ಅಣು ಒಪ್ಪಂದಕ್ಕಾಗಿ ಕುರ್ಚಿ ಬಿಡಲು ಮುಂದಾಗಿ ಅಮೆರಿಕನ್ನರ ಬೆವರಿಳಿಸಿದ್ದ ಮನಮೋಹನ ಸಿಂಗ್‌!

ಮನಮೋಹನ ಸಿಂಗ್‌ಗೆ ಗೊತ್ತಾಗಿ ಒಪ್ಪಂದದ ಹಿಂದಿನ ದಿನ ರಾತ್ರಿ ನಮಗೆ ಈ ಒಪ್ಪಂದವೇ ಬೇಡ ಎಂದು ಕುಳಿತುಬಿಟ್ಟಿದ್ದರು. ಈ ವಿಷಯ ಬುಷ್ ಅವರಿಗೆ ಗೊತ್ತಾಯಿತು. ಅವರು ಇದನ್ನು ಗಂಭೀರವಾಗಿಪರಿಗಣಿಸಿ, ವಿದೇಶಾಂಗಸಚಿವೆ ಕಾಂಡೋಲೀಸಾ ರೈಸ್ ಅವರನ್ನು ಮನಮೋಹನ್ ಅವರಿದ್ದ ತಂಗಿದ್ದ ಹೋಟೆಲ್‌ಗೆ ಕಳುಹಿಸಿದರು.

Manmohan Singh Angered Americans by offering to leave his chair for the nuclear deal gvd

ಭಾರತ ಹಾಗೂ ಅಮೆರಿಕ ನಡುವೆ ಐತಿಹಾಸಿಕ ಅಣು ಒಪ್ಪಂದ ಏರ್ಪಡಲು ಪ್ರಮುಖ ರೂವಾರಿ ಡಾ | ಮನಮೋಹನ ಸಿಂಗ್. 1974ರಲ್ಲಿ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ದೇಶದಲ್ಲಿ ಮೊದಲ ಬಾರಿಗೆ ಅಣು ಬಾಂಬ್ ಪರೀಕ್ಷೆ ನಡೆದಿತ್ತು. ಅದರಿಂದ ಸಿಟ್ಟಾಗಿ ಭಾರತದ ಮೇಲೆ ಅಮೆರಿಕ ಆಗ ನಿರ್ಬಂಧ ಹೇರಿತ್ತು. ಅದೇ ದೇಶ ಭಾರತವನ್ನು ಅಣ್ವಸ್ತ್ರ ರಾಷ್ಟ್ರ ಎಂದು ಪರಿಗಣಿಸುವಂತೆ ಮಾಡಿದ್ದು ಅಣು ಒಪ್ಪಂದ. ಈ ಒಪ್ಪಂದಕ್ಕಾಗಿ ಸಿಂಗ್ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. 

ಒಪ್ಪಂದವನ್ನು ತಮಗೆ ಬೇಕಾದಂತೆ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ ರಾತ್ರೋರಾತ್ರಿ ಅಮೆರಿಕನ್ನರ ಬೆವರಿಳಿಸಿದ್ದರು! ಯುಪಿಎ ಮಿತ್ರಕೂಟದ ಅಂಗಪಕ್ಷವಾಗಿದ್ದ ಎಡಪಕ್ಷಗಳು ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಪ್ರಧಾನಿ ಹುದ್ದೆಗೇ ರಾಜೀನಾಮೆ ನೀಡಲು ಮುಂದಾಗಿದ್ದರು ಸಿಂಗ್. ಈ ಒಪ್ಪಂದದ ಕಾರಣ ಯುಪಿಎ ಸರ್ಕಾರವೇ ಪತನದಂಚಿಗೆ ಬಂದಿತ್ತು. ಎಡಪಕ್ಷಗಳು ಬೆಂಬಲವನ್ನು ವಾಪಸ್ ಪಡೆದಿದ್ದವು. ಅಲ್ಲದೆ ಅವಿಶ್ವಾಸಮತ ನಿರ್ಣಯ ಮಂಡಿಸಿದ್ದವು. ಆದರೂ ಸಿಂಗ್ ಅವರು ತಮ್ಮ ಪಟ್ಟು ಮಾತ್ರ ಬಿಟ್ಟಿರಲಿಲ್ಲ.

ಭಾರತ ಉದ್ಧಾರಕನ ಮೂಲ ಪಾಕಿಸ್ತಾನ: ಒಬಾಮಾಗೆ ಆಪ್ತಮಿತ್ರ ಮನಮೋಹನ್ ಸಿಂಗ್!

ರಾತ್ರೋರಾತ್ರಿ ಸಿಟ್ಟಾದ ಕತೆ: 2005ರ ಜು.18ರಂದು ಭಾರತ ಹಾಗೂ ಅಮೆರಿಕ ನಡುವೆ ಅಣು ಒಪ್ಪಂದ ಕುರಿತ ಘೋಷಣೆ ಹೊರಬಿತ್ತು. ಆದರೆ ಅದರ ಹಿಂದಿನ ದಿನ ಅಮೆರಿಕದಲ್ಲಿ ಹೈಡ್ರಾಮಾವೇ ನಡೆದಿತ್ತು. ಈ ಒಪ್ಪಂದವೇ ಬೇಡ ಎಂದು ಸಿಂಗ್ ಮುನಿಸಿಕೊಂಡು ಕೂತಿದ್ದರು. ಮನಮೋಹನ ಸಿಂಗ್ ಹಾಗೂ ಅಂದಿನ ಅಮೆರಿಕ ಅಧ್ಯಕ್ಷ ಜಾರ್ಜ್‌ ಡಬ್ಲ್ಯು ಬುಷ್‌ ಅವರ ನಡುವಣ ಮಾತುಕತೆಯಂತೆ ಅಂತಾರಾಷ್ಟ್ರೀಯ ಸುರಕ್ಷತಾ ಸಂಸ್ಥೆಗಳ ತಪಾಸಣೆಯಿಂದ ಭಾರತದ6ರಿಂದ8 ಅಣುಸ್ಥಾವರಗಳನ್ನು ಹೊರಗಿಡುವನಿಲುವಿಗೆ ಬರಲಾಗಿತ್ತು. ಆದರೆ ಭಾರತದ ಜತೆ ಅಣು ಒಪ್ಪಂದ ಮಾಡಿಕೊಳ್ಳುವುದು ಅಮೆರಿಕದಲ್ಲೇ ಕೆಲವು ಪ್ರಭಾವಿಗಳಿಗೆ ಇಷ್ಟವಿರಲಿಲ್ಲ. 

ಹೀಗಾಗಿ ಆ ವ್ಯಕ್ತಿಗಳು ಅಣು ಸ್ಥಾವರಗಳ ತಪಾಸಣೆ ವಿನಾಯಿತಿಯನ್ನು ಎರಡಕ್ಕೆ ಇಳಿಸಿದ್ದರು. ಇದು ಮನಮೋಹನ ಸಿಂಗ್‌ಗೆ ಗೊತ್ತಾಗಿ ಒಪ್ಪಂದದ ಹಿಂದಿನ ದಿನ ರಾತ್ರಿ ನಮಗೆ ಈ ಒಪ್ಪಂದವೇ ಬೇಡ ಎಂದು ಕುಳಿತುಬಿಟ್ಟಿದ್ದರು. ಈ ವಿಷಯ ಬುಷ್ ಅವರಿಗೆ ಗೊತ್ತಾಯಿತು. ಅವರು ಇದನ್ನು ಗಂಭೀರವಾಗಿಪರಿಗಣಿಸಿ, ವಿದೇಶಾಂಗಸಚಿವೆ ಕಾಂಡೋಲೀಸಾ ರೈಸ್ ಅವರನ್ನು ಮನಮೋಹನ್ ಅವರಿದ್ದ ತಂಗಿದ್ದ ಹೋಟೆಲ್‌ಗೆ ಕಳುಹಿಸಿದರು. ಆದರೆ ಆಕ್ರೋಶಗೊಂಡಿದ್ದ ಮನಮೋಹನ್ ಅವರು “ನಿಮ್ಮನ್ನು ಭೇಟಿಯಾಗುವುದಿಲ್ಲ, ಬುಷ್ ಜತೆಗೇ ನೇರವಾಗಿ ಮಾತನಾಡುತ್ತೇನೆ' ಎಂದು ಕಡ್ಡಿ ಮುರಿದಂತೆ ಹೇಳಿ ಕಳುಹಿಸಿದರು. 

ಬಳಿಕ ಕಾಂಡೋಲಿಸಾ ಅವರು ಅಂದಿನ ಭಾರತದ ವಿದೇಶಾಂಗ ಸಚಿವ ನಟವರ್ ಸಿಂಗ್ ಬಳಿಗೆ ತೆರಳಿದರು. ಅವರು ಮನಮೋಹನ ಸಿಂಗ್ ಹಾಗೂ ಕಾಂಡೋಲಿಸಾ ನಡುವೆ ಭೇಟಿ ಏರ್ಪಡಿಸಿದರು. ಭಾರತದ ಬೇಡಿಕೆಗೆ ಅಮೆರಿಕ ಒಪ್ಪಿಗೆ ನೀಡಿತು. ಮರುದಿನ ಒಪ್ಪಂದ ಘೋಷಣೆಯಾಯಿತು. 2008ರಲ್ಲಿ ಅಧಿಕೃತವಾಗಿ ಸಹಿ ಹಾಕಲಾಯಿತು. ಒಂದು ವೇಳೆ ಭಾರತದ ಕಡೆ ಮನಮೋಹನ ಸಿಂಗ್ ಅವರೇನಾದರೂ ಇಲ್ಲದೇ ಹೋಗಿದ್ದಿದ್ದರೆ ಅಣು ಒಪ್ಪಂದ ಸಾಧ್ಯವೇ ಆಗುತ್ತಿರಲಿಲ್ಲ ಎಂದು ಅಂದಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ಅವರೇ ಹೇಳಿಕೊಂಡಿದ್ದರು.

ದುರ್ಬಲ ಪ್ರಧಾನಿ ಅಭಿಯಾನದ ನಡುವೆಯೇ 2ನೇ ಬಾರಿ ಪ್ರಧಾನಿ: ದೇಶದ ಇತಿಹಾಸದಲ್ಲಿ ಜವಾಹರಲಾಲ್ ನೆಹರು ನಂತರ ಪೂರ್ಣಾವಧಿ ಸರ್ಕಾರ ನಡೆಸಿ ಸತತ 2ನೇ ಬಾರಿಗೆ ಪ್ರಧಾನಿಯಾದ 2ನೇ ವ್ಯಕ್ತಿ ಮನಮೋಹನ ಸಿಂಗ್, 2004ರಲ್ಲಿ ಮೊದಲ ಬಾರಿ ಮನಮೋಹನ ಸಿಂಗ್‌ರನ್ನು ಸೋನಿಯಾ ಗಾಂಧಿ ಅವರು ಪ್ರಧಾನಿ ಮಾಡಿದಾಗಲೇ ಎಲ್ಲರೂ ಹುಬ್ಬೇರಿಸಿದ್ದರು.ಆದರೆ, 5 ವರ್ಷಯಶಸ್ವಿಯಾಗಿ ಸರ್ಕಾರ ನಡೆಸಿದ 2009ರ ಚುನಾವಣೆಯಲ್ಲಿ ಮತ್ತೆ ಯುಪಿಎಯನ್ನು ಗೆಲ್ಲಿಸಿ ಪ್ರಧಾನಿಯಾದರು. 2009ರ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿಯವರು ಮನಮೋಹನ ಸಿಂಗ್ 'ದುರ್ಬಲ ಪ್ರಧಾನಿ' ಎಂಬ ಅಭಿಯಾನವನ್ನೇ ನಡೆಸಿದ್ದರು. 

ಇಂದಿಗೂ ಕ್ರಾಂತಿಕಾರಿ ಎನ್ನಿಸಿಕೊಂಡ ಮನಮೋಹನ್‌ ಸಿಂಗ್ ಟಾಪ್ 9 ಸಾಧನೆಗಳು

ದೇಶಕ್ಕೆ ಸೋನಿಯಾ ಗಾಂಧಿಯವರ ಮಾತು ಮಾತ್ರ ಕೇಳುವ ದುರ್ಬಲ ಪ್ರಧಾನಿ ಬೇಕೋ ಅಥವಾ ಎಲ್ಲ ಜನರ ಆಶೋತ್ತರಗಳನ್ನು ಈಡೇರಿಸುವ ಪ್ರಬಲ ಪ್ರಧಾನಿ ಬೇಕೋ ಎಂದು ಬಿಜೆಪಿ ನಾಯಕರು ಪ್ರತಿಯೊಂದು ಪ್ರಚಾರ ಸಭೆಯಲ್ಲೂ ಪ್ರಶ್ನಿಸುತ್ತಿದ್ದರು. ಮನಮೋಹನ ಸಿಂಗ್ ಮೌನ ಪ್ರಧಾನಿ ಎಂದು ಬಿಂಬಿಸುವ ಹಲವಾರು ಘೋಷಣೆಗಳನ್ನು ಬಿಜೆಪಿಯವರು ರೂಪಿಸಿದ್ದರು. ಆದರೆ, ಇದಕ್ಕೆಲ್ಲ ಮನಮೋಹನ ಸಿಂಗ್ ಅವರ ಮೌನವೇ ಉತ್ತರವಾಗಿರುತ್ತಿತ್ತು. ಪ್ರಚಾರ ಸಭೆಗಳಲ್ಲಿ ಅವರು ಅಭಿವೃದ್ಧಿಯ ಕುರಿತು ಮತ್ತು ಆರ್ಥಿಕ ಸುಧಾರಣೆಗಳ ಕುರಿತು ಮಾತ್ರ ಮಾತನಾಡುತ್ತಿದ್ದರು. ಹೀಗಾಗಿ, ತಮ್ಮ ಕ್ಲೀನ್ ಇಮೇಜ್ ಹಾಗೂ ಯುಪಿಎ-1 ಸರ್ಕಾರದ ಅವಧಿಯಲ್ಲಿ ದೇಶದ ಆರ್ಥಿಕತೆ ಯನ್ನು ಸುಧಾರಿಸಿದ ರೀತಿಯಿಂದಾಗಿ ಮನಮೋಹನ ಸಿಂಗ್ 'ದುರ್ಬಲ ಪ್ರಧಾನಿ' ಎಂಬ ಪ್ರಚಾರವನ್ನೂ ಮೀರಿ ಗೆದ್ದು 2ನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿದ್ದರು.

Latest Videos
Follow Us:
Download App:
  • android
  • ios