Asianet Suvarna News Asianet Suvarna News

ರಾಗಿ ಖರೀದಿಸುವಲ್ಲೂ ರೈತರಿಗೆ ಬಿಜೆಪಿ ದ್ರೋಹ: ಕಾಂಗ್ರೆಸ್‌ ಕಿಡಿ

‘ಬಿಜೆಪಿ ಸರ್ಕಾರ ಬೆಂಬಲ ಬೆಲೆಯಡಿ ರಾಗಿ ಖರೀದಿಸುವಲ್ಲಿಯೂ ರೈತರಿಗೆ ದ್ರೋಹವೆಸಗಿದೆ. ರೈತರ ಸಮಸ್ಯೆ ಅರಿಯಲು ಹೈಕೋರ್ಟ್‌ನಿಂದ ಹೇಳಿಸಿಕೊಳ್ಳುವಷ್ಟು ದಪ್ಪ ಚರ್ಮವಿದೆಯೇ ಈ ಸರ್ಕಾರಕ್ಕೆ’ ಎಂದು ರಾಜ್ಯ ಕಾಂಗ್ರೆಸ್‌ ಕಿಡಿಕಾರಿದೆ.

BJP betrayed the farmers even in buying millet Congress said gvd
Author
First Published Dec 12, 2022, 8:06 AM IST

ಬೆಂಗಳೂರು (ಡಿ.12): ‘ಬಿಜೆಪಿ ಸರ್ಕಾರ ಬೆಂಬಲ ಬೆಲೆಯಡಿ ರಾಗಿ ಖರೀದಿಸುವಲ್ಲಿಯೂ ರೈತರಿಗೆ ದ್ರೋಹವೆಸಗಿದೆ. ರೈತರ ಸಮಸ್ಯೆ ಅರಿಯಲು ಹೈಕೋರ್ಟ್‌ನಿಂದ ಹೇಳಿಸಿಕೊಳ್ಳುವಷ್ಟು ದಪ್ಪ ಚರ್ಮವಿದೆಯೇ ಈ ಸರ್ಕಾರಕ್ಕೆ’ ಎಂದು ರಾಜ್ಯ ಕಾಂಗ್ರೆಸ್‌ ಕಿಡಿಕಾರಿದೆ. ‘ಆ್ಯಪ್‌ ನೆಪ ಹೇಳಿ ರಾಗಿ ಖರೀದಿಸದ ಸರ್ಕಾರ’ ಶೀರ್ಷಿಕೆಯಲ್ಲಿ ಭಾನುವಾರ ಕನ್ನಡಪ್ರಭ ಪ್ರಕಟಿಸಿರುವ ವಿಶೇಷ ವರದಿ ಟ್ವೀಟ್‌ ಮಾಡಿ ರಾಜ್ಯ ಕಾಂಗ್ರೆಸ್‌ ಪಕ್ಷವು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

40 ಪರ್ಸೆಂಟ್‌ ಕಮಿಷನ್‌ ದೋಚುವುದರಲ್ಲಿ ಇರುವ ಆಸಕ್ತಿ ಬಿಜೆಪಿಯವರಿಗೆ ರೈತರ ಸಮಸ್ಯೆ ಬಗೆಹರಿಸುವುದರಲ್ಲಿ ಇಲ್ಲ. ರಾಜ್ಯದ ರೈತರು ಬೆಳೆ ನಷ್ಟ, ಕೀಟಬಾಧೆ, ಗೊಬ್ಬರ ಕೊರತೆ, ಬಿತ್ತನೆ ಬೀಜಗಳ ಕೊರತೆ ಸೇರಿದಂತೆ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ನಡುವೆ ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡದೆ ರಾಜ್ಯದ 40 ಪರ್ಸೆಂಟ್‌ ಸರ್ಕಾರ ರೈತರಿಗೆ ದ್ರೋಹ ಎಸಗಿದೆ ಎಂದು ಕಿಡಿಕಾರಿದೆ.

ಆ್ಯಪ್‌ ನೆಪ ಹೇಳಿ ರಾಗಿ ಖರೀದಿಸದ ಸರ್ಕಾರ: ಚಾಟಿ ಬೀಸಿದ ಹೈಕೋರ್ಟ್‌

ಕಾಲಕಾಲಕ್ಕೆ ರೈತರ ನೋವುಗಳನ್ನು ಆಲಿಸಿ, ಅಹವಾಲು ಸ್ವೀಕರಿಸಿ, ನಿರ್ದಿಷ್ಟಸಮಯದಲ್ಲಿ ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಆದರೆ, ರೈತರ ಸಮಸ್ಯೆ ಅರಿಯಲು ಹೈಕೋರ್ಟ್‌ನಿಂದ ಹೇಳಿಸಿಕೊಳ್ಳುವಷ್ಟುದಪ್ಪ ಚರ್ಮ ಈ ಸರ್ಕಾರಕ್ಕೆ ಬಂದಿದೆ. ಮೊಬೈಲ್‌ ಆ್ಯಪ್‌ನಲ್ಲಿ ಬೆಳೆ ಮಾಹಿತಿ ಅಪ್‌ಲೋಡ್‌ ಮಾಡುವ ನಿಯಮ ರೂಪಿಸಿದ ಸರ್ಕಾರಕ್ಕೆ ರೈತರ ಪರಿಸ್ಥಿತಿಯ ಅರಿವಿಲ್ಲದಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದೆ.
 


ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಖರೀದಿಗೆ ಡಿ.15 ರಿಂದ ನೋಂದಣಿ: ಕೇಂದ್ರ ಸರ್ಕಾರವು 2022-23 ನೇ ಸಾಲಿಗೆ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿ ಮಾಡಲಾಗುತ್ತಿದ್ದು ಡಿ.15 ರಿಂದ ನೋಂದಣಿ ಆರಂಭವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು. ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ 2022-23ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಟಾಸ್‌್ಕ ಪೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಗೆ ಭತ್ತ ಮತ್ತು ರಾಗಿ ಖರೀದಿಸಲು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು ಖರೀದಿ ಏಜೆನ್ಸಿಯನ್ನಾಗಿ ಸರ್ಕಾರ ನೇಮಿಸಿದ್ದು, ಖರೀದಿ ಪ್ರಕ್ರಿಯೆಯು ಇವರ ಮುಖಾಂತರ ನಡೆಯುತ್ತದೆ ಎಂದರು.

ಕೇಂದ್ರ ಸರ್ಕಾರದ ಬೆಂಬಲ ಬೆಲೆಯಡಿ ಡಿ.15 ರಿಂದ ರೈತರ ನೋಂದಣಿ ಕಾರ್ಯ ಆರಂಭವಾಗಲಿದ್ದು, ಜನವರಿ 1 ರಿಂದ ಮಾಚ್‌ರ್‍ 31 ರವರೆಗೆ ಭತ್ತ ಖರೀದಿ ಪ್ರಕ್ರಿಯೆ ನಡೆಯಲಿದೆ. ಪ್ರತಿ ಎಕರೆಗೆ 25 ಕ್ವಿಂಟಾಲ್‌ನಂತೆ ಓರ್ವ ಬೆಳಗಾರರಿಂದ ಗರಿಷ್ಠ 40 ಕ್ವಿಂಟಾಲ್‌ ಭತ್ತ ಹಾಗೂ ರಾಗಿ ಕನಿಷ್ಠ 10 ರಿಂದ ಗರಿಷ್ಠ 20 ಕ್ವಿಂಟಾಲ್‌ ಖರೀದಿಸಲಾಗುವುದು ಎಂದು ಅವರು ಹೇಳಿದರು. 

ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್‌ಗೆ . 2040 ನಿಗದಿಪಡಿಸಲಾಗಿದ್ದು, ರಾಗಿ ಪ್ರತಿ ಕ್ವಿಂಟಾಲ್‌ಗೆ . 3578 ನಿಗದಿಪಡಿಸಲಾಗಿದೆ. ಜಿಲ್ಲೆಯಾದ್ಯಂತ ರೈತರಿಗೆ ಅನುಕೂಲ ಆಗುವಂತೆ 14 ಕಡೆಗಳಲ್ಲಿ ಮೈಸೂರಿನ ಎಪಿಎಂಸಿ ಆವರಣ, ಬಂಡಿಪಾಳ್ಯ, ನಂಜನಗೂಡಿನ ಎಪಿಎಂಸಿ ಆವರಣ, ಬಿಳಿಗೆರೆ ಖರೀದಿ ಕೇಂದ್ರ, ಟಿ. ನರಸೀಪುರದ ಎಪಿಎಂಸಿ ಆವರಣ, ಬನ್ನೂರು ಎಪಿಎಂಸಿ ಆವರಣ, ಹುಣಸೂರು, ರತ್ನಪುರಿ ಎಂಪಿಎಂಸಿ ಆವರಣ, ಕೆ.ಆರ್‌. ನಗರದ ಚುಂಚನಕಟ್ಟೆಪ್ರವಾಸಿ ಮಂದಿರ (ಶ್ರೀರಾಮ ದೇವಸ್ಥಾನದ ಹತ್ತಿರ), ಸಾಲಿಗ್ರಾಮ, ಎಚ್‌.ಡಿ. ಕೋಟೆ ಎಪಿಎಂಸಿ, ಸರಗೂರು ಮತ್ತು ಪಿರಿಯಾಪಟ್ಟಣ, ಬೆಟ್ಟದಪುರ ಎಪಿಎಂಸಿ ಆವರಣದಲ್ಲಿ ಖರೀದಿ ಮಾಡಲಾಗುವುದು ಎಂದು ಅವರು ವಿವರಿಸಿದರು.

ಸರ್ಕಾರದಿಂದ 5 ರಾಷ್ಟ್ರೀಯ ಸ್ಕೇಟ​ರ್ಸ್‌ ದತ್ತು: ಸಿಎಂ ಬೊಮ್ಮಾಯಿ

ಆದರೆ, ಬೇಡಿಕೆ ಇದ್ದಲ್ಲಿ ಅಗ್ಯತ್ಯಕ್ಕೆ ತಕ್ಕಂತೆ ಹೆಚ್ಚಿನ ಕೇಂದ್ರ ತೆರೆಯಲು ಸಹ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸೂಕ್ತ ದಾಸ್ತಾನಿಗಾಗಿ ಭತ್ತ ಖರೀದಿ ಕೇಂದ್ರಗಳಲ್ಲಿ ಭತ್ತದ ಗುಣಮಟ್ಟವನ್ನು ಪರೀಕ್ಷಿಸಲು ಗ್ರೇಡರ್‌ಗಳನ್ನು ನಿಯೋಜಿಸುವಂತೆ ಹಾಗೂ ಖರೀದಿಸಿದ ಭತ್ತವನ್ನು ಸೂಕ್ತ ರೀತಿಯಲ್ಲಿ ದಾಸ್ತಾನು ಮಾಡಲು ಅಗತ್ಯವಿರುವ ದಾಸ್ತಾನು ಕೇಂದ್ರಗಳನ್ನು ಗುರುತಿಸುವಂತೆ ಅವರು ಸೂಚನೆ ನೀಡಿದರು. ಭತ್ತವನ್ನು ಮಾರಾಟ ಮಾಡಬೇಕಾದ ರೈತರು ಈಗಾಗಲೇ ಪ್ರೂಟ್ಸ್‌ ತಂತ್ರಾಂಶದಲ್ಲಿ ನೋಂದಣಿಯಾಗಿರಬೇಕು. ಒಂದು ವೇಳೆ ರೈತರು ನೋಂದಣಿ ಮಾಡದಿದ್ದಲ್ಲಿ ಪ್ರೂಟ್ಸ್‌ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡು ತಾವು ಬೆಳದ ಭತ್ತವನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದೆ ಎಂದರು.

Follow Us:
Download App:
  • android
  • ios