Asianet Suvarna News Asianet Suvarna News

Bitcoin Scam| ಸಿಎಂ ಬೊಮ್ಮಾಯಿ ಬಿಜೆಪಿ ನಾಯ​ಕರ ಹೆಸರು ಹೇಳಲಿ: ಸಿದ್ದ​ರಾ​ಮ​ಯ್ಯ

*  ತನಿಖೆ ನಡೆಸುತ್ತಿರುವ ಸರ್ಕಾರವೇ ಬಹಿರಂಗಲ ಪಡಿಸಲಿ 
*  ಮುಂದಿನ ಸಿಎಂ ಎಂದು ಬಿಂಬಿಸಿದ ಶ್ರೀಗಳು 
*  ಸಮಾಜ ಸೇವೆ ಮಾಡಿ ಋುಣ ತೀರಿಸಿ

CM Bommai Should Reveal the Name of BJP Leaders in Bitcoin Scam Says Siddaramaiah grg
Author
Bengaluru, First Published Nov 14, 2021, 11:47 AM IST

ಬಾದಾಮಿ(ನ.14): ಬಿಟ್‌ ಕಾಯಿನ್‌(Bitcoin) ಹಗರಣದಲ್ಲಿ ಇಬ್ಬರು ಪ್ರಭಾವಿ ನಾಯಕರಿದ್ದಾರೆ ಎನ್ನುವ ಮಾಹಿತಿ ಇದೆ. ತನಿಖೆ ಮಾಡುವ ಅಧಿಕಾರ ಇರುವುದು ಸಿಎಂಗೆ. ಅವರು ಹೆಸರು ಬಹಿರಂಗಪಡಿಸಿ ಅಂತಾ ಹೇಳಿದೆ ಯಾಕಂದ್ರೆ ಪೊಲೀಸರು ಆರೋಪಿ ಶ್ರೀಕಿಯಿಂದ(Shreeki) ಬಿಟ್‌ ಕಾಯಿನ್‌ ರಿಕವರಿ ಪಡಿದಿದ್ದಾರೆ ಅಂತಾ ಹೇಳ್ತಾರೆ ಎಂದು ಮಾಜಿ ಸಿಎಂ, ಬಾದಾ​ಮಿ ಶಾಸಕ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ. 

ಅವರು ಬಾದಾ​ಮಿ(Badami) ನಗರದಲ್ಲಿ ಶನಿ​ವಾರ ನೂತನ ಹೊಸಗೌಡ್ರ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಶ್ರೀಕಿಯಿಂದ ವಶಕ್ಕೆ ಪಡೆದು ಬಿಟ್‌ ಕಾಯಿನ್‌ ಯಾರ ಹತ್ತಿರ ಹೋಗಿದೆ.. ಯಾರಿಗೆ ಟ್ರಾನ್ಸಫರ್‌ ಆಗಿದೆ..? ಪೊಲೀಸರಿಗೆ ಹೋಗಿದ್ಯಾ..?, ರಾಜಕಾರಣಿಗಳಿಗೆ(Politicians)ಹೋಗಿದ್ಯಾ? ಹೇಳಬೇಕಲ್ವಾ. ಸೀಜ್‌ ಮಾಡಿದ್ದಾರೆ ಅಂತಾ ಹೇಳ್ತಾರಲ್ಲ ಹಾಗಾದ್ರೆ ಹೆಸರು ಹೇಳಬೇಕಲ್ಲ. ಇದರಲ್ಲಿ ಕಾಂಗ್ರೆಸ್‌ನವರೇ(Congress) ಇದ್ದಾರೆ ಅಂತಾ ಸಿಎಂ ಬೊಮ್ಮಾಯಿ(Basavaraj Bommai) ಹೇಳ್ತಾರೆ. ಆಯ್ತಪ್ಪ.. ಕಾಂಗ್ರೆಸ್‌ನವರೇ ಯಾರು ಅಂತಾ ಹೇಳಿ.. ಇದ್ರೆ ಅರೆಸ್ಟ್‌ ಮಾಡಿ ಎಂದು ಸವಾಲ್‌ ಹಾಕಿದರು.

ಬಿಜೆಪಿಯವರಿದ್ದಾರಾ? ಕಾಂಗ್ರೆಸ್‌ ನವರಿದ್ದಾರಾ.? ಜೆಡಿಎಸ್‌ ನವರಿದ್ದಾರಾ? ಹೇಳಬೇಕಲ್ಲ ಎಂದು ಪ್ರಶ್ನಿ​ಸಿ​ದ​ರು. ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಸಿಎಂ ಬೊಮ್ಮಾಯಿ ತಮ್ಮ ಸ್ಥಾನ ಕಳೆದಿಕೊಳ್ಳಲಿದ್ದಾರೆಂಬ ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ(Priyank Kharge) ಹೇಳಿಕೆ ವಿಚಾರ ಪ್ರತಿಕ್ರಿಯಿಸಿದ ಅವರು, ಖರ್ಗೆಯವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಖರ್ಗೆಯವರ ಜೊತೆ ಮಾತಾಡಿಲ್ಲ, ಅವರ ಬಳಿ ಏನು ದಾಖಲೆ ಇದೆ ಅಂತಾ ಕೇಳ್ತೀನಿ ಎಂದರು.

ಬ್ರೇಕಿಂಗ್‌ ನ್ಯೂಸ್‌ ಠುಸ್ - ದೊಡ್ದ ಸುದ್ದಿ ಕೊಡುತ್ತೇನೆ ಎಂದಿದ್ದ ಕಾಂಗ್ರೆಸ್ಸಿಗ, ಈಗೇನಾಯಿತು?

ಇಬ್ಬರು ಬಿಜೆಪಿ(BJP) ನಾಯಕರು ಹೆಸರು ಹೇಳ್ತಿರಾ ಅನ್ನೋ ಪ್ರಶ್ನೆಗೆ, ನಾನ್‌ ಹೇಳಲ್ಲ ಎಂದು ತಲೆ ಅಲ್ಲಾಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ತನಿ​ಖೆ ಮಾಡ್ತಿರೋರು ಯಾರು, ಅವರೇ ಹೇಳಲಿ. ಪೊಲೀಸರು(Police) ಸ್ವತಂತ್ರವಾಗಿ ಕೆಲಸ ಮಾಡ್ತಾರಾ..? ಪೊಲೀಸರು ರಾಜ್ಯ ಸರ್ಕಾರದಡಿ ಕೆಲಸ ಮಾಡು​ತ್ತಾ​ರೆ. ಸರ್ಕಾರದ ಅಂಡರ್‌ ಕೆಲಸ ಮಾಡ್ತಾರೆ. ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌(Jagadish Shettar) ದೆಹಲಿಗೆ ಹೋಗಿರೋದು ಎಂಬು​ದು ಗೊತ್ತಿಲ್ಲ. ಅವ್ರನ್ನೇ ಕೇಳಿ, ಜಗದೀಶ್‌ ಶೆಟ್ಟರ್‌ ಮರಳಿ ಬರ್ತಾರಲ್ಲ ಅವರಿಗೆ ಕೇಳಿ ಎಂದು ಸಿದ್ದು ವ್ಯಂಗ್ಯವಾಡಿದರು.

ಬಿಟ್‌ ಕಾಯಿನ್‌ ಪ್ರಕರಣ, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಸರ್ಜೆವಾಲಾ(Randeep Surjewala) ಹೇಳಿಕೆಗೆ ಸುರ್ಜೇವಾಲಾ ಅವರು ಹೇಳಿದ್ದನ್ನೇ ನಾನೂ ಹೇಳಿದ್ದು..! ಬಿಟ್‌ ಕಾಯಿನ್‌ ಹಗರಣದಲ್ಲಿ ಬಿಜೆಪಿ ನಾಯಕರುವ ಬಗ್ಗೆ ಅವರೇ ಹೇಳಲಿ. ಯಾರೂ ಇದ್ದಾರೆ ಅನ್ನೋದನ್ನ ಸಿಎಂ ಅಧಿಕೃತವಾಗಿ ಹೇಳಲಿ. ನಾನು ಸರ್ಕಾರ ನಡೆಸ್ತೀನಾ..? ನನಗಿರೋ ಮಾಹಿ​ತಿ ಹೇಳಿದ್ದೇನೆ, ಯಾರಿದ್ದಾರೆ ಅಂತಾ ಗೊತ್ತಿಲ್ಲ. ಪೊಲೀಸ್‌ ಇಲಾಖೆ ಅಧಿಕಾರಿ ಆಡಿಯೋ ರಿಲೀಸ್‌ ವಿಚಾರ. ಇದಕ್ಕಿಂತ ಎವಿಡೆನ್ಸ್‌ ಬೇಕಾ ಎಂದ ಮಾಜಿ ಸಿಎಂ ಸಿದ್ದರಾಮಯ್ಯ ಅವ​ರು, ಪ್ರಕರಣವನ್ನು ಮುಚ್ಚಿ ಹಾಕುವ ಅನುಮಾನ ಬರುತ್ತಿದೆ ಎಂದರು.

ಬಾಗಲಕೋಟೆ ವಿಜಯಪುರ(Bagalkote-Vijayapura) ಪರಿಷತ್‌ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಾಳೆ ತೀರ್ಮಾನ ಮಾಡ್ತೀವಿ ಎಂದು ಪ್ರಶ್ನೆ​ಯೊಂದ​ಕ್ಕೆ ಸಿದ್ದರಾಮಯ್ಯ ಉತ್ತ​ರಿ​ಸಿ​ದ​ರು.

Bitcoin Scam ರಾಜ್ಯ ಪೊಲೀಸರಿಗೆ ಅವಮಾನ ಮಾಡಬೇಡಿ: ಸುಧಾಕರ್‌

ಸಮಾಜ ಸೇವೆ ಮಾಡಿ ಋುಣ ತೀರಿಸಿ

ಸಮಾಜದಿಂದ ಸಂಪಾದನೆ ಮಾಡಿದ ಸ್ವಲ್ಪ ಭಾಗವನ್ನಾದರೂ ಸಮಾಜಕ್ಕೆ ಹಿಂದುರುಗಿಸಿ ಕೊಟ್ಟರೆ ಮಾತ್ರ ಸಮಾಜದ ಋುಣ ತೀರಿಸಿದಂತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಸಿದ್ದರಾಮಯ್ಯ ಹೇಳಿದರು. ಅವರು ಶನಿವಾರ ಪಟ್ಟಣದ ಹೊರವಲಯದ ಎಲ್‌.ಐ.ಸಿ.ಹತ್ತಿರ ನೂತನ ದಿಂ.ಬಸಮ್ಮ ಷಣ್ಮುಖಪ್ಪ ಹೊಸಗೌಡ್ರ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿರುವ ಬಡವರು, ದೀನದಲಿತರು ಮದುವೆ ಮಾಡಿಕೊಳ್ಳುವುದು ದೊಡ್ಡ ಸಾಹಸ. ಇಂತಹ ಸಂದರ್ಭಗಳಲ್ಲಿ ಯುವಮುಖಂಡ ಮಹೇಶ ಹೊಸಗೌಡ್ರ ಉಚಿತ ವಿವಾಹ ಮಾಡಿರುವುದು ಶ್ಲಾಘನೀಯ, ಸ್ವಾಗತಾರ್ಹ ಎಂದರು.
ನಾನು ಶಾಸಕ, ಮಂತ್ರಿ, ಮುಖ್ಯಮಂತ್ರಿ(Chief Minister) ಆಗಿರುವುದು ಜನರಿಂದ ಮತ್ತು ಸಮಾಜದಿಂದ. ಹಿರಿಯರು ಹಾಕಿದ ದಾರಿಯಲ್ಲಿ ನಡೆಯುವುದು ದೊಡ್ಡ ಕೆಲಸ. ತಂದೆ ತಾಯಿಯಲ್ಲಿರುವ ಒಳ್ಳೆಯ ಗುಣಗಳನ್ನು ಮುಂದುವರಿಸಿಕೊಂಡು ಹೋಗುವುದು ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಸಮಾಜದ ಋುಣ ತೀರಿಸುವ ಕೆಲಸ ಮಾಡಿದ್ದಾರೆ. ಬರುವ ದಿನಗಳಲ್ಲಿ ಮಹೇಶ ಹೊಸಗೌಡ್ರ ಇಂತಹ ಸಾಮಾಜಿಕ ಕೆಲಸಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.

ಬಾದಾಮಿ ಕ್ಷೇತ್ರದ ಜನರು ತುಂಬಾ ಒಳ್ಳೆಯವರು. ಮೈಸೂರಿನಿಂದ ಬಂದರೂ ನನ್ನನ್ನು ಆಯ್ಕೆ ಮಾಡಿದ್ದೀರಿ ನಿಮಗೆ ಚಿರ ಋುಣಿಯಾಗಿದ್ದೇನೆ ಎಂದರು. ನನಗೆ ಅಧಿಕಾರ ಇರಲಿ ಬಿಡಲಿ ಸಮಾಜ ಸೇವೆ ಮಾಡುತ್ತೇನೆ. ನನ್ನನ್ನು ಜಾತಿಗೆ ಸೀಮಿತಗೊಳಿಸುವ ಕೆಲಸ ನಡೆಯುತ್ತಿದೆ. ನಾನು ಬಸವಣ್ಣನ(Basavanna) ಅನುಯಾಯಿ. ಜಾತ್ಯತೀತ ಸಮಾಜದ ಆಧಾರದ ಮೇಲೆ ಸಮಾಜ ಕಟ್ಟಬೇಕು ಎನ್ನುವವನು ನಾನು. ದಯವಿಲ್ಲದ ಧರ್ಮ ಯಾವುದಯ್ಯ ಎಂಬ ಗಾದೆ ಮಾತನ್ನು ಹೇಳಿದರು. ವಿಶ್ವ ಮಾನವರಾಗಲು ಪ್ರಯತ್ನಿಸಬೇಕು ಎಂದರು.

ಮಹೇಶ ಹೊಸಗೌಡ್ರ ಅವರ ತಾಯಿ ದಿ. ಬಸಮ್ಮ, ತಂದೆ ಷಣ್ಮುಖಪ್ಪ ಅವರ ಮೂರ್ತಿ ಅನಾವರಣ ಮತ್ತು ಷಣ್ಮುಖಪ್ಪ ಹೊಸಗೌಡ್ರ ಅವರ ಸಂಸ್ಕರಣ ಗ್ರಂಥ ಶ್ರಮದ ಸಿರಿ ಬಿಡುಗಡೆಗೊಳಿಸಲಾಯಿತು. ಹೊಸಗೌಡ್ರ ಅವರ ತಂದೆ, ತಾಯಿಗಳ ಮೂರ್ತಿಯನ್ನು ಹೆಬ್ಬಾಳ ಶಾಸಕ ಭೈರತಿ ಸುರೇಶ ಅನಾವರಣಗೊಳಿಸಿದರು. ಮೂರು ಸಾವಿರಮಠದ ಡಾ. ಗುರುಸಿದ್ದರಾಜಯೋಗಿಂದ್ರ ಶ್ರೀ ಆಶೀರ್ವಚನ ನೀಡಿದರು.

ಶಾಸಕರಾದ ಆನಂದ ನ್ಯಾಮಗೌಡ, ಸುರೇಶ, ಮಾಜಿ ಸಚಿವ ಎಚ್‌.ವೈ.ಮೇಟಿ, ಮಾಜಿ ಶಾಸಕ ಎಸ್‌.ಜಿ.ನಂಜಯ್ಯನಮಠ, ಪುರಸಭೆ ಅಧ್ಯಕ್ಷ ಮಂಜು ಹೊಸಮನಿ, ಸದಸ್ಯ ರಾಜಮಹ್ಮದ ಬಾಗವಾನ, ಮುಖಂಡರಾದ ಶಿವಾನಂದ ಕುಳಗೇರಿ, ಪಿ.ಆರ್‌.ಗೌಡರ, ಡಾ.ಎಂ.ಜಿ.ಕಿತ್ತಲಿ, ರಕ್ಷಿತಾ ಈಟಿ, ರಾಮವ್ವ ಪೂಜಾರ, ಎಂ.ಬಿ.ಹಂಗರಗಿ, ರವೀಂದ್ರ ಕಲಬುರ್ಗಿ, ಹೊಳಬಸು ಶೆಟ್ಟರ, ಯುವಮುಖಂಡ ಭೀಮಸೇನ ಚಿಮ್ಮನಕಟ್ಟಿ, ಎಂ.ಡಿ.ಯಲಿಗಾರ, ಶ್ರೀ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಶ್ರೀ, ಗುಳೇದಗುಡ್ಡ ಒಪ್ಪತ್ತೇಶ್ವರಮಠದ ಒಪ್ಪತ್ತೇಶ್ವರ ಶ್ರೀ, ಸಿದ್ದನಕೊಳ್ಳದ ಶಿವಕುಮಾರ ಶ್ರೀ, ಗದ್ದನಕೇರಿಯ ಮಳೆರಾಜೇಂದ್ರಮಠದ ಮೌನೇಶ್ವರ ಶ್ರೀ, ಕೋಲಾರ ದಿಗಂಬರೇಶ್ವರ ಸಂಸ್ಥಾನಮಠದ ಕಲ್ಲಿನಾಥ ದೇವರು, ನೀಲಾನಗರ ಬಂಜಾರಪೀಠದ ಕುಮಾರ ಮಹಾರಾಜರು, ಕಮತಗಿಯ ಡಾ. ಗಣೇಶ ಚಿತ್ರಗಾರ, ರಾಜ್ಯ ಪಿಕಾರ್ಡ್‌ ಬ್ಯಾಂಕ್‌ ಉಪಾಧ್ಯಕ್ಷ ಮಹಾಂತೇಶ ಮಮದಾಪುರ, ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಹೊನ್ನಯ್ಯ ಹಿರೇಮಠ, ಮುಖಂಡರಾದ ಹನಮಂತ ಮಾವಿನಮರದ, ಕೆ.ಬಿ.ಗೌಡರ ಸೇರಿದಂತೆ ಇತರರು ಇದ್ದರು.

ಅಧ್ಯಕ್ಷತೆ ವಹಿಸಿದ್ದ ಸಂಘಟಕ ಮಹೇಶ ಹೊಸಗೌಡ್ರ ಅವರು ಸಿದ್ದರಾಮಯ್ಯ ಅವರಿಗಾಗಿಯೇ ಶ್ರೀಲಂಕಾದಿಂದ ತಂದ 24 ಕ್ಯಾರೆಟ್‌ ಚಿನ್ನದ ಭಾವಚಿತ್ರವನ್ನು ಅರ್ಪಿಸಿದರು. ಶ್ರುತಿ ಕಿತ್ತೂರ ಸ್ವಾಗತಿಸಿದರು. ರವಿ ಕಂಗಳ ನಿರೂಪಿಸಿದರು.

News Hour; 15 ದಿನದಲ್ಲಿ ಸಾಕ್ಷ್ಯ ಸಮೇತ ಬರ್ತೆನೆ, ಬಿಜೆಪಿ-ಕಾಂಗ್ರೆಸ್‌ಗೆ HDK ಎಚ್ಚರಿಕೆ!

16 ಜೋಡಿ ಉಚಿತ ಸಾಮೂಹಿಕ ವಿವಾಹ :

ಉಚಿತ ಸಾಮೂಹಿಕ ವಿವಾಹ(Free Mass Wedding) ಕಾರ್ಯಕ್ರಮದಲ್ಲಿ 16 ಜೋಡಿಗಳು ನವದಾಂಪತ್ಯಕ್ಕೆ ಕಾಲಿಟ್ಟವು. ಸಮುದಾಯ ಭವನದ ಉದ್ಘಾಟನೆಗೆ ಆಗಮಿಸಿದ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಮುಂದಿನ ಸಿಎಂ ಎಂದು ಬಿಂಬಿಸಿದ ಶ್ರೀಗಳು:

ಕಾರ್ಯಕ್ರಮಕ್ಕೆ ಆಗಮಿಸಿದ ಮೂರು ಸಾವಿರಮಠದ ಶ್ರೀಗಳು, ಕಾಗಿನೆಲೆ ತಿಂಥಣಿ ಬ್ರಿಡ್ಜ್‌ ಕನಕಗುರುಪೀಠದ ಶ್ರೀಗಳು, ಕೋಲಾರದ ಕಲ್ಲಿನಾಥ ದೇವರು ಮಾತನಾಡಿ, ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಎಲ್ಲ ವರ್ಗದ ಜನರಿಗೆ ಕಾರ್ಯಕ್ರಮಗಳನ್ನು ನೀಡಿದರು. ಬಾದಾಮಿ ಶಾಸಕರಾದ ನಂತರ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಸಿದ್ದರಾಮಯ್ಯನವರು ಮುಂದಿನ ಮುಖ್ಯಮಂತ್ರಿ ಎಂದು ಮಾತನಾಡಿರುವುದು ವಿಶೇಷವಾಗಿತ್ತು.
 

Follow Us:
Download App:
  • android
  • ios