Asianet Suvarna News Asianet Suvarna News

ರಾಜ್ಯೋತ್ಸವ ಪ್ರಶಸ್ತಿ ಮೊತ್ತ ಹೆಚ್ಚಿಸಿದ ಸಿಎಂ, ಹಾಸ್ಯ ಚಟಾಕಿ ಹಾರಿಸಿದ ಪ್ರಾಣೇಶ್

* 2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
* 66 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವ
* ಪ್ರಶಸ್ತಿ ಸ್ವೀಕರಿಸಿದ ಬಳಿಕ  ಹಾಸ್ಯ ಚಟಾಕಿ ಹಾರಿಸಿದ ಪ್ರಾಣೇಶ್

cm basavaraj bommai announces rajyotsava award money Hiked 5 From 1 Lakh rupees rbj
Author
Bengaluru, First Published Nov 1, 2021, 11:28 PM IST
  • Facebook
  • Twitter
  • Whatsapp

ಬೆಂಗಳೂರು, (ನ.01): 2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ (Kannada Rajyotsava) ಪ್ರಶಸ್ತಿಯನ್ನು 66 ಸಾಧಕರಿಗೆ ನೀಡಿ ಗೌರವಿಸಲಾಯ್ತು.

ಇಂದು (ನ.01) ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ( Basavaraj Bommai) ಅವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Award) ಪ್ರದಾನ ಮಾಡಿದರು. . 

Kannada Rajyotsava|ಕನ್ನಡ ರಾಜ್ಯೋತ್ಸವಕ್ಕೆ ಶುಭ ಕೋರಿದ ಕ್ರೀಡಾ ತಾರೆಯರು..!

ಪ್ರಶಸ್ತಿ ಸ್ವೀಕರಿಸಿದ ಬಳಿಕ  ಹಾಸ್ಯದೊಂದಿಗೆ ಮಾತು ಆರಂಭಿಸಿದ ಪ್ರಾಣೇಶ್ (Pranesh), ಎರಡು ನಿಮಿಷ ದಲ್ಲಿ ಮಾತು ಮುಗಿಸಿ ಅಂದಿದ್ದಾರೆ. ನಾವು ಉತ್ತರ ಕರ್ನಾಟಕದವರು. ಎರಡು ನಿಮಿಷಕ್ಕೆ ಮಾತು ಮುಗಿಸಿ ಅಭ್ಯಾಸವೇ ಇಲ್ಲ. 60 ವರ್ಷ ಆದವರಿಗೇ ಪ್ರಶಸ್ತಿ ಕೊಡಬೇಕು ಅಂತಾ ನಿಯಮ ಇದೆಯಂತೆ. ನಾವು ಕಲಾವಿದರು 60  ವರ್ಷ ಬದುಕೋದೇ ಅನುಮಾನ ಎಂದರು.

ಪ್ರಾಣೇಶ್ ಅವರನ್ನು ಏಳೆಂಟು ಬಾರಿ ಪ್ರಶಸ್ತಿಗೆ ಶಿಫಾರಸು ಮಾಡಿದ್ವಿ. ಆದ್ರೂ ಪ್ರಶಸ್ತಿ ಸಿಗಲಿಲ್ಲ, ವಯಸ್ಸಾಗಿಲ್ಲ ಅಂತಾ ಕೊಡಲಿಲ್ವಂತೆ. ಇನ್ನೊಂದೆರಡು ವರ್ಷ ಬಿಟ್ಟಿದ್ರೆ ಮರಣೋತ್ತರ ಕೊಡಬೇಕಿತ್ತೋ ಏನೋ. ಮತ್ತೊಮ್ಮೆ ಅನ್ಸುತ್ತೆ, ಮುಂದಿನ ವರ್ಷ ಪ್ರಶಸ್ತಿ ಮೊತ್ತ ಜಾಸ್ತಿ ಆಗ್ತಿತ್ತಂತೆ. ಮುಂದಿನ ವರ್ಷವೇ ಪ್ರಶಸ್ತಿ ಕೊಟ್ಟಿದ್ರೆ ಚೆನ್ನಾಗಿತ್ತೋ ಏನೋ  ಎಂದು ಹಾಸ್ಯ ಚಟಾಕಿ ಹಾರಿದರು.

2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, ಪ್ರಾಣೇಶ್ ಸೇರಿದಂತೆ 66 ಸಾಧಕರು ಆಯ್ಕೆ

ಸಿಎಂ ಬೊಮ್ಮಾಯಿ ಮಾತು
cm basavaraj bommai announces rajyotsava award money Hiked 5 From 1 Lakh rupees rbj
ಪ್ರಶಸ್ತಿ ನೀಡಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಈ ಸಲ ಪ್ರಶಸ್ತಿಯೊಂದಿಗೆ ಹಣವನ್ನು 1 ಲಕ್ಷದಿಂದ 5 ಲಕ್ಷ ರೂ.ಗೆ ಏರಿಕೆ ಮಾಡುವುದಾಗಿ ಘೋಷಿಸಿದರು. ಜೊತೆಗೆ ಮುಂದಿನ ಬಾರಿ ಅರ್ಜಿ ತೆಗೆದುಕೊಂಡು ಪ್ರಶಸ್ತಿ ಕೊಡುವುದಿಲ್ಲ. ಯಾರು ಬಯೋಡೇಟವನ್ನು ತೆಗೆದುಕೊಳ್ಳುವುದಿಲ್ಲ. ಸರ್ಕಾರ ಮತ್ತು ಆಯ್ಕೆ ಸಮಿತಿ ಎರಡು ತಿಂಗಳ ‌ಮುಂಚೆ ಆಯ್ಕೆ ಮಾಡುತ್ತೆ. ಪ್ರಶಸ್ತಿಗೆ ಸಾಧಕರ ಆಯ್ಕೆ ಶೋಧನೆಯಿಂದ ಮಾಡುತ್ತೇವೆ ಎಂದು ತಿಳಿಸಿದರು.

ಇಂದು ಬಹಳ ಸಂತೋಷವಾಗ್ತಿದೆ. ಕನ್ನಡದಲ್ಲಿ ಇಷ್ಟೊಂದು ದೊಡ್ಡ ಸಾಧಕರ ಪಟ್ಟಿ ಇದೆ. ಇವರ ಬದುಕಲ್ಲಿ ಹಲವಾರು ಆಯ್ಕೆ ಇತ್ತು, ಆದರೆ ಸಮಾಜಮುಖಿ ಕೆಲಸಕ್ಕೆ ಮಾನ್ಯತೆ ನೀಡಿದ್ರು. ಸಾಹಿತ್ಯ ಕಲಾ ಸಂಗೀತ ಸಂಸ್ಕೃತಿ ಹಾಡುಗಾರಿಕೆ‌ ಎಲ್ಲಾ ರಂಗವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ಸಾಧಕರನ್ನು ಹಾಡಿ ಹೊಗಳಿದರು. ಆಯ್ಕೆ ಸಮಿತಿ ಸಮುದ್ರ ಆಳದಲ್ಲಿ ಇರುವ ಮುತ್ತು, ಭೂಮಿ ಆಳದಲ್ಲಿರುವ ರತ್ನವನ್ನು ಆಯ್ಕೆ ಮಾಡಿದ್ದಾರೆ. ಇವರೆಲ್ಲರಿಗೂ ನನ್ನ ಧನ್ಯವಾದ ಎಂದರು.

ಮೊದಲ ಸ್ಥಾನ ಕನ್ನಡಿಗನಿಗೆ
cm basavaraj bommai announces rajyotsava award money Hiked 5 From 1 Lakh rupees rbj

ಪರೋಪಕಾರಿ ಗುಣಗಳು ಮನುಷ್ಯನಲ್ಲಿ ಬರಬೇಕು. ಬದುಕಿನಲ್ಲಿ ಒಂದು ಬ್ಯಾಲೆನ್ಸಿಂಗ್ ಇದೆ. ಇಡೀ ಜಗತ್ತಿನಲ್ಲಿ ಕನ್ನಡ ನಾಡು ವಿಶೇಷವಾದ ಭಾಗ, ಮನುಷ್ಯನಿಗೆ ಹಲವಾರು ಆಸೆ ಅಭಿಲಾಷೆ ಇರುತ್ತೆ. ದೈಹಿಕ ಬೆಳವಣಿಗೆ ಜೊತೆಗೆ ಮಾನಸಿಕ ಬೆಳವಣಿಗೆ ಕೂಡ ಆಗಿರುತ್ತೆ. ಅದರಂತೆ ನಮ್ಮ ಆಸೆ ಅಭಿಲಾಸೆ ಕೂಡ ಬದಲಾಗುತ್ತಿರುತ್ತೆ. ಅದು ಬಂದಾಗ ಮಾತ್ರ ಜೀವನದಲ್ಲಿ ಒಳ್ಳೆಯ ಸಮಾಜ ನಿರ್ಮಾಣ ಮಾಡಬಹುದು. ಮುಂದಿನ ದಿನಗಳಲ್ಲಿ ಕನ್ನಡ ಪರ್ವ ಪ್ರಾರಂಭ ಆಗಬೇಕು. ಪರ್ವ ಅಂದರೆ ಎಲ್ಲಾ ರಂಗದಲ್ಲಿ ಮೊದಲೇ ಸ್ಥಾನ ಕನ್ನಡಕ್ಕೆ ಇರಬೇಕು. ಮೊದಲ ಸ್ಥಾನ ಕನ್ನಡಿಗನಿಗೆ ಇರಬೇಕು ಎಂದು ಕರೆ ನೀಡಿದರು.

cm basavaraj bommai announces rajyotsava award money Hiked 5 From 1 Lakh rupees rbj

ನಮ್ಮ‌ 8 ಸಾಹಿತಿಗಳು ಜ್ಞಾನ ಪೀಠ ಪ್ರಶಸ್ತಿ ಪಡೆದಿದ್ದಾರೆ. ಮೊದಲು ವಿದೇಶಿಯರು ದೆಹಲಿಗೆ ಬರ್ತಿದ್ರು, ಇಂದು ಬೆಂಗಳೂರಿಗೆ ಬರ್ತಿದ್ದಾರೆ. ನಮ್ಮ ವಿಶೇಷವಾದ ಕೃಷಿ ಉತ್ಪನ್ನ ಇದೆ. ಮಲ್ನಾಡಿನ ಕಾಫಿ, ನಮ್ಮ ಉತ್ತರ ಕರ್ನಾಟಕದಲ್ಲಿ ಮೆಣಸಿನಕಾಯಿ ವಿದೇಶಕ್ಕೆ ಗೊತ್ತು. ಚೈನಾ ರೇಷ್ಮೆ ಜೊತೆಗೆ ನಮ್ಮ ಕರ್ನಾಟಕ ರೇಷ್ಮೆ ಪೈಪೋಟಿ ‌ಕೊಡ್ತಿದೆ. ನಾಡನ್ನ ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು. ಕನ್ನಡದ ಅಂತರಂಗದ ಶಕ್ತಿ ಪ್ರೀತಿ ಮತ್ತು ವಿಶ್ವಾಸ, ಬೇರೆ ಭಾಷೆ ಬಗ್ಗೆ ವಿಶ್ಲೇಷಣೆ ಬೇಡ. ಆದರೆ ನಮ್ಮ ಕನ್ನಡದ ವಿಶ್ಲೇಷಣೆ ಬೇಕು. ಹೃದಯ ವೈಶಾಲತೆ ನಮ್ಮ ಕನ್ನಡಿಗರಿಗಿದೆ. ನಾಡು ಶ್ರೀಮಂತವಾಗಬೇಕಾದರೇ ಜನ ಶ್ರೀಮಂತವಾಗಬೇಕು. ಜನ ಶ್ರೀಮಂತರಾದರೇ ಎಲ್ಲಾ ರಂಗಗಳೂ ಶ್ರೀಮಂತವಾಗುತ್ತೆ, ಆ ನಾಡು ಶ್ರೀಮಂತವಾಗುತ್ತೆ ಎಂದರು.

ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್​ಗೆ 7-8 ಬಾರಿ ಪ್ರಶಸ್ತಿ ನಿಲ್ಲಿಸಿದ್ವಿ, ನಾನು ಹಿಂದೆ ಶಿಫಾರಸು ಮಾಡಿದ್ದೆ. ಆದ್ರೆ ವಯಸ್ಸಾಗಿಲ್ಲ ಅಂತ ನೀಡೋಕೆ ಆಗಲ್ಲ ಅಂದ್ರು. ವಯಸ್ಸಿಗೆ ಆದ್ಯತೆ ಕೂಡದೇ ಸಾಧನೆಗೆ ಪ್ರಶಸ್ತಿ ನೀಡಬೇಕು ಹೇಳಿದರು.

Follow Us:
Download App:
  • android
  • ios