ಸೋನಿಯಾ ಗಾಂಧಿ ತೃಪ್ತಿಪಡಿಸಲು ತಮಿಳನಾಡಿಗೆ ಕಾವೇರಿ ನೀರು: ರಾಜ್ಯ ಸರ್ಕಾರದ ವಿರುದ್ಧ ಆರ್‌ ಅಶೋಕ್ ಆಕ್ರೋಶ

ರಾಜ್ಯ ಸರ್ಕಾರ ಸೋನಿಯಾ ಗಾಂಧಿಯನ್ನು ತೃಪ್ತಿಪಡಿಸಲು ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ. ನಮ್ಮ ರೈತರಿಗೆ ಕೃಷಿಗೆ ಬಿಡಿ ಕುಡಿಯಲು ಸಹ ನೀರಿಲ್ಲ ಇಂಥ ಪರಿಸ್ಥಿತಿಯಲ್ಲಿ ತಮಿಳನಾಡಿನ ಬೆಳೆಗೆ ನೀರು ಬಿಡುತ್ತಿರುವ ರಾಜ್ಯ ಸರ್ಕಾರ ನಾಡಿನ ರೈತರ ಹಿತಾಸಕ್ತಿ ಬಲಿಕೊಟ್ಟಿದೆ ಎಂದು ಮಾಜಿ ಡಿಸಿಎಂ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

Cauvery water dispute farmer dcm R ashok outraged against congress government at bengaluru rav

ಬೆಂಗಳೂರು (ಸೆ.21): ರಾಜ್ಯ ಸರ್ಕಾರ ಸೋನಿಯಾ ಗಾಂಧಿಯನ್ನು ತೃಪ್ತಿಪಡಿಸಲು ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿಲ್ಲಿ ಕಾವೇರಿ ಹೋರಾಟ ವಿಚಾರ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋನಿಯಾ ಗಾಂಧಿ ಚಿತಾವಣೆ ಮೇರೆಗೆ ಸಿಎಂ, ಡಿಸಿಎಂ ತಮಿಳನಾಡಿಗೆ ನೀರು ಬಿಟ್ಟಿದ್ದಾರೆ. ಆ ಮೂಲಕ ಮುಂಬರುವ ಚುನಾವಣೆಗೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ರೈತರಿಗೆ ಕೃಷಿಗೆ ಬಿಡಿ, ಕುಡಿಯಲೇ ನೀರು ಇಲ್ಲದಂತಾಗಿದೆ ಇಂಥ ಪರಿಸ್ಥಿತಿಯಲ್ಲಿ ತಮಿಳನಾಡು ಬೆಳೆಗೆ ನೀರು ಬಿಡುತ್ತಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆಗೆ ಇಳಿದಿದ್ದಾರೆ ಪರಿಸ್ಥಿತಿ ಕೈಮೀರಿ ಗಲಾಟೆಗಳು ನಡೆದರೆ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದರು.

ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದು ಬಿಜೆಪಿ ಸರ್ಕಾರದಲ್ಲಿ: ಆರ್‌ ಅಶೋಕ್ ತಿರುಗೇಟು

ಕಾವೇರಿ ವಿಚಾರವಾಗಿ ಸಮರ್ಥವಾಗಿ ವಾದ ಮಂಡಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸ್ಟಾಲಿನ್ ವಿರುದ್ಧ ಒಂದೇ ಒಂದು ಮಾತನಾಡಿಲ್ಲ. ತಮಿಳನಾಡಿನವರು ದೆಹಲಿಗೆ ಹೋದಾಗ ಇವರು ಇಲ್ಲೇ ಗೂಟ ಹೊಡೆದುಕೊಂಡು ಕೂತಿದ್ರು ಈಗ ಬೂಟಾಟಿಕೆಗೆ ದೆಹಲಿಗೆ ಹೋಗಿದ್ದಾರೆ. ರೈಲು ಹೋದಮೇಲೆ ಟಿಕೆಟ್ ತಗೊಂಡ್ರೆ ರೈಲು ಸಿಗುತ್ತಾ ಎಂದು ರಾಜ್ಯ ಸರ್ಕಾರದ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ರೈತಸಂಘ, ಕನ್ನಡ ಸಂಘಟನೆಗಳು ಪ್ರತಿಭಟನೆಯ ಕಿಡಿ ಹೊತ್ತಿಸಿದ್ದು ರಾಜ್ಯ ಸರ್ಕಾರದ ವಿರುದ್ಧ ಯಾವ ಭುಗಿಲೇಳುವುದೋ ಇದೀಗ ಆರ್‌ ಅಶೋಕ್ ಕೂಡ ರಾಜ್ಯ ಸರ್ಕಾರದ ವಿರುದ್ಧ ಕಿಚ್ಚು ಹೆಚ್ಚಿಸುವ ಮಾತನಾಡಿದ್ದಾರೆ. ಇತ್ತ ರಾಜ್ಯ ಸರ್ಕಾರ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತಾ ತಮಿಳನಾಡಿಗೆ ನೀರು ಬಿಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.

ಇವತ್ತಿಗೆ ಚುನಾವಣೆ ನಡೆದರೂ ಸಿದ್ದರಾಮಯ್ಯಗೆ ಜನ ವೋಟ್ ಹಾಕಲ್ಲ: ಆರ್.ಅಶೋಕ್

Latest Videos
Follow Us:
Download App:
  • android
  • ios