- Home
- News
- State
- Karnataka News Live: ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ - ಕೊನೆಗೂ ಕಂಡುಬಂತು 'ಕೊಡವ' ಸೊಗಡು!
Karnataka News Live: ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ - ಕೊನೆಗೂ ಕಂಡುಬಂತು 'ಕೊಡವ' ಸೊಗಡು!

ಬೆಂಗಳೂರು: ನಿಮ್ಮ ಮತ್ತು ಡಿಸಿಎಂ ನಡುವಿನ ಕುಚುಕು ಕುಚುಕು ಬಗ್ಗೆ ನಮಗೇನೂ ಸಂಕಟವಿಲ್ಲ. ಆದರೆ ನಿಮ್ಮೊಳಗೆ ಹುದುಗಿದ್ದ ಅಸಹನೆಯ ಜ್ವಾಲಾಮುಖಿ ಅದೆಷ್ಟೋ ಬಾರಿ ವೇದಿಕೆಗಳ ಮೇಲೆಯೇ ಸ್ಫೋಟಿಸಿದೆ. ರಾಜ್ಯದ ಜನ ನೋಡಿ ಕೃತಾರ್ಥರಾಗಿದ್ದಾರೆ. ಎದುರಿಗೆ ನಗುವುದು, ಬೆನ್ನ ಹಿಂದೆ ಚೂರಿ ಹಾಕುವಷ್ಟು ನಿಮ್ಮಬ್ಬರ ಕುಚುಕು ಬಗ್ಗೆ ಜನತೆಗೆ ಗೊತ್ತಿಲ್ಲದ್ದು ಏನೂ ಇಲ್ಲವೇನೋ? ನಿಮ್ಮ ಸ್ನೇಹ ಚಿರಾಯುವಾಗಲಿ ಹಾಗೂ ನಿಮ್ಮ ಸ್ನೇಹಿತನಿಗಾಗಿ ನಿಮ್ಮ ವಚನ ಉಳಿಸಿಕೊಳ್ಳಿ ಮಿಸ್ಟರ್ ಅಗ್ರಿಮೆಂಟ್ ರಾಮಯ್ಯ... ಎಂದು ಹೆಚ್ ಡಿ ಕುಮಾರಸ್ವಾಮಿ ಕಾಲೆಳೆದಿದ್ದಾರೆ.
Karnataka News Live 4 March 2026ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ - ಕೊನೆಗೂ ಕಂಡುಬಂತು 'ಕೊಡವ' ಸೊಗಡು!
Karnataka News Live 4 March 2026Haveri - ಸೇಮ್ ಟು ಸೇಮ್ ಚೆಲುವಿನ ಚಿತ್ತಾರ; ಉಲ್ಲಾಸದ ಹೂಮಳೆ ಹಾಡುತ್ತಿದ್ದ ಜೋಡಿಗೆ ಕಟುಕನಾದ ಅಪ್ಪ!
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ 'ಚೆಲುವಿನ ಚಿತ್ತಾರ' ಸಿನಿಮಾದಂತೆಯೇ ಘಟನೆಯೊಂದು ನಡೆದಿದೆ. ಪೋಷಕರ ವಿರೋಧದ ನಡುವೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದ ಸೃಷ್ಟಿ ಮತ್ತು ಮಣಿಕಂಠ ಜೋಡಿಯನ್ನು, ಯುವತಿಯ ಪೋಷಕರೇ ಬಲವಂತವಾಗಿ ಬೇರ್ಪಡಿಸಿದ್ದಾರೆ.
Karnataka News Live 4 March 2026ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ! ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಬರ್ತಿದ್ದಂತೆ ಅಲರ್ಟ್
ದಾವಣಗೆರೆ ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದು, ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸಿದಾಗ ಯಾವುದೇ ಸ್ಫೋಟಕ ಪತ್ತೆಯಾಗಲಿಲ್ಲ.
Karnataka News Live 4 March 2026ಪಲ್ಯ ಮಾಡುವಾಗ ಹಾಗಲಕಾಯಿ ಕಹಿ ಬರ್ತಿದೆಯೇ? ಕಹಿ ತೆಗೆಯಲು ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ!
ಹಾಗಲಕಾಯಿ ಅಂದಕೂಡಲೇ ಅದರ ಕಹಿಯ ನೆನಪಾಗಿ ಅನೇಕರು ಮುಖ ಹಿಂಡುತ್ತಾರೆ. ಆದರೆ, ಆಯುರ್ವೇದದಲ್ಲಿ 'ರಾಮಬಾಣ' ಎಂದು ಕರೆಸಿಕೊಳ್ಳುವ ಈ ತರಕಾರಿ ಆರೋಗ್ಯದ ಗಣಿಯಾಗಿದೆ. ಹಾಗಲಕಾಯಿಯ ಅದ್ಭುತ ಪ್ರಯೋಜನಗಳು ಮತ್ತು ಅದರ ಕಹಿಯನ್ನು ಹೋಗಲಾಡಿಸುವ 6 ಸರಳ ಸೂತ್ರಗಳು ಇಲ್ಲಿವೆ
Karnataka News Live 4 March 2026ಚಂದ್ರಗುತ್ತಿಯಲ್ಲಿ ಕ್ರಿ.ಶ. 1350ರ ಕಾಲಘಟ್ಟದ ವೀರಗಲ್ಲು ಪತ್ತೆ, ಯುದ್ಧ ಗೆದ್ದ ವಿಜಯನಗರ ಕಾಲದ ಯೋಧನ ಬಣ್ಣನೆ!
Karnataka News Live 4 March 2026ವಿದೇಶದಲ್ಲಿದ್ರೂ 'ಇಂಟರ್ನ್ಯಾಷನಲ್ ಜೀಜು' ಮಾಡಿದ್ದೇನು? ನಿಕ್ ಜೊತೆಗಿದ್ರೂ ಕಣ್ಣೀರು ಹಾಕಿದ್ದೇಕೆ ಪ್ರಿಯಾಂಕಾ ಚೋಪ್ರಾ..?
ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ತನ್ನದೇ ಆದ ಛಾಪು ಮೂಡಿಸಿರುವ 'ದೇಶಿ ಗರ್ಲ್' ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕನ್ ಪಾಪ್ ಸಿಂಗರ್ ನಿಕ್ ಜೋನಸ್ ಜೋಡಿ ಸದಾ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತದೆ. ಈ ಜೋಡಿ ಕೇವಲ ಸಿನಿಮಾಗಳಿಗಾಗಿ ಮಾತ್ರವಲ್ಲದೆ ವಿಭಿನ್ನ ವಿಷಯಕ್ಕೂ ಸುದ್ದಿಯಾಗುತ್ತಾರೆ.
Karnataka News Live 4 March 2026ಬೀದರ್ - ಚಿಕಿತ್ಸೆ ಸಿಗದೆ ರೋಗಿ ಸಾಯಲು ಯತ್ನ, BRIMS ನಿರ್ದೇಶಕಿ ನೋ ರೆಸ್ಪಾನ್ಸ್, 'ನನಗೂ ಇದಕ್ಕೂ ಸಂಬಂಧಿವಿಲ್ಲ ಎಂದ DHO!
ಬೀದರ್‌ನ ಪ್ರತಿಷ್ಠಿತ ಬ್ರಿಮ್ಸ್ ಆಸ್ಪತ್ರೆಯಲ್ಲಿ ಎಕ್ಸ್-ರೇ ಸೌಲಭ್ಯಕ್ಕಾಗಿ ದಿನಗಟ್ಟಲೆ ಕಾಯುವಂತಾದ ಔರಾದ್ ನಿವಾಸಿ ಆನಂದ ಕರಬಾಳೆ ಎಂಬುವವರು, ಚಿಕಿತ್ಸೆ ಸಿಗದೆ ಮನನೊಂದು ಆತ್ಮ೧ಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆಯು ಆಸ್ಪತ್ರೆಯ ಅವ್ಯವಸ್ಥೆ, ಸಿಬ್ಬಂದಿಯ ಬೇಜವಾಬ್ದಾರಿ ಬಯಲಾಗಿದೆ.
Karnataka News Live 4 March 2026ಕಾಡಾನೆ ನಾಡಿಗೆ ಬರದಂತೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ₹12.77 ಕೋಟಿ ಅನುದಾನ ಬಿಡುಗಡೆ
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನಲ್ಲಿ ನಿರಂತರ ಕಾಡಾನೆ ಹಾವಳಿಯನ್ನು ತಡೆಯಲು ರಾಜ್ಯ ಸರ್ಕಾರವು 7.71 ಕಿ.ಮೀ ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ₹12.77 ಕೋಟಿ ಅನುದಾನ ಬಿಡುಗಡೆ ಮಾಡಿದೆ.
Karnataka News Live 4 March 2026ಕಿಚ್ಚ ಅಂದ್ರೆ ಏನು? ತಲೆ ಕೆಡಿಸಿಕೊಂಡ ಸುದೀಪ್! ಕಾಲೇಜಲ್ಲೂ ಹುಚ್ಚು ಹಿಡಿಸಿದ ಶಬ್ದಕ್ಕೆ ಕೊನೆಗೂ ಸಿಕ್ತು ಉತ್ತರ
ನಟ ಸುದೀಪ್ ಅವರಿಗೆ 'ಕಿಚ್ಚ' ಎಂಬ ಹೆಸರು ಬಂದಿದ್ದು 2001ರ 'ಹುಚ್ಚ' ಸಿನಿಮಾದಿಂದ. ಈ ಸಿನಿಮಾದಲ್ಲಿ 'ಕಿಚ್ಚ' ಪದದ ಅರ್ಥ ಹುಡುಕುವ ದೃಶ್ಯವಿದ್ದು, ಕೊನೆಗೆ ಜ್ಯೋತಿಷಿಯೊಬ್ಬರು ಕಿಚ್ಚ ಶಬ್ದದ ಅರ್ಥ ವಿವರಿಸುತ್ತಾರೆ. ಈ ಮೂಲಕ ಸುದೀಪ್ ಅವರ ಜನಪ್ರಿಯ ಹೆಸರಿನ ಹಿಂದಿನ ಕಥೆಯನ್ನು ಲೇಖನವು ತಿಳಿಸುತ್ತದೆ.
Karnataka News Live 4 March 2026ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ಟ್ರಾಫಿಕ್ ದಟ್ಟಣೆ ಶಮನಕ್ಕೆ ದಕ್ಷಿಣ ರೈಲ್ವೆ ಮಹತ್ವದ ಹೆಜ್ಜೆ, ಚತುಷ್ಪಥ ರಸ್ತೆ!
ಮಂಗಳೂರಿನ ಪಾಂಡೇಶ್ವರ ಲೆವೆಲ್ ಕ್ರಾಸಿಂಗ್‌ನಲ್ಲಿನ ತೀವ್ರ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ, ರಸ್ತೆಯನ್ನು ಚತುಷ್ಪಥವಾಗಿ ಅಭಿವೃದ್ಧಿಪಡಿಸಲು ದಕ್ಷಿಣ ರೈಲ್ವೆ ಅನುಮೋದನೆ ನೀಡಿದೆ. ಸಂಸದ ಬ್ರಿಜೇಶ್ ಚೌಟ ಅವರ ಪ್ರಯತ್ನದ ಫಲವಾಗಿ ಈ ಯೋಜನೆ ಜಾರಿಯಾಗುತ್ತಿದೆ.
Karnataka News Live 4 March 2026ಸಿಎಂ ಬಂದ್ರೂ ಡಿಲೀಟ್ ಮಾಡಲ್ಲ, ಅವ್ರಾ- ನಾನಾ ನೋಡ್ತೇನೆ, ನಾನು ಮೀಟರ್ ಇರೋನು ಎಂದ Dog Satish
Karnataka News Live 4 March 202692 ಲಕ್ಷ ವೇತನ ಝೀರೋ ಭದ್ರತೆ, ಒಂದೇ ದಿನದಲ್ಲಿ ಶೇ.40ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ ಬೆಂಗಳೂರು ಐಟಿ ಕಂಪೆನಿ!
ಬೆಂಗಳೂರು ಮೂಲದ ಐಟಿ ಸ್ಟಾರ್ಟ್‌ಅಪ್ ಒಂದೇ ದಿನದಲ್ಲಿ ತನ್ನ 40% ಉದ್ಯೋಗಿಗಳನ್ನು ವಜಾಗೊಳಿಸಿದೆ. ವಾರ್ಷಿಕ ₹92 ಲಕ್ಷ ಸಂಬಳ ಪಡೆಯುತ್ತಿದ್ದ ಉದ್ಯೋಗಿ ಸೇರಿದಂತೆ ಹಲವರು ಕೆಲಸ ಕಳೆದುಕೊಂಡಿದ್ದು, ಈ ಘಟನೆಯು ಭಾರತದ ತಂತ್ರಜ್ಞಾನ ವಲಯದಲ್ಲಿನ ಹೆಚ್ಚುತ್ತಿರುವ ಉದ್ಯೋಗ ಅನಿಶ್ಚಿತತೆಯನ್ನು ತೋರಿಸುತ್ತದೆ.
Karnataka News Live 4 March 2026ಮುನಿಸಿಕೊಂಡ ಗ್ರಾಹಕರ ಸೆಳೆಯಲು ಓಲಾ ಎಲೆಕ್ಟ್ರಿಕ್ ಹೋಳಿ ಆಫರ್, ಕೈಗೆಟುಕುವ ದರದಲ್ಲಿ ಇವಿ ಬೈಕ್
ಮುನಿಸಿಕೊಂಡ ಗ್ರಾಹಕರ ಸೆಳೆಯಲು ಓಲಾ ಎಲೆಕ್ಟ್ರಿಕ್ ಹೋಳಿ ಆಫರ್, ಕೈಗೆಟುಕುವ ದರದಲ್ಲಿ ಇವಿ ಬೈಕ್, ಹಬ್ಬದ ಆಫರ್ ಮೂಲಕ ಸ್ಕೂಟರ್ ಖರೀದಿಸಲು ಓಲಾ ವಿಶೇಷ ಆಫರ್ ನೀಡಿದೆ. ಟೀಕೆ, ದೂರುಗಳಿಂದ ಸೊರಗಿದ್ದ ಓಲಾ ಹೊಸ ಆಫರ್ ನೀಡಿದೆ.
Karnataka News Live 4 March 2026ಗೂಗಲ್‌ನಲ್ಲಿ ಒಂದು ವರ್ಷ ಕೆಲಸ ಮಾಡಿದ ಟೆಕ್ಕಿಯ ಪಾಠ, ಈ ಹನ್ನೆರಡು ಸೂತ್ರಗಳು ಇದ್ದರೆ ಮಾತ್ರ ಅರ್ಹ!
ಬೆಂಗಳೂರು ಮೂಲದ ಟೆಕ್ಕಿ ದೀಕ್ಷಾ ಅಗರ್ವಾಲ್, ಗೂಗಲ್‌ನಲ್ಲಿ ತಮ್ಮ ಮೊದಲ ವರ್ಷದ ಸೇವೆಯಲ್ಲಿ ಕಲಿತ ಮಹತ್ವದ ಪಾಠಗಳನ್ನು ಹಂಚಿಕೊಂಡಿದ್ದಾರೆ. ಸರಳ ಕೋಡಿಂಗ್, ಗುಣಮಟ್ಟದ ಪರೀಕ್ಷೆ, ದೋಷಾರೋಪಣೆಗಿಂತ ಪರಿಹಾರಕ್ಕೆ ಆದ್ಯತೆ ನೀಡುವ ಸಂಸ್ಕೃತಿವಿವರಿಸಿದ್ದಾರೆ.
Karnataka News Live 4 March 2026KERC new power rates - ಬೇಸಿಗೆ ಆರಂಭದಲ್ಲೇ ಕರೆಂಟ್ ಶಾಕ್ - ಕೈಗಾರಿಕಾ ಮತ್ತು ವಾಣಿಜ್ಯ ವಿದ್ಯುತ್ ದರ ಭಾರಿ ಏರಿಕೆ!
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ವಿದ್ಯುತ್ ದರವನ್ನು ಪರಿಷ್ಕರಿಸಿದ್ದು, ಏಪ್ರಿಲ್ 1 ರಿಂದ ಹೊಸ ದರಗಳು ಜಾರಿಗೆ ಬರಲಿವೆ. ಈ ನಿರ್ಧಾರದಿಂದ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರಿಗೆ ದರ ಏರಿಕೆಯಾಗಿದ್ದು, ಗೃಹ ಬಳಕೆದಾರರ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.
Karnataka News Live 4 March 2026ಕೆಪಿಎಸ್ಸಿ ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿ ಒಂದೇ ಕೊಠಡಿಯ 10 ಜನ ಪಾಸಾಗಿದ್ದು ಇತಿಹಾಸ, ಭ್ರಷ್ಟಾಚಾರವಲ್ಲ-ಜ್ಯೋತಿ!
ಇತ್ತೀಚಿನ ಕೆಪಿಎಸ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಒಂದೇ ಪರೀಕ್ಷಾ ಕೊಠಡಿಯಿಂದ 10ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಸಾಗಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ ತಿಳಿಸಿದ್ದಾರೆ.
Karnataka News Live 4 March 2026ಅಡ್ಡಾದಿಡ್ಡಿ ಕಾರು ಚಾಲನೆ - ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪಲ್ಟಿ - ಕೈಗೆ ಸಿಕ್ಕ ಕಾರು ಚಾಲಕನಿಗೆ ಕೈರುಚಿ ತೋರಿಸಿದ ಜನ
ಬಳ್ಳಾರಿಯ ಎಎಸ್ಎಂ ಮಹಿಳಾ ಕಾಲೇಜು ಬಳಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಚಾಲಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದು, ಕಾರು ಪಲ್ಟಿಯಾಗಿ ಜಖಂಗೊಂಡಿದೆ.
Karnataka News Live 4 March 2026ಒಳ ಮೀಸಲಾತಿ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಆದರೆ.. - ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಒಳ ಮೀಸಲಾತಿ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ, ಆದರೆ ಕಾನೂನಾತ್ಮಕ ತೊಡಕುಗಳಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನೇಮಕಾತಿ ಪ್ರಕ್ರಿಯೆ, ಬಿಜೆಪಿ ವಿರುದ್ಧದ ಆರೋಪ, ದಲಿತ ನಾಯಕರ ಸರಣಿ ಸಭೆ ಕುರಿತು ಅವರು ಮಾಹಿತಿ, ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲೇ ನಿಭಾಯಿಸುವುದಾಗಿ ತಿಳಿಸಿದ್ದಾರೆ.
Karnataka News Live 4 March 2026ಕೋರ್ಟ್ ಸಮಯ ಹಾಳು ಮಾಡುತ್ತಿರೋ ಡಿ ಗ್ಯಾಂಗ್; ದಾಸನ ಬೇಡಿಕೆಗೆ SPP ಗುನ್ನ, ಮುಗಿಯಲ್ಲ ಗ್ರಹಣ..!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ಪ್ರತಿದಿನದ ವಿಚಾರಣೆ, ಮನೆಯೂಟ ಸೇರಿದಂತೆ ದರ್ಶನ್ ಪರ ವಕೀಲರ ಹಲವು ಮನವಿಗಳಿಗೆ ವಿಶೇಷ ಸರ್ಕಾರಿ ಅಭಿಯೋಜಕರು (ಎಸ್‌ಪಿಪಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Karnataka News Live 4 March 2026ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದಿರುವರಿಗೆ, ಪಿಜಿ ನಡೆಸುವ ಮಾಲೀಕರಿಗೆ ಜಿಬಿಎ ವಾರ್ನಿಂಗ್, ಈ ನಿಯಮ ಪಾಲಿಸಲೇಬೇಕು
2 ಮಹಡಿಗಿಂತ ಹೆಚ್ಚಿನ ಕಟ್ಟಡಗಳು ಮತ್ತು ಪಿಜಿಗಳಲ್ಲಿ ಹಸಿ ಮತ್ತು ಒಣ ಕಸಕ್ಕೆ ಪ್ರತ್ಯೇಕ ಡಬ್ಬಿಗಳನ್ನು ಕಡ್ಡಾಯಗೊಳಿಸಲು ಜಿಬಿಎ ಮುಂದಾಗಿದೆ. ಸಾರ್ವಜನಿಕ ಸಭೆಯಲ್ಲಿ ಈ ವಿಷಯ ತಿಳಿಸಿದ ಮುಖ್ಯ ಆಯುಕ್ತ ಮಹೇಶ್ವರ ರಾವ್, ಕಟ್ಟಡ ನಿಯಮ ಉಲ್ಲಂಘನೆ ವಿರುದ್ಧವೂ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ.