Asianet Suvarna News Asianet Suvarna News

ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ವಜ್ರ ಬಸ್ ಗೂ ರಿಯಾಯಿತಿ ವಿದ್ಯಾರ್ಥಿ ಪಾಸ್ ಕೊಡಲು ಮುಂದಾದ ಬಿಎಂಟಿಸಿ!

ಬಸ್‌ ಪಾಸ್‌ ಪಡೆಯಲಿಚ್ಛಿಸುವ ವಿದ್ಯಾರ್ಥಿಗಳು ಬಿಎಂಟಿಸಿ ವೆಬ್‌ಸೈಟ್‌ www.mybmtc.karnataka.gov.inನಲ್ಲಿ ಅರ್ಜಿ ಪಡೆದು, ಅದನ್ನು ಭರ್ತಿ ಮಾಡಿ ಸಂಬಂಧಪಟ್ಟ ಶಾಲೆ-ಕಾಲೇಜು ಮುಖ್ಯಸ್ಥರಿಂದ ದೃಢೀಕರಿಸಬೇಕು. ನಂತರ ದೃಢೀಕೃತ ಅರ್ಜಿಯನ್ನು ಬಿಎಂಟಿಸಿಯ ಬಸ್‌ ನಿಲ್ದಾಣಗಳಲ್ಲಿ ಸಲ್ಲಿಸಿ ನಿಗದಿತ ಮೊತ್ತ ಪಾವತಿಸಿ ಪಾಸ್‌ ಪಡೆಯಬಹುದಾಗಿದೆ.

BMTC has decided to provide discounted bus pass for students in Vajra bus at bengaluru rav
Author
First Published Dec 2, 2023, 9:00 AM IST

ಬೆಂಗಳೂರು (ಡಿ.2): ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಿಎಂಟಿಸಿ ವಜ್ರ ಬಸ್‌ಗಳಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ವಜ್ರ ಮಾಸಿಕ ಬಸ್‌ ಪಾಸ್‌ ವಿತರಿಸುತ್ತಿದೆ.ಕಾಲೇಜು ಪ್ರಯಾಣಕ್ಕಾಗಿ ಇರುವ ವಿದ್ಯಾರ್ಥಿ ಮಾಸಿಕ ಬಸ್ ಪಾಸ್. ವಜ್ರ ಬಸ್ ಪಾಸ್ ಗೆ ಈಗಾಗಲೇ ಮಾಸಿಕ 1,800 ರೂ ದರವಿದೆ. ಈ ಪಾಸ್‌ಗಳನ್ನು ವಿದ್ಯಾರ್ಥಿಗಳಿಗಾಗಿ ₹1,200ಕ್ಕೆ ಪಾಸ್‌ ವಿತರಿಸಲು ನಿರ್ಧರಿಸಿದೆ. ವಜ್ರ ಮಾಸಿಕ ಬಸ್‌ ಪಾಸ್‌ ಪಡೆಯುವ ವಿದ್ಯಾರ್ಥಿಗಳು ವಜ್ರ ಸೇರಿದಂತೆ ಸಾಮಾನ್ಯ ಬಸ್‌ಗಳಲ್ಲಿ ಅನಿಯಮಿತವಾಗಿ ಪ್ರಯಾಣಿಸಬಹುದಾಗಿದೆ.

ಬಸ್‌ ಪಾಸ್‌ ಪಡೆಯಲಿಚ್ಛಿಸುವ ವಿದ್ಯಾರ್ಥಿಗಳು ಬಿಎಂಟಿಸಿ ವೆಬ್‌ಸೈಟ್‌ www.mybmtc.karnataka.gov.inನಲ್ಲಿ ಅರ್ಜಿ ಪಡೆದು, ಅದನ್ನು ಭರ್ತಿ ಮಾಡಿ ಸಂಬಂಧಪಟ್ಟ ಶಾಲೆ-ಕಾಲೇಜು ಮುಖ್ಯಸ್ಥರಿಂದ ದೃಢೀಕರಿಸಬೇಕು. ನಂತರ ದೃಢೀಕೃತ ಅರ್ಜಿಯನ್ನು ಬಿಎಂಟಿಸಿಯ ಬಸ್‌ ನಿಲ್ದಾಣಗಳಲ್ಲಿ ಸಲ್ಲಿಸಿ ನಿಗದಿತ ಮೊತ್ತ ಪಾವತಿಸಿ ಪಾಸ್‌ ಪಡೆಯಬಹುದಾಗಿದೆ.

ಅಪಘಾತ ತಡೆಗೆ ಹೈಟೆಕ್‌ ಕಾರಿನ ರೀತಿಯ ತಂತ್ರಜ್ಞಾನ ಬಿಎಂಟಿಸಿ ಬಸ್‌ಗಳಿಗೆ ಅಳವಡಿಕೆ: ಸಚಿವ ರಾಮಲಿಂಗಾರೆಡ್ಡಿ

ಎಲ್ಲಿ ಪಡೆಯಬಹುದು?

ಕೆಂಪೇಗೌಡ ಬಸ್ ನಿಲ್ದಾಣ, ಬನಶಂಕರಿ ಟಿಟಿಎಂಸಿ, ವೈಟ್ ಫೀಲ್ಡ್ ಟಿಟಿಎಂಸಿ, ದೊಮ್ಮಲೂರು ಟಿಟಿಎಂಸಿ, ಹೆಬ್ಬಾಳ, ಕೆಂಗೇರಿ ಟಿಟಿಎಂಸಿ, ಶಿವಾಜಿನಗರ ಬಸ್ ನಿಲ್ದಾಣ, ಕಾಡುಗೋಡಿ ಬಸ್ ನಿಲ್ದಾಣ, ಘಟಕ-೧೯ ಎಲೆಕ್ಟ್ರಾನಿಕ್ ಸಿಟಿ, ಯಲಹಂಕಾ ಹಳೆ ಬಸ್ ನಿಲ್ದಾಣ, ಶಾಂತಿನಗರ ಟಿಟಿಎಂಸಿ, ಸರ್ಜಾಪುರ ಬಸ್ ನಿಲ್ದಾಣಗಳಲ್ಲಿ  ಪಾಸನ್ನು ಪಡೆಯಬಹುದಾಗಿದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ \

4 ಮಾರ್ಗಗಳಲ್ಲಿ ಮೆಟ್ರೋ ಫೀಡರ್‌ ಬಸ್‌ ಹೆಚ್ಚಳ, ಯಾವೆಲ್ಲ ಮಾರ್ಗದಲ್ಲಿ ಓಡಾಡಲಿದೆ?

Follow Us:
Download App:
  • android
  • ios