Asianet Suvarna News Asianet Suvarna News

6ನೇ ತರಗತಿಯ ವಿವಾದಿತ ಪಾಠ ರದ್ದು: ಸುರೇಶ್‌ ಕುಮಾರ್‌

6ನೇ ತರಗತಿಯ ಪುಸ್ತಕದಲ್ಲಿರುವ ವಿವಾದಿತ ಪಾಠವನ್ನು ತೆಗೆದು ಹಾಕಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

Controversial content in sixth standard text will not be  continue
Author
bengaluru, First Published Aug 26, 2020, 11:11 AM IST

ಉಡುಪಿ (ಆ.26) : ರಾಜ್ಯದ 6ನೇ ತರಗತಿಯ ಸಮಾಜವಿಜ್ಞಾನ ಪಠ್ಯಪುಸ್ತಕದಲ್ಲಿ ಹಿಂದುಗಳ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗುವಂತಿರುವ ಪಾಠವನ್ನು ಕೈಬಿಡಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಈ ಪಾಠದ ಬಗ್ಗೆ ಉಡುಪಿ ಶ್ರೀಕೃಷ್ಣಮಠದ ಈಶಪ್ರಿಯತೀರ್ಥರು ಕೂಡ ತಮ್ಮ ಆಕ್ಷೇಪವನ್ನು ಆಡಿಯೋ ಮೂಲಕ ಸಚಿವರಿಗೆ ಕಳುಹಿಸಿದ್ದರು.

ಈ ಪಾಠದಲ್ಲೇನಿದೆ?: ‘ಉತ್ತರ ವೇದ ಕಾಲದಲ್ಲಿ ಯಾಗ-ಯಜ್ಞಗಳ ಹೆಸರಲ್ಲಿ ಕೃಷಿಗೆ ನೆರವಾಗುತ್ತಿದ್ದ ಪ್ರಾಣಿಗಳನ್ನು ಕೊಲ್ಲಲಾಗುತ್ತಿತ್ತು. ಇದರಿಂದ ಆಹಾರ ಉತ್ಪಾದನೆ ಕುಂಠಿತವಾಯಿತು. 

ಅಬ್ಬೋ..! ಐಎಎಸ್ ಸಂದರ್ಶನದಲ್ಲಿ ಹೀಗೂ ಪ್ರಶ್ನೆ ಕೇಳ್ತಾರಾ..?

ಯಾಗ-ಯಜ್ಞಗಳಿಂದ ಮಾತ್ರ ಮುಕ್ತಿ ಸಾಧ್ಯ ಎಂಬ ನಂಬಿಕೆ ಜನರಲ್ಲಿ ಮನೆ ಮಾಡಿತ್ತು. ಸಂಸ್ಕೃತವೆಂಬ ಪುರೋಹಿತ ಭಾಷೆಯಲ್ಲಿ ಈ ಆಚರಣೆಗಳು ನಡೆಯುತ್ತಿದ್ದು, ಸರಳ ಮಾರ್ಗಗಳ ಮೂಲಕ ಮುಕ್ತಿ ಹೊಂದಲು ಹೊಸ ಧರ್ಮವನ್ನು ಜನ ಅಪೇಕ್ಷಿಸುತ್ತಿದ್ದರು’ ಎಂದು ಪ್ರತಿಪಾದಿಸಲಾಗಿದೆ.

ಅ. 1 ರಿಂದ ಪದವಿ, ಸ್ನಾತಕೋತ್ತರ ಪದವಿ ಪ್ರಾರಂಭಕ್ಕೆ ಸಿದ್ಧತೆ; ಹೀಗಿರಲಿವೆ ತರಗತಿಗಳು

"

Follow Us:
Download App:
  • android
  • ios