ಹೋಗೋದಾದ್ರೆ ಮೊದಲೇ ಕಾಂಗ್ರೆಸ್‌ಗೆ ಬರಬಾರದಿತ್ತು: ಜಗದೀಶ್ ಶೆಟ್ಟರ್ ವಿರುದ್ಧ ರಾಯರೆಡ್ಡಿ ಕಿಡಿ!
ಜಗದೀಶ ಶೆಟ್ಟರ್ ಮೊದಲೇ ಕಾಂಗ್ರೆಸ್ ಪಕ್ಷಕ್ಕೆ ಬರಬಾರದಿತ್ತು, ಬಂದರೂ ಈಗ ಹೋಗಬಾರದಿತ್ತು. ಶೆಟ್ಟರ್ ಹಿರಿಯರು ಅವರು ಒಂದು ಸ್ಟ್ಯಾಂಡರ್ಡ್ ಇಟ್ಕೊಬೇಕಿತ್ತು ಇದೇನು ಈ ರೀತಿ ಬರೋದು ತಡಾ ಇಲ್ಲ, ಹೋಗೋದು ತಡಾ ಇಲ್ಲ ಎಂಬಂತೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಕೊಪ್ಪಳ (ಜ.26): ಜಗದೀಶ ಶೆಟ್ಟರ್ ಮೊದಲೇ ಕಾಂಗ್ರೆಸ್ ಪಕ್ಷಕ್ಕೆ ಬರಬಾರದಿತ್ತು, ಬಂದರೂ ಈಗ ಹೋಗಬಾರದಿತ್ತು. ಶೆಟ್ಟರ್ ಹಿರಿಯರು ಅವರು ಒಂದು ಸ್ಟ್ಯಾಂಡರ್ಡ್ ಇಟ್ಕೊಬೇಕಿತ್ತು ಇದೇನು ಈ ರೀತಿ ಬರೋದು ತಡಾ ಇಲ್ಲ, ಹೋಗೋದು ತಡಾ ಇಲ್ಲ ಎಂಬಂತೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಜಗದೀಶ ಶೆಟ್ಟರ್ ದಿಢೀರ್ ಬಿಜೆಪಿ ಪಕ್ಷಕ್ಕ್ಎ ಮರುಸೇರ್ಪಡೆಗೊಂಡಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಆತುರದ ನಿರ್ದಾರ ಕೈಗೊಂಡಿದ್ದಾರೆ. ಬಿಜೆಪಿಯವರು ಬೆಲೆ ಕೊಡದಿದ್ದಾಗ ನಾವು ಗೌರವಿಸಿದೆವು, ವಿಧಾನಸಭಾ ಚುನಾವಣೆಗೆ ಟಿಕೆಟ್ ಕೊಟ್ಟೆವು, ಸೋತಮೇಲೂ ಎಮ್ ಎಲ್ ಸಿ ಮಾಡಿದೆವು ಇನ್ನೇನು ಮಾಡಬೇಕಿತ್ತು. ಕಾಂಗ್ರೆಸ್ ಏನು ಅನ್ಯಾಯ ಮಾಡಿದೆ ಅವರಿಗೆ? ಅವರು ಹೀಗೆ ಮಾಡಿರೋದು ಸರಿಯಲ್ಲ. ಎಲ್ಲಾ ಪಕ್ಷದಲ್ಲೂ ನೈತಿಕ ಮೌಲ್ಯ ತಗ್ಗಿದೆ, ಆದ್ರೆ ಬಿಜೆಪಿಯಲ್ಲೀಗ ನೈತಿಕತೆಯೇ ಇಲ್ಲ ಎಂದರು.
ಜಗದೀಶ ಶೆಟ್ಟರ್ ಬಿಜೆಪಿಗೆ ಮರುಸೇರ್ಪಡೆ ಹಿಂದೆ ಐಟಿ, ಇಡಿ ಕೈವಾಡ! ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಇನ್ನು ಜಗದೀಶ್ ಶೆಟ್ಟರ್ ಬಳಿಕ ಲಕ್ಷ್ಮಣ ಸವದಿ ಕೂಡ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆಂಬ ಮಾತು ಕೇಳಿಬರುತ್ತಿವೆ. ಅವರು ಸಹ ಬಿಜೆಪಿ ಸೇರುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಯರೆಡ್ಡಿ,
ಸವದಿ ಅವರೆ ಹೇಳಿದ್ದಾರೆ ಹೋಗಲ್ಲ ಅಂತ ಯಾರು ಹೋಗ್ತಾಕರೋ ಬಿಡ್ತಾರೊ ಗೊತ್ತಿಲ್ಲ, ಕಾಂಗ್ರೆಸ್ ಬಿಟ್ಟು ಶಾಸಕರು ಹೋಗ್ತಾರೆ ಅನ್ನೋದು ಕೇವಲ ಊಹಾಪೋಹ. ನಮ್ಮ ಶಾಸಕರ ಸಂಖ್ಯಾಬಲ ಹೆಚ್ಚಾಗಿದೆ. ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಸರ್ಕಾರ ಬಿಳಿಸೋಕೆ ಯಾರಿಂದಲೂ ಸಾಧ್ಯ ಇಲ್ಲ ಎಂದರು.
ನಮ್ಮ ಸರ್ಕಾರ ಬಜೆಟ್ ತಯಾರಿ ನಡೆಸುತ್ತಿದೆ. ಅಧಿಕಾರಿಗಳು ಏನು ಮಾಡಬೇಕು ಎಂಬ ಮಾಹಿತಿ ಕೊಟ್ಟಿದ್ದಾರೆ. ಇನ್ನು ಹಲವು ಇಲಾಖೆಗಳ ಸಭೆ ಕರೆಯಲಾಗಿದೆ. ಇದರ ನಂತರ ಬಜೆಟ್ ತೀರ್ಮಾನ ಮಾಡಲಾಗುತ್ತದೆ ಎಂದರು.
ಲೋಕಸಭಾ ಚುನಾವಣೆ 2024: ಜಗದೀಶ ಶೆಟ್ಟರ್ ಬೆಳಗಾವಿಯಿಂದ ಅಖಾಡಕ್ಕೆ?, ಟಿಕೆಟ್ ಆಕಾಂಕ್ಷಿಗಳಲ್ಲಿ ತೀವ್ರ ನಿರಾಸೆ
ಇನ್ನು ಗ್ಯಾರಂಟಿ ಯೋಜನೆಯಿಂದ ಯಾವುದೇ ಆರ್ಥಿಕತೆ ಕುಂಠಿತ ಆಗಿಲ್ಲ. ನಮ್ಮ ಪಕ್ಷ ತೀರ್ಮಾನ ಮಾಡಿರೋದರಲ್ಲಿ ಯಾವುದೇ ತಪ್ಪಿಲ್ಲ. ಎಲ್ಲವೂ ಜನರಿಗೆ ಒಳ್ಳೆಯದಾಗಿದೆ. ಯೋಜನೆ ಬಗ್ಗೆ ಯಾರೇ ಟೀಕೆ ಟಿಪ್ಪಣಿ ಮಾಡಿದ್ರೂ ತಲೆಕೆಡಿಸಿಕೊಳ್ಳಲ್ಲ ಯಾವುದೇ ಕೊರತೆ ಇಲ್ಲ. ಐದೂ ವರ್ಷವೂ ಗ್ಯಾರಂಟಿ ಯೋಜನೆ ಮುಂದುವರಿಸುತ್ತೇವೆ ನಿಲ್ಲಿಸಲ್ಲ ಎಂದರು. ಮುಂದೆ ರಾಜಕೀಯವಾಗಿ ಯಾರು ಏನೇ ಪ್ರಯತ್ನ ಮಾಡಿದ್ರೂ ಯೋಜನೆ ನಿಲ್ಲೋದಿಲ್ಲ. ಯಾರೇ ಅಧಿಕಾರಕ್ಕೆ ಬಂದ್ರೂ ಇದನ್ನ ಬಂದ್ ಮಾಡಲು ಆಗಲ್ಲ. ಬಂದ್ ಮಾಡಿದ್ರೆ ಜನ ಸುಮ್ಮನೆ ಇರ್ತಾರಾ? ಜನರ ಹಣ ಜನರಿಗೆ ಕೊಟ್ಟರೆ ತಪ್ಪೇನಿದೆ? ಎಲ್ಲ ಅಭಿವೃದ್ಧಿ ಕೆಲಸಗಳಿಗೂ ಹಣ ಕೊಡ್ತೆವೆ. ನಮ್ಮಲ್ಲಿ ಹೆಚ್ಚಿನ ಹಣದ ಭಾರ ಇದೆ ಅದಕ್ಕೆ ಪರಿಹಾರ ಮಾಡುತ್ತೇವೆ. ಪ್ರತಿ ರೈತರಿಗೂ ಎರಡು ಸಾವಿರ ರೂಪಾಯಿ ಪರಿಹಾರ ಕೊಟ್ಟಿದ್ದೇವೆ. ಬರಪರಿಹಾರಕ್ಕೆ ಕೇಂದ್ರ ಸರ್ಕಾರ ಒಂದು ರೂಪಾಯಿ ಕೊಟ್ಟಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.