Karnataka Govt :ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಎಚ್ಚರಿಕೆ

  •  ಬಿಜೆಪಿ ಶಾಸಕರು ಇರುವ ಕ್ಷೇತ್ರಗಳು ಮಾತ್ರ ಬೆಂಗಳೂರು ಅಂತ ಸಿಎಂ ಅಂದುಕೊಂಡಿದ್ದಾರೆ
  • ಬೆಂಗಳೂರು  28 ವಿಧಾನ ಸಭಾ ಕ್ಷೇತ್ರಗಳನ್ನ ಒಳಗೊಂಡಿದೆ. ಇದನ್ನು ಗಮನದಲ್ಲಿ ಇಟ್ಟುಕೊಳ್ಳಲಿ 
Congress Leader Ramalinga reddy warns Karnataka Govt On Fund  Release issue snr

 ಬೆಂಗಳೂರು (ಜ.07):  ಬೆಂಗಳೂರಿನಲ್ಲಿ (Bengaluru) ಭಾರಿ ಮಳೆಗೆ (Heavy Rain) ಅಪಾರ ಹಾನಿಯಾಗಿದೆ.  ಬಿಜೆಪಿ ಶಾಸಕರು (BJP MLA) ಇರುವ ಕ್ಷೇತ್ರಗಳು ಮಾತ್ರ ಬೆಂಗಳೂರು ಅಂತ ಸಿಎಂ ಅಂದುಕೊಂಡಿದ್ದಾರೆ. ಬೆಂಗಳೂರು  28 ವಿಧಾನ ಸಭಾ ಕ್ಷೇತ್ರಗಳನ್ನ ಒಳಗೊಂಡಿದೆ. ಇದನ್ನು ಗಮನದಲ್ಲಿ ಇಟ್ಟುಕೊಳ್ಳಲಿ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಅಸಮಾಧಾನ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಸರ್ಕಾರ ತಾರತಮ್ಯದ ಬಗ್ಗೆ ವಾಕ್ ಪ್ರಹಾರ ನಡೆಸಿದರು.

ನಿನ್ನೆ ನಡೆದ ಕ್ಯಾಬಿನೆಟ್ ನಲ್ಲಿ (Karnataka Cabinet) 1500 ಕೋಟಿ ರು. ಮಂಜೂರಿಗೆ ಸಿಎಂ ಅವಕಾಶ ನೀಡಿದ್ದಾರೆ. ನನ್ನ ಕ್ಷೇತ್ರಕ್ಕೆ ಅಭಿವೃದ್ಧಿ ವಿಚಾರಕ್ಕೆ ಪತ್ರ ಬರೆದಿದ್ದೆ. 298 ಕೆಲಸಗಳಿಗೆ 1500 ಕೋಟಿ ರು. ಬಿಡುಗಡೆ ಮಾಡಿದ್ದಾರೆ.  ಇದರಲ್ಲಿ ಭಾರಿ ತಾರತಮ್ಯ ಮಾಡಿದ್ದಾರೆ.  ಕಾಂಗ್ರೆಸ್ ನ (Congress) ಒಂಬತ್ತು ಶಾಸಕರಿಗೆ 248 ಕೋಟಿ ರು. ಬಿಜೆಪಿ (BJP) 15 ಶಾಸಕರಿಗೆ 1100 ಕೋಟಿ ರು. ಕೊಟ್ಟಿದ್ದಾರೆ. ಜೆಡಿಎಸ್ (JDS) ಶಾಸಕರಿಗೆ 125 ಕೋಟಿ ಕೊಟ್ಟಿದ್ದಾರೆ. ಈ ಮೂಲಕ ಅನುದಾನ ಹಂಚಿಕೆಯಲ್ಲಿ ಸಿಎಂ ಭಾರಿ ತಾರತಮ್ಯ ಮಾಡಿದ್ದಾರೆ  ಎಂದರು.

ಬಿಟಿಎಂ (BTM) ಮತ್ತು ಜಯನಗರಕ್ಕೆ (Jayanagara) ಒಂದೇ ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲ.  ಯಾವ ಕಾರಣದಿಂದ ಬಿಡುಗಡೆ ಮಾಡಿಲ್ಲ.  ಸೋಮವಾರದ ಒಳಗೆ ಹಣ ಬಿಡುಗಡೆ ಮಾಡದಿದ್ದರೆ ಬಿಬಿಎಂಪಿ (BBMP) ಮುಂದೆ ಇಬ್ಬರೇ ಶಾಸಕರು ಪ್ರತಿಭಟನೆ ಮಾಡುತ್ತೇವೆ. ಬುಧವಾರ ಮುಖ್ಯಮಂತ್ರಿ ಕಚೇರಿ ಎದುರು ಪ್ರತಿಭಟನೆ ಮಾಡುತ್ತೇವೆ.  ಬೇರೆ ಶಾಸಕರು ಭಾಗಿಯಾಗಲ್ಲ ಅವರು ಬಂದರೆ ನಾನು ಬೇಡ ಎಂದು ಹೇಳುವುದಿಲ್ಲ. ನಾವು ಇಬ್ಬರೇ ಶಾಸಕರು ರಸ್ತೆಯಲ್ಲಿ (Road) ಕೂತು ಪ್ರತಿಭಟನೆ ಮಾಡುವುದಂತೂ ಖಚಿತ ಎಂದು ರಾಮಲಿಂಗಾ ರೆಡ್ಡಿ ಸರ್ಕಾರವನ್ನು ಎಚ್ಚರಿಸಿದ್ದಾರೆ.

ಸಚಿವ ಅಶ್ವತ್ಥ್‌ರನ್ನು ಕೈ ಬಿಡಿ ಎಂದ ಮುಖಂಡ :  ಗಂಡಸ್ತನ ತೋರ್ಸೋ, ಹೋಗ್ರೋ, ಬನ್ರೋ ಇದು ಒಬ್ಬ ಉಪ ಮುಖ್ಯಮಂತ್ರಿ ಆಗಿದ್ದವರು, ಹಾಲಿ ಮಂತ್ರಿ ಆಗಿರುವವರು ಆಡುವ ಮಾತುಗಳಾ ಇವು. ಇಂತಹ ಮಾತುಗಳನ್ನು ಆಡಿರುವ ಸಚಿವ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ ಅವರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ(Ramalinga Reddy) ಆಗ್ರಹಿಸಿದ್ದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು(BJP) ಹೋರಾಟ ಮಾಡಲಿ ಬೇಡ ಎನ್ನಲ್ಲ. ನಾವೂ ಪ್ರತಿಭಟನೆ ಮಾಡುತ್ತೇವೆ. ಒಬ್ಬ ಮಂತ್ರಿಯಾಗಿರುವ ಅಶ್ವತ್ಥ ನಾರಾಯಣ ಅವರು ಈ ರೀತಿಯ ಮಾತುಗಳನ್ನು ಆಡುವುದು ಎಷ್ಟು ಸರಿ? ಬಿಜೆಪಿಯೊಳಗೆ ಗೂಂಡಾಗಳಿದ್ದಾರೆ, ಬಿಜೆಪಿಯವರಿಗೆ ಮಾನ, ಮರ್ಯಾದೆ ಇಲ್ಲ. ಇದೊಂದು ಜಂಗಲ್‌ ರಾಜ್ಯದ ರೀತಿಯಲ್ಲಿ ಆಗಿದೆ. ಈಗಾಗಲೇ ಪರಿಷತ್‌ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಮುಂಬರುವ ಚುನಾವಣೆಯಲ್ಲೂ ಠೇವಣಿ ಕಳೆದುಕೊಳ್ಳುತ್ತಾರೆ ಎಂದಿದ್ದರು.

Ramanagara Row: 'ನಾವು ಬಿಜೆಪಿ, ಆಡೋದೇ ಹಿಂಗೆ, ಗಂಡಸ್ತನವಿದ್ರೆ ಬನ್ನಿ ಅಂತಾರೆ'

ಹಾಗಾದರೆ ಸಂಸದ ಡಿ.ಕೆ.ಸುರೇಶ್‌ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, ಮೊದಲು ಏಕವಚನದಲ್ಲಿ ಮಾತನಾಡಿದ್ದ ಸಚಿವರು, ಹಾಗೆ ಮಾತನಾಡಿದರೆ ಯಾರಾದ್ರೂ ಸುಮ್ಮನೆ ಇರ್ತಾರಾ? ಪ್ರಚೋದನೆ ಮಾಡಿದಂತಾಗುವುದಿಲ್ಲವಾ. ನಾಚಿಕೆ ಆಗಬೇಕು ಅವರಿಗೆ ಎಂದರು.

ರಾಮನಗರ ಜಗಳ, ಡಿಕೆ ಸುರೇಶ್‌ಗೆ ಧನ್ಯವಾದ ಹೇಳಿದ ಸಿಟಿ ರವಿ

ಕಾಂಗ್ರೆಸ್ ಸಂಸದ ಡಿಕೆ ಸುರೇಶ್ (DK Suresh) ಹಾಗೂ ಸಚಿವ ಡಾ ಸಿಎನ್ ಅಶ್ವತ್ಥ್ ನಾರಾಯಣ(Dr CN Ashwath Narayan) ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ.
ಇನ್ನುಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ(CT Ravi) ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಸಂಸ್ಕೃತಿಯನ್ನು ರಾಜ್ಯದ ಜನರಿಗೆ ಪರಿಚಯಿಸಿದ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರಿಗೆ ಧನ್ಯವಾದ ಎಂದು ಟಾಂಗ್ ಕೊಟ್ಟಿದ್ದರು.

Latest Videos
Follow Us:
Download App:
  • android
  • ios