ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ-ಜೆಡಿಎಸ್ ಮೈತ್ರಿ: ಸಚಿವ ಎ ನಾರಾಯಣಸ್ವಾಮಿ
ಅಭಿವೃದ್ದಿ ದೃಷ್ಟಿಯಿಂದ ಕಾಲ ಕಾಲಕ್ಕೆ ಬದಲಾವಣೆ ಆಗ್ತಾ ಇರುತ್ತೆ. ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಆಗಿದೆ.ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್ ಕಿತ್ತೊಗೆಯಲು ಒಂದಾಗಿದ್ದೇವೆ ಎಂದು ಚಿತ್ರದುರ್ಗದಲ್ಲಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಹೇಳಿದರು.
ಚಿತ್ರದುರ್ಗ (ಸೆ.12): ಅಭಿವೃದ್ದಿ ದೃಷ್ಟಿಯಿಂದ ಕಾಲ ಕಾಲಕ್ಕೆ ಬದಲಾವಣೆ ಆಗ್ತಾ ಇರುತ್ತೆ. ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಆಗಿದೆ.ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್ ಕಿತ್ತೊಗೆಯಲು ಒಂದಾಗಿದ್ದೇವೆ ಎಂದು ಚಿತ್ರದುರ್ಗದಲ್ಲಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಹೇಳಿದರು.
ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದ ಬೆಳವಣಿಗೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ ಇರುವ ದುರಾಡಳಿತ, ಕಾಂಗ್ರೆಸ್ ಸರ್ಕಾರದ ಗುಂಪುಗಾರಿಕೆ. ಈ ಸರ್ಕಾರದ ಬಗ್ಗೆ ಜನರಿಗೆ ವಿಶ್ವಾಸ ಹೋಗಿದೆ. ಕಾಂಗ್ರೆಸ್ ಪಕ್ಷದ ಶಾಸಕರೇ ಸರ್ಕಾರದ ವಿರುದ್ದ ವಾಗ್ದಾಳಿ ಮಾಡ್ತಿದ್ದಾರೆ. ಸಮಾಜವಾದದ ಪರಿಕಲ್ಪನೆ ಸಿಎಂ ಗೆ ಇಲ್ಲ ಎಂದು ಬಿಜೆಪಿ, ಜೆಡಿಎಸ್ ಹೇಳಿದ್ದಲ್ಲ. ಕಾಂಗ್ರೆಸ್ ಪ್ರಭಾವಿ ನಾಯಕ ಬಿ.ಕೆ ಹರಿಪ್ರಸಾದ್ ವೇದಿಕೆ ಮೇಲೆ ಬಹಿರಂಗವಾಗಿ ಹೇಳಿದ್ದು. ಅಧಿಕಾರಕ್ಕೆ ಬಂದ ನೂರು ದಿನಕ್ಕೆ ಕಾಂಗ್ರೆಸ್ ವಿಶ್ವಾಸ ಕಳೆದುಕೊಂಡಿದೆ. ಐದು ಯೋಜನೆಗಳಲ್ಲಿ ಎರಡ್ಮೂರು ಯೋಜನೆಗಳು ರಾಜ್ಯದ ಜನರಿಗೆ ತಲುಪುತ್ತಿಲ್ಲ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದು ಬಿಜೆಪಿ ಸರ್ಕಾರದಲ್ಲಿ: ಆರ್ ಅಶೋಕ್ ತಿರುಗೇಟು
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡ್ತಿದೆ. ದುರಾಡಳಿತವನ್ನು ಕಿತ್ತೊಗೆಯಲು ಬಿಜೆಪಿ-ಜೆಡಿಎಸ್ ಹೊಂದಣಿಕೆ ಮಾಡುವ ಬಗ್ಗೆ ವರಿಷ್ಠರು ಹೇಳಿದ್ದಾರೆ. ಈಗಾಗಲೇ ದೇವೇಗೌಡರು ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಪ್ರಧಾನಿ ಮೋದಿಯವರ ಬಳಿ ಮಾತನಾಡಿದ್ದಾರೆ. ಒಂದು ವಾರದ ಹಿಂದೆ ಹೆಚ್ ಡಿಕೆ ಆಸ್ಪತ್ರೆಯಿಂದ ಬಿಡುಗಡೆ ಆದಾಗ ಭೇಟಿ ಮಾಡಿದ್ದೆ ಎಂದರುರ.
ಬಿಜೆಪಿಗೆ ಬಂದಾಗಿಂದ ನಾನು ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ಅದರೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಪಕ್ಷ ಏನು ತೀರ್ಮಾನ ಕೈಗೊಂಡ್ರು ನಾನು ಬದ್ದ. ಪಕ್ಷ ಎಲ್ಲಿ ಅವಕಾಶ ಕೊಟ್ರು ಹೋರಾಟಕ್ಕೆ ಸೈನಿಕನ ರೀತಿ ತಯಾರಿದ್ದೇನೆ ಎಂದರು.
ಯಾರ ಹುದ್ದೆಯನ್ನು ಸಿಎಂ ತಪ್ಪಿಸಿಲ್ಲ ಹರಿಪ್ರಸಾದ್ ಅಸಮಾಧಾನ ಸರಿಯಲ್ಲ : ಬೋಸರಾಜು