Breaking: ಭವಾನಿ ರೇವಣ್ಣಗೆ ಬಿಗ್‌ ಶಾಕ್‌, ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದ ಕೋರ್ಟ್‌!

ಕಿಡ್ನಾಪ್‌ ಕೇಸ್‌ನಲ್ಲಿ ಮಾಜಿ ಸಚಿವ ಎಚ್‌ಡಿ ರೇವಣ್ಣ ಪತ್ನಿ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್‌ ತಿರಸ್ಕಾರ ಮಾಡಿದೆ. ಇದರ ಬೆನ್ನಲ್ಲಿಯೇ ಅವರು ಅರೆಸ್ಟ್‌ ಆಗೋದು ಫಿಕ್ಸ್‌ ಗಿದೆ.
 

Court refuses to grant anticipatory bail to Bhavani Revanna san


ಬೆಂಗಳೂರು (ಮೇ.31): ಕಿಡ್ನಾಪ್‌ ಕೇಸ್‌ನಲ್ಲಿ ಎಚ್‌ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣಗೆ (Bhavani Revanna) ಅಶುಭ ಶುಕ್ರವಾರವಾಗಿದೆ. ಬೇಲ್‌ನ ನಿರೀಕ್ಷೆಯಲ್ಲಿದ್ದ ಭವಾನಿ ರೇವಣ್ಣಗೆ ಕೋರ್ಟ್‌ ಶಾಕ್‌ ನೀಡಿದ್ದು, ನಿರೀಕ್ಷಣಾ ಜಾಮೀನಿನ ಅರ್ಜಿಯನ್ನು ಕೋರ್ಟ್‌ ತಿರಸ್ಕರಿಸಿದೆ. ಇದರೊಂದಿಗೆ ಅವರು ಈ ಕೇಸ್‌ನಲ್ಲಿ ಎಸ್‌ಐಟಿಯಿಂದ ಬಂಧನಕ್ಕೆ ಒಳಗಾಗಲಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು (anticipatory bail) ಅರ್ಜಿಯನ್ನು ಸಲ್ಲಿಸಲಾಗಿತ್ತು. ಕಿಡ್ನಾಪ್‌ ಕೇಸ್‌ನಲ್ಲಿ (Kidnap case) ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿದ್ದರು. ವಾದ ಪ್ರತಿವಾದ ಆಲಿಸಿ ಆದೇಶವನ್ನು ಕೋರ್ಟ್‌ ಕಾಯ್ದಿರಿಸಿದ್ದರು. ಇಂದು ನ್ಯಾ.ಸಂತೋಷ್ ಗಜಾನನ ಭಟ್ ಅವರು ಸಂಜೆಯ ವೇಳೆಗೆ ತೀರ್ಪು ನೀಡಿದ್ದು, ಅರ್ಜಿಯನ್ನು ವಜಾ ಮಾಡಿದ್ದಾರೆ. ಕಿಡ್ನಾಪ್ ಪ್ರಕರಣ ದಲ್ಲಿ ಒಳಸಂಚು ರೂಪಿಸಿದ್ದ ಆರೋಪ ಅವರ ಮೇಲಿದೆ. ಇನ್ನು ಮೇ 8 ರಿಂದ ಭವಾನಿ ರೇವಣ್ಣ ನಾಪತ್ತೆಯಾಗಿದ್ದಾರೆ. ಈಗಾಗಲೇ ಭವಾನಿಗೆ ನೋಟಿಸ್ ನೀಡಿರುವ ಎಸ್ಐಟಿ (SIT) , ನಾಳೆ ವಿಚಾರಣೆಗೆ ಸಹಕರಿಸುವಂತೆ ಭವಾನಿಗೆ ನೋಟಿಸ್‌ ನೀಡಿದೆ. ಇದರ ನಡುವೆ ಇಂದೇ ಅವರ ಬಂಧನವಾಗುವ ಸಾಧ್ಯತೆ ಇದೆ.

ಕಿಡ್ನಾಪ್‌ ಕೇಸ್‌ನಲ್ಲಿ ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನಿನ ಅರ್ಜಿಯ ವೇಲೆ ವಾದ ಮಾಡಿದ್ದ ಭವಾನಿ ಪರ ವಕೀಲರು, ಯಾವುದೇ ಕಾಲ್ ರೆಕಾರ್ಡ್ಅನ್ನು ಭವಾನಿ ಅವರ ಮೊಬೈಲ್ ನಿಂದ ಅಥವಾ ಅವರ ಲ್ಯಾಂಡ್‌ಲೈನ್‌ನಿಂದ ತೆಗೆದುಕೊಂಡಿಲ್ಲ. ರೇವಣ್ಣ ಹಾಗೂ ಸತೀಶ್‌ ಬಾಬಣ್ಣ ಪೋನಲ್ಲಿ ಮಾತಾಡಿದ್ದಾರೆ. ಆದರೆ, ಭವಾನಿ ಅವರು ಮಾತಾಡಿರುವ ಬಗ್ಗೆ ಯಾವುದೇ ಸಾಕ್ಷಿ ಇಲ್ಲ ಎಂದು ಹೇಳಿದರು. ಈ ಹಂತದಲ್ಲಿ ಎಸ್‌ಐಟಿ ಪರ ವಕೀಲ, ಮಗನ ಮೇಲೆ ಕೇಸ್ ಆದ ತಕ್ಷಣ ಸಂಚು ಶುರುವಾಗಿದೆ. ಮಗನ ರಕ್ಷಣೆಗಾಗಿ ಭವಾನಿ ರೇವಣ್ಣ ಒಳಸಂಚು ಮಾಡಿದ್ದರು ಎಂದು ತನಿಖೆಯ ಅಂಶಗಳನ್ನು ಎಸ್‌ಪಿಪಿ ನೀಡಲು ಮುಂದಾದರು. ಈ ಹಂತದಲ್ಲಿ ಭವಾನಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ನಿಮ್ಮ ತನಿಖೆಯ ಏನೇ ಅಂಶಗಳಿದ್ದರೂ ಅದನ್ನು ಓಪನ್‌ ಕೋರ್ಟ್‌ನಲ್ಲಿ ಹೇಳುವಂತಿಲ್ಲ. ಅದನ್ನು ಕೋರ್ಟ್‌ಗೆ ನೀಡುವಂತೆ ಮನವಿ ಮಾಡಿದರು.

ಎಸ್ಐಟಿ ಪರ ಎಸ್ಪಿಪಿ ವಾದ ಮಂಡನೆ ಮಾಡಿದ್ದ ವಕೀಲರು. ಭವಾನಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾಕ್ಷಿಗಳಿವೆ. ದೂರುದಾರ ಹಾಗೂ a2 ಆರೋಪಿ ಸತೀಶ್ ಬಾಬಣ್ಣ ಮಾತಾಡಿರುವ ಕಾಲ್ ರೆಕಾರ್ಡ್ ಇದೆ.  ಈ ಕಾಲ್ ರೆಕಾರ್ಡ್ ನಲ್ಲಿ ಭವಾನಿ ಯಾವ ರೀತಿ ಭಾಗಿಯಾಗಿದ್ದಾರೆ ಎಂಬದಕ್ಕೆ ಸಾಕ್ಷಿ ಇದೆ. ಮೊಬೈಲ್ ನ ಅಟೋ ರೆಕಾರ್ಡರ್ ನಿಂದ ಕಾಲ್ ರೆಕಾರ್ಡ್ ಆಗಿದೆ. ಪೊಲೀಸ್ ಕೇಸಿದೆ, ಸಿಕ್ಕಿ ಹಾಕಿಕೊಂಡರೆ 2 ವರ್ಷ ಆದರೂ ಹೊರಬರಲು ಸಾಧ್ಯವಿಲ್ಲ. ದೂರುದಾರ ಚಿಕ್ಕಮ್ಮ ನಿಮ್ಮ ಜೊತೆ ಇದ್ದಾರೆ ಎಂದು ಕೇಳಿದ್ದಕ್ಕೆ ಅವರು ವಾಪಸ್ ಹೋಗಿದ್ದಾರೆ. ಆರೋಪಿಯೊಬ್ಬರ ಮೊಬೈಲ್‌ನಿಂದ ಸಂಪೂರ್ಣ ಕಾಲ್ ರೆಕಾರ್ಡ್ ರಿಕವರ್ ಮಾಡಲಾಗಿದೆ. 2 ಕಾಲ್ ರೆಕಾರ್ಡ್ ಗಳಲ್ಲಿ ಭವಾನಿ ಅವರ ಆ್ಯಕ್ಟೀವ್ ಪಾರ್ಟಿಸಿಪೇಷನ್ ಇರೋದು ಪತ್ತೆಯಾಗಿದೆ. ಸತೀಶ್ ಬಾಬಣ್ಣ ಮೊಬೈಲ್ ನಿಂದ ಕಾಲ್ ರೆಕಾರ್ಡ್ ಪಡೆಯಲಾಗಿದೆ. ಆ ಸಂಭಾಷಣೆಯಲ್ಲಿ ಮೇಡಮ್‌ ಎಂದು ಸಂಭೋದನೆ ಆಗಿದೆ. ಸಂತ್ರಸ್ತೆಗೆ 150 - 200 ಸೀರೆ ಕೊಡಿಸಿ ಅಂತಾರೆ. ಏನ್ ಮಾಡೋದು ಎಲ್ಲಾ ಬಾಯಿ ಪಾಠ ಆಗಿದೆ. ಅದೇನೂ ರಂಪಾಟ ಆಗಿದೆ ಎಂಬ ಬಗ್ಗೆ ಮಾತುಕತೆ. ಹೀಗೆ ಅನೇಕ ರೀತಿಯಲ್ಲಿ ಸಂಭಾಷಣೆ ನಡೆದಿದೆ ಎಂದು ಹೇಳಿದ್ದಾರೆ.

ಪೋನ್ ಸಂಭಾಷಣೆಯಲ್ಲಿ ಭವಾನಿ ಭಾಗಿಯಾಗಿದ್ದಾರೆ. ಸಂತ್ರಸ್ಥೆಯಿಂದ ವಿಡಿಯೋ ಮಾಡಿಸು ಅಂತ ಭವಾನಿ ಸತೀಶ್ ಬಾಬಣ್ಣಗೆ ಹೇಳಿದ್ದಾರೆ. ಮೇ.3ಕ್ಕೆ ಮಹಿಳೆಯಿಂದ ಹೇಳಿಕೆ ಪಡೆಯಲಾಗಿದೆ. 40 ಕಿ.ಮಿ ದೂರು ಇದ್ದ ರಾಜಗೋಪಾಲ್ ಅವರ ಜಾಗದಲ್ಲಿ ಇಡಲಾಗಿತ್ತು.  ಇನ್ನೂ ಕೆಲವು ಸಂಭಾಷಣೆ ಗಳನ್ನ ವಾಟ್ಸಾಪ್‌ ಮೂಲಕ ನಡೆಸಲಾಗಿದೆ. 164 ಹೇಳಿಕೆಯಲ್ಲಿ ಸಂತ್ರಸ್ತೆ ಮತ್ತು ಆಕೆಯ ಸಹೋದರಿ ಭವಾನಿ ಬಗ್ಗೆ ಹೇಳಿದ್ದಾರೆ. ಸಂತ್ರಸ್ತೆ ಗೆ ಭವಾನಿ ಬೈದಿದ್ದಾರೆ, ಬೆದರಿಸಿದ್ದಾರೆ. ಸಂತ್ರಸ್ತೆ ಮಹಿಳೆ ಬಳಿಯಿದ್ದ ಮೊಬೈಲ್ಅನ್ನು ಕಿತ್ತುಕೊಳ್ಳಲಾಗಿತ್ತು.

ಭವಾನಿಗೆ ಜೈಲಾ, ಬೇಲಾ?: ಇಂದು ತೀರ್ಪು, ಬಂಧನ ಭೀತಿಯಲ್ಲಿರುವ ರೇವಣ್ಣ ಪತ್ನಿಗೆ ಢವ ಢವ..!

ಸಂತ್ರಸ್ಥೆಗೆ ಭವಾನಿ ಜೈಲಿಗೆ ಹೋಗುವ ಬೆದರಿಕೆ ಹಾಕಿದ್ದಾರೆ. ವಿಡಿಯೋ ಮಾಡಲು ಒತ್ತಡ ಹಾಕಿದ್ದಾರೆ ಅನೇಕರ ಜೊತೆ ಮಾತನಾಡಿರುವ ಸಂಭಾಷಣೆಗಳಿವೆ. ಸಂತ್ರಸ್ತೆ ಮಗಳ ಹೇಳಿಕೆ, ಡಾಕ್ಟರ್ ಹೇಳಿಕೆ ಎಲ್ಲಾ ಸಾಕ್ಷಿಗಳು ಇವೆ.‌ ಭವಾನಿ ಅವರ ಪಿಎ, ಡ್ರೈವರ್ ಹಾಗೂ ರಾಜಗೋಪಾಲ್ ನಡುವೆ ಸಂಭಾಷಣೆ ನಡೆದಿವೆ. ರಾಜಕೀಯ ಪ್ರಭಾವ ಇರುವ ಮಹಿಳೆಯನ್ನ ಕಸ್ಟೋಡಿಯಲ್ ಇಂಟ್ರಾಗೇಷನ್ ಅಗತ್ಯ ಇದೆ ಎಂದು ವಾದ ಮಾಡಿದ್ದಾರೆ.
ಇನ್ನೂ ಭವಾನಿ ರೇವಣ್ಣ ಪತ್ರ ಬರೆದ ವಿಚಾರ ಕೂಡ ಚರ್ಚೆಯಾಯಿತು. ಭವಾನಿ ರೇವಣ್ಣ ಎಡಿಜಿಪಿಗೆ ಪತ್ರ ಬರೆದಿದ್ದಾರೆ.  ನಾವು ಭವಾನಿಗೆ ಈವರೆಗೂ ಯಾವುದೇ ನೊಟೀಸ್ ನೀಡಿಲ್. ಇದೊಂದು ಪೂರ್ವನಿರ್ಧಾರಿತ ಸಂಚಿನ ಪ್ರಕರಣ. ಆ ಭಾಗದಲ್ಲಿ ಬೇರೆಯವರಿಗೆ ಸಂದೇಶ ರವಾನೆಗಾಗಿ ಮಾಡಿದ ಕಿಡ್ನಾಪ್. ಪ್ರಭಾವದಿಂದ ಏನ್ ಬೇಕಾದರೂ ಮಾಡಬಹುದು ಅಂತ ಮಾಡಿದ ಕಿಡ್ನಾಪ್.  ನಮ್ಮ ಪ್ರತಿವಾದಿ ವಕೀಲರು  ಅರ್ಜಿದಾರರೇ ತನಿಖೆಗೆ ಸಹಕರಿಸಿತ್ತಾರೆ ಎಂದು ಹೇಳಿದರು. ಆದರೆ ಇಷ್ಟು ಎಲ್ಲಾ ಮಾಡಿ ಈಗ ಸಹಕರಿಸುತ್ತೆನೆ ಅಂದ್ರೆ ಹೇಗೆ. ಸ್ವಾಮಿ ಒಮ್ಮೆ ನೀವು ಈ ಆಡಿಯೋ ಸಂಭಾಷಣೆಯನ್ನು ಕೇಳಿ ಎಂದು ಮನವಿ ಮಾಡಿದರು.

 

ಹಾಸನ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌ಗೆ ಟ್ವಿಸ್ಟ್ ಕೊಟ್ಟ ದೇವರಾಜೇಗೌಡ; ಡಿಕೆಶಿ ಆಮಿಷದ ಆಡಿಯೋ ರಿಲೀಸ್

ಭವಾನಿ ರೇವಣ್ಣಗಾಗಿ ಎಸ್ ಐಟಿ ತಂಡ ತೀವ್ರ ಹುಡುಕಾಟ: ಇನ್ನೊಂದೆಡೆ ಭವಾನಿ ರೇವಣ್ಣಗಾಗಿ ಬೆಂಗಳೂರು , ಹಾಸನ, ಹೊಳೆನರಸೀಪುರದಲ್ಲಿ ಹುಡುಕಾಟ ಆರಂಭವಾಗಿದೆ. ಸಂಬಂಧಿಕರು ನೆಂಟರ ಮನೆಗಳಲ್ಲೂ ಶೋಧ ಕಾರ್ಯ ನಡೆದಿದೆ ಬೆಂಗಳೂರಿನಲ್ಲಿ ಸಂಬಂಧಿಕರ ಮನೆ ಬಳಿ ಭವಾನಿ ರೇವಣ್ಣಗಾಗಿ ಎಸ್‌ಐಟಿ ಕಾದು ಕುಳಿತಿದೆ. ಜಾಮೀನು ಸಿಗದೇ ಇದ್ದಲ್ಲಿ ಕೂಡಲೇ ಭವಾನಿ ರೇವಣ್ಣ ಅರೆಸ್ಟ್ ಮಾಡಲು ಸಿದ್ಧತೆ ನಡೆಸಲಾಗಿದೆ. ಮಹಿಳೆ ಕಿಡ್ನಾಪ್ ಕೇಸ್‌ನಲ್ಲಿ ಅವರು ಅರೆಸ್ಟ್‌ ಆಗಲಿದ್ದಾರೆ. ಸಂತ್ರಸ್ತೆ ಕಿಡ್ನಾಪ್ ಪ್ರಕರಣದಲ್ಲಿ ಭವಾನಿ ರೇವಣ್ಣಗೆ ಎಸ್ಐಟಿ ನೋಟಿಸ್‌ ನೀಡಿತ್ತು. ಕೆ ಆರ್ ನಗರದಲ್ಲಿ ಭವಾನಿ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಕೋರ್ಟ್‌ನಲ್ಲಿ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

Latest Videos
Follow Us:
Download App:
  • android
  • ios