Asianet Suvarna News Asianet Suvarna News

ಇವತ್ತಿಗೆ ಚುನಾವಣೆ ನಡೆದರೂ ಸಿದ್ದರಾಮಯ್ಯಗೆ ಜನ ವೋಟ್ ಹಾಕಲ್ಲ: ಆರ್.ಅಶೋಕ್

ಸಿದ್ದರಾಮಯ್ಯ ಒಬ್ಬ ಪಕ್ಷಾಂತರಿ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಆರ್.ಅಶೋಕ್ ಆರೋಪಿಸಿದರು. ರಾಜ್ಯದಲ್ಲಿ ಬಿಜೆಪಿಯೇ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಸಂಬಂಧ ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

Ex Minister R Ashok Slams On CM Siddaramaiah gvd
Author
First Published Sep 12, 2023, 3:00 AM IST

ಮೈಸೂರು (ಸೆ.12): ಸಿದ್ದರಾಮಯ್ಯ ಒಬ್ಬ ಪಕ್ಷಾಂತರಿ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಆರ್.ಅಶೋಕ್ ಆರೋಪಿಸಿದರು. ರಾಜ್ಯದಲ್ಲಿ ಬಿಜೆಪಿಯೇ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಸಂಬಂಧ ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಸಿದ್ದರಾಮಯ್ಯನವರು ಮೊದಲ ಫಲಾನುಭವಿಗಳು. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದು ಬಿಜೆಪಿ ಬೆಂಬಲದಿಂದಲೇ. ಇಂದು ಪ್ರಪಂಚದಲ್ಲಿಯೇ ಬಿಜೆಪಿ ನಂಬರ್ 1 ಪಾರ್ಟಿ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಸಮಾಜವಾದಿ ಪಾರ್ಟಿ, ಜೆಡಿಎಸ್, ಈಗ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಯಾವ್ ಯಾವ ಪಾರ್ಟಿಯಲ್ಲಿ ಏನು ಅಧಿಕಾರ ಸಿಗುತ್ತೆ ಅಲ್ಲಿ ಹೋಗ್ತಾರೆ. ಮುಂದೆ ಯಾವ ಪಾರ್ಟಿಗೆ ಹೋಗ್ತಾರೆ ಗೊತ್ತಿಲ್ಲ. ಸಿದ್ದರಾಮಯ್ಯನವರು ಭ್ರಮೆಯಲ್ಲಿದ್ದಾರೆ. ಪ್ರಧಾನಿ ಮೋದಿಯವರು ಮತ್ತೆ ಪ್ರಧಾನಿ ಆಗುವುದನ್ನ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. ಅಳಕುಪುಳುಕಾಗಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದಾರೆ. ಇವತ್ತಿಗೆ ಚುನಾವಣೆ ನಡೆದರೂ ಸಿದ್ದರಾಮಯ್ಯನವರಿಗೆ ಜನ ವೋಟ್ ಹಾಕಲ್ಲ. 

ಸನಾತನ ಧರ್ಮದ ಬಗ್ಗೆ ಹಗುರವಾಗಿ ಮಾತನೋಡೋದು ತಪ್ಪು: ಯದುವೀರ್‌ ಒಡೆಯರ್‌

ಚುನಾವಣೆಯಲ್ಲಿ ಗೆಲ್ಲಲಿಕ್ಕೆ ಅವರೇ ಹರಸಾಹಸ ಮಾಡುತ್ತಾರೆ. ಬಿಜೆಪಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಸಿದ್ದರಾಮಯ್ಯಗಿಲ್ಲ ಎಂದು ಅವರು ಟೀಕಿಸಿದರು. ವಿಪಕ್ಷ ನಾಯಕನನ್ನ ಸಿದ್ದರಾಮಯ್ಯ ಆಯ್ಕೆ ಮಾಡ್ತಾರಾ? ಯಾವಾಗ ಮಾಡ್ಬೇಕು, ಹೇಗೆ ಮಾಡಬೇಕು ನಾವು ತೀರ್ಮಾನ ಮಾಡ್ತೀವಿ. ಡಿ.ಕೆ. ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್ ದಿನನಿತ್ಯ ಸಿದ್ದರಾಮಯ್ಯನವರ ಪಂಚೆ, ವಾಚ್ ಬಗ್ಗೆ ಬೈಯ್ತಿದ್ದಾರೆ. ಇದಕ್ಕೆ ನೋ ರಿಯಾಕ್ಷನ್, ಬಿಜೆಪಿ ಬಗ್ಗೆ ಮಾತ್ರ ರಿಯಾಕ್ಷನ್. ಇದರಿಂದಲೇ ಗೊತ್ತಾಗುತ್ತೆ ಯಾವ ಪಾರ್ಟಿ ಹಾಳಾಗೋಗಿದೆ ಎಂಬುದು ಎಂದು ಅವರು ತಿರುಗೇಟು ನೀಡಿದರು.

ಹಳೇ ಮೈಸೂರು ಭಾಗಕ್ಕೆ ಅನ್ಯಾಯ: ಈಗಿನ ಕಾಂಗ್ರೆಸ್ ಸರ್ಕಾರ ಕದ್ದು ಮುಚ್ಚಿ ರಾತ್ರೋರಾತ್ರಿ ತಮಿಳುನಾಡಿಗೆ ನೀರು ಹರಿಸಿದೆ ಎಂದು ಮಾಜಿ ಸಚಿವ ಆರ್.ಅಶೋಕ್ ಆರೋಪಿಸಿದರು. ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟು ವೀಕ್ಷಣೆ ಬಳಿ ಇದ್ದ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಟಾಲಿನ್ ಮೇಲಿನ ಮೋಹಕ್ಕೆ ಒಳಗಾಗಿ ತಮಿಳುನಾಡಿಗೆ ನೀರು ಹರಿಸಿದೆ. ನೀರನ್ನು ಸಂರಕ್ಷಿಸಿಕೊಂಡು ರೈತರಿಗೆ ನೀಡದ ಕಾಂಗ್ರೆಸ್ ಸರ್ಕಾರ ಹಳೇ ಮೈಸೂರು ಭಾಗದ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.

ಸನಾತನ ಧರ್ಮದವರನ್ನು ಕಾಗೆಗಳಿಗೆ ಹೋಲಿಸಿದ ಪ್ರಕಾಶ್ ರಾಜ್!

ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ಅಣೆಕಟ್ಟೆಯಲ್ಲಿ ಅತಿ ಕಡಿಮೆ ನೀರು ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ಕುಡಿವ ನೀರಿಗೂ ಹಾಹಾಕಾರ ಎದುರಾಗುವುದು ನಿಶ್ಚಿತವಾಗಿದೆ. ಅಧಿಕಾರಿಗಳು ಮಾಧ್ಯಮದವರನ್ನು ಅಣೆಕಟ್ಟೆ ಮೇಲೆ ಹೋಗಲು ನಿರ್ಬಂಧ ಮಾಡಿದರು. ಸರ್ಕಾರದ ನಿಜಬಣ್ಣ ತಿಳಿಯುತ್ತದೆ ಎಂಬ ಕಾರಣಕ್ಕೆ ಮಾಧ್ಯಮಗಳಿಗೆ ತುರ್ತು ಪರಿಸ್ಥಿತಿ ತಂದಿದ್ದಾರೆ. ಕೇವಲ 11 ಜನರಿಗೆ ಮಾತ್ರ ಡ್ಯಾಂ ಮೇಲೆ ಹೋಗಲು ಅವಕಾಶ ಕೊಟ್ಟಿದ್ದು, ಇದರ ಒಳ ಉದ್ದೇಶ ಕಾಂಗ್ರೆಸ್ ನೇತೃತ್ವದ ಇಂಡಿಯಾ ಆಗಿದೆ ಎಂದು ಜರಿದರು.

Follow Us:
Download App:
  • android
  • ios