ಕೇಂದ್ರ ಪ್ರಜ್ವಲ್‌ ಪಾಸ್‌ಪೋರ್ಟ್‌ ರದ್ದುಪಡಿಸಲಿ: ಗೃಹ ಸಚಿವ ಪರಮೇಶ್ವರ್‌

ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಜತೆಗೆ ವಾರಂಟ್‌ ಆಧಾರದ ಮೇಲೆ ಎಸ್‌ಐಟಿ ಪತ್ರ ಬರೆದು ಪಾಸ್‌ಪೋರ್ಟ್‌ ರದ್ದುಪಡಿಸುವಂತೆ ಮನವಿ ಮಾಡಿದೆ. ತಕ್ಷಣ ಪಾಸ್‌ಪೋರ್ಟ್‌ ರದ್ದು ಮಾಡಬೇಕು. ಇದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಬೇಕು ಎಂದ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ 

Central Government should Cancel JDS MP Prajwal Revanna's Passport Says G Parameshwar grg

ಬೆಂಗಳೂರು(ಮೇ. 22):  ಪ್ರಜ್ವಲ್‌ ರೇವಣ್ಣ ಅವರ ಪಾಸ್‌ಪೋರ್ಟ್‌ ರದ್ದು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಎಸ್‌ಐಟಿ ಪತ್ರ ಬರೆದಿದೆ. ತಕ್ಷಣ ಪಾಸ್‌ಪೋರ್ಟ್‌ ರದ್ದು ಮಾಡುವ ಅಧಿಕಾರ ಕೇಂದ್ರಕ್ಕೆ ಇದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಸ್ಪಂದನೆ ನೀಡಬೇಕು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಜತೆಗೆ ವಾರಂಟ್‌ ಆಧಾರದ ಮೇಲೆ ಎಸ್‌ಐಟಿ ಪತ್ರ ಬರೆದು ಪಾಸ್‌ಪೋರ್ಟ್‌ ರದ್ದುಪಡಿಸುವಂತೆ ಮನವಿ ಮಾಡಿದೆ. ತಕ್ಷಣ ಪಾಸ್‌ಪೋರ್ಟ್‌ ರದ್ದು ಮಾಡಬೇಕು. ಇದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಬೇಕು ಎಂದರು.

'ನಾನು ರಾಜೀನಾಮೆ ಕೊಡಬೇಕೆಂಬುದು ಪಾಪ ಅವನ ಆಸೆ': ಎಚ್‌ಡಿಕೆ ವಿರುದ್ಧ ಡಿಕೆ ಶಿವಕುಮಾರ ಕಿಡಿ

ಪ್ರಜ್ವಲ್‌ ಬಂದು ತನಿಖೆ ಎದುರಿಸಬೇಕು ಎಂದಿರುವ ನಿಖಿಲ್‌ ಕುಮಾರಸ್ವಾಮಿ ಹೇಳಿಕೆಗೆ, ಪ್ರಜ್ವಲ್‌ ಬರುವಂತೆ ಕರೆದಿರುವುದು ಅವರ ಕುಟುಂಬದ ವಿಚಾರ. ವಾಪಸು ಬಂದು ತನಿಖೆಯನ್ನು ಎದುರಿಸಲಿ ಎಂದಷ್ಟೇ ಪರಮೇಶ್ವರ್‌ ಹೇಳಿದರು.

ದೂರವಾಣಿ ಕದ್ದಾಲಿಕೆ ಆಗಿಲ್ಲ:

ಕುಮಾರಸ್ವಾಮಿ ಅವರು ದೂರವಾಣಿ ಕದ್ದಾಲಿಕೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ದೂರವಾಣಿ ಕದ್ದಾಲಿಕೆ ಆಗಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಅವರ ಬಳಿ ನಿಖರ ಮಾಹಿತಿ ಇದ್ದರೆ ಕೊಡಲಿ ತನಿಖೆ ಮಾಡುತ್ತೇವೆ. ಇದರಲ್ಲಿ ಎಸ್‌ಐಟಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದರು.

ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌ ಸಿಬಿಐ ಹೆಗಲಿಗೆ ಬೀಳುತ್ತಾ? ಹೈಕೋರ್ಟ್‌ ಮೊರೆ ಹೋಗಲು ಹೆಚ್‌ಡಿಕೆ ಚಿಂತನೆ?

ಕಾಂಗ್ರೆಸ್‌ 20 ಸ್ಥಾನ ಗೆಲ್ಲುವುದು ಹಗಲು ಕನಸು ಎಂದಿರುವ ಬಿಜೆಪಿಗೆ ತಿರುಗೇಟು ನೀಡಿದ ಪರಮೇಶ್ವರ್‌, ಬಿಜೆಪಿಯವರು ರಾತ್ರಿ ಕನಸು ಕಾಣುತ್ತಿದ್ದಾರಾ? ಯಾರು ಯಾವಾಗ ಕಂಡರೂ ಕನಸು ಕನಸೇ. ಎಷ್ಟು ಸ್ಥಾನ ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ ಎಂದು ಹೇಳಿದರು.

ಆಡಿಯೋ ತನಿಖೆ ಎಸ್‌ಐಟಿಗೆ ಬಿಟ್ಟದ್ದು

ಶಿವರಾಮೇಗೌಡ ಅವರ ಆಡಿಯೋ ಬಗ್ಗೆ ತನಿಖೆ ನಡೆಸಬೇಕು ಎಂಬ ಜೆಡಿಎಸ್‌ ನಾಯಕರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಸಚಿವ ಡಾ.ಜಿ.ಪರಮೇಶ್ವರ್‌, ತನಿಖೆ ನಡೆಯಬೇಕೆ ಅಥವಾ ಬೇಡವೇ ಎಂಬುದನ್ನು ಎಸ್‌ಐಟಿ ತೀರ್ಮಾನಿಸಲಿದೆ. ಈ ಬಗ್ಗೆ ಎಸ್‌ಐಟಿ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios