Asianet Suvarna News Asianet Suvarna News
breaking news image

ಹಾಸನ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌ಗೆ ಟ್ವಿಸ್ಟ್ ಕೊಟ್ಟ ದೇವರಾಜೇಗೌಡ; ಡಿಕೆಶಿ ಆಮಿಷದ ಆಡಿಯೋ ರಿಲೀಸ್

ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣದ ಸೂತ್ರಧಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಪ್ರಮುಖ ಸೂತ್ರಧಾರಿಗಳು ಎಂದು ವಕೀಲ ದೇವರಾಜೇಗೌಡ ಆರೋಪಿಸಿದ್ದಾರೆ. ಸಂಬಂಧಪಟ್ಟ ಆಡಿಯೋ ರಿಲೀಸ್ ಮಾಡಿದ್ದಾರೆ.

hassan obscene video case dk shivakumar phone call record released by advocate Devaraje gowda sat
Author
First Published May 6, 2024, 5:57 PM IST

ಬೆಂಗಳೂರು (ಮೇ 06): ರಾಜ್ಯಾದ್ಯಂದ ಕಳೆದೊಂದು ವಾರದಿಂದ ಸುದ್ದಿಯಾಗುತ್ತಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣದ ಸೂತ್ರಧಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಪ್ರಮುಖ ಸೂತ್ರಧಾರಿಗಳು ಎಂದು ವಕೀಲ ದೇವರಾಜೇಗೌಡ ಆರೋಪ ಮಾಡಿದ್ದಾರೆ. ಜೊತೆಗೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮಗೆ ಆಮಿಷವೊಡ್ಡಿದ ಸಂಭಾಷಣೆಯ ಆಡಿಯೋವನ್ನು ರಿಲೀಸ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ಗೌಪ್ಯ ಸಭೆ ಮಾಡಲಾಗುತ್ತಿದೆ. ಗೌಪ್ಯ ಸಭೆ ನಡೆಸಿ ಯಾರು ಯಾರನ್ನ ಆರೋಪಿಗಳನ್ನ ಮಾಡಬೇಕು ಅನ್ನೋದನ್ನ ಸೂಚನೆ ಕೊಟ್ಟಿದ್ದಾರೆ. ನನ್ನ ಜೀವನದ ಹೋರಾಟ ಇದ್ದಿದ್ದು ಹಾಸನ ಜಿಲ್ಲೆಯ ಪ್ರಭಾವಿ ರಾಜಕಾರಣಿ ಗಳ ವಿರುದ್ಧವಾಗಿದೆ. ಅದನ್ನೇ ಅಸ್ತ್ರವಾಗಿ ಇಟ್ಟುಕೊಂಡು ಕೆಲ ಕಿಡಿಗೇಡಿ ರಾಜಕಾರಣಿಗಳು ವಾಮ ಮಾರ್ಗದಲ್ಲಿ ಹೋಗಲು ಮುಂದಾಗಿದ್ದಾರೆ.

ನನ್ನ ಸಾಕ್ಷೀ ಹೇಳಿಕೆಯಲ್ಲಿ ಕಹಿ ಸತ್ಯಗಳನ್ನ ವಿಚಾರಣೆ ಸಂದರ್ಭದಲ್ಲಿ ಇಟ್ಟಿದ್ದೇನೆ. ಇದರಲ್ಲಿ ಕೆಲ ಆರೋಪಿಗಳನ್ನ ಬಂಧಿಸಲಾಗಿದೆ. ಅಶ್ಲೀಲ ವಿಡಿಯೋ ತಡೆಯಾಜ್ಞೆ ಇದ್ರು ಕೂಡ, ಅಶ್ಲೀಲ ವಿಡಿಯೋ ಹಂಚಿಕೆ ಮಾಡಿರುವ ಸಂಬಂಧ ದೂರು ದಾಖಲಾಗಿದೆ. ಇದರಲ್ಲಿ ದೇವರಾಜೇಗೌಡ ಅವರದ್ದು ಪಾತ್ರ ಏನು? ಒಬ್ಬ ಕೊಲೆಗಾರ ವಕೀಲನ ಹತ್ರ ಬಂದಾಗ, ನಮ್ಮ ವಕೀಲ ವೃತ್ತಿಯಲ್ಲಿ ಏನು ಮಾಡಬೇಕು ಅದನ್ನ ಮಾಡಿದ್ದೇನೆ. ಕಾರು ಚಾಲಕ ಕಾರ್ತಿಕ್ ನನ್ನ ಕಚೇರಿಗೆ ಬಂದು, ಒಂದು ಪೆನ್ ಡ್ರೈವ್ ಹಾಗೂ ‌ಕೆಲ ಡಾಕ್ಯುಮೆಂಟ್ ಕೊಡ್ತಾರೆ. ಅಶ್ಲೀಲ ವಿಡಿಯೋ ಕ್ಲೀಪ್ ಹಾಗೂ ಪತ್ರಿಕೆ ಪೇಪರ್ ಅನ್ನ ನಮ್ಮ ವಕೀಲರಿಗೆ ತಂದು ಕೊಡ್ತಾರೆ. ಇದಕ್ಕೆ ಪೂರಕವಾದ ಕೆಲ ಡಾಕ್ಯುಮೆಂಟ್ ‌ಕೊಡಿ ಅಂತ ಕೇಳಿದ್ದೇನೆ. ಕಾರ್ತಿಕ್ ‌ನನ್ನ ಮನೆಗೆ ಯಾವಾಗ ಬಂದ? ನನ್ನ ಮನೆಯಲ್ಲಿ ‌ಕುಳಿತು‌ ಮಾತನಾಡಿರುವ ವಿಡಿಯೋ ಸಿಬಿಐಗೆ ಕೊಡ್ತಾ ಇದ್ದೇನೆ ಎಂದು ವಕೀಲ ದೇವರಾಜೇಗೌಡ ವಿಡಿಯೋ ಪ್ರದರ್ಶನ ‌ಮಾಡಿದರು.

ಅಶ್ಲೀಲ ವಿಡಿಯೋ ಕೇಸಲ್ಲಿ ಜೈಲು ಪಾಲಾದ ಗಂಡ, ವಿದೇಶಕ್ಕೆ ಹಾರಿದ ಮಗ; ತಾಯಿ ಭವಾನಿ ರೇವಣ್ಣ ಪರಿಸ್ಥಿತಿ ಹೇಗಿದೆ?

ಪೆನ್‌ಡ್ರೈವ್ ಕೇಸ್ ರೂವಾರಿ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ:  ಸಂಸದ ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಪೆನ್ ಡ್ರೈವ್ ಕೊಟ್ಟ ನಂತರ ಹೆಣ್ಣು ಮಕ್ಕಳ ಅಶ್ಲೀಲ ವಿಡಿಯೋ ಇರುವುದನ್ನು ನಾನು ನೋಡಿದೆ. ಕಾರ್ತಿಕ್ ಸ್ಟೇ ವೆಕೆಟ್ ಮಾಡಿ ಅಂತ ನಮ್ಮ ಬಳಿ ಕೇಳಿದ್ದನು. ರಾಜ್ಯದ ಮಹಾನ್ ನಾಯಕ ಈ ಸರ್ಕಾರದ ರೂವಾರಿ ಆಗಿದ್ದಾನೆ. ಅದಕ್ಕೆ ಸಾಕ್ಷಿ ಇಲ್ಲಿದೆ ಅಂತ ಎಸ್ ಐಟಿ ಅಧಿಕಾರಿಗಳು ಕೇಳ್ತಾರೆ. ಅದಕ್ಕೆ ನಾನು ಈ ಸಾಕ್ಷಿಯನ್ನು ಬಿಡುಗಡೆ ಮಾಡಿದ್ದೇನೆ. ಪೆನ್ ಡ್ರೈವ್ ಯಾವ ರೀತಿ ಬೆಂಗಳೂರಿಗೆ ಬಂತು? ಈ ವಿಚಾರದಲ್ಲಿ ನಾನು ಎಸ್ ಐ ಟಿ ಅಧಿಕಾರಿಗಳಿಗೆ ಹೇಳಿಕೆ ಕೊಟ್ಟಿದ್ದೇನೆ. ಮುಖ್ಯಮಂತ್ರಿಗಳು ಅಧಿಕಾರಿಗಳನ್ನ ಗೌಪ್ಯ ಜಾಗಕ್ಕೆ ಕರೆಸಿಕೊಳ್ಳುತ್ತಾರೆ. ಪೆನ್ ಡ್ರೈವ್ ಕಥಾನಾಯಕ ಕಾಂಗ್ರೆಸ್ ಸರ್ಕಾರವಾಗಿದೆ. ಇದರ ರೂವಾರಿ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ಪೆನ್‌ಡ್ರೈವ್ ವಿಚಾರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಬೆಂಬಲಿಗರ ಮೂಲಕ ‌ನನಗೆ ದೊಡ್ಡ ‌ಮಟ್ಟದಲ್ಲಿ ಆಫರ್ ಕೊಟ್ಟಿದ್ದರು. ಕ್ಯಾಬಿನೆಟ್ ಮಟ್ಟದ ಹುದ್ದೆ ಕೊಡುವುದಾಗಿ ಆಫರ್ ಕೊಟ್ಟಿದ್ದರು. ಮೊದಲು ನನ್ನನ್ನ ಯಾರು ಭೇಟಿ ಮಾಡಿದರು ಅನ್ನೋದನ್ನ ಅದರ ಅಡಿಯೋ ಬಿಡುಗಡೆ ಮಾಡುತ್ತಿದ್ದೇನೆ. ಇದೇ ವೇಳೆ ಎಲ್.ಆರ್. ಶಿವರಾಮೇಗೌಡ ಹಾಗೂ ದೇವರಾಜೇಗೌಡ ಅಡಿಯೋ ಸಂಭಾಷಣೆ ಮಾಡುತ್ತಿದ್ದೇನೆ. ಇಲ್ಲಿ ನೋಡಿ ಆಡಿಯೋ ಕ್ಲಿಪ್ಪಿಂಗ್ ಎಂದು ಹೇಳಿದರು. ಇದೇ ವೇಳೆ ಎಸ್‌ಐಟಿ ತನಿಖೆ ಮೇಲೆ ನನಗೆ ನಂಬಿಕೆ ಇಲ್ಲ. ಇದರ ತನಿಖೆಯನ್ನು ಸಿಬಿಐಗೆ ಕೊಟ್ಟರೆ, ನಾನು ಸಂಪೂರ್ಣ ಆಡಿಯೋ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.

ಮೊಮ್ಮಗನ ಪ್ರಕರಣದಿಂದ ಜರ್ಜರಿತರಾದ ದೇವೇಗೌಡರು! ದೊಡ್ಡಗೌಡರ ಫ್ಯಾಮಿಲಿ ಮೇಲೆ ಅಶ್ಲೀಲ ವ್ಯೂಹದ ಇಂಪ್ಯಾಕ್ಟ್ ಏನು?

ಡಿ.ಕೆ. ಶಿವಕುಮಾರ್ ಆಡಿಯೋ ಡಿಲೀಟ್ ಮಾಡುವಂತೆ ಒತ್ತಡ:  ನನಗೆ ಆಫರ್ ಕೊಟ್ಟಿರುವ ವಿಚಾರವಾಗಿ, ನನ್ನನ್ನ ನೇರವಾಗಿ ಅವರೇ ಕರೆಸಿಕೊಂಡಿದ್ದರು. ಎಲ್.ಆರ್.ಶಿವರಾಮೇಗೌಡ ಹಾಗೂ ಡಿಕೆ ಶಿವಕುಮಾರ್ ಕೇಸ್ ವಿಚಾರವಾಗಿ ನನ್ನ ಬಳಿ ಚರ್ಚೆ ನಡೆಸಿದ್ದರು. ಸಂತ್ರಸ್ಥರು ಬಂದು ದೂರು ಕೊಡ್ತಾರಾ? ಸಂತ್ರಸ್ಥ ಮಹಿಳೆಯರ ಬಗ್ಗೆನೂ ಬಿಟ್ಟರು. ಪೆನ್ ಡ್ರೈವ್ ಲೀಕ್ ಮೂಲಕ ಈಗ ದೇವೇಗೌಡ ಅವರನ್ನ ಫಿಕ್ಸ್ ಮಾಡಲು ನೋಡ್ತಾ ಇದ್ದಾರೆ. ಎಸ್.ಐಟಿ ಅಧಿಕಾರಿಗಳು ನನಗೆ ನೋಟೀಸ್ ಕೊಟ್ಟಿದ್ದಾರೆ. ಡಿ.ಕೆ. ಶಿವಕುಮಾರ್ ‌ಮೇಲೆ ಮಾಡಿದ ಆರೋಪವನ್ನ ಡಿಲೀಟ್ ಮಾಡಿ ಅಂತ ಇಬ್ಬರು ಮಹಿಳಾ ತನಿಖಾಧಿಕಾರಿಗಳು ಹೇಳಿದ್ದಾರೆಂದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios