Asianet Suvarna News Asianet Suvarna News

ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದು ಬಿಜೆಪಿ ಸರ್ಕಾರದಲ್ಲಿ: ಆರ್‌ ಅಶೋಕ್ ತಿರುಗೇಟು

ಸಿದ್ದರಾಮಯ್ಯ ಓರ್ವ ಪಕ್ಷಾಂತರಿ.ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಸಿದ್ದರಾಮಯ್ಯನವರು ಮೊದಲ ಫಲಾನುಭವಿಗಳು'ರಾಜ್ಯದಲ್ಲಿ ಬಿಜೆಪಿಯೇ ಇಲ್ಲ ಎಂಬ ಸಿದ್ದರಾಮಯ್ಯರ ಹೇಳಿಕೆಗೆ ಆರ್‌.ಅಶೋಕ್ ತಿರುಗೇಟು ನೀಡಿದರು.

R ashok outraged against cm siddaramaiah statement about bjp at mysuru rav
Author
First Published Sep 12, 2023, 7:27 AM IST

ಮೈಸೂರು (ಸೆ.12):'ಸಿದ್ದರಾಮಯ್ಯ ಓರ್ವ ಪಕ್ಷಾಂತರಿ.ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಸಿದ್ದರಾಮಯ್ಯನವರು ಮೊದಲ ಫಲಾನುಭವಿಗಳು'ರಾಜ್ಯದಲ್ಲಿ ಬಿಜೆಪಿಯೇ ಇಲ್ಲ ಎಂಬ ಸಿದ್ದರಾಮಯ್ಯರ ಹೇಳಿಕೆಗೆ ಆರ್‌.ಅಶೋಕ್ ತಿರುಗೇಟು ನೀಡಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್‌ ಅಶೋಕ್ ಸಿಎಂ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದು ಯಾರ ಅವಧಿಯಲ್ಲಿ ಎಂದು ಪ್ರಶ್ನಿಸಿದರಲ್ಲದೆ,  ಬಿಜೆಪಿ ಬೆಂಬಲದಿಂದಲೇ ಅವರು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದು. ಬಿಜೆಪಿ ಇಲ್ಲ ಎಂದು ಇವರು ಹೇಳ್ತಾರೆ. ಆದರೆ ಇಂದು ಪ್ರಪಂಚದಲ್ಲಿಯೇ ಬಿಜೆಪಿ ನಂಬರ್ 1ಪಾರ್ಟಿ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.


ಸಿದ್ದರಾಮಯ್ಯ ಮೊದಲು ಸಮಾಜವಾದಿ ಪಾರ್ಟಿಯಲ್ಲಿದ್ರು, ಆಮೇಲೆ ಜೆಡಿಎಸ್‌ಗೆ ಬಂದ್ರು ಈಗ ಕಾಂಗ್ರೆಸ್ ನಲ್ಲಿದ್ದಾರೆ. ಸಿದ್ದರಾಮಯ್ಯ ಓರ್ವ ಪಕ್ಷಾಂತರಿ ಯಾವ್ಯಾವ ಏನು ಅಧಿಕಾರ ಸಿಗುತ್ತೆ ಅಲ್ಲಿ ಹೋಗ್ತಾರೆ. ಮುಂದೆ ಯಾವ ಪಾರ್ಟಿಗೆ ಹೋಗ್ತಾರೋ ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯನವರು ಭ್ರಮೆಯಲ್ಲಿದ್ದಾರೆ ಎಂದರು.

ಅಳಕುಪುಳುಕಾಗಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.
ಇವತ್ತು ಚುನಾವಣೆ ನಡೆದರೂ ಸಿದ್ದರಾಮಯ್ಯನವರಿಗೆ ಜನ ವೋಟ್ ಹಾಕಲ್ಲ.
ಚುನಾವಣೆಯಲ್ಲಿ ಗೆಲ್ಲಲಿಕ್ಕೆ ಅವರೇ ಹರಸಾಹಸ ಮಾಡುತ್ತಾರೆ.
ಬಿಜೆಪಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಸಿದ್ದರಾಮಯ್ಯಗಿಲ್ಲ. ವಿಪಕ್ಷ ನಾಯಕನನ್ನ ಸಿದ್ದರಾಮಯ್ಯ ಆಯ್ಕೆ ಮಾಡ್ತಾರಾ? ಯಾವಾಗ ಮಾಡ್ಬೇಕು,ಹೇಗೆ ಮಾಡಬೇಕು ಎಂಬುದನ್ನು ನಾವು ತೀರ್ಮಾನ ಮಾಡ್ತೀವಿ ಎಂದರು.

ಇನ್ನು ಡಿಕೆಶಿ ಶಿವಕುಮಾರ್ ಹಾಗೂ ಬಿಕೆ ಹರಿಪ್ರಸಾದ್ ದಿನನಿತ್ಯ ಸಿದ್ದರಾಮಯ್ಯನವರ ಪಂಚೆ,ವಾಚ್ ಬಗ್ಗೆ ಬೈಯುತ್ತಿದ್ದಾರೆ. ಆದರೆ ನಾವು ಇಂಥದಕ್ಕೆಲ್ಲ ನೋ ರಿಯಾಕ್ಷನ್, ಬಿಜೆಪಿ ಬಗ್ಗೆ ಮಾತ್ರ ರಿಯಾಕ್ಷನ್.
ಇದರಿಂದಲೇ ಗೊತ್ತಾಗುತ್ತೆ ಯಾವ ಪಾರ್ಟಿ ಹಾಳಾಗೋಗಿದೆ ಎಂಬುದು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗುವುದನ್ನ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಭರವಸೆ ವ್ಯಕ್ತಪಡಿಸಿದರುರ.

Follow Us:
Download App:
  • android
  • ios