ನಮ್ಮ ತಂದೆಗೆ ವಯಸ್ಸಾಗಿಲ್ಲ, ಇನ್ನು 25ರ ಚಿರಯುವಕನಂತೆ ಕೆಲಸ ಮಾಡುತ್ತಾರೆ: ಬಿಎಸ್‌ವೈ ಪುತ್ರಿ ಅರುಣಾದೇವಿ
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 80ನೇ ವರ್ಷದ ಹುಟ್ಟುಹಬ್ಬದ ಸಂಭ್ರಮಾಚರಣೆ ಈಗಾಗಲೇ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಯಡಿಯೂರಪ್ಪ ನಿವಾಸದಲ್ಲಿ ಬೃಹತ್ ಕೇಕ್ ಕತ್ತರಿಸಿ ಜನುಮ ದಿನಾಚರಣೆ ಆಚರಣೆ ಮಾಡಲಾಗಿದ್ದು, ಯಡಿಯೂರಪ್ಪ ಪುತ್ರಿ ಎಸ್.ಅರುಣಾ ದೇವಿ ತಮ್ಮ ತಂದೆ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ.
ಶಿವಮೊಗ್ಗ (ಫೆ.27): ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 80ನೇ ವರ್ಷದ ಹುಟ್ಟುಹಬ್ಬದ ಸಂಭ್ರಮಾಚರಣೆ ಈಗಾಗಲೇ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಯಡಿಯೂರಪ್ಪ ನಿವಾಸದಲ್ಲಿ ಬೃಹತ್ ಕೇಕ್ ಕತ್ತರಿಸಿ ಜನುಮ ದಿನಾಚರಣೆ ಆಚರಣೆ ಮಾಡಲಾಗಿದ್ದು, ಯಡಿಯೂರಪ್ಪ ಪುತ್ರಿ ಎಸ್.ಅರುಣಾ ದೇವಿ ತಮ್ಮ ತಂದೆ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ. ಇವತ್ತು ತಂದೆಯವರ 80ನೇ ಹುಟ್ಟುಹಬ್ಬ. ಅವರು 80 ವಯಸ್ಸಾಗಿದೆ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಲಿ ಅನ್ನೋದು ನಮ್ಮ ಆಶಯ. ಆದರೆ ಅವರು ತಮ್ಮನ್ನ ಸಮಾಜಕ್ಕೆ ಅರ್ಪಿಸಿಕೊಂಡಿದ್ದಾರೆ ಎಂದರು.
ತಂದೆಯವರು ಷಷ್ಠಾಬ್ದಿ ಕಾರ್ಯಕ್ರಮದಲ್ಲಿ ಹೇಳಿದ್ದರು. ನಾನು ಈ ಮೊದಲು ಕುಟುಂಬಕ್ಕೆ ಸಮಯ ಕೊಡುತಿದ್ದೆ. ಈಗ ನಿಮಗೆ ಜವಾಬ್ದಾರಿ ಬಂದಿದೆ. ನಾನು ನನ್ನನ್ನ ಸಮಾಜಕ್ಕೆ ಸಂಪೂರ್ಣ ಅರ್ಪಿಸಿಕೊಳ್ಳುತ್ತೇನೆ ಅಂದ್ರು. ಏರ್ಪೋರ್ಟ್ ವಿಚಾರಲ್ಲಿ ರಾಘವೇಂದ್ರ ಹಠ ಬಿದ್ದು ಕೆಲಸ ಮಾಡಿದ್ರು. ಶಿವಮೊಗ್ಗ ಏರ್‌ಪೋರ್ಟ್ ಆಗುತ್ತಿರುವುದು ಆ ಕಾರ್ಯಕ್ರಮಕ್ಕೆ ಮೋದಿ ಬರುತ್ತಿರುವ ಇತಿಹಾಸದ ಅವಿಸ್ಮರಣೀಯ ಕ್ಷಣ. ಅದು ಇದೀಗ ದೇಶ ಮೆಚ್ಚಿದ ನಾಯಕನಿಂದ ಇನಾಗ್ರೇಷನ್ ಆಗ್ತಿದೆ. ಇಡೀ ರಾಜ್ಯ ಇಡೀ ದೇಶ ಬಿಎಸ್ ವೈ ಶುಭ ಕೋರುತಿದ್ದಾರೆ ಎಂದು ಅರುಣಾ ತಿಳಿಸಿದರು.
ಇಂದು ಶಿವಮೊಗ್ಗ ಏರ್‌ಪೋರ್ಟ್ ಲೋಕಾರ್ಪಣೆ: ಬಿಎಸ್‌ವೈ 80ನೇ ಜನ್ಮದಿನದಂದೇ ಮೋದಿ ಉದ್ಘಾಟನೆ
ಇವತ್ತು ತುಂಬಾ ಸಂತೋಷ ದಿನ. ನಮ್ಗೆ ಹೆಮ್ಮೆ ಆಗ್ತಿದೆ, ಮಲೆನಾಡು ಈ ರೀತಿ ಅಭಿವೃದ್ಧಿ ಆಗ್ತಿದೆ ಅಂತಾ. ಮಲೆನಾಡು ಮಧ್ಯ ಕರ್ನಾಟಕದ ಚಿತ್ರಣ ಬದಲಾಗಲಿದೆ. ಯಡಿಯೂರಪ್ಪನವರಿಗೆ ವಯಸ್ಸಾಗಿಲ್ಲ ಇನ್ನು 25ರ ಚಿರಯುವಕನಂತೆ ಕೆಲಸ ಮಾಡುತ್ತಾರೆ. 25ರ ಮನಸ್ಥಿತಿಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ ಚುನಾವಣೆಗೆ ನಿಲ್ಲೋಲ್ಲ ಆದ್ರೆ ಅವರು ಸಕ್ರೀಯ ರಾಜಕಾರಣದಲ್ಲಿರುತ್ತಾರೆ ಎಂದು ಅವರು ಹೇಳಿದರು.
1 ದಿನ ಮೊದಲೇ ಬಿಎಸ್‌ವೈ 80ನೇ ಜನ್ಮದಿನ ಸಂಭ್ರಮ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಣೆ ಮಾಡಿದರು. ಭಾರಿ ಗಾತ್ರದ ಕೇಕ್ ತಂದಿದ್ದರಲ್ಲದೇ, ಹೂ ಮಾಲೆ ಹಾಕುವ ಮೂಲಕ ತಮ್ಮ ಅಭಿಮಾನ ಮೆರೆದರು. ಶಿವಮೊಗ್ಗದ ವಿನೋಬ ನಗರದಲ್ಲಿನ ಅವರ ನಿವಾಸದ ಬಳಿ ಜಮಾಯಿಸಿದ ಅಭಿಮಾನಿಗಳು, ಅವರಿಗೆ ಹೂವಿನ ಹಾರ ಹಾಕಿ ಸಂಭ್ರಮಿಸಿದರು. ಯಡಿಯೂರಪ್ಪನವರಿಗೆ ಜೈಕಾರ ಹಾಕಿ, ದೀರ್ಘಾಯುಸ್ಸು ಕೋರಿದರು. ಭದ್ರಾವತಿಯ ತಮಿಳು ಸಮಾಜದ ಮುಖಂಡ ಕದಿರೇಶ್ ನೇತೃತ್ವದಲ್ಲಿ ಅಭಿಮಾನಿಗಳು 20 ಕೆ.ಜಿ. ತೂಕದ ಕೇಕ್ ತಂದಿದ್ದರು.
ರಾಜ್ಯ ಆಳುವ ಮುನ್ನ ಎಚ್‌ಡಿಕೆ ಮನೆ ಸರಿ ಮಾಡಿಕೊಳ್ಳಲಿ: ಕೇಂದ್ರ ಸಚಿವ ಜೋಶಿ
ಬಿಎಸ್‌ವೈ ನಿಂತಿರುವ ಫೋಟೊ, ಅವರ ತಲೆಯ ಭಾಗದಲ್ಲಿ ಪುತ್ರರಾದ ಬಿ.ವೈ.ವಿಜಯೇಂದ್ರ ಮತ್ತು ಬಿ.ವೈ.ರಾಘವೇಂದ್ರ ಇರುವ ಫೋಟೋ ಹಾಕಿದ್ದ ಈ ಕೇಕ್ ಎಲ್ಲರ ಗಮನ ಸೆಳೆಯುವಂತಿತ್ತು. ಕೇಕ್ ಕತ್ತರಿಸಿದ ಯಡಿಯೂರಪ್ಪ, ತಮ್ಮ ಪುತ್ರರಾದ ವಿಜಯೇಂದ್ರ ಮತ್ತು ರಾಘವೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ತಿನ್ನಿಸಿ, ಸಂಭ್ರಮಿಸಿದರು. ಜನ್ಮದಿನದ ಹಿನ್ನೆಲೆಯಲ್ಲಿ ಅವರ ನಿವಾಸದ ಮುಂಭಾಗದಲ್ಲಿ ಅಭಿಮಾನಿಗಳ ದಂಡೇ ನೆರೆದಿತ್ತು. ಅಭಿಮಾನಿಗಳು ಪಟಾಕಿ ಸಿಡಿಸಿ, ಸಂಭ್ರಮಾಚರಣೆ ನಡೆಸಿ, ಯಡಿಯೂರಪ್ಪಗೆ ಶುಭ ಕೋರಿದರು.