*   ತಿಂಗಳಾಯ್ತು ಪರಾರಿಯಾಗಿ ಇನ್ನೂ ಸಿಕ್ಕಿಲ್ಲ ಶಾಂತಿಬಾಯಿ, ಬಸ್ಸು ನಾಯಕ ದಂಪತಿ*  ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ*  ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಸಿದ ಸಿಐಡಿ

ಕಲಬುರಗಿ(ಮೇ.13): ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣದಲ್ಲಿ(PSI Recruitment Scam) ತಲೆ ಮರೆಸಿಕೊಂಡಿರುವ ಅಭ್ಯರ್ಥಿ, ಸೇಡಂ ಮೂಲದ ಕೋನಾಪುರ ತಾಂಡಾದ ಶಾಂತಿಬಾಯಿ(Shantibai) ಹಾಗೂ ಆಕೆಯ ಪತಿ ಬಸ್ಸು ನಾಯಕ್‌(Basu Naik) ತಲೆ ಮರೆಸಿಕೊಂಡು ತಿಂಗಳಾದರೂ ಇನ್ನೂ ಪತ್ತೆಯಾಗಿಲ್ಲ. ಏತನ್ಮಧ್ಯೆ ಇವರಿಬ್ಬರೂ ಬಂಧನ ಪೂರ್ವ ನಿರೀಕ್ಷಣಾ ಜಾಮೀನು(Bail) ಕೋರಿ ಅರ್ಜಿ ಇಲ್ಲಿನ ನ್ಯಾಯಾಲಯಕ್ಕೆ(Court) ಸಲ್ಲಿಸಿದ್ದಾರೆ.
ನ್ಯಾಯಾಲಯ ಇವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಏತನ್ಮಧ್ಯೆ ಸಿಐಡಿ ಇವರಿಬ್ಬರಿಗೂ ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಸಿದೆ ಎಂದು ಗೊತ್ತಾಗಿದೆ.

ಸೇಡಂ ತಾಲೂಕಿನ ಕೋನಾಪುರ ತಾಂಡಾದಲ್ಲಿರುವ ಶಾಂತಿಬಾಯಿಗೆ ಹುಡುಕಿಕೊಂಡು ಸಿಐಡಿ ಪೊಲೀಸರು(CID Police) ಕಳೆದ ಏ.10ಕ್ಕೆ ತಾಂಡಾಕ್ಕೆ ಹೋಗಿದ್ದಾಗ ಆಗಲೂ ಆಕೆ ಅಲ್ಲಿರಲಿಲ್ಲ, ಪತಿ ಬಸ್ಸು ನಾಯಕ್‌ ಬೇಟಿಯಾಗಿ ಪತ್ನಿಯೊಂದಿಗೆ ಯಾವಾಗ ಕರೆದರೂ ಬರೋದಾಗಿ ಹೇಳಿದ್ದ. ಪೊಲೀಸರು ಬಂದು ಹೋದ ನಂತರ ಇವರಿಬ್ಬರು ಪರಾರಿಯಾದವರು ಇಂದಿಗೂ ಸಿಕ್ಕಿಲ್ಲ.

ಪೊಲೀಸ್‌ ನೇಮಕಾತಿ ವಿಭಾಗದ ಡಿವೈಎಸ್ಪಿ ಬಂಧನ

ಇವರಿಬ್ಬರ ಜೊತೆ ನಿಕಟ ಸಂಪರ್ಕ ಹೊಂದಿರುವ ಶಹಾಬಾದ್‌ನ ನಗರಸಭೆ ದ್ವಿತೀಯ ದರ್ಜೆ ಗುಮಾಸ್ತೆಯಾಗಿದ್ದ ಜ್ಯೋತಿ ಪಾಟೀಲ್‌ ಕೂಡ ಸಿಐಡಿ ಬಂಧನದಲ್ಲಿದರೂ ಸಹ ಶಾಂತಿಬಾಯಿ ದಂಪತಿ ಅಡಗುದಾಣ ಇನ್ನೂ ಸಿಐಡಿಗೆ ಪತ್ತೆಯಾಗಿಲ್ಲ. ಪಿಎಸ್‌ಐ ಹಗರಣದಲ್ಲಿ ಹೆಸರು ಕೇಳಿ ಬಂದಿರುವ ಏಕೈಕ ಮಹಿಳಾ ಅಭ್ಯರ್ಥಿ ಇವಳಾಗಿದ್ದು ಇವಳ ವಿಚಾರಣೆ ಮುಖ್ಯವಾಗಿದೆ. ಆದರೆ ಇದುವರೆಗೂ ಶಾಂತಿಬಾಯಿ ಅದೆಲ್ಲಿದ್ದಾಳೆಂಬ ಮಾಹಿತಿ ಸಿಐಡಿಗೆ ಸಿಕ್ಕಿಲ್ಲ.
ಶಾಂತಿಬಾಯಿ ಇವಳು ಹಗರಣದ ಕಿಂಗ್‌ಪಿನ್‌ ಇಂಜಿನಿಯರ್‌ ಮಂಜುನಾಥ ಮೇಳಕುಂದಿಗೆ ಹಣ ನೀಡಿ ಪಾಸಾದವಳು. ಶಹಾಬಾದ್‌ನ ಜ್ಯೋತಿ ಪಾಟೀಲ್‌ ಈ ವ್ಯವಹಾರಕ್ಕೆ ಮಧ್ಯಸ್ಥಿಕೆ ವಹಿಸಿದ್ದಳು ಎನ್ನಲಾಗಿದ್ದು ಹಗರಣ ಹೊರಬರುತ್ತಿದ್ದಂತೆಯೇ ಈಕೆ ನಾಪತ್ತೆಯಾಗಿದ್ದಾಳೆ. ಕರ್ನಾಟಕ(Karnataka), ಮಹಾರಾಷ್ಟ್ರ(Maharashtra), ಆಂಧ್ರ(Anhdra Pradesh), ತೆಲಂಗಾಣ(Telangana) ಎಲ್ಲಾಕಡೆ ಸಿಐಡಿ ತಂಡ ಈಕೆಗಾಗಿ ಶೋಧ ಮಾಡಿದೆ.

ಜ್ಯೋತಿ ಅಮಾನತು:

ಶಹಾಬಾದ್‌ನ ನಗರಸಭೆಯಲ್ಲಿ ಗುಮಾಸ್ತೆಯಾಗಿರುವ ಜ್ಯೋತಿ ಪಾಟೀಲರನ್ನು ಸೇವೆಯಿಂದ ಅಮಾನತು ಮಾಡಿ ಡಿಸಿ ಗುರುಕರ್‌ ಆದೇಶ ಹೊರಡಿಸಿದ್ದಾರೆ. ಆಕೆ ಬಂಧನವಾಗಿರುವ ಏ.28 ರಿಂದಲೇ ಪೂರ್ವಾನ್ವಯವಾಗುವಂತೆ ಅವರು ಜ್ಯೋತಿ ಪಾಟೀಲ್‌ ಅಮಾನತು(Suspend) ಘೋಷಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರ ಭದ್ರತೆಯಲ್ಲಿದ್ದವನ ‘ಪಿಎಸ್‌ಐ’ ಕಳ್ಳಾಟ

ಡಿವೈಎಸ್ಪಿ, ಸಿಪಿಐ ಜೈಲಿಗೆ ಶಿಫ್ಟ್‌:

ಹಗರಣದಲ್ಲಿ ಶ್ಯಾಮೀಲಾಗಿರುವ ಆರೋಪ ಹೊತ್ತು ಕಸ್ಟಡಿಯಲ್ಲಿದ್ದ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಆನಂದ ಮೇತ್ರಿ ಇವರ ಕಸ್ಟಡಿ ಅವಧಿ ಮುಗಿದಿದ್ದರಿಂದ ಆರೋಗ್ಯ ತಪಾಸಣೆ ಮಾಡಿಸಿ ಸಿಐಡಿ ಇವರಿಬ್ಬರನ್ನು ಜೈಲಿಗೆ ಸ್ಥಳಾಂತರ ಮಾಡಿದೆ. ಕೆಎಸ್‌ಆರ್‌ಪಿ(KSRP) ಸಹಾಯಕ ಕಮಾಂಡೆಂಟ್‌ ವೈಜನಾಥ ರೇವೂರ್‌ ಇವರ ಕಸ್ಟಡಿ ಅವಧಿ ಇನ್ನೂ ಇರೋದರಿಂದ ಸಿಐಡಿ ಇವರ ವಿಚಾರಣೆ ಮುಂದುವರಿಸಿದೆ.

ಡಿವೈಎಸ್ಪಿ ರಾರ‍ಯಂಕ್‌ ಅಧಿಕಾರಿ ವೈಜನಾಥ ಇವರ ಪತ್ನಿ ಸುನಂದಾ ರೇವೂರ್‌ ಕಾರಾಗೃಹದಲ್ಲಿ ಜೈಲರಾಗಿದ್ದಾರೆ. ಇವರೀಗ ಹಗರಣದ ಕಿಂಗ್‌ಪಿನ್‌ ದಿವ್ಯಾ, ಜ್ಯೋತಿ ಪಾಟೀಲ್‌, ಜ್ಞಾನಜ್ಯೋತಿ ಶಿಕ್ಷಕಿಯರು ಇರುವ ಬ್ಯಾರಾಕ್‌ಗಳ ಭದ್ರತೆ ಹೊಣೆ ನೋಡಿಕೊಳ್ಳುತ್ತಿದ್ದಾರೆ. ಕಸ್ಟಡಿ ಅವದಿ ಪೂರ್ಣಗೊಂಡು ವೈಜನಾಥ ರೇವೂರ್‌ ಜೈಲಿಗೆ ಸ್ತಳಾಂತರಗೊಂಡಲ್ಲ ತನ್ನ ಪತಿಗೆ ತಾವೇ ಜೈಲಿಗೆ ತಳ್ಳುವ ಅನಿವಾರ್ಯತೆ ಜೈಲರ್‌ ಸುನಂದಾಗೆ ಇದಿಗಲಿದೆ.