Darshan And Gang Case: ರೇಣುಕಾಸ್ವಾಮಿ ಪ್ರಕರಣದಲ್ಲಿ ರಮ್ಯಾ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ಸಾಮಾಜಿಕ ಜಾಲತಾಣದ ವಾಗ್ಯುದ್ಧಕ್ಕೆ ವಿಜಯಲಕ್ಷ್ಮೀ ಅವರ ಪ್ರವೇಶವು ಹೊಸ ತಿರುವು ನೀಡಿದೆ.
ಬೆಂಗಳೂರು: ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ರೇಣುಕಾಸ್ವಾಮಿ ಪ್ರಕರಣದ ಆರೋಪಿ, ನಟ ದರ್ಶನ್ ಅಭಿಮಾನಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಡೆವಿಲ್ ನಟನ ಅಭಿಮಾನಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ರಮ್ಯಾ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ, ಈ ಕೇಸ್‌ಗೆ ಕಾಟೇರನ ಮಡದಿ ವಿಜಯಲಕ್ಷ್ಮೀ ಎಂಟ್ರಿ ಕೊಡುವ ಸಾಧ್ಯತೆಗಳಿವೆ. ಈ ಮೂಲಕ ಪ್ರಕರಣ ಹೊಸ ತಿರುವು ಪಡೆದುಕೊಳ್ಳಲಿದೆ. ಸ್ಯಾಂಡಲ್‌ವುಡ್ ಪದ್ಮಾವತಿ ವಿರುದ್ಧ ವಿಜಯಲಕ್ಷ್ಮೀ ದರ್ಶನ್ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರೇಣುಕಾಸ್ವಾಮಿಗೆ ನ್ಯಾಯ ಸಿಗಬೇಕು ಎಂದು ರಮ್ಯಾ ಪೋಸ್ಟ್ ಮಾಡಿದ್ದು ಸರಿಯಲ್. ಪ್ರಕರಣ ನ್ಯಾಯಾಲದಲ್ಲಿರುವಾಗ ಏಕಪಕ್ಷೀಯ ಅಭಿಪ್ರಾಯ ಸರಿಯಲ್ಲ. ಹೀಗಾಗಿ ನಟಿ ರಮ್ಯಾ ವಿರುದ್ಧ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲು ವಿಜಯಲಕ್ಷ್ಮೀ ಮುಂದಾಗಿದ್ದಾರೆ ಎನ್ನಲಾಗಿದೆ.
ದರ್ಶನ್ ಅಭಿಮಾನಿಗಳ ವಿರುದ್ಧ ರಮ್ಯಾ ದೂರು!
ಇತ್ತ ತಮ್ಮ ಪೋಸ್ಟ್‌ಗಳಿಗೆ ಅಶ್ಲೀಲವಾಗಿ ಕಮೆಂಟ್ ಮಾಡುತ್ತಿರುವ ದರ್ಶನ್ ಅಭಿಮಾನಿಗಳ ವಿರುದ್ಧ ದೂರು ಸಲ್ಲಿಸಲು ಯೋಚಿಸುತ್ತಿರೋದಾಗಿ ರಮ್ಯಾ ಹೇಳಿಕೆ ನೀಡಿದ್ದಾರೆ. ದರ್ಶನ್ ಆಂಡ್ ಗ್ಯಾಂಗ್ ಪ್ರಕರಣದ ಜಾಮೀನು ಅರ್ಜಿಯ ವಿಚಾರಣೆ ನಡೆದಿತ್ತು. ಈ ವಿಚಾರಣೆ ಸಂಬಂಧ ಪ್ರಕಟವಾದ ಲೇಖನದ ಹೇಳಿಕೆಯನ್ನು ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಪೋಸ್ಟ್ ಬಳಿಕ ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡ ಕೆಲವರು ರಮ್ಯಾ ಅವರನ್ನು ಟ್ರೋಲ್ ಮಾಡಲಾರಂಭಿಸಿದರು.
ಕೆಂಡಮಂಡಲಾರದ ರಮ್ಯಾ?
ರಮ್ಯಾ ವೈಯಕ್ತಿಕ ಜೀವನದ ಕುರಿತಾಗಿಯೂ ಆಕ್ಷೇಪಾರ್ಹ ಕಮೆಂಟ್ ಮಾಡಿದ್ದರು. ಈ ಕಮೆಂಟ್‌ಗಳಿಂದ ಕೆಂಡಮಂಡಲಾರದ ಸ್ಯಾಂಡಲ್‌ವುಡ್ ಪದ್ಮಾವತಿ, ನನ್ನ ಇನ್‌ಸ್ಟಾಗ್ರಾಂಗೆ ಡಿ ಬಾಸ್ ಫ್ಯಾನ್ಸ್‌ಗೆ ಸ್ವಾಗತ ಎಂದು ಟಾಂಗ್ ಕೊಟ್ಟಿದ್ದರು. ರೇಣುಕಾಸ್ವಾಮಿ ಮೆಸೇಜ್‌ಗೂ ಮತ್ತು ನೀವು ಕಳುಹಿಸುತ್ತಿರುವ ಸಂದೇಶಗಳಿಗೆ ಏನು ವ್ಯತ್ಯಾಸ ಎಂದು ರಮ್ಯಾ ಚಳಿ ಬಿಡಿಸಿದ್ದರು.
ದರ್ಶನ್‌ಗೆ ಎಲ್ಲಾ ಗೊತ್ತಿರುತ್ತೆ
ಈ ಸಂಬಂಧ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ರಮ್ಯಾ, ಸಾಮಾಜಿಕ ಜಾಲತಾಣದಲ್ಲಿ ಏನು ನಡೆಯುತ್ತಿದೆ ಮತ್ತು ತಮ್ಮ ಅಭಿಮಾನಿಗಳು ಏನು ಮಾಡ್ತಿದ್ದಾರೆ ಅನ್ನೋದು ದರ್ಶನ್ ಅವರಿಗೆ ಚೆನ್ನಾಗಿ ಗೊತ್ತಿರುತ್ತೆ ಅನ್ನೋದು ನನ್ನ ಅಭಿಪ್ರಾಯವಾಗಿದೆ. ಆದರೂ ಈ ಬಗ್ಗೆ ದರ್ಶನ್ ಏನೂ ಸಹ ಮಾತನಾಡಲ್ಲ ಅಂದ್ರೆ ಅದು ಅವರನ್ನ ಪ್ರೋತ್ಸಾಹಿಸದಂತೆ ಆಗುತ್ತದೆ ಎಂಧು ರಮ್ಯಾ ಕಿಡಿಕಾರಿದ್ದಾರೆ.
ಡಿ ಬಾಸ್ ಅಭಿಮಾನಿಗಳು ಮಾಡುವ ಕೆಟ್ಟ ಮತ್ತು ಕೊಳಕು ಮೆಸೇಜ್ ಮತ್ತು ರೇಣುಕಾಸ್ವಾಮಿ ಕಳುಹಿಸಿದ ಸಂದೇಶಗಳಲ್ಲಿ ಏನು ವ್ಯತ್ಯಾಸವಿದೆ ಎಂದು ಪ್ರಶ್ನೆ ಮಾಡಿರುವ ರಮ್ಯಾ, ಇಂಥ ಕೆಟ್ಟ ಮನಸ್ಥಿತಿ ಇರೋ ಜನರಿಂದಲೇ ಸಮಾಜದಲ್ಲಿ ಹೆಣ್ಣುಮಕ್ಕಳು ಅಪಾಯ ಎದುರಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾಮಾನ್ಯ ಹೆಣ್ಣು ಮಕ್ಕಳ ಗತಿ ಏನು?
ನಾನು ಜೀವನದಲ್ಲಿ ನನಗೆ ಅನ್ನಿಸಿದ್ದನ್ನು ನೇರವಾಗಿಯೇ ಹೇಳುತ್ತೇನೆ. ಹೆದರಿಕೊಂಡು ಸುಮ್ಮನೇ ಕುಳಿತುಕೊಳ್ಳುವ ಜಾಯಮಾನ ನನ್ನದಲ್ಲ. ಸಾಮಾಜಿಕ ಜೀವನದಲ್ಲಿ ಇರೋ ನನ್ನಂಥ ಅವರಿಗೆ ಈ ರೀತಿ ಮೆಸೇಜ್ ಮಾಡ್ತಾರೆ ಅಂದ್ರೆ ಸಾಮಾನ್ಯ ಹೆಣ್ಣು ಮಕ್ಕಳ ಗತಿ ಏನು? ದರ್ಶನ್ ಅಭಿಮಾನಿಗಳಿಂದ ಸಮಾಜಕ್ಕೆ ಯಾವ ಸಂದೇಶ ರವಾನೆಯಾಗುತ್ತಿದೆ ಎಂದು ರಮ್ಯಾ ಪ್ರಶ್ನೆ ಮಾಡಿದರು.
ಕೆಲ ಸೆಲೆಬ್ರಿಟಿಗಳು ಪರ್ಸನಲ್ ಆಗಿ ಮೆಸೇಜ್ ಮಾಡಿ ನನಗೆ ಸಪೋರ್ಟ್ ಮಾಡುತ್ತಾರೆ. ಒಂದು ವೇಳೆ ದರ್ಶನ್ ವಿರುದ್ಧ ಮಾತನಾಡಿದ್ರೆ ಅಥವಾ ಪೋಸ್ಟ್ ಮಾಡಿದ್ರೆ ನಟನ ಅಭಿಮಾನಿಗಳು ಕೆಟ್ಟ ಮೆಸೇಜ್ ಮಾಡುತ್ತಾರೆ ಎಂದು ಹಿಂದೇಟು ಹಾಕುತ್ತಾರೆ. ಕೆಟ್ಟ ಮೆಸೇಜ್ ಮಾತ್ರವಲ್ಲ ಬೆದರಿಕೆ ಹಾಕಿ ನಮ್ಮನ್ನು ಟ್ರ್ಯಾಕ್ ಮಾಡುತ್ತಾರೆ. ಆದ್ರೆ ನಾನು ಯಾವುದಕ್ಕೂ ಹೆದರಿ ಸುಮ್ಮನಿರೋದಿಲ್ಲ ಎಂದು ನಟಿ ರಮ್ಯಾ ಖಡಕ್ ಆಗಿಯೇ ಹೇಳಿದ್ದಾರೆ.



