ಬಿಎಂಟಿಸಿ ಬಸ್‌ಗಳು ಅಪಘಾತಕ್ಕೀಡಾಗುವ ಸಂದರ್ಭಗಳಲ್ಲಿ ಆ ಬಗ್ಗೆ ಚಾಲಕರನ್ನು ಎಚ್ಚರಿಸಿ ಅಪಘಾತ ತಡೆಯುವ ಸಲುವಾಗಿ ಹೈಟೆಕ್ ಕಾರುಗಳಲ್ಲಿ ಇರುವಂತೆ ಬಸ್‌ಗಳಿಗೆ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗುತ್ತಿದೆ. ಪ್ರಾಯೋಗಿಕವಾಗಿ 10 ಬಸ್‌ಗಳಿಗೆ ನೂತನ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಬೆಂಗಳೂರು (ನ.29): ಬಿಎಂಟಿಸಿ ಬಸ್‌ಗಳು ಅಪಘಾತಕ್ಕೀಡಾಗುವ ಸಂದರ್ಭಗಳಲ್ಲಿ ಆ ಬಗ್ಗೆ ಚಾಲಕರನ್ನು ಎಚ್ಚರಿಸಿ ಅಪಘಾತ ತಡೆಯುವ ಸಲುವಾಗಿ ಹೈಟೆಕ್ ಕಾರುಗಳಲ್ಲಿ ಇರುವಂತೆ ಬಸ್‌ಗಳಿಗೆ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗುತ್ತಿದೆ. ಪ್ರಾಯೋಗಿಕವಾಗಿ 10 ಬಸ್‌ಗಳಿಗೆ ನೂತನ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಹಲವು ಅಪಘಾತಗಳಲ್ಲಿ ಬಿಎಂಟಿಸಿ ಬಸ್ ಚಾಲಕರ ತಪ್ಪಿಲ್ಲದಿದ್ದರೂ ಬಿಎಂಟಿಸಿ ಮೇಲೆ ಆರೋಪ ಮಾಡಲಾಗುತ್ತದೆ. ಅಲ್ಲದೆ, ಬಿಎಂಟಿಸಿ ಚಾಲಕರೂ ಅತಿ ಒತ್ತಡ ಸೇರಿದಂತೆ ಇನ್ನಿತರ ಕಾರಣಗಳಿಂದ ಬಸ್‌ಗಳನ್ನು ಅಪಘಾತಕ್ಕೀಡು ಮಾಡುತ್ತಿರುವ ಪ್ರಕರಣಗಳೂ ಗಮನಕ್ಕೆ ಬಂದಿದೆ. ಹೀಗಾಗಿ ಬಿಎಂಟಿಸಿ ಬಸ್‌ಗಳಿಂದಾಗುವ ಅಪಘಾತ ತಡೆಗಾಗಿ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಯೋಜನೆಗೆ ಸಿದ್ದರಾಮಯ್ಯ ತಡೆ: ಶೋಭಾ ಕರಂದ್ಲಾಜೆ ಕಿಡಿ
ಅದರ ಅಡಿಯಲ್ಲಿ ಬಸ್‌ಗಳಿಂದ ‘ಮೊಬೈಲ್ 8 ಕನೆಕ್ಟ್’ ಹೆಸರಿನ ಸಾಧನ ಅಳವಡಿಸಲಾಗುತ್ತದೆ. ಅದರಲ್ಲಿ ವಿಷನ್ ಸೆನ್ಸಾರ್ ಕ್ಯಾಮೆರಾ, ಚಾಲಕ ಮಾನಿಟರಿಂಗ್ ಕ್ಯಾಮೆರಾ, ಜಿಪಿಎಸ್ ಮತ್ತು ಐ ವಾಚ್ ತಂತ್ರಜ್ಞಾನ ಒಳಗೊಂಡಿರುತ್ತದೆ. ಅಲ್ಲದೆ, ವಾಹನದ ಮುಂಭಾಗ ವಿಂಡ್ ಶೀಲ್ಡ್ ಗ್ಲಾಸ್ ಜೋಡಿಸಲಾಗುತ್ತದೆ. ಈ ಸಾಧನಗಳಿಂದ ಬಸ್‌ಗಳ ಮುಂದೆ ಚಲಿಸುವ ವಾಹನಗಳನ್ನು ಗುರುತಿಸಿ ಅವುಗಳು ಸುರಕ್ಷಿತ ಅಂತರದಲ್ಲಿವೆಯೇ ಎಂಬ ಬಗ್ಗೆ ತಿಳಿಯಬಹುದಾಗಿದೆ. ಅದರಿಂದ ಬಸ್‌ಗಳು ಮುಂದಿನ ವಾಹನಗಳಿಗೆ ಗುದ್ದುವುದು ತಪ್ಪಲಿದೆ. ಈ ನೂತನ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ 10 ಬಸ್‌ಗಳಲ್ಲಿ ಅಳವಡಿಸಲಾಗಿದ್ದು, ಶೀಘ್ರದಲ್ಲಿ ಎಲ್ಲ 5 ಸಾವಿರ ಬಸ್‌ಗಳಿಗೂ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಅಪಘಾತ ಸಂಭವಿಸುವ ಸಂದರ್ಭದಲ್ಲಿ ನೂತನ ತಂತ್ರಜ್ಞಾನದ ಮೂಲಕ ಧ್ವನಿ ಮತ್ತು ದೃಶ್ಯದ ತುಣುಕುಗಳನ್ನು ಸೆರೆ ಹಿಡಿದು ಬಿಎಂಟಿಸಿಯ ನಿಯಂತ್ರಣಾ ಕೊಠಡಿಗೆ ಸಂದೇಶ ರವಾನಿಸಲಿದೆ. ಅದರ ಜತೆಗೆ ಚಾಲಕರಿಗೂ ಎಚ್ಚರಿಕೆಯ ಶಬ್ದವನ್ನು ಹೊರಡಿಸಲಿದೆ. ಅದರಿಂದ ಚಾಲಕನ ಮುಂದೆ ಬಲಭಾಗದಲ್ಲಿ ಅಳವಡಿಸಲಾಗಿದ್ದು, ಅದರಿಂದ ಸಂದೇಶಗಳು ಚಾಲಕರಿಗೆ ಸ್ಪಷ್ಟವಾಗಿ ತಿಳಿಯಲಿದೆ ಎಂದು ಹೇಳಿದರು. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ, ನಿರ್ದೇಶಕಿ ಕಲಾ ಕೃಷ್ಣಮೂರ್ತಿ ಇದ್ದರು.
ಬಸ್ಸಲ್ಲಿ ಮಹಿಳಾ ಸುರಕ್ಷತೆಗೆ ಪ್ಯಾನಿಕ್ ಬಟನ್: ನಿರ್ಭಯಾ ಯೋಜನೆ ಅಡಿಯಲ್ಲಿ ಮಹಿಳಾ ಸುರಕ್ಷತೆಗಾಗಿ ಬಿಎಂಟಿಸಿಯ ಎಲ್ಲ 5 ಸಾವಿರ ಬಸ್‌ಗಳಲ್ಲಿ ‘ಇನ್ ಬಸ್ ಸರ್ವೆಲೆನ್ಸ್’ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಅದರ ಅಡಿಯಲ್ಲಿ ಬಸ್‌ಗಳಲ್ಲಿ ಪ್ಯಾನಿಕ್ ಬಟನ್, ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಇದರಿಂದ ಮಹಿಳಾ ಪ್ರಯಾಣಿಕರು ಬಸ್‌ನಲ್ಲಿ ಯಾವುದೇ ಅಹಿತಕರ ಘಟನೆಗೆ ತುತ್ತಾದರೆ ಪ್ಯಾನಿಕ್ ಬಟನ್ ಅನ್ನು ಒತ್ತಿದರೆ, ಅದರ ಮಾಹಿತಿಯು ಬಿಎಂಟಿಸಿ ಕಂಟ್ರೋಲ್ ರೂಂಗೆ ಹಾಗೂ ಹತ್ತಿರದಲ್ಲಿನ ಸಾರಥಿ ವಾಹನದ ಸಿಬ್ಬಂದಿಗೆ ತಲುಪಲಿದೆ. ಅದನ್ನಾಧರಿಸಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಬಹುದಾಗಿದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.
18 ಸಿಬ್ಬಂದಿಗೆ ಹೃದಯ ಸಂಬಂಧಿ ಕಾಯಿಲೆ: ಬಿಎಂಟಿಸಿ ಸಿಬ್ಬಂದಿ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜಯದೇವ ಆಸ್ಪತ್ರೆಯಿಂದ ಆರೋಗ್ಯ ತಪಾಸಣೆ ಕಾರ್ಯ ಕೈಗೊಳ್ಳಲಾಗಿದೆ. 45 ವರ್ಷ ಮೇಲ್ಪಟ್ಟ 11 ಸಾವಿರ ಸಿಬ್ಬಂದಿಯ ಪೈಕಿ 7 ಸಾವಿರ ಸಿಬ್ಬಂದಿ ಆರೋಗ್ಯ ತಪಾಸಣೆ ಪೂರ್ಣಗೊಳಿಸಲಾಗಿದೆ. ಅದರಲ್ಲಿ 18 ಮಂದಿ ಸಿಬ್ಬಂದಿಗೆ ಹೃದಯ ಸಂಬಂಧಿ ಕಾಯಿಲೆಗಳಿದ್ದು, ಆ್ಯಂಜಿಯೋಪ್ಲಾಸ್ಟ್ ಮತ್ತು ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ ಎಂಬ ವರದಿಯಿದೆ. ಅದನ್ನು ಸಿಬ್ಬಂದಿ ಆರೋಗ್ಯ ವಿಮೆ ಮೂಲಕ ಮಾಡಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ವಿವರಿಸಿದರು.
ಸಿದ್ದು, ಡಿಕೆಶಿಯನ್ನು ಪೊಲೀಸ್ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿ: ಸಂಸದ ಪ್ರತಾಪ್ ಸಿಂಹ
ಹೇಗೆ ಕೆಲಸ ಮಾಡುತ್ತೆ ಟೆಕ್ನಾಲಜಿ?
*‘ಮೊಬೈಲ್ 8 ಕನೆಕ್ಟ್’ ಹೆಸರಿನ ಸಾಧನ ಅಳವಡಿಕೆ
*ಬಸ್‌ಗಳಲ್ಲಿ ವಿಷನ್ ಸೆನ್ಸಾರ್ ಕ್ಯಾಮೆರಾ, ಚಾಲಕ ಮಾನಿಟರಿಂಗ್ ಕ್ಯಾಮೆರಾ, ಜಿಪಿಎಸ್, ಐ ವಾಚ್ ತಂತ್ರಜ್ಞಾನ
*ಈ ಸಾಧನದಿಂದ ಬಸ್‌ನ ಮುಂದಿನ ವಾಹನದ ನಡುವಿನ ಅಂತರದ ಮಾಹಿತಿ ಲಭ್ಯ
*ಸುರಕ್ಷಿತ ಅಂತರಕ್ಕಿಂತ ಹೆಚ್ಚು ಹತ್ತಿರದಲ್ಲಿ ಇದ್ದರೆ ತಕ್ಷಣ ಕಂಟ್ರೋಲ್ ರೂಂ, ಚಾಲಕನಿಗೆ ಶಬ್ದ ಸಹಿತ ಮಾಹಿತಿ
