್ಥಗಳನ್ನು ಪಡಿ ರೂಪದಲ್ಲಿ ನೀಡಿದರು. ಇಂದು ಸಂಗ್ರಹಿಸಿದ ಪಡಿಯನ್ನು ನಾಳೆ ದತ್ತಪೀಠಕ್ಕೆ ಇರುಮುಡಿ ಕೊಂಡೊಯ್ದು ದತ್ತ ಪಾದುಕೆಗಳ ದರ್ಶನ ಮಾಡಿ, ಹೋಮ, ಹವನಗಳಲ್ಲಿ ಭಾಗವಹಿಸಿ ದೇವರಿಗೆ ಪಡಿ ಅರ್ಪಿಸಿದ ನಂತರ ಮಾಲೆಯನ್ನು ವಿಸರ್ಜಿಸುವ ಕಾರ್ಯಕ್ರಮ ಇರುತ್ತದೆ.
ಚಿಕ್ಕಮಗಳೂರು: ದತ್ತ ಜಯಂತಿ ಶೋಭಾಯಾತ್ರೆ, ಕೇಸರಿಯಲ್ಲಿ ಮಿಂದೆಂದ ಕಾಫಿನಾಡು!
ಸಚಿವರ ವಜಾಕ್ಕೆ ವಿಪಕ್ಷ ನಾಯಕ ಸೇರಿದಂತೆ ಬಿಜೆಪಿ ನಾಯಕರಿಂದ ಆಗ್ರಹ
ರೈತರು ಬರಗಾಲಕ್ಕಾಗಿ ಕಾಯುತ್ತಾರೆ ಎಂದು ಹೇಳುವ ಮೂಲಕ ರೈತ ಸಮುದಾಯವನ್ನು ಅಪಮಾನಿಸಿರುವ ಸಚಿವ ಶಿವಾನಂದ ಪಾಟೀಲರು ಒಂದು ಕ್ಷಣಕ್ಕೂ ಅಧಿಕಾರದಲ್ಲಿರಲು ಯೋಗ್ಯರಲ್ಲ. ಅವರನ್ನ ಸಂಪುಟದಿಂದ ವಜಾ ಮಾಡಬೇಕೆಂದು ವಿಪಕ್ಷ ನಾಯಕ ಆರ್ ಅಶೋಕ್ , ಶಾಸಕ ವಿ ಸುನೀಲ್ ಕುಮಾರ್ , ಮಾಜಿ ಶಾಸಕ ಸಿ.ಟಿ.ರವಿ ಆಗ್ರಹಿಸಿದ್ದಾರೆ.
ಶಿವಾನಂದ ಪಾಟೀಲ್ ಹಿರಿಯ, ಅನುಭವಿ ಶಾಸಕರು ಮತ್ತು ಮಂತ್ರಿ ಅವರ ಬಾಯಲ್ಲಿ ಬರುತ್ತಿರುವ ಮಾತುಗಳು ಸಹನೀಯವಲ್ಲ. ಮಣ್ಣನ್ನೇ ಪೂಜಿಸಿ, ಮಣ್ಣಿನ ಜೊತೆಗೇ ಬೆರೆತು ಮಣ್ಣಿನಿಂದಲೇ ಫಲ ಪಡೆದು ಜಗತ್ತಿಗೆ ಹಂಚುವ ರೈತ ಸಂಸ್ಕೃತಿಯನ್ನು ಸಚಿವರು ಅಪಮಾನಿಸಿದ್ದಾರೆ ಎಂದು ದೂರಿದರು.
ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತಾಡಿ ರೈತರು ಸಾಲ ಮನ್ನಾ, ಉಚಿತಗಳಿಗಾಗಿ ಬರ ಬರಲಿ ಎಂದು ಕಾಯುತ್ತಾರೆ ಎನ್ನುವ ಸಚಿವ ಶಿವಾನಂದ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ಎಲ್ಲಾ ಮಂತ್ರಿಗಳೂ ರೈತರನ್ನ ಹಗುರವಾಗಿ ತೆಗೆದುಕೊಳ್ಳುತ್ತಿದ್ದಾರೆ. ಬರಗಾಲ ಬಂದಿದೆ. ಪರಿಹಾರವನ್ನು ಕೊಟ್ಟಿಲ್ಲ ಎಂದರು.
ಶ್ರೀರಾಮ ಸೇನೆಯ ದತ್ತಮಾಲಾ ಅಭಿಯಾನ ಶಾಂತಿಯುತ ತೆರೆ; ಪೊಲೀಸ್ ಬಿಗಿಭದ್ರತೆ, ಮಳೆ ನಡುವೆ ಭಕ್ತರಿಂದ ದತ್ತಪಾದುಕೆ ದರ್ಶನ
ಇದೇ ಶಿವಾನಂದ ಪಾಟೀಲ್ ಹಿಂದೆ ಪರಿಹಾರದ ಮೊತ್ತ ಹೆಚ್ಚಾದ ಕಾರಣಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಿಕೆ ನೀಡಿದ್ದರು. ಈಗ ಸಾಲಾ ಮನ್ನಾ, ಉಚಿತಗಳಿಗಾಗಿ ಬರಗಾಲ ಬರಲಿ ಎಂದು ರೈತರು ಕಾಯುತ್ತಾರೆ ಎಂದು ಹೇಳಿ ರೈತ ಸಮುದಾಯವನ್ನು ಅಪಮಾನಿಸಿದ್ದಾರೆ ಎಂದು ದೂರಿದರು.