Asianet Suvarna News Asianet Suvarna News

ರಾಜ್ಯ ಆಳುವ ಮುನ್ನ ಎಚ್‌ಡಿಕೆ ಮನೆ ಸರಿ ಮಾಡಿಕೊಳ್ಳಲಿ: ಕೇಂದ್ರ ಸಚಿವ ಜೋಶಿ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ಕುಟುಂಬದ ಎಲ್ಲರಿಗೂ ಟಿಕೆಟ್‌ ಕೊಟ್ಟರೂ ಅವರಲ್ಲಿ ಕಿತ್ತಾಟ ಸಾಮಾನ್ಯ. ಹಾಗಾಗಿ ಅವರು ಮೊದಲು ತಮ್ಮ ಮನೆ, ಕುಟುಂಬ ಸರಿ ಮಾಡಿಕೊಳ್ಳಲಿ. ಆಮೇಲೆ ರಾಜ್ಯ ಆಳಲು ಬರಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕುಟುಕಿದ್ದಾರೆ. 

Union Minister Pralhad Joshi Slams On HD Kumaraswamy At Hubballi gvd
Author
First Published Feb 27, 2023, 7:45 AM IST | Last Updated Feb 27, 2023, 7:45 AM IST

ಹುಬ್ಬಳ್ಳಿ (ಫೆ.27): ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ಕುಟುಂಬದ ಎಲ್ಲರಿಗೂ ಟಿಕೆಟ್‌ ಕೊಟ್ಟರೂ ಅವರಲ್ಲಿ ಕಿತ್ತಾಟ ಸಾಮಾನ್ಯ. ಹಾಗಾಗಿ ಅವರು ಮೊದಲು ತಮ್ಮ ಮನೆ, ಕುಟುಂಬ ಸರಿ ಮಾಡಿಕೊಳ್ಳಲಿ. ಆಮೇಲೆ ರಾಜ್ಯ ಆಳಲು ಬರಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕುಟುಕಿದ್ದಾರೆ. ಹಾಸನ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಕುರಿತ ಚರ್ಚೆ ಬಗ್ಗೆ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ಮೊದಲು ಮನೆಯನ್ನು ನಿರ್ವಹಿಸಲಿ. ಕುಟುಂಬದ 10-12 ಮಂದಿ ಚುನಾವಣೆಯಲ್ಲಿ ನಿಂತರೂ ಅವರಿಗೆ ಸಮಾಧಾನವಿಲ್ಲ. ಹಾಗಿದ್ದ ಮೇಲೂ ಪರಸ್ಪರ ಬಡಿದಾಡುತ್ತಾರೆ. ಕುಟುಂಬವನ್ನೇ ನಿರ್ವಹಿಸಲಾಗದವರು ರಾಜ್ಯ, ದೇಶವನ್ನು ಹೇಗೆ ನಿಭಾಯಿಸುತ್ತಾರೆ ಎಂದು ವ್ಯಂಗ್ಯವಾಡಿದರು.

ಮಠಾಧೀಶರು ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲ ಮಠಾಧೀಶರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕಾರಣಿಗಳು ರಾಜಕಾರಣಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಯಾರು, ಯಾವ ಅರ್ಥದಲ್ಲಿ ಮಠಾಧೀಶರ ಬಗ್ಗೆ ಹಾಗೆ ಹೇಳಿದ್ದಾರೆ ಎಂಬುದು ಗೊತ್ತಿಲ್ಲ ಎಂದರು. ಇನ್ನು ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿಯ ಬಗ್ಗೆಯೂ ಟೀಕಾ ಪ್ರಹಾರ ನಡೆಸಿದ ಪ್ರಹ್ಲಾದ ಜೋಶಿ, ರಾಹುಲ್‌ ಗಾಂಧಿ ಕೋವಿಡ್‌ ವ್ಯಾಕ್ಸಿನ್‌ ಬಗ್ಗೆ ಆಗಾಗ ಸುಳ್ಳು ಸುದ್ದಿ ಹಬ್ಬಿಸುತ್ತಿರುತ್ತಾರೆ. ಅವರಿಗೆ ದೇಶದ ವಿಜ್ಞಾನಿಗಳ ಬಗ್ಗೆ ನಂಬಿಕೆ ಇಲ್ಲ. ಕೋವಿಡ್‌ ಲಸಿಕೆ ಕಳಪೆ ಆಗಿದ್ದರೆ ಜನರು ದಂಗೆ ಏಳುತ್ತಿದ್ದರು ಎಂದು ಹೇಳಿದರು.

ಮೋದಿ ರೋಡ್‌ ಶೋಗಾಗಿ ಪಿಯು ಪರೀಕ್ಷೆ ಮುಂದೂಡಿಕೆ: ಸಮಾವೇಶಕ್ಕೆ ವಿದ್ಯಾರ್ಥಿಗಳು

ಮೊದಲು ನಿಮ್ಮ ಮನೆ ಸರಿ ಇಟ್ಕೊಳ್ಳಿ: ಮನೆ​ಯನ್ನೇ ಮ್ಯಾನೇಜ್‌ ಮಾಡ​ದ​ವರು ರಾಜ್ಯ​ವನ್ನು ಮ್ಯಾನೇಜ್‌ ಮಾಡ್ತಾರಾ? ಎಂಬ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿ​ಕೆಗೆ ತಿರುಗೇಟು ನೀಡಿರುವ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾ​ರ​ಸ್ವಾಮಿ, ಮೊದಲು ನಿಮ್ಮ ಮನೆ ಸರಿ ಮಾಡಿಕೊಂಡು ಬಳಿಕ ನಮ್ಮ ವಿಷಯ ಮಾತನಾಡಿ ಎಂದು ಟಾಂಗ್‌ ನೀಡಿದ್ದಾರೆ. ಜಿಲ್ಲೆಯ ಕೊಪ್ಪ​ದಲ್ಲಿ ಸುದ್ದಿ​ಗಾ​ರರ ಜತೆಗೆ ಮಾತ​ನಾ​ಡಿದ ಅವರು, ನಮ್ಮ ಕುಟುಂಬದಲ್ಲಿ ಚರ್ಚೆಗಳಾಗುವುದು, ರಾಜ್ಯದ ಜನತೆಯ ಒಳಿತಿಗಾಗಿ. ಕಾರ್ಯಕ್ರಮ ಕೊಡುವುದು ನಮ್ಮ ಕುಟುಂಬದ ಕೆಲಸ. ಜನರ ಸೇವೆ ಮಾಡಲು ಪೈಪೋಟಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಜೊತೆಗೆ ಅವರಿಗೆ, ಓರ್ವ ತಮ್ಮನನ್ನು ಸರಿಯಾಗಿ ಇಟ್ಟುಕೊಳ್ಳಲು ಸಾಧ್ಯವಾಗಿಲ್ಲ, ಅವರಲ್ಲಿಯೇ ಹೊಡೆದಾಟವಿದೆ. ಅವರ ಸಹೋದರ ಸಚಿವರ ಅಕ್ರಮಗಳ ದಾಖಲೆ ಕೊಡುವುದಾಗಿ ದಿನವೂ ನಮಗೆ ಪೋನ್‌ ಮಾಡ್ತಾ ಇದ್ದಾರೆ. ಅವರ ಕುಟುಂಬ ನೆಟ್ಟಗೆ ಇಡೋದು ಅವರಿಗೇ ಗೊತ್ತಿಲ್ಲ, ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಎಚ್‌ಡಿಕೆ ಕಿಡಿಕಾರಿದರು.

ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ: ಎಚ್‌.ಡಿ.ಕುಮಾರಸ್ವಾಮಿ

ಚುನಾವಣೆ ಬಂದಾಗ, ಪಕ್ಷ ಸಂಘಟನೆ ಮತ್ತು ಜನ ಸೇವೆ ಮಾಡಲು ಎಲ್ಲರಲ್ಲೂ ಉತ್ಸಾಹ ಇರುವುದರಿಂದ ಬೆಳವಣಿಗೆ ಆಗಿದೆ. ಇದು, ಕುಟುಂಬದ ಕಲಹನಾ ಎಂದು ಪ್ರಶ್ನಿಸಿದ ಕುಮಾರ ಸ್ವಾಮಿ, ಹಿಂದೂ ಸಂಸ್ಕೃತಿ ಬಗ್ಗೆ ಹೇಳುವ, ರಾಮ ಮಂದಿರ ಕಟ್ಟುವ ಜೋಶಿಯವರಿಗೆ ಕೇಳ್ತೀನಿ, ನಮ್ಮ ರಾಮಾಯಣ ಇರಲೀ, ಮಹಾಭಾರತ ಇರಲಿ ಏನು ನಡೆದಿದೆ. ದಶರಥ ತನ್ನ 3 ಪತ್ನಿಯರ ಪೈಕಿ ಕೈಕೇಯಿಗೆ ಕೊಟ್ಟಮಾತಿನಂತೆ ರಾಮನನ್ನು ಕಾಡಿಗೆ ಕಳುಹಿಸಿದ. ಅದು, ಅಧಿಕಾರಕ್ಕಾಗಿ ನಡೆದದ್ದು ಅಲ್ವಾ ಎಂದು ಪ್ರಶ್ನಿಸಿದರು. ನಮ್ಮ ಪಕ್ಷದಲ್ಲಿ, ಕಾರ್ಯಕರ್ತರಲ್ಲಿ ಕೆಲವರು ಗೊಂದಲ ಸೃಷ್ಟಿಮಾಡಿದ್ದಾರೆ. ಆ ಗೊಂದಲ ನಿವಾರಣೆ ಮಾಡುವ ಶಕ್ತಿ ಇದೆ ನಮಗೆ ಇದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios