ಹಾರಂಗಿ ಜಲಾನಯನ ಪ್ರದೇಶದಲ್ಲಿ ಮಳೆ ಕ್ಷೀಣಿಸಿದ್ದರಿಂದ ಜಲಾಶಯದ ನೀರಿನ ಮಟ್ಟ ಕುಸಿದಿದೆ. ಈ ನೀರಿನ ಕೊರತೆಯನ್ನು ನೀಗಿಸಲು, ಮೈಸೂರು ಮತ್ತು ಮಂಡ್ಯ ಭಾಗದಲ್ಲಿ ಮೋಡ ಬಿತ್ತನೆ ಮೂಲಕ ಕೃತಕ ಮಳೆ ಸುರಿಸಲು ಸರ್ಕಾರ ತಜ್ಞರ ಅಭಿಪ್ರಾಯವನ್ನು ಕೋರಿದೆ.

ಬೆಂಗಳೂರು (ಜು.13): ಕಳೆದ ಮೂರು ದಿನಗಳಿಂದ ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಮಳೆ ಪ್ರಮಾಣ ಕ್ಷೀಣಿಸಿದ್ದು, ಜಲಾಶಯ ಭರ್ತಿಯಾಗಲು ಇನ್ನೂ 13 ಅಡಿಗಳಷ್ಟು ನೀರಿನ ಹರಿವು ಬರಬೇಕಾಗಿದೆ. ಹಾಗಾಗಿ ಮೈಸೂರು, ಮಂಡ್ಯ ವ್ಯಾಪ್ತಿಯಲ್ಲಿ ಮೋಡ ಬಿತ್ತನೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲ್ಲದೆ, ಕಳೆದ ಎರಡು ದಿನಗಳಿಂದ ಕುಶಾಲನಗರ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಬಿಸಿಲಿನ ವಾತಾವರಣ ಕಂಡು ಬಂದಿದೆ. ಹೀಗಾಗಿ, ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕೂಡ ಕುಸಿತವಾಗಿದೆ. ಇದರ ಪರಿಣಾಮವಾಗಿ ಹಾರಂಗಿ ಅಣೆಕಟ್ಟು ಅಚ್ಚುಕಟ್ಟು ವ್ಯಾಪ್ತಿಯ ರೈತಾಪಿ ವರ್ಗ ಕೃಷಿ ಚಟುವಟಿಕೆ ನಡೆಸಲು ಕೊಳವೆಬಾವಿ ನೀರನ್ನು ಅವಲಂಬಿಸುವಂತಾಗಿದೆ.

ಪ್ರಸಕ್ತ ನೀರಿನ ಕೊರತೆ ಹಿನ್ನೆಲೆಯಲ್ಲಿ ಮೈಸೂರು, ಮಂಡ್ಯ ಭಾಗದಲ್ಲಿ ಮೋಡ ಬಿತ್ತನೆ ಮೂಲಕ ಮಳೆ ಸುರಿಸಲು ಸರ್ಕಾರ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ತಜ್ಞರ ಅಭಿಮತ ಕೋರಿದೆ ಎಂದು ಹಿರಿಯ ಭೂವಿಜ್ಞಾನಿ ಡಾ.ಎಚ್.ಎಸ್.ಎಂ ಪ್ರಕಾಶ್ ತಿಳಿಸಿದ್ದಾರೆ.

ಜಲಾಶಯ ಶೇಕಡ ಗರಿಷ್ಠ ಮಟ್ಟ ಇಂದಿನ ಮಟ್ಟ

  • ಕಬಿನಿ 57% 2284 2268.93
  • ಹೇಮಾವತಿ 58% 2922 2902.85
  • ತುಂಗಭದ್ರಾ 20% 1633 1599.55
  • ಸೂಪಾ(ಮೀ.) 25% 564 529.25
  • ಕೆಆರ್‌ಎಸ್ 32% 124.80 86.80
  • ಘಟಪ್ರಭಾ 36% 2175 2123.15
  • ಲಿಂಗನಮಕ್ಕಿ 20% 1819.12 1762.70
  • ಭದ್ರಾ 44% 2158.00 2118.82
  • ಹಾರಂಗಿ 56% 2859 2844.95
  • ಆಲಮಟ್ಟಿ(ಮೀ.) 58% 519.60 515.85
  • ನಾರಾಯಣಪುರ(ಮೀ.) 59% 492.25 488.72
  • ಮಲಪ್ರಭಾ 32% 2079.50 2053.80