Asianet Suvarna News Asianet Suvarna News

ಕೆಎಸ್‌ಆರ್‌ಟಿಸಿಯಿಂದ ಅಶ್ವಮೇಧ ಕ್ಲಾಸಿಕ್ ಬಸ್, ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ, ಇದರ ವಿಶೇಷತೆ ಏನು?

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಐರಾವತ ಹಾಗೂ ಅಂಬಾರಿ ಬಳಿಕ ಇದೀಗ ಹೊಸ ವಿನ್ಯಾಸದ ‘ಅಶ್ವಮೇಧ’ ಎಂಬ ಹೊಸ ಬಸ್‌ಗಳನ್ನು ಜನತೆಗೆ ಅರ್ಪಣೆ ಮಾಡಿದೆ. ಬಸ್‌ ವಿಶೇಷತೆ ಬಗ್ಗೆ ಸಂಫೂರ್ಣ ಮಾಹಿತಿ ಇಲ್ಲಿದೆ.

CM Siddaramaiah launched KSRTC news Ashwamedha buses in Karnataka gow
Author
First Published Feb 5, 2024, 11:26 AM IST

ಬೆಂಗಳೂರು (ಫೆ.5): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಐರಾವತ ಹಾಗೂ ಅಂಬಾರಿ ಬಳಿಕ ಇದೀಗ ಹೊಸ ವಿನ್ಯಾಸದ ‘ಅಶ್ವಮೇಧ’ ಎಂಬ ಹೊಸ ಬಸ್‌ಗಳನ್ನು ಜನತೆಗೆ ಅರ್ಪಣೆ ಮಾಡುತ್ತಿದ್ದು, ಸೋಮವಾರ 100 ಅಶ್ವಮೇಧ ಬಸ್ಸುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಟೇಪ್ ಕಟ್ ಮಾಡುವ ಮೂಲಕ ಕೆಎಸ್ಆರ್ಟಿಸಿ ಬಸ್ ಗೆ ಚಾಲನೆ ನೀಡಿದ ಸಿಎಂ ಬಳಿಕ ಬಸ್‌ಗಳ ಪರಿಶೀಲನೆ ನಡೆಸಿದರು.

ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ನಲ್ಲಿ ಅಶ್ವಮೇಧ ಕ್ಲಾಸಿಕ್ ಬಸ್ ಗಳನ್ನು ಲೋಕಾರ್ಪಣೆ ಮಾಡಲಾಯ್ತು.800 ಬಸ್ ಗಳ ಪೈಕಿ 100 ಬಸ್ ಗಳಿಗೆ ವ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಡಿಸಿಎಂ ಡಿಕೆ ಶಿವಕುಮಾರ್, ಕೆಎಸ್ಆರ್ಟಿಸಿ ನಿಗಮ ಮಂಡಳಿ ಅಧ್ಯಕ್ಷ ಗುಬ್ಬಿ ಶ್ರೀನಿವಾಸ್,  ಎನ್.ವಿ.ಪ್ರಸಾದ್,  ಕೆಎಸ್‌ಆರ್‌ಟಿಸಿ ಎಂಡಿ ಅನ್ಬುಕುಮಾರ್ ಭಾಗಿಯಾಗಿದ್ದರು.

ಮಾರ್ಚ್ ಅಂತ್ಯಕ್ಕೆ 5 ಸಾವಿರ ಬಸ್ ಸಾರ್ವಜನಿಕ ಸೇವೆಗೆ: ಸಚಿವ ರಾಮಲಿಂಗಾರೆಡ್ಡಿ

ಕಾರ್ಯಕ್ರಮದ ಬಳಿಕ ಮಾತನಾಡಿದ  ಸಿಎಂ ಸಿದ್ದರಾಮಯ್ಯ ಅವರು , ಕೆಎಸ್ಆರ್ಟಿಸಿ 1 ಸಾವಿರ ಬಸ್ ಸೇರ್ಪಡೆ ಮಾಡುತ್ತಿದೆ. ಇವತ್ತು 100 ಬಸ್ ಗಳನ್ನು ಬಿಡುಗಡೆ ಮಾಡುತ್ತಿದ್ದೇವೆ. ಕೋವಿಡ್ ಸಂದರ್ಭದಲ್ಲಿ 3800 ಬಸ್ ಗಳನ್ನ ಸ್ಥಗಿತಗೊಳಿಸಿದ್ರು. ಇದ್ರಿಂದ ಬಸ್ ಗಳಲ್ಲಿ ಓಡಾಟ ನಡೆಸುತ್ತಿದ್ದವರಿಗೆ ತೊಂದರೆಯಾಯ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ  ಈ ವರ್ಷ 5800 ಬಸ್ ಗಳನ್ನ ರಸ್ತೆ ಸಾರಿಗೆ  ನಿಗಮಕ್ಕೆ ಸೇರ್ಪಡೆ ಮಾಡಿದ್ದೇವೆ. ಚುನಾವಣಾ ಪೂರ್ವದಲ್ಲಿ ಮಹಿಳಾ ಸಬಲೀಕರಣಕೊಸ್ಕರ ಉಚಿತ ಪ್ರಯಾಣ ಅವಕಾಶ ಮಾಡಿಕೊಡುತ್ತೇವೆ ಎಂದಿದ್ದೆವು. ಅಧಿಕಾರಕ್ಕೆ ಬಂದ ನಂತ್ರ ಜೂನ್ 11 ರಂದು ಇದೇ ಜಾಗದಲ್ಲಿ ಶಕ್ತಿ ಯೋಜನೆಯನ್ನ ಜಾರಿಗೆ ತಂದಿದ್ದೆವು. 146 ಕೋಟಿ ಮಹಿಳೆಯರು ಶಾಲಾ ವಿಧ್ಯಾರ್ಥಿನಿಯರು ಪ್ರಯಾಣ ಮಾಡಿದ್ದಾರೆ.

ನಮ್ಮ ಸರ್ಕಾರನ್ನ ವಿರೋಧ ಪಕ್ಷದವರು ಟೀಕೆ ಮಾಡುತ್ತಾರೆ. 146 ಕೋಟಿ ಮಹಿಳೆಯರು ಪ್ರಯಾಣ ಮಾಡುತ್ತಾರೆ ಅಂದ್ರೆ ಅವರು ಟಿಕೆಟ್ ತೆಗೆದುಕೊಳ್ಳು ಹಣ ಉಳಿತಾಯ ಆಗಿಲ್ವ? ಬೆಲೆ ಹೆಚ್ಚಳವಾಗಿದೆ ಹಣದುಬ್ಬರವಾಗಿದೆ ಕೊಂಡುಕೊಳ್ಳುವ ಶಕ್ತಿಯನ್ನ ಹೆಚ್ಚು ಮಾಡ್ತೇವೆ ಎಂದಿದ್ದೆವು. ಎಲ್ಲ ಜಾತಿ ಧರ್ಮ ಹಾಗೂ ಎಲ್ಲ ಪಕ್ಷದ ಬಡವರಿಗೆ ಉಚಿತ ಪ್ರಯಾಣವಿದೆ. ಹಿಂದೆ ಯಾವುದಾದರೂ ಸರ್ಕಾರ ಮಾಡಿತ್ತಾ? 1 ಕೋಟಿ 17 ಲಕ್ಷ ಮಹಿಳಾ ಯಜಮಾನಿಗೆ 2 ಸಾವಿರ ಕೊಡುವಂತದ್ದು ಇತ್ತ? ಹಾಗಿದ್ರೆ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಬೇಕು ಅಲ್ವ ಎಂದರು.

ವಿದ್ಯಾರ್ಥಿಗಳ ಓದುವ ಆಸಕ್ತಿ ಕುಂದಿಸಿದ ಶಕ್ತಿ ಯೋಜನೆ..!

ಬಿಜೆಪಿ ಮಾತು ಕೇಳಬೇಡಿ. ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ನಾವು ಗ್ಯಾರಂಟಿ ಜಾರಿ ಮಾಡಿದಾಗ ರಾಜ್ಯ ದಿವಾಳಿ ಆಗುತ್ತೆ ಅಂದಿದ್ರು. ಈಗ ಅವರು ಬೇರೆ ರಾಜ್ಯದಲ್ಲಿ ಗ್ಯಾರಂಟಿ ಜಾರಿ ಮಾಡುತ್ತಿದ್ದಾರೆ. ಮೋದಿ ಗ್ಯಾರಂಟಿ ಅಂತ ಶುರು ಮಾಡಿದ್ದಾರೆ. ಕಳೆದ 10 ವರ್ಷದಿಂದ ಮೋದಿ ಅಧಿಕಾರದಲ್ಲಿದ್ದಾರೆ ಏನು ಮಾಡಿದ್ದಾರೆ. ಕ್ಯೂ ನಯಿ ದಿಯ ಮೋದಿ ಎಂದು ಮಾತಿನಲ್ಲೇ ಸಿಎಂ ಅಣುಕಿಸಿದರು. 

ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಅಂದ್ರು ಮಾಡಿದ್ರಾ? ಕಪ್ಪು ಹಣ ತರುತ್ತೇವೆ ಅಂದ್ರು ತಂದ್ರ? ಗ್ಯಾರಂಟಿಯನ್ನು ಉತ್ತರ ಪ್ರದೇಶದಲ್ಲಿ, ಬಿಹಾರದಲ್ಲಿ ಕೊಡಿ.  ಅಲ್ಲಿಯೂ ಬಡವರು ಇದ್ದಾರೆ ಅಲ್ವ ಅಲ್ಲಿ ಕೊಡಲಿ ಗ್ಯಾರಂಟಿಗಳನ್ನು ಆ ರಾಜ್ಯಗಳಲ್ಲಿ ಕೊಡೋಕೆ ಆಗಲ್ಲ ಇವರ ಕೈಯಲ್ಲಿ. ಮನೆ ಯಜಮಾನಿಗೆ 2 ಸಾವಿರ , ಯುವನಿಧಿ, ಅನ್ನ ಭಾಗ್ಯವನ್ನು ನೀವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕೊಡಿ. ಬಿಜೆಪಿಯವರೆಗೆ ಕಣ್ಣು ಕಾಣುತ್ತೋ ಇಲ್ವೋ. ಜನರಿಗೆ ಯಾಕೆ ನೀವು ಸುಳ್ಳು ಹೇಳುತ್ತೀರಿ. ರಾಜ್ಯದ ಜನ ಬಿಜೆಪಿಯವರ ಸುಳ್ಳುಗಳಿಗೆ ದಾರಿ ತಪ್ಪಲ್ಲ ಅನ್ನೋ ನಂಬಿಕೆ ಇದೆ ಎಂದಿದ್ದಾರೆ.

4, 530 ಕೋಟಿ ಸರ್ಕಾರ ಸಾರಿಗೆ ನಿಗಮಗಳಿಗೆ ಕೊಟ್ಟಿದೆ. ಅಷ್ಟು ಹಣ ಮಹಿಳೆಯರಿಗೆ ಹೋಗಿದೆ. ಕೆಎಸ್ಆರ್ಟಿಸಿ ನಿಗಮದ ನೌಕರರಿಗೆ 1 ಕೋಟಿ ವಿಮೆ ಇದೆ. ತಾಕತ್ತು ದಮ್ಮು ಅಲ್ಲ, ರಾಜಕೀಯ ಇಚ್ಛಾಶಕ್ತಿ ಇದ್ದಾಗ ಮಾತ್ರ ಜನಪರ ಕೆಲಸ ಮಾಡಲು ಸಾಧ್ಯ. ನಮಗೆ ಜನಪರ ಇಚ್ಚಾಶಕ್ತಿ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬಸ್ ನ ವಿಶೇಷತೆ ಏನು?

 • point to point ಎಕ್ಸ್ ಪ್ರೆಸ್ ಹೆಸರಿನಲ್ಲಿ ಬಸ್ ಆಪರೇಟ್.
 • ವಾಹನದ ಎತ್ತರ 3.4 ಮೀಟರ್.
 • 50 ಕ್ಕೂ ಹೆಚ್ಚು ಆಸನಗಳನ್ನ ಒಳಗೊಂಡಿದೆ. ಎತ್ತರದ ಉತ್ತಮ ಗುಣಮಟ್ಟದ ಕುಷನ್ ಮತ್ತು ರೆಕ್ಸಿನ್ ಒಳಗೊಂಡ ಪ್ರತು ಆಸನದ ಹಿಂಬದಿಯಲ್ಲಿ ಮ್ಯಾಗ್ ಜಿನ್ ಹಾಗೂ ವಾಟರ್ ಪೌಚ್ ನ ಸೌಲಭ್ಯ.
 • ವಿಶಾಲವಾದ ವಾಹನದ ಮುಂದಿನ ಹಾಗೂ ಹಿಂದಿನ ಗಾಜು.
 • ವಿಶಾಲವಾದ ಪ್ರಯಾಣಿಕರ ಕಿಟಕಿ ಫ್ರೇಮ್ ಹಾಗೂ ಮೇಲಿನ ಗಾಜು.
 • ಮೇಲ್ಚಾವಣಿಯಲ್ಲಿ 2 ಸಾಲು ಗ್ರಾಬ್ ರೈಲ್.
 • ಬಸ್ಸಿನ ಹಿಂದೆ ಮತ್ತು ಮುಂದೆ LED ಮಾರ್ಗ ಫಲಕ ಅಳವಡಿಕೆ.
 • ಜಾಹೀರಾತು ಮಾದರಿಯ ಹ್ಯಾಂಡ್ ಗ್ರಿಪ್.
 • F.R.P.ಡ್ಯಾಶ್ ಬೋರ್ಡ್.
 • ಮೇಲ್ಚಾವಣಿ(ಸಲೂನ್) ಎಲ್.ಇ.ಡಿ. ಸ್ಕ್ರಿಪ್ಟ್ 2 ಸಂಖ್ಯೆ ಲೈಟ್.
 • ಪ್ರವೇಶದ ಫುಟ್ ಸ್ಟೆಪ್ ಮೇಲೆ  ಸ್ಕ್ರಿಪ್ಟ್ ಮಾದರಿಯ ಎಲ್‌ಇಡಿ ಬಲ್ಬ್ ಗಳು.
 • ಬಸ್ ಮುಂಬದಿ, ಹಿಂಬದಿ ತಲಾ 1 ಕ್ಯಾಮರಾ ಅಳವಡಿಕೆ.
 • ಎಲೆಕ್ಟ್ರಾನಿಕ್ ವಾಹನ ಸ್ಥಿರತೆ ನಿಯಂತ್ರಣ ಉಪಕರಣ ಅಳವಡಿಕೆ( EVSC)
 • Bs-6OBD 2 ಕಂಪ್ಲೈಂಟ್.
 • ವಾಹನಕ್ಕೆ ಟ್ರ್ಯಾಕಿಂಗ್ ಉಪಕರಣ, ಪ್ಯಾನಿಕ್ ಬಟನ್ ಗಳು ಮತ್ತು ಬಸ್ ನಿಲ್ದಾಣಗಳ ಮಾಹಿತಿ ನೀಡುವ ಧ್ವನಿವರ್ಧಕ ಯಂತ್ರಗಳ ಅಳವಡಿಕೆ.
Follow Us:
Download App:
 • android
 • ios