ಸಿಟಿ ರವಿ ಅವರು ಮತೀಯ ಆಧಾರದ ಮೀಸಲಾತಿಯನ್ನು ವಿರೋಧಿಸಿದ್ದು, ಇದು ಸಂವಿಧಾನ ಮತ್ತು ಅಂಬೇಡ್ಕರ್ ಚಿಂತನೆಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಹುಬ್ಬಳ್ಳಿ ಪೊಲೀಸ್ ಠಾಣೆ ದಾಳಿಯ ಆರೋಪಿಗಳ ಕೇಸ್ ಹಿಂಪಡೆದಿರುವ ಕಾಂಗ್ರೆಸ್ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಬೆಂಗಳೂರು (ಮಾ.6): ಮತೀಯ ಆಧಾರದ ಮೇಲೆ ಮೀಸಲಾತಿ ಕೊಡುವುದು ಸಂವಿಧಾನ ವಿರೋಧಿ, ಅಂಬೇಡ್ಕರ್ ಚಿಂತನೆಗೆ ವಿರುದ್ಧವಾದುದ್ದ ಎಂದು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ವಿಚಾರವಾಗಿ ಇಂದು ಕೆಂಗಲ್ ಗೇಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಟಿ ರವಿ ಅವರು, ನಮ್ಮ ಭಾರತದ ಸಂವಿಧಾನದ ರಚನೆ ವೇಳೆಯೇ ಮತೀಯ ಆಧಾರದ ಮೇಲೆ ಮೀಸಲಾತಿ ಬಗ್ಗೆ ಚರ್ಚೆ ನಡೆಯಿತು. ಆಗ ಮುಸ್ಲಿಮರಿಗೆ ಮತೀಯ ಆಧಾರದ ಮೀಸಲಾತಿ ಕೊಡೊ ಬಗ್ಗೆ ಚರ್ಚೆ ನಡೆದಾಗ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಎಳೆಎಳೆಯಾಗಿ ವಿವರಿಸುತ್ತಾರೆ. ಮತೀಯ ಆಧಾರದ ಮೇಲೆ ಮೀಸಲಾತಿಗೆ ಅಂಬೇಡ್ಕರ್ ಒಪ್ಪಿಕೊಳ್ಳುವುದಿಲ್ಲ. ಆದರೆ ಇವತ್ತು ಮಾತೆತ್ತಿದರೆ ಸಂವಿಧಾನ, ಅಂಬೇಡ್ಕರ್ ಹೆಸರು ಹೇಳುವವರು ಸಂವಿಧಾನಕ್ಕೂ, ಅಂಬೇಡ್ಕರ್ ಚಿಂತನೆಗೂ ವಿರುದ್ಧವಾಗಿ ಮತೀಯ ಆಧಾರದ ಮೇಲೆ ಮೀಸಲಾತಿ ಕೊಡಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಸಂವಿಧಾನ, ಅಂಬೇಡ್ಕರ್ ವಿರೋಧಿಗಳು, ಜಿನ್ನಾನ ಸಮರ್ಥನೆ ಮಾಡೋರು, ಪಾಕಿಸ್ತಾನ ಸಮರ್ಥನೆ ಮಾಡೋರು ಮಾತ್ರ ಇದನ್ನ ಪ್ರಸ್ತಾಪಿಸುತ್ತಾರೆ. ಪಾಕಿಸ್ತಾನದ ಅಪ್ಪಂದಿರಿಗೆ ಹುಟ್ಟಿರೋರು ಮಾತ್ರ ಇಂಥ ಯೋಚನೆ ಮಾಡ್ತಾರೆ. ಸಂವಿಧಾನದ ಮೇಲೆ ನಂಬಿಕೆ ಇರೋರು ಯಾರೂ ಇದನ್ನು ಯೋಚಿಸಲ್ಲ, ಪ್ರಸ್ತಾಪಿಸಲ್ಲ ಎಂದು ಕಟುವಾಗಿ ಟೀಕಿಸಿದರು.
ಇದನ್ನೂ ಓದಿ: SDPI ಮುಖ್ಯಸ್ಥ ಎಂಕೆ ಫೈಜ್ ಬಂಧನ: 6 ದಿನ ಇಡಿ ವಶಕ್ಕೆ | ಭಾರತದಲ್ಲಿ ಭಯೋತ್ಪಾದಕ ದಾಳಿಗೆ ಸಂಚು, ಆಘಾತಕಾರಿ ಮಾಹಿತಿ ಬಹಿರಂಗ!
ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ ಆರೋಪಿಗಳ ಕೇಸ್ ವಾಪಸ್:
ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ ಆರೋಪಿಗಳ ಕೇಸ್ ವಾಪಸ್ ಪಡೆದಿರೋದು ಕೇವಲ ರಾಜಕೀಯ ಲಾಭ, ಓಟು ಬ್ಯಾಂಕ್‌ಗೋಸ್ಕರ, ಕಮ್ಯುನಲ್ ಕ್ರಿಮಿನಲ್‌ಗಳಿಗೆ ಸಪೋರ್ಟ್ ಮಾಡುವ ರಾಜನೀತಿ ದೇಶಕ್ಕೆ ಅಪಾಯಕಾರಿ. ಇದನ್ನು ಕಾಂಗ್ರೆಸ್ ಮುಂದುವರಿಸಿದೆ. ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿರೋರು ದೇಶ ಪ್ರೇಮಿಗಳಾ? ರೈತರ ಅಥವಾ ಕನ್ನಡ ಪ್ರೇಮಿಗಳಾ? ಅವರು ಮತಾಂಧರು. ತಮ್ಮ ಮತೀಯ ವಿಚಾರಕ್ಕಾಗಿ ಸಣ್ಣ ಸಣ್ಣ ವಿಷಯಕ್ಕೂ ಕೋಮುಗಲಭೆ ಎಬ್ಬಿಸುವ ಕ್ರಿಮಿನಲ್ಸ್. ಪೊಲೀಸ್ ಠಾಣೆ ಮೇಲೆಯೇ ಬೆಂಕಿ ಹಾಕಲು ಬರ್ತಾರೆ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡ್ತಾರೆ. ಅಂತವರ ಕೇಸ್ ವಾಪಸ್ ತೆಗೆದುಕೊಳ್ಳುವ ಕೆಲಸ ಕಾಂಗ್ರೆಸ್ ಮಾಡ್ತಿದೆ ಎಂದರೆ ಮತಾಂಧರಿಗಿಂತ ಕಾಂಗ್ರೆಸ್ ದೇಶಕ್ಕೆ ಎಂಥ ಅಪಾಯಕಾರಿ ಅನ್ನೋದು ಊಹಿಸಬಹುದು.
ಇವರಿಗೆ ಯಾವುದರಲ್ಲಿ ಹೊಡಿಬೇಕು?
ಠಾಣೆಗೆ ಬೆಂಕಿ ಹಚ್ಚಿದ ಮತಾಂಧರ ಕೇಸ್ ವಾಪಸ್ ಪಡೆಯುತ್ತಾರೆಂದರೆ ಇವರಿಗೆ ಯಾವುದರಲ್ಲಿ ಹೊಡಿಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಸಿಟಿ ರವಿ, ಇವರಿಗೆ(ಕಾಂಗ್ರೆಸ್ ಸರ್ಕಾರ) ಶಬ್ದಗಳಿಂದ ಖಂಡಿಸಿದರೆ ಸಾಕಾಗೋದಿಲ್ಲ. ಜನ ಮುಖಕ್ಕೆ ಮಂಗಳಾರತಿ ಮಾಡಬೇಕು. ಕ್ಯಾಕರಿಸಿ ಉಗಿಬೇಕು, ಇವರ ಕೆಟ್ಟ ಮನಸ್ಥಿತಿಯ ರಾಜಕಾರಣಕ್ಕೆ ಇದೊಂದು ನಿದರ್ಶನ. ಮತಾಂಧರಿಗೆ ಕುಮ್ಮಕ್ಕು ನೀಡ್ತಿರೋದೇ ಕಾಂಗ್ರೆಸ್. ಇವರ ಕುಮ್ಮಕ್ಕಿನಿಂದಲೇ ಪೊಲೀಸರ ಭಯವೂ ಇಲ್ಲದೆ ಠಾಣೆಗಳಿಗೆ ನುಗ್ಗಿ ಬೆಂಕಿ ಹಚ್ತಾರೆ, ಪೊಲೀಸರ ಮೇಲೆ ಕಲ್ಲು ತೂರುತ್ತಿದ್ದಾರೆ. ಮತಾಂಧರಿಗಲ್ಲ ಮೊದಲು ಈ ಸರ್ಕಾರ ಜನ ಕ್ಯಾಕರಿಸಿ ಉಗಿಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ರಂಜಾನ್ ಹೆಸರಲ್ಲಿ ಹಣ ಸಂಗ್ರಹಿಸಿ ಭಾರತದಲ್ಲಿ ಭಯೋತ್ಪಾದಕ ಕೃತ್ಯ, SDPI ರಾಷ್ಟ್ರೀಯ ಅಧ್ಯಕ್ಷ ಅರೆಸ್ಟ್
ಹಾಲಿನ ದರ ಏರಿಕೆ ಪ್ರಸ್ತಾಪ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದುವರೆಗೂ 656 ಕೋಟಿ ಹಣ ಹಾಲು ಉತ್ಪಾದಕರ ಸಬ್ಸಿಡಿ ಬ್ಯಾಲೆನ್ಸ್ ಇಟ್ಕೊಂಡಿದ್ದಾರೆ. ಈ ಸರ್ಕಾರ ಬಂದ ಮೇಲೆ ಹಾಲಿನ ದರ 5 ರೂಪಾಯಿ ಹೆಚ್ಚಿಸಿದರು. ಬೆಲೆ ಏರಿಸ್ತಾರೆ ಗ್ರಾಹಕರಿಗೆ ಹೊರೆ ಮಾಡ್ತಾರೆ. ಬೆಲೆ ಹೆಚ್ಚಿಸಿ ಗ್ರಾಹಕರಿಗೆ ಮತ್ತು ಉತ್ಪಾದಕರಿಗೆ ಬರೆ ಹಾಕೋದಾದರೆ ನಮ್ಮ ವಿರೋದ. ಆದರೆ ಹಾಲು ಉತ್ಪಾದಕರಿಗೆ ಕೊಡ್ತಾ ಇಲ್ಲ. ಬೆಲೆ ಏರಿಕೆ ಮಾಡಿ ಹಾಲು ಉತ್ಪಾದಕರಿಗೆ ಡೈರೆಕ್ಟರ್ ಟ್ರಾನ್ಸ್‌ಪರ್ ಮಾಡೊದಾದ್ರೆ ನಮ್ಮ ಅಭ್ಯಂತರವಿಲ್ಲ ಎಂದರು.
