ಬೆಂಗಳೂರು(ಜು.26): ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಒಂದು ಕೋಟಿ ಗಿಡ ನೆಡಲು ಚಿಂತನೆ ನಡೆಸಲಾಗಿದೆ ಎಂದು ವಿಧಾನಪರಿಷತ್‌ ಸದಸ್ಯರೂ ಆದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಹೇಳಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.28ರಂದು 58 ಸಾವಿರ ಬೂತ್‌ ಮಟ್ಟದಲ್ಲಿ ಗಿಡ ನೆಡುವ ಕಾರ್ಯಕ್ರಮ ಇರಲಿದೆ ಎಂದರು.

3-4 ಸಚಿವರ ಕೈಬಿಟ್ಟು ಸಮರ್ಥ ಸಂಪುಟ ಕಟ್ಟಲು ಸಿಎಂ ಚಿಂತನೆ: ಇಲ್ಲಿದೆ ಕ್ಯಾಬಿನೆಟ್ ಲೆಕ್ಕಾಚಾರ!

ಜು.27ರಂದು ವಿಧಾನಸೌಧದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ಸರ್ಕಾರದ ಸಾಧನೆಯ ಕುರಿತ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಲಿದ್ದು, ಆ.1 ರಂದು ರಾಜ್ಯವನ್ನು ಉದ್ದೇಶಿಸಿ ವಚ್ರ್ಯೂವಲ್‌ ರಾರ‍ಯಲಿಯಲ್ಲಿ ಭಾಷಣೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಭಾಷಣೆ ಇರಲಿದ್ದು, ಒಂದು ಕೋಟಿ ಜನರನ್ನು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ವೇಳೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಕೂಡ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಜು.29ರಿಂದ 31ರವರೆಗೆ ಸುಮಾರು 50 ಲಕ್ಷ ಮನೆಗಳಿಗೆ ಸರ್ಕಾರದ ಸಾಧನೆಯ ಕರಪತ್ರ ಹಂಚುವ ಗುರಿ ಹೊಂದಲಾಗಿದೆ. ಪ್ರತಿ ಬೂತ್‌ಮಟ್ಟದಲ್ಲಿ ಕನಿಷ್ಠ ನೂರು ಮನೆಗೆ ಕರ ಪತ್ರ ಹಂಚಲಾಗುವುದು.

ಪ್ರವಾಹದಲ್ಲಿ ಈಜಿ ಗೆದ್ದು ಬಂದ ಸರ್ಕಾರದ ಸಾಧನೆ ಹಾಗೂ ಕೋವಿಡ್‌-19 ನಿರ್ವಹಣೆ ಕುರಿತು ಜನರಿಗೆ ತಲುಪಿಸಲಾಗುವುದು. ಸರ್ಕಾರದ ಒಂದು ವರ್ಷ ಸಾಧನೆ ಕುರಿತು ಸಚಿವರು, ಸಂಸದರು ಹಾಗೂ ಜಿಲ್ಲಾಧ್ಯಕ್ಷರು ಜಿಲ್ಲಾ ಮಟ್ಟದಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ವಿವರಿಸಿದರು.

ಸವಾಲು ಎದುರಿಸುವ ಶಕ್ತಿ ನನಗೆ ರಕ್ತಗತವಾಗಿ ಬಂದಿದೆ: ಬಿಎಸ್‌ವೈ

ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು, ಸರ್ಕಾರ ಕೋವಿಡ್‌ ನಿರ್ವಹಣೆ ಮಾಡಿಲ್ಲ ಎಂದು ಸುಳ್ಳು ಅಪಾದನೆ ಮಾಡುತ್ತಿದ್ದಾರೆ. ಇನ್ನು ಅನೈತಿಕ ಸರ್ಕಾರ ಎಂದು ಹೇಳುತ್ತಿರುವ ಶಿವಕುಮಾರ್‌ ಯಾವ ನೈತಿಕತೆ ಹೊಂದಿದ್ದಾರೆ ಎಂಬುದು ಇಡೀ ರಾಜ್ಯದ ಜನತೆಗೆ ತಿಳಿದಿದೆ ಎಂದು ತಿರುಗೇಟು ನೀಡಿದರು.