Asianet Suvarna News Asianet Suvarna News

ಕಳಸಾ ಬಂಡೂರಿ ಡಿಪಿಆರ್‌ಗೆ ಕೇಂದ್ರ ಒಪ್ಪಿಗೆ: ಹೋರಾಟ ನೆನೆದು ಭಾವುಕರಾದ ಸಿಎಂ ಬೊಮ್ಮಾಯಿ

ನಮ್ಮ ತಂದೆಯ ಕಾಲದಲ್ಲಿ ಆರಂಭವಾಗಿದ್ದ ಮಹದಾಯಿ ಹೋರಾಟ, ನಾವು ಪ್ರಾರಂಭ ಮಾಡಿದ ಪ್ರತಿಭಟನಾ ಪಾದಯಾತ್ರೆಗೆ ಈಗ ಫಲ ಸಿಕ್ಕಿದೆ. ರಾಜ್ಯದ ಕಳಸಾ ಬಂಡೂರಿ ಯೋಜನೆ ಡಿಪಿಆರ್‌ಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಹೇಳುತ್ತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾವುಕರಾದರು.

Central Govt agrees to Kalasa Banduri DPR: CM feels emotional remembering struggle sat
Author
First Published Dec 29, 2022, 4:27 PM IST

ಸುವರ್ಣ ಸೌಧ (ಡಿ.29): ನಮ್ಮ ತಂದೆಯ ಕಾಲದಲ್ಲಿ ಆರಂಭವಾಗಿದ್ದ ಪಾದಯಾತ್ರೆ ಮತ್ತು ನಾವು ಪ್ರಾರಂಭ ಮಾಡಿದ ಹೋರಾಟಕ್ಕೆ ಈಗ ಫಲ ಸಿಕ್ಕಿದೆ. ರಾಜ್ಯದ ಕಳಸಾ ಬಂಡೂರಿ ಯೋಜನೆ ವಿಸ್ತೃತ ಯೋಜನಾ ವರದಿ (ಡಿಪಿಆರ್)ಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಉತ್ತರ ಕರ್ನಾಟಕ ಭಾಗದ ಜನತೆಯ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾವುಕರಾದರು.

ಈ ಕುರಿತು ಅಧಿವೇಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕಳಾಸ ಬಂಡೂರಿ ಯೋಜನೆ ಅಂತಿಮವಾಗಿ ಡಿಪಿಆರ್ ಗೆ ಅನುಮತಿ ಸಿಕ್ಕಿದೆ. ಮಹದಾಯಿ ಯೋಜನೆ ಬಗ್ಗೆ ನಮ್ಮ ತಂದೆಯ ಜೊತೆ ಇದ್ದ ಬಾದಾಮಿಯ ಶಾಸಕರು ಆರಂಭಿಸಿದ್ದರು. ಮಹದಾಯಿಯಿಂದ ಬದಾಮಿಯವರಿಗೂ ಅಂದು ತಾವು ಪಾದಯಾತ್ರೆಯ ಮೂಲಕ ನಡೆದುಕೊಂಡು ಹೋಗಿದ್ದನ್ನು ಮೆಲುಕು ಹಾಕಿದರು. ಮಹದಾಯಿ ಬಗ್ಗೆ ಭಾರಿ ಪ್ರಮಾಣದಲ್ಲಿ ನಾವು ಹೋರಾಟ ಮಾಡಿದ್ದೆವು. ಅದರಲ್ಲಿ ನಾನೂ ಕೂಡ ಭಾಗಿಯಾಗಿದ್ದೆನು. ಆದರೆ, 2009 ರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮಹದಾಯಿ ನೀರು ಡೈವರ್ಟ್ ಮಾಡಲು ಬಿಡೋದಿಲ್ಲ ಅಂತ ಹೇಳಿಕೆ‌ ಕೊಟ್ಟಿದ್ದರು ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

ಬೆಳಗಾವಿ: ಕಳಸಾ ಬಂಡೂರಿ ತಿರುವು ಯೋಜನೆಗೆ ಮತ್ತೆ ಗೋವಾ ಅಡ್ಡಗಾಲು?

ಯಡಿಯೂರಪ್ಪ ಅವಧಿಯಲ್ಲಿ ಕಾಮಗಾರಿ ಆರಂಭ: ಇನ್ನು ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರಾವಧಿಯಲ್ಲಿ ಕಳಸಾ ಬಂಡೂರಿ ಕೆಲಸವನ್ನು ಪ್ರಾರಂಭಿಸಲಾಗಿತ್ತು. ಆದರೆ, ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಕೂಡ ಕಾಮಗಾರಿ ಪೂರ್ಣಗೊಳಿಸುವ ಕೆಲಸ ಮಾಡಲಿಲ್ಲ. ಆಮೇಲೆ ಗೋವಾ ಕ್ಯಾತೆ ತೆಗೆದು ಟ್ರಿಬನಲ್ ಗೆ ನ್ಯಾಯಾಲಯದ ಮೊರೆ ಹೋಯಿತು. ಈ ವೇಳೆ ನಮ್ಮ ಯೋಜನೆಗೆ ಕಾಂಗ್ರೆಸ್ ನಾಯಕರು ಗೊಡೆ ಕಟ್ಟಿದ್ದರು. ಇದೇ ಕಾಂಗ್ರೆಸ್‌ನ ದೊಡ್ಡ ಸಾಧನೆಯಾಗಿದೆ. ಆದರೆ, ಅಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಬದ್ದತೆಯನ್ನ ತೋರಿಸಿತು. ಈಗ ಡಿಪಿಆರ್ ಒಪ್ಪಿಗೆ ಪಡೆದಿದೆ. ನಮ್ಮ ದಾರಿ ಸುಗಮವಾಗಿದೆ. ಇನ್ನು ಕಳಸಾ ಬಂಡೂರಿ ಯೋಜನೆಯ ಬಗ್ಗೆ ಹಸಿರು ನಿಶಾನೆಯ ಆದೇಶದ ಕಾಪಿ ಬರುತ್ತಿದ್ದಂತೆಯೇ ಟೆಂಡರ್‌ ಕರೆಯಲಾಗುತ್ತದೆ. ಇಲ್ಲಿ ಪಂಪ್‌ ಹೌಸ್‌ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.

ಸಂಘಟಿತ ಹೋರಾಟಕ್ಕೆ ಸಂದ ಜಯ:  ಸಂಘಟಿತವಾಗಿ ಹೋರಾಟ ಮಾಡಿದ್ದಕ್ಕೆ ಜಯ ಸಿಕ್ಕಿದೆ. ನಮಗೆ ಬಹಳ ಸಂತೋಷವಾಗಿದೆ. ಇಡೀ ಉತ್ತರ ಕರ್ನಾಟಕಕ್ಕಾಗಿ ಜಯ ಸಿಕ್ಕದಂತೆ ಆಗಿದೆ. ಸಾಕಷ್ಟು ಜನ ಲಾಠಿ ಏಟು ತಿಂದಿದ್ದರು. ಎಲ್ಲಾ ರೈತರ ಹೋರಾಟಕ್ಕೆ ನ್ಯಾಯ ಜಯ ಸಿಕ್ಕಿದೆ. ಉತ್ತರ ಕರ್ನಾಟಕ ಜನತೆಯ ಪರವಾಗಿ ಪ್ರಧಾನ ಮಂತ್ರಿ ನರೇಂಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಲ್ಲಿನ ಸ್ಥಳೀಯ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿಯವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಬದಲಾದ ಕಳಸಾ-ಬಂಡೂರಿ ಯೋಜನೆ; ಹೊಸ ಡಿಪಿಆರ್ ಪರ-ವಿರೋಧ

ರೈತರ ಮೇಲಿನ ಪ್ರಕರಣ ಹಿಂಪಡೆಯಲಾಗುತ್ತದೆ: ಕಳಾಸ ಬಂಡೂರಿ ಯೋಜನೆ ಯ ಹೋರಾಟದಲ್ಲಿ ಭಾಗಿಯಾದ ರೈತರ ಮೇಲೆ ಕೇಸ್ ದಾಖಲಾಗಿವೆ. ರೈತರಿಗೆ ಈಗಲೂ ಸಮನ್ಸ್ ಜಾರಿಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಶೀಘ್ರವಾಗಿ ರೈತರ ಮೇಲೆ ದಾಖಲಾಗಿರುವ ಬಾಕಿ ಇರುವ ಪ್ರಕರಣಗಳನ್ನ  ಹಿಂಪಡೆಯಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸದನದಲ್ಲಿಯೇ ಭರವಸೆ ನೀಡಿದರು. 

ಗದಗ, ಧಾರವಾಡದಲ್ಲಿ ಸಿಹಿ ಸಂಭ್ರಮ: ಇನ್ನು ಕಳೆದ ನಾಲ್ಕು ದಶಕದ ಹೋರಾಟಕ್ಕೆ ಈಗ ಚಾಲನೆ ಸಿಕ್ಕಿದೆ. ಮಹದಾಯಿ ಹೋರಾಟಗಾರರು, ವಿವಿಧ ಕನ್ನಡಪರ ಸಂಘಟನೆಗಳು ಮತ್ತು ರೈತ ಸಂಘಟನೆಗಳು ಪರಸ್ಪರ ಸಿಹಿಯನ್ನು ಹಂಚಿಕೊಂಡು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Follow Us:
Download App:
  • android
  • ios