ಪ್ರದೀಪ್ ಈಶ್ವರ್ ಅವರೇ ತುಂಬಾ ದೊಡ್ಡ ವ್ಯಕ್ತಿಯಾದ್ರಿ; ಬಿಗ್‌ಬಾಸ್‌ ಖ್ಯಾತಿಯ ರೂಪೇಶ್‌ ರಾಜಣ್ಣ

ತುಂಬಾ ದೊಡ್ಡ ವ್ಯಕ್ತಿಯಾದಿರಿ ಸ್ನೇಹಿತರಾದ ಪ್ರದೀಪ್ ಈಶ್ವರ್ ಅವರೇ" ಹೃದಯವಂತಿಕೆ ತೋರಿದ ನಿಮಗೆ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು ಎಂದು ಬಿಗ್‌ಬಾಸ್‌ ಖ್ಯಾತಿಯ ರೂಪೇಶ್‌ ರಾಜಣ್ಣ ಹೇಳಿದ್ದಾರೆ.

Bigg Boss fame Rupesh Rajanna praised Pradeep Eshwar for helping Kannadiga travel Person sat

ಬೆಂಗಳೂರು (ಜು.23): ಮಂಗಳೂರು ಮೂಲದ ಯುವಕನೊಬ್ಬ ಕರ್ನಾಟಕದ ಐತಿಹಾಸಿಕ ಸ್ಥಳಗಳು, ಕನ್ನಡ ಮತ್ತು ಭಾರತದ ಧ್ವಜವನ್ನು ಕಟ್ಟಿಕೊಂಡು ಪ್ರಪಂಚದ 100 ದೇಶಗಳನ್ನು ಸುತ್ತಾಡುತ್ತಿದ್ದಾನೆ. ಆದರೆ, ಕೊನೆಯದಾಗಿ ಲಂಡನ್‌ಗೆ ಹೋಗಲು ಬೇಕಿರುವ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಅನುಮತಿ ಪತ್ರವನ್ನು ಕೊಡಿಸಿ, 5 ಲಕ್ಷ ರೂ. ಸಹಾಯಧನ ನೀಡುವ ಭರವಸೆ ನೀಡಿದ ಶಾಸಕ ಪ್ರದೀಪ್‌ ಈಶ್ವರ್‌ ಅವರಿಗೆ ಬಿಗ್‌ಬಾಸ್‌ ಖ್ಯಾತಿಯ ರೋಪೇಶ್‌ ರಾಜಣ್ಣ ಅವರು ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. "ತುಂಬಾ ದೊಡ್ಡ ವ್ಯಕ್ತಿಯಾದಿರಿ ಸ್ನೇಹಿತರಾದ ಪ್ರದೀಪ್ ಈಶ್ವರ್ ಅವರೇ" ನಿಜಕ್ಕೂ ಬಹಳ ಹೆಮ್ಮೆಯಾಯಿತು. ಇಂತಹ ಹೃದಯವಂತಿಕೆ ತೋರಿದ್ದು ನಿಮಗೆ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ. 

ಚಂದ್ರಯಾನ -3ಕ್ಕೆ ಯಾವ ದೇಶವೂ ನೀಡದ ಆಂಪ್ಲಿಫೈಯರ್ ತಯಾರಿಸಿದ ಕನ್ನಡಿಗ ವಿಜ್ಞಾನಿ ದಾರುಕೇಶ್‌

ಸ್ನೇಹಿತರೇ ಮೊಹಮದ್ ಸಿನಾನ್ ಎನ್ನುವ ಮಂಗಳೂರು ಮೂಲದ ಕನ್ನಡಿಗ ಹಲವಾರು ದಿನಗಳಿಂದ ಕರ್ನಾಟಕದ ಐತಿಹಾಸಿಕ ಸ್ಥಳಗಳ ಪೋಟೋಗಳನ್ನು ಕಾರಿನಲ್ಲಿ ಅಂಟಿಸಿಕೊಂಡು ಕನ್ನಡದ ಧ್ವಜ ಹಾಗೂ ಭಾರತದ ಧ್ವಜ ಕಟ್ಟಿಕೊಂಡು ಸಾವಿರಾರು ಕಿಲೋಮೀಟರ್ ದೂರ ಪ್ರಯಾಣ ಮಾಡುತ್ತಿದ್ದಾನೆ. ಪ್ರಪಂಚದ 100 ದೇಶಗಳಲ್ಲಿ ಕನ್ನಡ ನಾಡು-ನುಡಿ, ಇತಿಹಾಸವನ್ನು ಪ್ರಪಂಚಕ್ಕೆ ತಿಳಿಸುತ್ತ ಉದ್ದೇಶದಿಂದ ಪ್ರಯಾಣ ಮಾಡುತ್ತಿದ್ದಾನೆ. ಕಡೆಗೆ ಲಂಡನ್ ಮುಟ್ಟುವುದು ಈತನ ಗುರಿ.

ಆತನಿಗೆ ಒಂದು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ (Karnataka tourism department) ಒಂದು ಅನುಮತಿ ಪತ್ರ ಬೇಕಿರುತ್ತದೆ. ಇದಕ್ಕಾಗಿ ಹಲವಾರು ದಿನಗಳಿಂದ ಹಲವು ಗಣ್ಯರ ಬಳಿ ಅನುಮತಿ ಪತ್ರವನ್ನು ಕೊಡಿಸುವಂತೆ ಕೇಳಿಕೊಳ್ಳುತ್ತಿದ್ದಾನೆ. ಇಂದು ಆತ ನನ್ನ ಗಮನಕ್ಕೆ ತರುತ್ತಾನೆ. ಜೊತೆಗೆ, ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಈ ಮಾಹಿತಿ ಮುಟ್ಟಿಸಿ ಎಂದು ಕೇಳಿಕೊಂಡಾಗ, ನಾನು ಕೂಡಲೇ ಪ್ರದೀಪ್ ಅವರಿಗೆ ಕರೆ ಮಾಡಿ ಇರುವ ವಿಷಯ ತಿಳಿಸಿದೆನು. ಜೊತೆಗೆ, ಕೂಡು ಕರೆ (conference call) ಮೂಲಕ ಮೂವರು ಮಾತಾಡಿದೆವು..

ಯುವಕನ ಪರಿಸ್ಥಿತಿ ಅರಿತ ಪ್ರದೀಪ್ ಈಶ್ವರ್‌ ಅವರು ನಾಳೆಯೇ ಪ್ರವಾಸೋದ್ಯಮ ಸಚಿವರ ಬಳಿ ಮಾತಾಡಿ ಬೆಳೆಗ್ಗೆಯೇ ನನ್ನ ಮೊದಲ ಕೆಲಸ ತಮಗೆ ಪತ್ರ ಕೊಡಿಸುವುದಾಗಿ ಹೇಳಿದರು.. ಆಗ ಆತನ ಪ್ರಯಾಣಕ್ಕೆ ಸುಮಾರು ಲಕ್ಷಾಂತರ ಹಣ ಖರ್ಚಾಗಲಿದೆ. ಆದರೆ, ಈಗ ನನಗೆ ಸ್ವಲ್ಪ ಆರ್ಥಿಕತೆಯ ಕಷ್ಟವಾಗಿದೆ ಮುಂದುವರಯಲು ಆಗುತ್ತಿಲ್ಲ ಎಂದು ಯುವಕ ಹೇಳಿಕೊಮಡಾಗ ಪ್ರದೀಪ್ ಅವರು ಕೂಡಲೇ 5 ಲಕ್ಷ ರೂಪಾಯಿ ಹಣವನ್ನು ನಾನು ನಿಮ್ಮ ಖಾತೆಗೆ ಹಾಕಿಸುವೆ. #ಕನ್ನಡಕ್ಕಾಗಿ ನೀವು ನಿಮ್ಮ ಕೆಲಸ ಸಾಧಿಸಿ. ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ ಅನ್ನೋ ಮಾತು ಹೇಳಿದ್ದು ನಿಜಕ್ಕೂ ನನಗೆ ಮನ ತುಂಬಿ ಬಂದಿತು..

ಬೆಂಗ್ಳೂರಲ್ಲಿದ್ದರೆ ಕನ್ನಡ ಅರ್ಥವಾಗುತ್ತಿದೆ ಎಂದರ್ಥವಲ್ಲ, ಗೂಗಲ್‌ ಪ್ರಶ್ನಿಸಿದ ದೆಹಲಿ ಮಹಿಳೆಗೆ ಕನ್ನಡಿಗರ ಕ್ಲಾಸ್!

ಆ ಹುಡುಗನ ಕನ್ನಡ ಪ್ರೇಮದ ಕೆಲಸಕ್ಕೆ ಹಿಂದು ಮುಂದೂ ನೋಡದೆ ತಕ್ಷಣ ಸ್ಪಂದಿಸಿದ ರೀತಿ ಇದಿಯಲ್ಲ ಅದು ನಿಜಕ್ಕೂ ಅದ್ಭುತ. ಕನ್ನಡದ ವಿಚಾರಕ್ಕೆ ಬೆಂಬಲಿಸಿದ ಪ್ರದೀಪ್ ಈಶ್ವರ್ ಅವರಿಗೆ ಕನ್ನಡಿಗರ ಪರವಾಗಿ ಕೋಟಿ ಧನ್ಯವಾದಗಳು... ಒಳ್ಳೆದಾಗಲಿ ಪ್ರದೀಪ್ ಸಾರ್ ತಮಗೆ... ಹಾಗೂ ಮೊಹಮದ್ ಸಿನಾನ್ ನಿಮಗೂ ಒಳ್ಳೆದಾಗಲಿ.. ಜೈ ಕನ್ನಡಿಗ.. ಎಂದು ಕನ್ನಡಪರ ಹೋರಾಟಗಾರ ರೂಪೇಶ್‌ ರಾಜಣ್ಣ ಬರೆದುಕೊಂಡಿದ್ದಾರೆ.

Latest Videos
Follow Us:
Download App:
  • android
  • ios