ಆ್ಯಪ್ ಮೂಲಕ ಪರಿಚಯವಾದ ವ್ಯಕ್ತಿ ಜೊತೆ ಬೆಂಗಳೂರು ಯುವತಿ ಡೇಟಿಂಗ್ ಮಾಡಿದ್ದಾಳೆ. ಇವರಿಬ್ಬರ ಡೇಟಿಂಗ್ ಕೆಲವೇ ದಿನ ಮಾತ್ರ ಇತ್ತು. ಅದರಲ್ಲೇ ಉತ್ತುಂಗಕ್ಕೆ ತಲುಪಿತ್ತು. ಬಳಿಕ ಎಲ್ಲಾ ರಿಲೇಶನ್‌ಶಿಪ್, ಕಾಂಟಾಕ್ಟ್ ಕಟ್ ಆಗಿತ್ತು. ಆದರೆ ನಾಲ್ಕು ವರ್ಷ ಬಳಿಕ ಆತನ ಜೊತೆಗಿನ ಇಂಟಿಮೇಟ್ ವಿಡಿಯೋ ಆನ್‌ಲೈನ್‌ನಲ್ಲಿ ಪತ್ತೆಯಾಗಿದೆ.

ಬೆಂಗಳೂರು (ಜು.01) ಡೇಟಿಂಗ್ ಆ್ಯಪ್ ಮೂಲಕ ಪ್ರೊಫೈಲ್ ಮ್ಯಾಚ್ ಮಾಡಿ ಡೇಟ್‌ಗೆ ಹೋಗುವುದು ಹೊಸದೇನಲ್ಲ. ಹಲವು ರಿಲೇಶನ್‌ಶಿಪ್ ಶುರುವಾಗಿ ಅಂತ್ಯಗೊಳ್ಳುವುದು ಇದೇ ಡೇಟಿಂಗ್ ಆ್ಯಪ್ ಮೂಲಕ. ಆದರೆ ಡೇಟ್‌ಗೆ ಹೋಗುವಾಗ ಎಚ್ಚರ ಇರಲಿ. ಕಾರಣ ಹೀಗೆ ಡೇಟ್‌ಗೆ ಹೋಗಿ ಮೈಮರೆತ ಬೆಂಗಳೂರಿನ ಯುವತಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾಳೆ. ನಾಲ್ಕು ವರ್ಷಗಳ ಹಿಂದೆ ಬಂಬಲ್ ಡೇಟಿಂಗ್ ಆ್ಯಪ್‌ನಲ್ಲಿ ಪ್ರೊಫೈಲ್ ಮ್ಯಾಚ್ ಆಗಿ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ಹೀಗೆ ಪರಿಚಯವಾದ ವ್ಯಕ್ತಿ ಜೊತೆ ಈಗೆ ಡೇಟ್ ಹೋಗಿದ್ದಾಳೆ. ಕೆಲವೇ ದಿನಗಳಲ್ಲಿ ಇವರ ರಿಲೇಶನ್‌ಶಿಪ್ ಉತ್ತುಂಗಕ್ಕೆ ತಲುಪಿತ್ತು. ಬಳಿಕ ಆತ ಎಲ್ಲಾ ಸಂಪರ್ಕ ಕಡಿದುಕೊಂಡಿದ್ದ. ಸೋಶಿಯಲ್ ಮೀಡಿಯಾ ಬ್ಲಾಕ್ ಮಾಡಿದ್ದ, ಫೋನ್ ಬ್ಲಾಕ್ ಮಾಡಿದ್ದ. ಆದರೆ ನಾಲ್ಕು ವರ್ಷ ಬಳಿಕ ಯುವಕನ ಜೊತೆಗಿನ ಇಂಟಿಮೇಟ್ ವಿಡಿಯೋ ಒಂದು ಆನ್‌ಲೈನ್‌ನಲ್ಲಿ ಪತ್ತೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಘಟನೆ?

28ರ ಹರೆಯದ ಬೆಂಗಳೂರು ಯುವತಿ ನವೆಂಬರ್ 2022ರಲ್ಲಿ ಬಂಬಲ್ ಡೇಟಿಂಗ್ ಆ್ಯಪ್‌ನಲ್ಲಿ ಸಕ್ರಿಯವಾಗಿದ್ದಳು. ಆ್ಯಪ್‌ನಲ್ಲಿ ವ್ಯಕ್ತಿ ಜೊತೆ ಪ್ರೊಫೈಲ್ ಮ್ಯಾಚ್ ಆಗಿದ್ದ ಕಾರಣ ಚಾಟಿಂಗ್ ಶುರುವಾದ ಮರು ದಿನವೇ ಇಬ್ಬರು ಡೇಟ್‌ಗೆ ಡೇಟ್ ಫಿಕ್ಸ್ ಮಾಡಿದ್ದಾರೆ. ಬಳಿಕ ಇಬ್ಬರ ಸೋಶಿಯಲ್ ಮೀಡಿಯಾ ಪ್ರೊಫೈಲ್ ಹಂಚಿಕೊಂಡಿದ್ದಾರೆ. ಎಚ್ಚರವಾಗಿದ್ದ ಯುವತಿ ಬಂಬಲ್ ಆ್ಯಪ್‌ನಲ್ಲಿರುವ ವ್ಯಕ್ತಿ ಪ್ರೊಫೈಲ್‌ನ್ನು ಇನ್‌ಸ್ಟಾಗ್ರಾಂನಲ್ಲಿ ಪರಿಶೀಲಿಸಿದ್ದಾರೆ. ಈ ಮೂಲಕ ನಕಲಿ ಪ್ರೊಫೈಲ್ ಅಲ್ಲ ಅನ್ನೋದು ಖಚಿತಪಡಿಸಿಕೊಂಡು ಡೇಟಿಂಗ್ ಶುರು ಮಾಡಿದ್ದಾಳೆ.

ಭೇಟಿಯ ಮರುದಿನವೇ ಬ್ಲಾಕ್

ಇಬ್ಬರು ಭೇಟಿಯಾಗಲು ದಿನಾಂಕ ಫಿಕ್ಸ್ ಮಾಡಿದ್ದರು. ಬಳಿಕ ಯುವಕ ಅಪಾರ್ಟ್‌ಮೆಂಟ್‌ನಲ್ಲಿ ಭೇಟಿಯಾಗಲು ಆಹ್ವಾನ ನೀಡಿದ್ದ. ಇದರಂತೆ ಯುವತಿ ನೇರವಾಗಿ ಆತನ ಅಪಾರ್ಟ್‌ಮೆಂಟ್‌ಗೆ ತೆರಳಿದ್ದಾಳೆ. ಒಂದು ದಿನ ಯುವಕನ ಜೊತೆ ಅಪಾರ್ಟ್‌ಮೆಂಟ್‌ನಲ್ಲಿ ಕಳೆದ ಬೆಂಗಳೂರು ಯುವತಿ ಬಳಿಕ ಮರಳಿದ್ದಾಳೆ. ಮರು ದಿನ ಆತನಿಗೆ ಫೋನ್ ಮಾಡಲು ಪ್ರಯತ್ನಿಸಿದರೆ ನಂಬರ್ ಬ್ಲಾಕ್, ಸೋಶಿಯಲ್ ಮೀಡಿಯಾಗಳಲ್ಲೂ ಬ್ಲಾಕ್ ಮಾಡಲಾಗಿತ್ತು. ಆತನ ಸಂಪರ್ಕಿಸಲು ಸಾಧ್ಯವಾಗಲೇ ಇಲ್ಲ. ಭೇಟಿಯಾದ ಮರುದಿನವೇ ಆತನ ಸಂಪರ್ಕ ಕಡಿತಗೊಂಡಿತ್ತು.

ಕೆಲ ದಿನಗಳ ಕಾಲ ನಿರಂತರ ಪ್ರಯತ್ನಿಸಿದ ಯುವತಿ ಬಳಿಕ ಅಪಾರ್ಟ್‌ಮೆಂಟ್ ತೆರಳಿದ್ದಾಳೆ. ಈ ವೇಳೆ ಅಲ್ಲೂ ಯುವಕನ ಪತ್ತೆ ಇಲ್ಲ. ಡೇಟಿಂಗ್‌ನಿಂದ ಮೋಸ ಹೋದೆ ಎಂದು ಕೊರಗಿದ ಯುವತಿ ನಿಧಾನವಾಗಿ ಕಹಿ ಘಟನೆ ಮರೆಯಲು ಯತ್ನಿಸಿದಳು. ಹೀಗೆ ನಾಲ್ಕು ವರ್ಷಗಳು ಉರುಳಿತ್ತು. ಅಚಾನಕ್ಕಾಗಿ ಕೆಲ ನಿರ್ಬಂಧಿತ ಸೈಟ್‌ಗಳಲ್ಲಿ ನಾಲ್ಕು ವರ್ಷಗಳ ಹಿಂದಿನ ಡೇಟಿಂಗ್‌ನಲ್ಲಿ ನಡೆದ ಇಂಟಿಮೇಟ್ ವಿಡಿಯೋಗಳು ಪತ್ತೆಯಾಗಿತ್ತು. ಹಲವು ವಿಡಿಯೋಗಳು ಆನ್‌ಲೈನ್‌ನಲ್ಲಿತ್ತು. ಈ ವಿಡಿಯೋ ನೋಡಿ ಸಂಪೂರ್ಣವಾಗಿ ಮರೆತಿದ್ದ ಕಹಿ ಘಟನೆ ಮತ್ತೆ ತಲೆನೋವಿಗೆ ಕಾರಣವಾಗಿದೆ.

ಪೊಲೀಸರ ಸಂಪರ್ಕಿಸಿದ ಯುವತಿ

ಯುವತಿಗೆ ದಾರ ತೋಚದಂತಾಗಿದೆ. ಆಕೆಯ ಆಪ್ತರ ಸಲಹೆಯಂತೆ ಯುವತಿ ಕಳೆದ ತಿಂಗಳು ಪೊಲೀಸರ ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಬಿಸಿದ್ದಾರೆ. ಸೈಬರ್ ಪೊಲೀಸರ ನೆರವಿನಿಂದ ವಿಡಿಯೋ ಡಿಲೀಟ್ ಮಾಡಲು ಸೂಚಿಸಿದ್ದಾರೆ. ಇತ್ತ ನಾಲ್ಕು ವರ್ಷಗಳ ಹಿಂದಿನ ಡೇಟಿಂಗ್ ಹೋದ ಅಪಾರ್ಟ್‌ಮೆಂಟ್, ಅಲ್ಲಿ ಉಳಿದುಕೊಂಡಿದ್ದವರ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ.