ಬೆಂಗಳೂರು(ಆ.01): ಇದುವರೆಗೂ ಬೆಂಗಳೂರಿನಲ್ಲೇ ಹೆಚ್ಚು ತಾಂಡವವಾಡುತ್ತಿದ್ದ ಕರೋನಾ ಸೋಂಕು ಕ್ರಮೇಣ ರಾಜ್ಯದ ಇತರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸತೊಡಗಿದೆ.

ಹೌದು. ಇದುವರೆಗೂ ರಾಜ್ಯದಲ್ಲಿ ನಿತ್ಯ ವರದಿಯಾಗುವ ಸೋಂಕು ಪ್ರಕರಣಗಳಲ್ಲಿ ಬೆಂಗಳೂರು ಪಾಲು ಶೇ.50ಕ್ಕಿಂತ ಹೆಚ್ಚಿರುತ್ತಿತ್ತು. ಆದರೆ, ಕಳೆದ ಒಂದು ವಾರದಿಂದ ಶೇಕಡಾವಾರು ಪ್ರಮಾಣದಲ್ಲಿ ಬೆಂಗಳೂರೇತರ ಜಿಲ್ಲೆಗಳ ಪಾಲು ಹೆಚ್ಚಾಗುತ್ತಿದೆ.

ಭ್ರಷ್ಟಾಚಾರ ಸುಳ್ಳಾದರೆ ನೇಣಿಗೇರಿಸಿ: ಡಿಕೆಶಿ

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚತೊಡಗಿದೆ. ಈ ಹೆಚ್ಚಳಕ್ಕೆ ಬೆಂಗಳೂರಿಗಿಂತ ಇತರ ಜಿಲ್ಲೆಗಳ ಕೊಡುಗೆಯೇ ಹೆಚ್ಚಾಗಿದೆ. ಪ್ರಸ್ತುತ ರಾಜ್ಯದಲ್ಲಿ ವರದಿಯಾಗುತ್ತಿರುವ ಒಟ್ಟು ಸೋಂಕಿನ ಸುಮಾರು ಶೇ.35ರಿಂದ 40ರಷ್ಟುಪಾಲು ಬೆಂಗಳೂರಿನದ್ದಾಗಿದ್ದರೆ ಉಳಿದ ಶೇ.60ರಿಂದ 65ರಷ್ಟುಪ್ರಕರಣಗಳು ಉಳಿದ 29 ಜಿಲ್ಲೆಗಳಿಂದ ವರದಿಯಾಗುತ್ತಿವೆ. ಆದರೆ, ಕೆಲವೇ ದಿನಗಳ ಹಿಂದೆ ಬೆಂಗಳೂರಿನ ಪಾಲು ಶೇ.60ರಷ್ಟುಇರುತ್ತಿತ್ತು. ಇತರ ಜಿಲ್ಲೆಗಳ ಪಾಲು ಶೇ.40ರಷ್ಟುಇರುತ್ತಿತ್ತು. ಅದೀಗ ಉಲ್ಟಾಪಲ್ಟಾಆಗಿದೆ.

ಹಾಗಂತ ಬೆಂಗಳೂರು ಮೊದಲಿನಿಂದಲೂ ಸೋಂಕಿನಲ್ಲಿ ಮುಂದಿತ್ತು ಎಂದೇನಲ್ಲ. ಆರೋಗ್ಯ ಇಲಾಖೆಯ ದೈನಂದಿನ ಕೋವಿಡ್‌ ವರದಿಯ ಅಂಕಿ ಅಂಶಗಳ ಪ್ರಕಾರ ಮೇ ತಿಂಗಳ ವರೆಗೂ ರಾಜ್ಯದ ಎಲ್ಲಾ ಜಿಲ್ಲೆಗಳಷ್ಟೇ ಉದ್ಯಾನ ನಗರಿಯಲ್ಲೂ ಸೋಂಕಿತ್ತು. ಆದರೆ, ಜೂನ್‌ ತಿಂಗಳಲ್ಲಿ ಈ ಚಿತ್ರಣ ಬದಲಾಗಿ ಬೆಂಗಳೂರಿನಲ್ಲಿ ಪ್ರಕರಣಗಳು ವಿಪರೀತ ಹೆಚ್ಚಳವಾಗತೊಡಗಿತು. ಜೂನ್‌ ಮಾಸಾಂತ್ಯದ ವೇಳೆಗೆ ಶೇ.30ರಿಂದ 40ರಷ್ಟುಪ್ರಕರಣಗಳು ಬೆಂಗಳೂರಿನಲ್ಲೇ ವರದಿಯಾಗತೊಡದ್ದವು. ನಂತರ ಅಂದರೆ ಜುಲೈ ಮಧ್ಯಭಾಗದಲ್ಲಿ ಈ ಪ್ರಮಾಣ ಶೇ.50ರಿಂದ 60 ಮುಟ್ಟಿತು. ಉದಾಹರಣೆಗೆ ಜುಲೈ 14ರಂದು 2493 ಪ್ರಕರಣಗಳಲ್ಲಿ 1269 (ಶೇ.50), ಜು.15ರಂದು 3693 ಪ್ರಕರಣಗಳಲ್ಲಿ 1975 (ಶೇ.62), ಜು.17ರಂದು 3,693 ಪ್ರಕರಣಗಳಲ್ಲಿ 2208 (ಶೇ.59) ಪ್ರಕರಣಗಳು ಬೆಂಗಳೂರಿನಲ್ಲೇ ದೃಢಪಟ್ಟಿತ್ತು.

ಲೀಗಲ್ ನೋಟಿಸ್ ಕೊಡ್ಲಿ ಅಂತ ಕಾಯ್ತಿದ್ದೆ: ಅಚ್ಚರಿಗೆ ಕಾರಣವಾಯ್ತು ಸಿದ್ದರಾಮಯ್ಯ ಮಾತು..!

ಜು.18ರ ಬಳಿಕ ಬೆಂಗಳೂರಿನಲ್ಲಿ ಶೇ.50ಕ್ಕಿಂತ ಕಡಿಮೆ ಪ್ರಮಾಣದ ಸೋಂಕು ಪ್ರಕರಣಗಳು ವರದಿಯಾಗಲಾರಂಭಿಸಿದ್ದು, ಇತರೆ ಜಿಲ್ಲೆಗಳಲ್ಲಿ ಶೇ.50ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಾ ಸಾಗುತ್ತಿವೆ. ಕಳೆದ ಮೂರು ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಶೇ.35ರಿಂದ 40ರಷ್ಟುಪ್ರಕರಣಗಳು ವರದಿಯಾಗುತ್ತಿದ್ದರೆ, ಇತರೆ ಜಿಲ್ಲೆಗಳಲ್ಲಿ ಶೇ.60ರಿಂದ 65ರಷ್ಟುಪ್ರಕರಣಗಳು ವರದಿಯಾಗುತ್ತಿವೆ. ಉದಾಹರಣೆಗೆ ಜು.28ರಂದು ವರದಿಯಾದ 5536 ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿ 1898(ಶೇ.34.25), ಜು.29ರ 5507 ಪ್ರಕರಣಗಳಲ್ಲಿ 2270 (ಶೇ.41.76), ಜು.30ರ 6,128 ಪ್ರಕರಣಗಳಲ್ಲಿ 2233(ಶೇ.36.43), ಜು.31ರ 5483 ಪ್ರಕರಣಗಳಲ್ಲಿ 2220 (ಶೇ.40.48) ಮಾತ್ರ ಬೆಂಗಳೂರಲ್ಲಿ ವರದಿಯಾಗಿವೆ. ಇದೇ ವೇಳೆ ಉಳಿದ ಜಿಲ್ಲೆಗಳ ಪಾಲು ಹೆಚ್ಚಾಗಿದೆ.

ಇನ್ನು ಜು.27ರಂದು 5326 ಪ್ರಕರಣಗಳಲ್ಲಿ 1470 (ಶೇ.27)ಪ್ರಕರಣಗಳು ಮಾತ್ರ ಬೆಂಗಳೂರಿನಲ್ಲಿ ವರದಿಯಾಗಿ ಉಳಿದ ಶೇ.73ರಷ್ಟುಪ್ರಕರಣಗಳು ಇತರೆ ಜಿಲ್ಲೆಗಳಿಂದ ವರದಿಯಾಗಿತ್ತು.

ಜುಲೈನಲ್ಲಿ ಬೆಂಗಳೂರಲ್ಲಿ 50 ಸಾವಿರ, ಇತರೆಡೆ 57 ಸಾವಿರ ಕೇಸ್‌

ರಾಜ್ಯದಲ್ಲಿ ಈ ವರೆಗೆ 1.24 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಜುಲೈ ತಿಂಗಳಲ್ಲಿ ಒಟ್ಟಾರೆ 1.08ಕ್ಕೂ ಹೆಚ್ಚು ವರದಿಯಾಗಿವೆ. ಈ ಪೈಕಿ ಜುಲೈನಲ್ಲಿ ಬೆಂಗಳೂರಿನಲ್ಲಿ ಒಟ್ಟು 50,989 ಮಂದಿಗೆ ಸೋಂಕು ಹರಡಿದರೆ, ಉಳಿದ 29 ಜಿಲ್ಲೆಗಳಲ್ಲಿ 57,884 ಮಂದಿಗೆ ಸೋಂಕು ದೃಢಪಟ್ಟಿದೆ.

ಜೂನ್‌ 30ರ ವರೆಗೆ ಬೆಂಗಳೂರಿನಲ್ಲಿ 4,555 ಇದ್ದ ಸೋಂಕಿತರ ಸಂಖ್ಯೆ ಜುಲೈ ಮಾಸಾಂತ್ಯದ ವೇಳೆಗೆ 55,544ಕ್ಕೆ ಏರಿಕೆಯಾದರೆ, ಇತರೆ ಜಿಲ್ಲೆಗಳಲ್ಲಿ ಜೂನ್‌ 30ರ ವರೆಗೆ ದಾಖಲಾಗಿದ್ದ 10,687 ಸೋಂಕಿತರ ಸಂಖ್ಯೆ ಈಗ 68,611ಕ್ಕೆ ಏರಿದೆ.

ಭ್ರಷ್ಟಾಚಾರ ಆರೋಪಕ್ಕೆ ಬಿಸಿ ಮುಟ್ಟಿಸಿದ ಬಿಜೆಪಿ: ಸಿದ್ದರಾಮಯ್ಯ, ಡಿಕೆಶಿಗೆ ಲೀಗಲ್ ನೋಟಿಸ್

ಈ ಪೈಕಿ ಬಳ್ಳಾರಿ, ದಕ್ಷಿಣ ಕನ್ನಡ, ಕಲಬುರಗಿಯಲ್ಲೇ ಕ್ರಮವಾಗಿ 6403, 5708 ಮತ್ತು 5310 ಪ್ರಕರಣಗಳು ದೃಢಪಟ್ಟಿವೆ. ಮೈಸೂರು, ಉಡುಪಿ, ಧಾರವಾಡದಲ್ಲಿ ತಲಾ 4 ಸಾವಿರಕ್ಕಿಂತಲೂ ಹೆಚ್ಚು, ಬೆಳಗಾವಿಯಲ್ಲಿ 3 ಸಾವಿರಕ್ಕೂ ಹೆಚ್ಚು, ದಾವಣಗೆರೆ, ರಾಯಚೂರು, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೀದರ್‌, ಹಾಸನ, ಯಾದಗಿರಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ 2 ಸಾವಿರಕ್ಕಿಂತ ಹೆಚ್ಚು, ಕೋಲಾರ, ಕೊಪ್ಪಳ, ಚಿಕ್ಕಬಳ್ಳಾಪುರ, ಮಂಡ್ಯ, ಹಾವೇರಿ, ರಾಮನಗರ, ಗದಗ, ತುಮಕೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ 1 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಇನ್ನು, ಹಾವೇರಿ, ಚಿಕ್ಕಮಗಳೂರು, ಕೊಡಗು ಮತ್ತು ಚಿತ್ರದುರ್ಗದಲ್ಲಿ ಮಾತ್ರ ಇದುವರೆಗೆ ತಲಾ 1 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ದೃಢಪಟ್ಟಿವೆ.