Bitcoin| ಸಿಎಂ ತಮ್ಮ ಪಕ್ಷದವರ ಹೆಸರು ಹೇಳಲಿ: ಪರಮೇಶ್ವರ

*  ಕಾಂಗ್ರೆಸ್‌ನವರ ಹೆಸರನ್ನು ಹೇಳುವ ಜತೆಗೆ ನಿಮ್ಮವರ ಹೆಸರನ್ನೂ ಬಹಿರಂಗ ಪಡಿಸಿ
*  ದಕ್ಷಿಣ ಏಷ್ಯಾದಲ್ಲಿ ಪೆಟ್ರೋಲ್‌ಗೆ ನಮ್ಮ ದುಬಾರಿ ಬೆಲೆ
* ಯಾರ ಖಾತೆಗೆ ಹಣ ಹೋಗಿದೆ ಎಂದು ಸಿಎಂ ಬಹಿರಂಗ ಪಡಿಸಲಿ
 

CM Basavaraj Bommai Should Reveal Name of Their Party in Bitcoin Scam Says G Parameshwara grg

ಹುಬ್ಬಳ್ಳಿ(ನ.11): ಬಿಟ್‌ಕಾಯಿನ್(Bitcoin) ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯಲ್ಲಿ(BJP) ಯಾರು ಭಾಗಿಯಾಗಿದ್ದಾರೆ? ಯಾರ ಖಾತೆಗೆ ಎಷ್ಟು ಹಣ ಹೋಗಿದೆ ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommmai) ಬಹಿರಂಗಪಡಿಸಲಿ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಜಿ. ಪರಮೇಶ್ವರ(G. Parameshwara) ಸವಾಲು ಹಾಕಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ರಿಪ್ಟೊ ಕರೆನ್ಸಿ ಬಿಟ್‌ಕಾಯಿನ್ 11 ಸಾವಿರ ಕೋಟಿ ಹ್ಯಾಕ್ಮಾಡಲಾಗಿದೆ. ಈಗಾಗಲೇ ಒಬ್ಬನನ್ನು ಬಂಧಿಸಲಾಗಿದೆ(Arrest). ಇದರಲ್ಲಿ ರಾಜಕಾರಣಿಗಳು(Politicians), ಬ್ಯುಸಿನೆಸ್ಮೆನ್(Businessmen), ಅಧಿಕಾರಿಗಳು ಇದ್ದಾರೆ ಎಂಬ ಮಾಹಿತಿ ಇದೆ. ಇದರಲ್ಲಿ ಪಾಲ್ಗೊಂಡ ರಾಜಕಾರಣಿಗಳು ಯಾರು? ಕಾಂಗ್ರೆಸಿಗರು(Congress) ಯಾರಿದ್ದಾರೆ ಹೇಳಿ, ಕ್ರಮ ತೆಗೆದುಕೊಳ್ಳಿ. ನಾವೂ ಪಕ್ಷದಿಂದ ಕ್ರಮ ವಹಿಸುತ್ತೇವೆ. ಬಿಜೆಪಿಯಲ್ಲಿ ಯಾರಿದ್ದಾರೆ ತಿಳಿಸಿ, ಯಾರ ಖಾತೆಗೆ ಹಣ ಹೋಗಿದೆ ಎಂದು ಸಿಎಂ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.

Bitcoin Scam| ಶ್ರೀಕಿ ಜೊತೆ ದರ್ಶನ್ ನಂಟು: ಪುತ್ರನ ಬಗ್ಗೆ ಕೈ ನಾಯಕ ರುದ್ರಪ್ಪ ಲಮಾಣಿ ಹೇಳಿದ್ದಿಷ್ಟು!

ಮುಖ್ಯಮಂತ್ರಿಗಳು ಕ್ರಿಪ್ಟೊಕರೆನ್ಸಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ನಮ್ಮ ಪಕ್ಷದ ಪ್ರಿಯಾಂಕ ಖರ್ಗೆ(Priyank Kharge) ಹೇಳಿಕೆಗೆ ಸಹಮತ ವ್ಯಕ್ತಪಡಿಸುತ್ತೇನೆ. ಸಿಎಂ ತಾನು ಭಾಗಿಯಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಲಿ ನೋಡೋಣ ಎಂದರು.

ಸಮ್ಮಿಶ್ರ ಸರ್ಕಾರ(Coalition Government) ಉರುಳಿಸಿದ ಯಡಿಯೂರಪ್ಪ(BS Yediyurappa) ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಬೊಮ್ಮಾಯಿ ಸರ್ಕಾರ ಅಳೆಯಲು ಇದು ಅತೀ ಕಡಿಮೆ ಅವಧಿ. ಆದರೂ ಸರ್ಕಾರ(Government of Karnataka) ಯಾವ ಮಾರ್ಗದಲ್ಲಿ ಹೋಗುತ್ತಿದೆ ಎಂಬುದು ಗೊತ್ತಾಗುತ್ತಿದೆ. ಬಿಜೆಪಿಯವರು ನಮಗೆ 10 ಪರ್ಸೆಂಟ್‌ ಸರ್ಕಾರ(10 Percent Government) ಎನ್ನುತ್ತಿದ್ದರು. ಆದರೆ ಈಗ ಅವರ ಅವಧಿಯಲ್ಲಿ ಎಲ್ಲ ಇಲಾಖೆಯಲ್ಲೂ ಪರ್ಸಂಟೇಜ್(Percentage) ಕೊಟ್ಟರೆ ಮಾತ್ರ ಕೆಲಸ ಆಗುತ್ತಿದೆ. ವಿಧಾನಸೌಧದಲ್ಲಿ ಎಲ್ಲ ಇಲಾಖೆಗಳು ಕೂಡ ಲಂಚ ಕೇಳುತ್ತಿವೆ ಎಂದು ದೂರಿದರು.

ಕೇಂದ್ರ ಸರ್ಕಾರವು(Central Government) ಈ ವರೆಗೆ ಪೆಟ್ರೋಲ್(Petrol), ಡೀಸೆಲ್(Diesel) ಮೇಲೆ ಎಷ್ಟು ಹಣವನ್ನು ತೆರಿಗೆ ಮೂಲಕ ಸಂಗ್ರಹಿಸಿದೆ? ಯಾವುದಕ್ಕೆ ಎಷ್ಟು ಖರ್ಚು ಮಾಡಿದೆ? ಎಂಬುದರ ಲೆಕ್ಕ ಕೊಡಲಿ ಎಂದು ಆಗ್ರಹಿಸುತ್ತೇವೆ. ಹಳ್ಳಿ ಹಳ್ಳಿಗೆ ತೆರಳಿ ಪೆಟ್ರೋಲ್‌ಬೆಲೆಯೇರಿಕೆ ಬಗ್ಗೆ ಹೋರಾಟ ಮಾಡುತ್ತೇವೆ. ಕೇಂದ್ರ, ರಾಜ್ಯ ಸರ್ಕಾರ ಇವುಗಳ ಬೆಲೆಯನ್ನು ವಿಪರೀತವಾಗಿ ಏರಿಸಿ ಈಗ ಕನಿಷ್ಠ . 10-12 ಇಳಿಕೆ ಮಾಡಿವೆ. ಆದರೂ ದಕ್ಷಿಣ ಏಷ್ಯಾದಲ್ಲಿ(South Asia) ಪೆಟ್ರೋಲ್‌ಗೆ ನಮ್ಮಲ್ಲೇ ದುಬಾರಿ ಬೆಲೆಯಿದೆ. ಪೆಟ್ರೋಲ್‌ ಜತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆಯಲ್ಲ, ಅದಕ್ಕೆ ಕಾರಣ ಯಾರು? ಯಾರು ನಿಯಂತ್ರಣ ಮಾಡಬೇಕು? ಸರ್ಕಾರ ಭ್ರಷ್ಟಾಚಾರದಲ್ಲಿ(Corruption) ತೊಡಗಿರುವ ಕಾರಣವೆ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ಆಪಾದಿಸಿದರು.

ರಾಜ್ಯ ರಾಜಕೀಯದಲ್ಲಿ Bitcoin ಬಿರುಗಾಳಿ, ಶ್ರೀಕಿ ಜೊತೆ ಕೈ ನಾಯಕರ ಮಕ್ಕಳು!

ವಿಧಾನ ಪರಿಷತ್‌ ಚನಾವಣೆಯಲ್ಲಿ(Vidhan Parishat Election) ಈ ಬಾರಿಯೂ ನಾವು ಹೆಚ್ಚಿನ ಸೀಟುಗಳನ್ನು ಗೆದ್ದುಕೊಳ್ಳುತ್ತೇವೆ. ಈಗಾಗಲೇ ಪಕ್ಷದ ವರಿಷ್ಠರು ಸಭೆ ನಡೆಸಿದ್ದಾರೆ. ಎಲ್ಲ ಕ್ಷೇತ್ರಗಳಿಗೆ ತೆರಳಿ ಗೆಲ್ಲುವ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದರು.

ದಲಿತ ಸಿಎಂ(Dalit Chief Minister) ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಪಕ್ಷವನ್ನು ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ತರುವುದು ನಮ್ಮ ಗುರಿ. ಶಾಸಕಾಂಗ ಸಭೆಯಲ್ಲಿ ತೀರ್ಮಾನಿಸಿ ಸಿಎಂ ಆಯ್ಕೆ ಮಾಡಲಾಗುತ್ತದೆ. ಸಿಎಲ್ಪಿ ಸಭೆಯಲ್ಲಿ(CLP Meeting) ಹೈಕಮಾಂಡ್(High Command) ಹೇಳಿದಂತೆ ಆಗುತ್ತದೆ. ಹಿಂದೆ ಸಿದ್ದರಾಮಯ್ಯ(Siddaramaiah) ಅವರ ಹೆಸರು ಸೂಚಿಸಿದ್ದು ನಾವು. ಅದರಂತೆ ಮುಂದಿನ ಸಿಎಂ ಆಯ್ಕೆ ಕೂಡ ಹೈಕಮಾಂಡ್‌ ಮಾರ್ಗದರ್ಶನದಂತೆ ನಡೆಯಲಿದೆ ಎಂದರು.
 

Latest Videos
Follow Us:
Download App:
  • android
  • ios