ರಾಜಕಾರಣದಲ್ಲಿ ಪ್ರಾಮಾಣಿಕತೆಯಿಂದ ಇರೋದು ಕಷ್ಟ. ಆದರೆ ಅವರು 10 ವರ್ಷಗಳ ಕಾಲ ಪ್ರಧಾನಿಯಾಗಿ ಕೆಲಸ ಮಾಡಿದ್ದಾರೆ. ಅವರ ಬದುಕು ಅವರು ಮಾಡಿದ ಕೆಲಸಗಳು ನಮಗೆ ಪ್ರೇರಣೆಯಾಗಿವೆ. ಯಾವತ್ತು ಕೂಡಾ ಅವರು ಅಧಿಕಾರದ ಮದದಿಂದ ಬಂದವರಲ್ಲ. ಸರಳ, ಪ್ರಾಮಾಣಿಕ ವ್ಯಕ್ತಿ: ಸಿಎಂ ಸಿದ್ದರಾಮಯ್ಯ
ಬೆಳಗಾವಿ(ಡಿ.27): ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ. ಅವರ ಬದುಕನ್ನ ನೋಡಿದಾಗ ಪವಾಡ ರೂಪದಲ್ಲಿ ಬೆಳೆದವರು. ಪಂಜಾಬ್‌ನ ಕುಗ್ರಾಮದಲ್ಲಿ ಜನಿಸಿ, ಇಂಡಿಯನ್ ಎಕಾನೆಮಿಯಲ್ಲಿ ಶ್ರೇಷ್ಟ ಮಟ್ಟಕ್ಕೆ ತೆಗೆದುಕೊಂಡು ಹೋದವರು. ಆರ್ಥಿಕ ಒಗ್ಗಟ್ಟಿನ ಪಿತಾಮಹ ಅವರು. ದೇಶಕಂಡಂತ ಪ್ರಾಮಾಣಿಕ ಪ್ರಧಾನಿ ಅವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ರಾಜಕಾರಣದಲ್ಲಿ ಪ್ರಾಮಾಣಿಕತೆಯಿಂದ ಇರೋದು ಕಷ್ಟ. ಆದರೆ ಅವರು 10 ವರ್ಷಗಳ ಕಾಲ ಪ್ರಧಾನಿಯಾಗಿ ಕೆಲಸ ಮಾಡಿದ್ದಾರೆ. ಅವರ ಬದುಕು ಅವರು ಮಾಡಿದ ಕೆಲಸಗಳು ನಮಗೆ ಪ್ರೇರಣೆಯಾಗಿವೆ. ಯಾವತ್ತು ಕೂಡಾ ಅವರು ಅಧಿಕಾರದ ಮದದಿಂದ ಬಂದವರಲ್ಲ. ಸರಳ, ಪ್ರಾಮಾಣಿಕ ವ್ಯಕ್ತಿ, ಮೋಸ್ಟ್ ರಿಸೆಪೆಕ್ಡೆಡ್ ಮ್ಯಾನ್, ರಾಜಕೀಯದಲ್ಲಿ ಗೌರವದಿಂದ ಇದ್ದೋರು, ಅವರ ಅಗಲಿಕೆಯಿಂದ ಭಾರತ ದೇಶಕ್ಕೆ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
1991ರಲ್ಲಿ 'ಮಾಂತ್ರಿಕ ಬಜೆಟ್' ಮಂಡಿಸಿ ದೇಶವನ್ನು ದಿವಾಳಿಯಿಂದ ಮೇಲೆತ್ತಿದ್ದ ಮನಮೋಹನ ಸಿಂಗ್
ಅನ್ನಭಾಗ್ಯ ಯೋಜನೆ ಜಾರಿಗೆ ತಂದಾಗ ಮನಮೋಹನ್ ಸಿಂಗ್ ಅವರು ಫುಡ್ ಸೆಕ್ಯೂರಿಟಿ ಆ್ಯಕ್ಟ್ ಜಾರಿಗೆ ತಂದರು. ದೇಶದಲ್ಲಿ ಬಡತನ ಇರಬಾರದು ಎಂದು ಯೋಜನೆಯನ್ನ ಜಾರಿಗೆ ತಂದವರು. ನಾವು ಅವರು ಕಾನೂನು ಮಾಡಿದ ಮೇಲೆ ಒಂದು ರೂ.ಗೆ ಕೆಜಿ ಅಕ್ಕಿ ಕೊಡುವ ಕೆಲಸ ಮಾಡಿದ್ವಿ. ಇವತ್ತು ನರೇಂದ್ರ ಮೋದಿ ಅವರು ಅಕ್ಕಿಯನ್ನ ಕೊಡ್ತಾ ಇದಾರೆ ಅಂದ್ರೆ ಅದಕ್ಕೆ ಮನಮೋಹನ್ ಸಿಂಗ್ ಅವರು ಕಾರಣ ಎಂದು ಅವರು ಮಾಡಿದ ಕೆಲಸಗಳನ್ನ ನೆನಪಿಸಿಕೊಂಡಿದ್ದಾರೆ.
ಮನಮೋಹನ್ ಸಿಂಗ್ ಅವರು ದೇಶದ ಬಡವರು ನೀರುದ್ಯೂಗಿಗಳ ಪರವಾಗಿ ಕೆಲಸ ಮಾಡಿದವರು. ಅವರು ಪ್ರಧಾನಿಆಗಿದ್ದಾಗ ಮೂರು ಸಾರಿ ಭೇಟಿ ಮಾಡಿದ್ದೆ, ನಾನು ಸಿಎಂ ಆಗಿದ್ದಾಗ ಅವರು ಪ್ರಧಾನಿಯಾಗಿದ್ದರು. ಪ್ರಧಾನಿ ಸ್ಥಾನ ಹೋದ ಮೇಲೂ ನನ್ನ ಜೊತೆ ಒಳ್ಳೆಯ ಒಡನಾಟ ಇತ್ತು. ಅವರು ಕರ್ನಾಟಕದ ಆರ್ಥಿಕತೆ ಚೆನ್ನಾಗಿದೆ ಎಂದು ಹೇಳಿದ್ದರು ಎಂದು ನೆನಪನ್ನು ಮೆಲುಕು ಹಾಕಿದ್ದಾರೆ.
ಮನಮೋಹನ್ ಸಿಂಗ್ ನಿಧನಕ್ಕೆ ವೀರಪ್ಪ ಮೋಯ್ಲಿ ಸಂತಾಪ
ವಿಧಿವಶರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ಗೆ ಮಾಜಿ ಸಿಎಂ ವೀರಪ್ಪ ಮೋಯ್ಲಿ ಸಂತಾಪ ಸೂಚಿಸಿದ್ದಾರೆ.
ಅಣು ಒಪ್ಪಂದಕ್ಕಾಗಿ ಕುರ್ಚಿ ಬಿಡಲು ಮುಂದಾಗಿ ಅಮೆರಿಕನ್ನರ ಬೆವರಿಳಿಸಿದ್ದ ಮನಮೋಹನ ಸಿಂಗ್!
ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆಯುತ್ತಿರುವ ಶ್ರದ್ಧಾಂಜಲಿ ಸಭೆಯಲ್ಲಿ ಭಾಷಣ ಮಾಡಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರು, ಮನಮೋಹನ್ ಸಿಂಗ್ ಅವರು ಸೋನಿಯಾ ಗಾಂಧಿ ಅವರ ವಿಶ್ವಾಸವನ್ನ ಗಳಿಸಿದ್ದರು. ಅವರ ಅಧಿಕಾರದಲ್ಲಿ ಭಾರತದ ಜಿಡಿಪಿ ದಾಖಲೆ ಮಟ್ಟಕ್ಕೆ ಏರಿತ್ತು. ಮನಮೋಹನ್ ಸಿಂಗ್ ಶ್ರೇಷ್ಠ ಆರ್ಥಿಕ ತಜ್ಞರಾಗಿದ್ದರು, ಶ್ರೇಷ್ಠ ರಾಜಕಾರಣಿ ಆಗಿದ್ದರು. ಶ್ರೇಷ್ಠ ಜ್ಞಾನ ಸಿಂಧು ಆಗಿದ್ದ ಮನಮೋಹನ್ ಸಿಂಗ್ ಕಡುಬಡತನದ ಹಿನ್ನೆಲೆಯವರು. ಈ ರಾಷ್ಟ್ರದ ಭ್ರಷ್ಟಾಚಾರ ಹೋಗಲಾಡಿಸಲು ಸಂಕಲ್ಪ ತೊಟ್ಟಿದ್ದರು. ಲೋಕಪಾಲ್ ಮಸೂದೆ ಜಾರಿಗೆ ತಂದಿದ್ದರು ಎಂದು ಹೇಳಿದ್ದಾರೆ.
ಜನ, ಜನಪ್ರತಿನಿಧಿ ಮನ್ನಣೆ ಕೊಡದಿದ್ದರೂ ಈ ದೇಶದಲ್ಲಿ ಅವರ ಹೆಸರು ಅಜರಾಮರವಾಗಿದೆ. ಆರ್‌ಟಿಇ, ಆರ್‌ಟಿಐ, ನರೇಗಾ ಹೀಗೆ ಹತ್ತಾರು ಯೋಜನೆಗಳನ್ನು ರೂಪಿಸಿದ್ದರು. ಬಡವರಿಗೆ ಮಿಡಿಯುವ ಹೃದಯ ಅವರದ್ದಾಗಿತ್ತು, 15 ವರ್ಷಗಳ ಕಾಲ ಕೂಡಿ ಅವರ ಜೊತೆ ಕೆಲಸ ಮಾಡಿದ್ದೇನೆ. ಆಲಮಟ್ಟಿ ಜಲಾಶಯ ನಿರ್ಮಾಣಕ್ಕೂ ಮನಮೋಹನ್ ಸಿಂಗ್ ಕ್ರಮ ವಹಿಸಿದ್ದರು. ಅವರ ಬದುಕು ಅಂದು, ಇಂದು, ಮುಂದೆಯೂ ಆದರ್ಶವಾಗಿರುತ್ತದೆ. ಸರ್ಕಾರದ ಸವಲತ್ತು ಜನರಿಗೆ ನೀಡಲು ಆಧಾರ ಕಾರ್ಡ್, ವ್ಯಾಟ್ ಸಿಸ್ಟಮ್ ಜಾರಿ ತಂದವರು. ದೇಶಕ್ಕೆ ಆರ್ಥಿಕ ಸಲಹೆ ಕೊಟ್ಟ ಶ್ರೇಷ್ಠ ನಾಯಕ ಎಂದು ವೀರಪ್ಪ ಮೋಯ್ಲಿ ಅವರು ಬಣ್ಣಿಸಿದ್ದಾರೆ.
